logo
ಕನ್ನಡ ಸುದ್ದಿ  /  ಕರ್ನಾಟಕ  /  Health Welfare Fund: ಬಿಬಿಎಂಪಿ ಪಿಂಚಣಿದಾರರಿಗೆ, ನಿವೃತ್ತ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ; ಗುತ್ತಿಗೆದಾರರಿಗೂ ಇದೆ ಗುಡ್‌ನ್ಯೂಸ್‌

Health Welfare Fund: ಬಿಬಿಎಂಪಿ ಪಿಂಚಣಿದಾರರಿಗೆ, ನಿವೃತ್ತ ಪೌರ ಕಾರ್ಮಿಕರಿಗೆ ಆರೋಗ್ಯ ವಿಮೆ; ಗುತ್ತಿಗೆದಾರರಿಗೂ ಇದೆ ಗುಡ್‌ನ್ಯೂಸ್‌

HT Kannada Desk HT Kannada

Mar 02, 2023 03:01 PM IST

ಬಿಬಿಎಂಪಿ ಮುಂಗಡ ಪತ್ರ 2023 -2024

  • BBMP Pensioners Health Welfare Fund: ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಈಗಾಗಲೇ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ ಚಾಲ್ತಿಯಲ್ಲಿದೆ. ಇದೇ ರೀತಿ “ಬಿಬಿಎಂಪಿ ಪಿಂಚಣಿದಾರ ಆರೋಗ್ಯ ಕಲ್ಯಾಣ ನಿಧಿ”ಯ ಮೂಲಕ ಜಾರಿಗೊಳಿಸಲಾಗುವುದು ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಮುಂಗಡಪತ್ರವನ್ನು ಮಂಡಿಸುತ್ತ ಹೇಳಿದರು.

ಬಿಬಿಎಂಪಿ ಮುಂಗಡ ಪತ್ರ 2023 -2024
ಬಿಬಿಎಂಪಿ ಮುಂಗಡ ಪತ್ರ 2023 -2024

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯ ಪಿಂಚಣಿದಾರರನ್ನು ಗಮನದಲ್ಲಿಟ್ಟುಕೊಂಡು ಅವರ ಅನುಕೂಲಕ್ಕಾಗಿ ಈ ಸಲದ ಮುಂಗಡಪತ್ರ (BBMP Budget 2023) ದಲ್ಲಿ ಹೊಸ “ಬಿಬಿಎಂಪಿ ಪಿಂಚಣಿದಾರ ಆರೋಗ್ಯ ಕಲ್ಯಾಣ ನಿಧಿ” ಸ್ಥಾಪನೆ ಘೋಷಿಸಲಾಗಿದೆ.

ಟ್ರೆಂಡಿಂಗ್​ ಸುದ್ದಿ

Hassan Scandal: ಪ್ರಜ್ವಲ್‌ ರೇವಣ್ಣ ಪ್ರಕರಣ, ಎಸ್‌ಐಟಿಯಿಂದ ಸಹಾಯವಾಣಿ, ಈ ಸಂಖ್ಯೆಗೆ ಮಾಹಿತಿ ನೀಡಿ

Karnataka Rains: 6 ದಿನ ಕರ್ನಾಟಕ ಬಹುತೇಕ ಕಡೆ ಮಳೆ; ಬೆಂಗಳೂರು, ಮೈಸೂರು ಸಹಿತ ಕೆಲವೆಡೆ ಗುಡುಗು, ಸಿಡಿಲಿನ ಮುನ್ನೆಚ್ಚರಿಕೆ

ಮೋದಿ ಸಾಧನೆ ಶೂನ್ಯ, ಈ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಿದ್ದಂತೆ: ಸಿಎಂ ಸಿದ್ದರಾಮಯ್ಯ

Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ; ಶೀಘ್ರದಲ್ಲೇ ಹಾಸನ ಸಂಸದ ಇರುವ ಸ್ಥಳ ಪತ್ತೆ

ಬಿಬಿಎಂಪಿಯಲ್ಲಿ ಕೆಲಸ ಮಾಡಿ ನಿವೃತ್ತರಾದ ಪೌರ ಕಾರ್ಮಿಕರು ಹಾಗೂ ಸಿಬ್ಬಂದಿಗೆ ನಿವೃತ್ತಿಯ ನಂತರ ಆರೋಗ್ಯ ರಕ್ಷಣೆ ಅಥವಾ ಆರೋಗ್ಯ ವಿಮೆಯ ರಕ್ಷಣೆ ಇರುವುದಿಲ್ಲ. ಇದನ್ನು ಪಾಲಿಕೆಯ ಆಡಳಿತ ಗಮನಿಸಿದೆ. ಈ ಸೌಲಭ್ಯ ಬೇಕು ಎಂಬುದು ಪಾಲಿಕೆಯ ಸಿಬ್ಬಂದಿ ಹಾಗೂ ಪಿಂಚಣಿದಾರರ ಬಹುದಿನಗಳ ಬೇಡಿಕೆಯಾಗಿದೆ.

ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಲ್ಲಿ ಈಗಾಗಲೇ ಪಿಂಚಣಿದಾರರ ಆರೋಗ್ಯ ಕಲ್ಯಾಣ ನಿಧಿ ಚಾಲ್ತಿಯಲ್ಲಿದೆ. ಅಂಥದ್ದೇ ಮಾದರಿಯ ಯೋಜನೆಯನ್ನು “ಬಿಬಿಎಂಪಿ ಪಿಂಚಣಿದಾರ ಆರೋಗ್ಯ ಕಲ್ಯಾಣ ನಿಧಿ”ಯ ಮೂಲಕ ಜಾರಿಗೊಳಿಸಲಾಗುವುದು. ಇದಕ್ಕಾಗಿ ಒಂದು ಸೊಸೈಟಿಯನ್ನು ಸ್ಥಾಪಿಸಲಾಗುವುದು ಎಂದು ಬಿಬಿಎಂಪಿ ಹಣಕಾಸು ವಿಭಾಗದ ವಿಶೇಷ ಆಯುಕ್ತ ಜಯರಾಮ್ ರಾಯ್‌ಪುರ ಮುಂಗಡಪತ್ರವನ್ನು ಮಂಡಿಸುತ್ತ ಹೇಳಿದರು.

“ಬಿಬಿಎಂಪಿ ಪಿಂಚಣಿದಾರ ಆರೋಗ್ಯ ಕಲ್ಯಾಣ ನಿಧಿ”ಯ ಕಾರ್ಪಸ್‌ ಮೊತ್ತಕ್ಕೆಂದು ಪಾಲಿಕೆಯ ಸಿಬ್ಬಂದಿ ಹಾಗೂ ಪಿಂಚಣಿದಾರರು ನೀಡುವ ಕೊಡುಗೆಯ ಜತೆಗೆ ಪಾಲಿಕೆಯ ವತಿಯಿಂದ ಒಂದು ಮೊತ್ತವನ್ನು ನೀಡಿ ಕಾರ್ಪಸ್‌ ಫಂಡ್‌ ಬೆಳೆಸಲಾಗುವುದು.

ಈ ಕಾರ್ಪಸ್‌ ಫಂಡ್‌ನ ಹೂಡಿಕೆಯ ಮೇಲಿನ ಬಡ್ಡಿಯ ಮೊತ್ತ ಹಾಗೂ ಪಿಂಚಣಿದಾರರ ತಿಂಗಳ ವಂತಿಗೆಯನ್ನು ಸೇರಿಸಿ ಪಾಲಿಕೆಯ ಎಲ್ಲ ಪಿಂಚಣಿದಾರರಿಗೆ ಆರೋಗ್ಯ ವಿಮಾ ರಕ್ಷಣೆ ಒದಗಿಸಲಾಗುವುದು. ಮುಂದಿನ ಹಣಕಾಸು ವರ್ಷಕ್ಕೆ ಅನ್ವಯವಾಗುವಂತೆ ಈ ಕಾರ್ಪಸ್‌ ನಿಧಿಗೆ ಪಾಲಿಕೆಯ ವತಿಯಿಂದ 10 ಕೋಟಿ ರೂಪಾಯಿ ಮೀಸಲಿರಿಸಲಾಗಿದೆ ಎಂದು ಜಯರಾಮ್‌ ರಾಯ್‌ಪುರ ಘೋಷಿಸಿದರು.

ಪಾಲಿಕೆಯ ಎಲ್ಲ ಹಣಕಾಸು ವಹಿವಾಟಿಗೆ ಐಎಫ್‌ಎಂಎಸ್‌

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ಯ ಎಲ್ಲ ಹಣಕಾಸು ವಹಿವಾಟುಗಳನ್ನು ಮುಂದಿನ ವರ್ಷದಿಂದ ಇಂಟಿಗ್ರೇಟೆಡ್‌ ಫೈನಾನ್ಶಿಯಲ್‌ ಮ್ಯಾನೇಜ್‌ಮೆಂಟ್‌ ಸಿಸ್ಟಮ್‌ (ಐಎಫ್‌ಎಂಎಸ್‌) ಮೂಲಕವೇ ನಡೆಸಲಾಗುವುದು. ಇದುವರೆಗೆ ಪಾಲಿಕೆಯ ಹಣಕಾಸು ವಿಭಾಗ ಮಾತ್ರವೇ ತನ್ನ ಎಲ್ಲ ವಹಿವಾಟನ್ನು ಐಎಫ್‌ಎಂಎಸ್‌ ಮೂಲಕ ನಡೆಸುತ್ತಿತ್ತು.

