logo
ಕನ್ನಡ ಸುದ್ದಿ  /  Karnataka  /  Bengaluru Crime News: Two Scooter Thieves Arrested By Bengaluru Police

Bengaluru Crime News: ಟೆಸ್ಟ್‌ ಡ್ರೈವ್‌ ಮಾಡೋಕೆ ಬಂದು ಸ್ಕೂಟರ್‌ ಎಗರಿಸುತ್ತಿದ್ದವರು ಪೊಲೀಸ್‌ ಬಲೆಗೆ; 19 ಸ್ಕೂಟರ್‌ ವಶ

HT Kannada Desk HT Kannada

Nov 25, 2022 11:14 AM IST

ಓಎಲ್‌ಎಕ್ಸ್‌ ಜಾಹೀರಾತು ನೋಡಿ ಸ್ಕೂಟರ್‌ ಮಾಲೀಕರನ್ನು ಸಂಪರ್ಕಿಸಿ ಟೆಸ್ಟ್‌ ಡ್ರೈವ್‌ ಮಾಡೋದಕೆ ಬಂದು ಸ್ಕೂಟರ್‌ ಎಗರಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.

  • Bengaluru Crime News: ಓಎಲ್‌ಎಕ್ಸ್‌ ಜಾಹೀರಾತು ನೋಡಿ ಸ್ಕೂಟರ್‌ ಮಾಲೀಕರನ್ನು ಸಂಪರ್ಕಿಸಿ ಟೆಸ್ಟ್‌ ಡ್ರೈವ್‌ ಮಾಡೋದಕೆ ಬಂದು ಸ್ಕೂಟರ್‌ ಎಗರಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. ಆಪ್‌ ಆಧಾರಿತ ಸ್ಕೂಟರ್‌ಗಳನ್ನೂ ಕಳವು ಮಾಡಿದ ಆರೋಪ ಇವರ ಮೇಲಿದೆ. 

ಓಎಲ್‌ಎಕ್ಸ್‌ ಜಾಹೀರಾತು ನೋಡಿ ಸ್ಕೂಟರ್‌ ಮಾಲೀಕರನ್ನು ಸಂಪರ್ಕಿಸಿ ಟೆಸ್ಟ್‌ ಡ್ರೈವ್‌ ಮಾಡೋದಕೆ ಬಂದು ಸ್ಕೂಟರ್‌ ಎಗರಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಓಎಲ್‌ಎಕ್ಸ್‌ ಜಾಹೀರಾತು ನೋಡಿ ಸ್ಕೂಟರ್‌ ಮಾಲೀಕರನ್ನು ಸಂಪರ್ಕಿಸಿ ಟೆಸ್ಟ್‌ ಡ್ರೈವ್‌ ಮಾಡೋದಕೆ ಬಂದು ಸ್ಕೂಟರ್‌ ಎಗರಿಸುತ್ತಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ. (Bengaluru Police)

ಬೆಂಗಳೂರು: ಟೆಸ್ಟ್‌ ಡ್ರೈವ್‌ ನೆಪದಲ್ಲಿ ಸ್ಕೂಟರ್‌ಗಳನ್ನು ಕಳವು ಮಾಡುತ್ತಿದ್ದ ಇಬ್ಬರು ಕಳ್ಳರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 15 ಲಕ್ಷ ರೂಪಾಯಿ ಮೌಲ್ಯದ 19 ಸ್ಕೂಟರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Srinivas Prasad: ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಸ್ಥಿತಿ ಗಂಭೀರ, ಬೆಂಗಳೂರಲ್ಲಿ ಚಿಕಿತ್ಸೆ

ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗೋ ಪ್ರಧಾನಿ, ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೇ ಆಗಲ್ಲ: ಸಿದ್ದರಾಮಯ್ಯ ತಿರುಗೇಟು

Belagavi News: ನೇಹಾಹಿರೇಮಠ ಹತ್ಯೆಗೆ ಮೋದಿ ಖಂಡನೆ, ಪಿಎಫ್‌ಐ ಸಂಘಟನೆ ಬೆಂಬಲಕ್ಕೆ ಕಾಂಗ್ರೆಸ್‌ ವಿರುದ್ದ ಆಕ್ರೋಶ

Hassan Sex Scandal: ಹಾಸನದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಪೆನ್‌ಡ್ರೈವ್ ಉರುಳು; ಎಸ್‌ಐಟಿ ತನಿಖೆಗೆ ಸರ್ಕಾರ ನಿರ್ಧಾರ

ಬಂಧಿತರನ್ನು ಬೆಂಗಳೂರಿನ ದೇವರಜೀವನಹಳ್ಳಿಯ ಯಾಸೀನ್‌ ಬೇಗ್‌ ಬಿನ್‌ ಅಬೀಬ್‌ ಬೇಗ್‌ (22) ಮತ್ತು ಗೋವಿಂದಪುರದ ಇಮ್ರಾನ್‌ ಖಾನ್‌ ಅಲಿಯಾಸ್‌ ಇಮ್ರಾನ್‌ ಬಿನ್‌ ಸಮೀವುಲ್ಲಾ (24) ಎಂದು ಗುರುತಿಸಲಾಗಿದೆ.

