logo
ಕನ್ನಡ ಸುದ್ದಿ  /  ಕರ್ನಾಟಕ  /  Vande Bharat Express: ಕರ್ನಾಟಕದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ, ಟಿಕೆಟ್ ದರ ವಿವರ

Vande Bharat Express: ಕರ್ನಾಟಕದ ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ವೇಳಾಪಟ್ಟಿ, ಟಿಕೆಟ್ ದರ ವಿವರ

Umesh Kumar S HT Kannada

Mar 13, 2024 04:02 PM IST

ವಂದೇ ಭಾರತ್ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)

  • ಕರ್ನಾಟಕದಲ್ಲಿ ಸದ್ಯ 8 ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚರಿಸುತ್ತಿವೆ. ಈ ಪೈಕಿ ಎರಡು ವಂದೇ ಭಾರತ್ ರೈಲುಗಳಿಗೆ ನಿನ್ನೆ (ಮಾರ್ಚ್ 12) ಚಾಲನೆ ನೀಡಲಾಗಿದೆ. ಈ ಎಲ್ಲ ರೈಲುಗಳ ವೇಳಾಪಟ್ಟಿ, ಟಿಕೆಟ್ ದರ ಮತ್ತು ಇತರೆ ವಿವರಗಳು ಈ ವರದಿಯಲ್ಲಿದೆ. 

ವಂದೇ ಭಾರತ್ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)
ವಂದೇ ಭಾರತ್ ಎಕ್ಸ್‌ಪ್ರೆಸ್‌ (ಸಾಂಕೇತಿಕ ಚಿತ್ರ)

ಬೆಂಗಳೂರು: ಕರ್ನಾಟಕದಲ್ಲಿ ಸದ್ಯ 8 ವಂದೇ ಭಾರತ್ ರೈಲು ಸಂಚಾರವಿದ್ದು, ಬೆಂಗಳೂರು ಮತ್ತು ಧಾರವಾಡ, ಕಲಬುರಗಿ - ಬೆಂಗಳೂರು ರೈಲು ರಾಜ್ಯದೊಳಗಿನ ಸಂಚಾರವಾಗಿದೆ. ಉಳಿದವು ಹೊರ ರಾಜ್ಯದ ನಗರಗಳನ್ನು ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ಸಂಚಾರಗಳು.

ಟ್ರೆಂಡಿಂಗ್​ ಸುದ್ದಿ

Bangalore Crime: ಗೃಹ ಸಚಿವರ ಆಪ್ತ ಎಂದು ಹೇಳಿಕೊಂಡು ಬೆಂಗಳೂರಿನಲ್ಲಿ ಮಹಿಳೆಯೊಬ್ಬರಿಗೆ 1 ಕೋಟಿ ರೂ. ವಂಚಿಸಿದ್ದ ಯುವಕ ಬಂಧನ

Hassan Scandal: ರೇವಣ್ಣಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲೂ ಒಂದು ದಿನಕ್ಕೆ ಮಾತ್ರ ಜಾಮೀನು

Forest Tales: ಮಳೆಗಾಲ ಬಂತು ಒಂದಾದರೂ ಸಸಿ ನೆಡೋಣ, ಬಿಸಿಲು ಬರದ ಬವಣೆಗೆ ಅರಣ್ಯ ಇಲಾಖೆಯೊಂದಿಗೆ ಕೈಜೋಡಿಸೋಣ ಬನ್ನಿ

Karnataka Rains: ಬೆಂಗಳೂರು, ಮೈಸೂರು, ಕೊಡಗು ಸಹಿತ ಹಲವೆಡೆ ಒಂದು ವಾರ ಭಾರೀ ಮಳೆ, ಆರೆಂಜ್‌ ಅಲರ್ಟ್‌

ಈ ಪೈಕಿ ಕಲಬುರಗಿ- ಬೆಂಗಳೂರು ರೈಲು ಸಂಚಾರಕ್ಕೆ ನಿನ್ನೆಯಷ್ಟೆ ಚಾಲನೆ ಸಿಕ್ಕಿದೆ. ಹೀಗಾಗಿ ಇದರ ದರ ನಿಗದಿಯಾದ ವಿವರಗಳು ಲಭಿಸಬೇಕಷ್ಟೆ.