ಮುಂದಿನ ಹಣಕಾಸು ವರ್ಷದ ಮೊದಲ ದಿನದಿಂದಲೇ ಪಾಲಿಕೆಯ ಎಲ್ಲ ವಿಭಾಗಗಳೂ ಐಎಫ್‌ಎಂಎಸ್‌ನಲ್ಲೇ ಹಣಕಾಸು ವಹಿವಾಟು ನಡೆಸಲಿವೆ. ಪಾಲಿಕೆಯ ನಿತ್ಯದ ಎಲ್ಲ ಆದಾಯ-ಹಣ ವರ್ಗಾವಣೆ, ಖರ್ಚುಗಳು ಐಎಫ್‌ಎಂಎಸ್‌ನಲ್ಲಿ ದಾಖಲಾಗುತ್ತವೆ ಎಂದು ಜಯರಾಮ್‌ ರಾಯ್‌ಪುರ ಹೇಳಿದರು.

ಪಾಲಿಕೆಯ ಲೆಕ್ಕಪತ್ರಗಳು ಆಯಾ ದಿನದ ಅಂತ್ಯಕ್ಕೆ ಆನ್‌ಲೈನ್‌ನಲ್ಲಿ ಅಪ್ಡೇಟ್‌ ಆಗಲಿದೆ. ಐಎಫ್‌ಎಂಎಸ್‌ನಿಂದ ಪಾಲಿಕೆಯ ಲೆಕ್ಕ ಅದೇ ರೀತಿ ಪಾಲಿಕೆಯ ಲೆಕ್ಕದ ಮೂಲಕ ಮ್ಯಾನೇಜ್‌ಮೆಂಟ್‌ ಇನ್‌ಫಾರ್ಮೇಶನ್‌ ಸಿಸ್ಟಮ್‌ ಅಪ್ಡೇಟ್‌ ಆಗಿರಲಿದೆ. ಈ ಮೂಲಕ ಪಾಲಿಕೆಯ ಕಡತ- ಲೆಕ್ಕಪತ್ರಗಳಲ್ಲಿ ಪಾರದರ್ಶಕತೆ ಮೂಡಲಿದೆ. ಮುಂದಿನ ಹಣಕಾಸು ವರ್ಷದಿಂದ ಪ್ರತಿ ಮೂರು ತಿಂಗಳಿಗೆ ಒಮ್ಮೆ ತ್ರೈಮಾಸಿಕ ಲೆಕ್ಕಪತ್ರವನ್ನು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಪ್ರಕಟಿಸಲಿದೆ ಎಂದು ಜಯರಾಮ್‌ ರಾಯ್‌ಪುರ ವಿವರಿಸಿದರು.

ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ಸಿಸ್ಟಮ್‌

ಪಾವತಿಸಲು ಬಾಕಿ ಉಳಿದಿರುವ ಗುತ್ತಿಗೆದಾರರ ಬಿಲ್‌ಗಳ ದಾಯಿತ್ವವನ್ನು ಕಡಿಮೆ ಮಾಡಲು ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ ಐಚ್ಛಿಕ ಖರ್ಚುವೆಚ್ಚಗಳನ್ನು ಕಡಿಮೆ ಮಾಡಲಾಗುತ್ತಿದೆ. ಸದ್ಯಕ್ಕೆ ಪಾವತಿಗೆ ಬಾಕಿ ಇರುವ ಬಿಲ್ಲುಗಳ ಪಾವತಿಗೆ ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ಸಿಸ್ಟಮ್‌ ಅನ್ನು ಪರಿಚಯಿಸಲಾಗುತ್ತಿದೆ ಎಂದು ಜಯರಾಮ್‌ ರಾಯ್‌ಪುರ ಹೇಳಿದರು.

ರಾಜ್ಯ ಸರ್ಕಾರವು 400 ಕೋಟಿ ರೂಪಾಯಿ ತನಕ ಬಿಲ್‌ ಡಿಸ್ಕೌಂಟ್‌ಗೆ ಅನುಮತಿ ನೀಡಿದೆ. ಹೀಗಾಗಿ ಆಪ್ಶನಲ್‌ ವೆಂಡರ್‌ ಬಿಲ್‌ ಡಿಸ್ಕೌಂಟಿಂಗ್‌ ಸಿಸ್ಟಮ್‌ ಮೂಲಕ ಸದ್ಯಕ್ಕೆ ಟೆಂಡರ್‌ ಮೂಲಕ ಬ್ಯಾಂಕಿಂಗ್‌ ಪಾಲುದಾರರನ್ನು ಆಯ್ಕೆ ಮಾಡಲಾಗುತ್ತದೆ ಎಂದು ಅವರು ವಿವರಿಸಿದರು.

    ಹಂಚಿಕೊಳ್ಳಲು ಲೇಖನಗಳು