ಯಲಹಂಕದ ಮಹಮ್ಮದ್‌ ನಸೀಫ್‌ ಎಂಬುವವರು ಓಎಲ್‌ಎಕ್ಸ್‌ನಲ್ಲಿ ಸ್ಕೂಟರ್‌ ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದರು. ಅದನ್ನು ನೋಡಿದ ಆರೋಪಿಗಳು ನಸೀಫ್‌ಗೆ ಕರೆ ಮಾಡಿ, ಸ್ಕೂಟರ್‌ ಟೆಸ್ಟ್‌ ಡ್ರೈವ್‌ ಮಾಡಬೇಕು ಎಂದು ಸಂಪರ್ಕಿಸಿದ್ದರು. ಟೆಸ್ಟ್‌ ಡ್ರೈವ್‌ ಮಾಡುವುದಕ್ಕೆ ಕೊಂಡೊಯ್ದ ಸ್ಕೂಟರ್‌ ಅನ್ನು ಮತ್ತೆ ಹಿಂದಿರುಗಿಸಿಲ್ಲ. ನ.11ರಂದು ರಾತ್ರಿ 9 ಗಂಟೆಗೆ ಆರೋಪಿಗಳು ಈ ಕೃತ್ಯವೆಸಗಿರುವುದಾಗಿ ನಸೀಫ್‌ ಪೊಲೀಸರಿಗೆ ದೂರು ನೀಡಿದ್ದರು.

ಆರೋಪಿಗಳನ್ನು ಪತ್ತೆ ಹಚ್ಚಲು ಈಶಾನ್ಯ ವಿಭಾಗದ ಉಪ ಪೊಲೀಸ್‌ ಆಯುಕ್ತ ಅನೂಪ್‌ ಎ ಶೆಟ್ಟಿ ಮಾರ್ಗದರ್ಶನದಲ್ಲಿ ಯಲಹಂಕ ಉಪವಿಭಾಗದ ಎಸಿಪಿ ಮಂಜುನಾಥ್‌ ಆರ್‌ ನೇತೃತ್ವದಲ್ಲಿ ಇನ್‌ಸ್ಪೆಕ್ಟರ್‌ ವಿ.ಬಾಲಾಜಿ, ಎಸ್‌ಐಗಳಾದ ಪ್ರಕಾಶ್‌ ಪಿ.ಕಣಜೇರ್‌, ಹರೀಶ್‌.ಎನ್‌.ವಿ., ಮಧುಸೂದನ ಎಲ್‌.ಡಿ., ಮಹೇಶ್‌ ನೇದಲಗಿ, ಎಎಸ್‌ಐ ಬಾಬು ಎಸ್‌.ಆರ್‌, ಹೆಡ್‌ಕಾನ್‌ಸ್ಟೆಬಲ್‌ಗಳಾದ ಮಹಾವೀರ ಬೀಳಗಿ, ಕರಿಬಸಪ್ಪ, ಭಾಸ್ಕರ್‌, ಶಿವಕುಮಾರ, ಸದ್ದಾಂ, ನಜೀರ್‌, ರಾಹುಲ್‌ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿತ್ತು. ಆರೋಪಿಗಳನ್ನು 37ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಂಗ ಬಂಧನದಲ್ಲಿದ್ದಾರೆ.

ಬಂಧಿತರನ್ನು ವಿಚಾರಣೆಗೆ ಒಳಪಡಿಸಿದಾಗ, ಯಲಹಂಕ ಪೊಲೀಸ್ ಠಾಣೆಯ 4 ಸ್ಕೂಟರ್ ಕಳವು ಪ್ರಕರಣ, ಬಾಣಸವಾಡಿ ಪೊಲೀಸ್ ಠಾಣೆಯ 4 ಸ್ಕೂಟರ್ ಕಳವು ಪ್ರಕರಣ, ನಂದಿಗಿರಿ ಪೊಲೀಸ್ ಠಾಣೆಯ 2 ಸ್ಕೂಟರ್ ಕಳವು ಪ್ರಕರಣ, ಜೆ.ಬಿ.ನಗರ ಪೊಲೀಸ್ ಠಾಣೆ, ಯಶವಂತಪುರ, ಮಹಮದೇವಪುರ, ಕೊತ್ತನೂರು, ಇಂದಿರಾನಗರ, ಗೋವಿಂದಪುರ, ವಿವಿಪುರಂ, ಹೆಚ್.ಎಸ್.ಆರ್.ಲೇಔಟ್, ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣೆಯ ತಲಾ 1 ಸ್ಕೂಟರ್ ಕಳವು ಪ್ರಕರಣದಲ್ಲಿ ಈ ಆರೋಪಿಗಳು ಭಾಗಿಯಾಗಿರುವುದು ಖಚಿತವಾಗಿದೆ. ಒಟ್ಟು ೧೯ ಸ್ಕೂಟರ್ ಕಳವು ಪ್ರಕರಣಗಳು ಪತ್ತೆಯಾಗಿರುತ್ತವೆ.