ಕರ್ನಾಟಕದ 8 ವಂದೇ ಭಾರತ್‌ ಎಕ್ಸ್‌ಪ್ರೆಸ್‌ಗಳಿವು

ಮೈಸೂರು - ಎಂಜಿಆರ್‌ ಚೆನ್ನೈ ಸೆಂಟ್ರಲ್ (ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲು ಸಂಖ್ಯೆ 20607/ 20608) ನಡುವಿನ ಮೊದಲ ಪ್ರಯಾಣ ಶುರು ಮಾಡಿದ್ದು 2022ರ ನವೆಂಬರ್ 11ರಂದು.

ಕೆಎಸ್‌ಆರ್ ಬೆಂಗಳೂರು - ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20661/20662) ಮೊದಲ ಪ್ರಯಾಣ ಶುರುವಾಗಿದ್ದು 2023ರ ಜೂನ್ 27ರಂದು. ಅದೇ ರೀತಿ, ಯಶವಂತಪುರ - ಕಾಚೆಗುಡ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20703/20704) ಮೊದಲ ಪ್ರಯಾಣ ಶುರು ಮಾಡಿದ್ದು 2023ರ ಸೆಪ್ಟೆಂಬರ್ 24 ರಂದು.

ಇನ್ನು, ಮಂಗಳೂರು ಸೆಂಟ್ರಲ್‌ - ತಿರುವನಂತಪುರ (ಆಲಪ್ಪುಳ ಮಾರ್ಗ)ದ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ - 20631/20632) ಮೊದಲ ಪ್ರಯಾಣ ಶುರು ಮಾಡಿದ್ದು 2023ರ ಸೆಪ್ಟೆಂಬರ್ 24 ರಂದು. ಇದು ಕಾಸರಗೋಡು ರೈಲನ್ನು ಮಂಗಳೂರಿಗೆ ವಿಸ್ತರಿಸಿದ್ದಾಗಿದೆ.

ಬೆಂಗಳೂರು ಕಂಟೋನ್ಮೆಂಟ್‌ - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20642/20641)ನ ಮೊದಲ ಪ್ರಯಾಣ ಶುರುವಾಗಿದ್ದು 2023ರ ಡಿಸೆಂಬರ್ 30 ರಂದು.

ಮಂಗಳೂರು ಸೆಂಟ್ರಲ್ - ಮಡ್ಗಾಂವ್‌ (ರೈಲು ಸಂಖ್ಯೆ 20646/20645) ವಂದೇ ಭಾರತ್ ಎಕ್ಸ್‌ಪ್ರೆಸ್‌ ಮೊದಲ ಪ್ರಯಾಣ ಶುರು ಮಾಡಿದ್ದು 2023ರ ಡಿಸೆಂಬರ್ 30 ರಂದು.

ಕಲಬುರಗಿ (ಗುಲ್ಬರ್ಗ)- ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 22231/22232) ಮತ್ತು ಎಸ್‌ಎಂವಿಟಿ ಬೆಂಗಳೂರು- ಎಂಜಿಆರ್ ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್‌ (ರೈಲು ಸಂಖ್ಯೆ 20663/20664) ರೈಲು ಸಂಚಾರ ಮೊದಲ ಪ್ರಯಾಣ ಶುರುವಾಗಿದ್ದು ನಿನ್ನೆ (ಮಾರ್ಚ್‌ 12). ಈ ಪೈಕಿ ಬೆಂಗಳೂರು ಚೆನ್ನೈ ರೈಲು ಸಂಚಾರ ಏಪ್ರಿಲ್ 4ರ ತನಕ ತಾತ್ಕಾಲಿಕ ಸೇವೆಯಾಗಿರಲಿದೆ.

ಕರ್ನಾಟಕದ ವಂದೇ ಭಾರತ್ ಎಕ್ಸ್‌ಪ್ರೆಸ್‌ಗಳ ವೇಳಾಪಟ್ಟಿ, ಟಿಕೆಟ್ ದರ

1) ಕಾಚೆಗುಡ - ಯಶವಂತಪುರ ವಂದೇ ಭಾರತ್ ಎಕ್ಸ್‌ಪ್ರೆಸ್‌

ರೈಲು ಸಂಖ್ಯೆ - 20703 / 20704 (ವಾರಕ್ಕೆ ಆರು ದಿನ)

ಕಾಚೆಗುಡದಿಂದ ಹೊರಡುವುದು - 5.30 AM

ಯಶವಂತಪುರ ತಲುಪುವುದು - 2 PM

ಯಶವಂತಪುರದಿಂದ ಹೊರಡುವುದು - 2.45 PM

ಕಾಚೆಗುಡ ತಲುಪುವುದು - 11 PM

ಚೇರ್ ಕಾರ್‌ ಟಿಕೆಟ್ ದರ

ಯಶವಂತ ಪುರ - ಕಾಚೆಗುಡ 1,540 ರೂಪಾಯಿ

ಕಾಚೆಗುಡ- ಯಶವಂತಪುರ 1,600 ರೂಪಾಯಿ

ಎಕ್ಸಿಕ್ಯೂಟಿವ್ ಕ್ಲಾಸ್‌ ಟಿಕೆಟ್ ದರ

ಯಶವಂತ ಪುರ - ಕಾಚೆಗುಡ 2,865 ರೂಪಾಯಿ

ಕಾಚೆಗುಡ- ಯಶವಂತಪುರ 2,915 ರೂಪಾಯಿ

2) ಬೆಂಗಳೂರು- ಧಾರವಾಡ ವಂದೇ ಭಾರತ್ ಎಕ್ಸ್‌ಪ್ರೆಸ್‌

ರೈಲು ಸಂಖ್ಯೆ 20661/20662

ಬೆಂಗಳೂರಿನಿಂದ ಹೊರಡುವುದು 5.45 AM

ಧಾರವಾಡ ತಲುಪುವುದು 12.10 PM

ಧಾರವಾಡದಿಂದ ಹೊರಡುವುದು 1.15 PM

ಬೆಂಗಳೂರಿಗೆ ತಲುಪುವುದು 7.45 PM

ಚೇರ್ ಕಾರ್‌ ಟಿಕೆಟ್ ದರ

ಬೆಂಗಳೂರು- ಧಾರವಾಡ 1165 ರೂಪಾಯಿ

ಧಾರವಾಡ - ಬೆಂಗಳೂರು 1330 ರೂಪಾಯಿ

ಎಕ್ಸಿಕ್ಯೂಟಿವ್ ಕ್ಲಾಸ್‌ ಟಿಕೆಟ್ ದರ

ಬೆಂಗಳೂರು- ಧಾರವಾಡ 2010 ರೂಪಾಯಿ

ಧಾರವಾಡ - ಬೆಂಗಳೂರು 2440 ರೂಪಾಯಿ

3) ಮೈಸೂರು ಚೆನ್ನೈ ಸೆಂಟ್ರಲ್ ವಂದೇ ಭಾರತ್ ಎಕ್ಸ್‌ಪ್ರೆಸ್

ರೈಲು ಸಂಖ್ಯೆ 20607/ 20608 (ವಾರದಲ್ಲಿ ಆರು ದಿನ)

ಚೆನ್ನೈನಿಂದ ಹೊರಡುವುದು 5.50 AM

ಮೈಸೂರು ತಲುಪುವುದು 12.20 PM

ಮೈಸೂರಿನಿಂದ ಹೊರಡುವುದು 01.05 PM

ಚೆನ್ನೈ ತಲುಪುವುದು 7.30 PM

ಚೇರ್ ಕಾರ್‌ ಟಿಕೆಟ್ ದರ

ಚೆನ್ನೈ- ಮೈಸೂರು 1200 ರೂಪಾಯಿ

ಮೈಸೂರು - ಚೆನ್ನೈ 1365 ರೂಪಾಯಿ

ಎಕ್ಸಿಕ್ಯೂಟಿವ್ ಕ್ಲಾಸ್‌ ಟಿಕೆಟ್ ದರ

ಚೆನ್ನೈ- ಮೈಸೂರು 2,295 ರೂಪಾಯಿ

ಮೈಸೂರು - ಚೆನ್ನೈ 2,485 ರೂಪಾಯಿ

4) ಮಂಗಳೂರು ಸೆಂಟ್ರಲ್ - ತಿರುವನಂತಪುರಂ ವಂದೇ ಭಾರತ್ ಎಕ್ಸ್‌ಪ್ರೆಸ್

ರೈಲು ಸಂಖ್ಯೆ - 20631/20632 (ವಾರದಲ್ಲಿ ಆರು ದಿನ)