ಗಮನಿಸಬಹುದಾದ ಕೆಲವು ಸುದ್ದಿಗಳು

ಬಾಲ್ ಆಧಾರ್ ಕಾರ್ಡ್ ನವೀಕರಣ ಕಡ್ಡಾಯಗೊಳಿಸಿದೆ ಯುಐಡಿಎಐ; ಅಪ್ಡೇಟ್‌ ಮಾಡುವುದು ಹೇಗೆ?

How to update Baal Aadhaar Card: ಬಾಲ್‌ ಆಧಾರ್ ಎಂದು ಕರೆಯಲ್ಪಡುವ ಮಕ್ಕಳ ಆಧಾರ್ ಕಾರ್ಡ್‌ಗೆ ಸಂಬಂಧಿಸಿ ಭಾರತದ ವಿಶಿಷ್ಟ ಗುರುತಿನ ಪ್ರಾಧಿಕಾರ (ಯುಐಡಿಎಐ) ಇತ್ತೀಚೆಗೆ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

ಗ್ಯಾಸ್‌ ಸಂಪರ್ಕದೊಂದಿಗೆ 50 ಲಕ್ಷ ರೂ. ವಿಮೆ; ಪ್ರೀಮಿಯಂ ಪಾವತಿಸಬೇಕಾಗಿಲ್ಲ- ಇದು ನಿಮಗೆ ಗೊತ್ತೆ?

LPG Cylinder Insurance Scheme: ಇಂದು ಭಾರತದ ಪ್ರತಿ ಮನೆಗೂ ಗ್ಯಾಸ್ ಸಿಲಿಂಡರ್ ಸಂಪರ್ಕವಿದೆ. ಆದರೆ ನಮ್ಮಲ್ಲಿ ಅನೇಕರಿಗೆ ಗ್ಯಾಸ್ ಸಿಲಿಂಡರ್‌ಗಳಿಗೆ ಸಂಬಂಧಿಸಿದ ಗ್ರಾಹಕರ ಹಕ್ಕುಗಳ ಬಗ್ಗೆ ತಿಳಿದಿಲ್ಲ. ವಾಸ್ತವವಾಗಿ ಗ್ಯಾಸ್ ಸಂಪರ್ಕಕ್ಕೆ ಸಂಬಂಧಿಸಿ ಗ್ರಾಹಕರಿಗೆ ಅವರ ಹಕ್ಕುಗಳ ಬಗ್ಗೆ ತಿಳಿಸುವುದು ಗ್ಯಾಸ್ ವಿತರಕರ ಕರ್ತವ್ಯವಾಗಿದೆ. ನೀವೂ ತಿಳಿಯಿರಿ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

ಮುಂದೆ ರಾಹುವಿನ ಹಾದಿ! ಜೀವನದಲ್ಲಿ ಅಶುಭದ ಕರಿಛಾಯೆಯಿಂದ ಹೊರಬರಲಿದ್ದಾರೆ 5 ರಾಶಿಚಕ್ರದವರು

Rahu Gochar 2023: ಮುಂದಿನ ವರ್ಷ ಅಕ್ಟೋಬರ್ 30 ರಂದು ರಾಹು ಸಂಕ್ರಮಣ ನಡೆಯಲಿದೆ. ರಾಹು ಮೀನ ರಾಶಿಯನ್ನು ಪ್ರವೇಶಿಸುವರು. ಪರಿಣಾಮವಾಗಿ, ಅನೇಕ ರಾಶಿಚಕ್ರ ಚಿಹ್ನೆಗಳು ಉತ್ತಮ ಅವಧಿಯನ್ನು ಪ್ರಾರಂಭಿಸುತ್ತವೆ. ಈ ಪಟ್ಟಿಯಲ್ಲಿ ಯಾರಿದ್ದಾರೆ ಎಂದು ನೋಡೋಣ. ವಿವರ ಓದಿಗೆ ಇಲ್ಲಿ ಕ್ಲಿಕ್ಕಿಸಿ.‌

    ಹಂಚಿಕೊಳ್ಳಲು ಲೇಖನಗಳು