ಮಂಗಳೂರು ಸೆಂಟ್ರಲ್‌ನಿಂದ ಹೊರಡುವುದು 6.10 AM

ತಿರುವನಂತಪುರ ತಲುಪುವುದು 3.10 PM

ತಿರುವನಂತಪುರದಿಂದ ಹೊರಡುವುದು 04.05 PM

ಮಂಗಳೂರು ಸೆಂಟ್ರಲ್ ತಲುಪುವುದು 12.40 AM

ಚೇರ್ ಕಾರ್‌ ಟಿಕೆಟ್ ದರ

ಮಂಗಳೂರು ಸೆಂಟ್ರಲ್‌ - ತಿರುವನಂತಪುರ 1,615 ರೂಪಾಯಿ

ತಿರುವನಂತಪುರ- ಮಂಗಳೂರು ಸೆಂಟ್ರಲ್‌

ಎಕ್ಸಿಕ್ಯೂಟಿವ್ ಕ್ಲಾಸ್‌ ಟಿಕೆಟ್ ದರ

ಮಂಗಳೂರು ಸೆಂಟ್ರಲ್‌ - ತಿರುವನಂತಪುರ 2,945 ರೂಪಾಯಿ

ತಿರುವನಂತಪುರ- ಮಂಗಳೂರು ಸೆಂಟ್ರಲ್‌

5) ಬೆಂಗಳೂರು ಕಂಟೋನ್ಮೆಂಟ್‌ - ಕೊಯಮತ್ತೂರು ವಂದೇ ಭಾರತ್ ಎಕ್ಸ್‌ಪ್ರೆಸ್‌

ರೈಲು ಸಂಖ್ಯೆ 20642/20641

ಕೊಯಮತ್ತೂರಿನಿಂದ ಹೊರಡುವುದು 7:25 AM

ಬೆಂಗಳೂರು ಕಂಟೋನ್ಮೆಂಟ್ ತಲುಪುವುದು 1:50 PM

ಬೆಂಗಳೂರು ಕಂಟೋನ್ಮೆಂಟ್‌ನಿಂದ ಹೊರಡುವುದು 2:20 PM

ಕೊಯಮತ್ತೂರು ತಲುಪುವುದು 8:45 PM.

ಚೇರ್ ಕಾರ್‌ ಟಿಕೆಟ್ ದರ

ಬೆಂಗಳೂರು ಕಂಟೋನ್ಮೆಂಟ್‌ - ಕೊಯಮತ್ತೂರು 1,400 ರೂಪಾಯಿ

ಕೊಯಮತ್ತೂರು- ಬೆಂಗಳೂರು ಕಂಟೋನ್ಮೆಂಟ್‌ 1,460 ರೂಪಾಯಿ

ಎಕ್ಸಿಕ್ಯೂಟಿವ್ ಕ್ಲಾಸ್‌ ಟಿಕೆಟ್ ದರ

ಬೆಂಗಳೂರು ಕಂಟೋನ್ಮೆಂಟ್‌ - ಕೊಯಮತ್ತೂರು 2,355 ರೂಪಾಯಿ

ಕೊಯಮತ್ತೂರು- ಬೆಂಗಳೂರು ಕಂಟೋನ್ಮೆಂಟ್‌ 2, 410 ರೂಪಾಯಿ

6) ಮಂಗಳೂರು ಸೆಂಟ್ರಲ್ - ಮಡ್ಗಾಂವ್‌ ವಂದೇ ಭಾರತ್ ಎಕ್ಸ್‌ಪ್ರೆಸ್‌

ರೈಲು ಸಂಖ್ಯೆ 20646/20645

ಮಂಗಳೂರು ಸೆಂಟ್ರಲ್‌ನಿಂದ ಹೊರಡುವುದು 08: 30 AM

ಮಡ್ಗಾಂವ್‌ ತಲುಪುವುದು - 01: 15 PM

ಮಡ್ಗಾಂವ್‌ನಿಂದ ಹೊರಡುವುದು 06: 10 PM

ಮಂಗಳೂರು ಸೆಂಟ್ರಲ್‌ ತಲುಪುವುದು 10: 45 PM

ಚೇರ್ ಕಾರ್‌ ಟಿಕೆಟ್ ದರ

ಮಂಗಳೂರು ಸೆಂಟ್ರಲ್ - ಮಡ್ಗಾಂವ್‌ 1330 ರೂಪಾಯಿ

ಮಡ್ಗಾಂವ್‌ - ಮಂಗಳೂರು ಸೆಂಟ್ರಲ್‌

ಎಕ್ಸಿಕ್ಯೂಟಿವ್ ಕ್ಲಾಸ್‌ ಟಿಕೆಟ್ ದರ

ಮಂಗಳೂರು ಸೆಂಟ್ರಲ್ - ಮಡ್ಗಾಂವ್‌ 2350 ರೂಪಾಯಿ

ಮಡ್ಗಾಂವ್‌ - ಮಂಗಳೂರು ಸೆಂಟ್ರಲ್‌

7) ಕಲಬುರಗಿ (ಗುಲ್ಬರ್ಗ)- ಎಸ್‌ಎಂವಿಟಿ ಬೆಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್‌

ರೈಲು ಸಂಖ್ಯೆ 22231/22232

ಕಲಬುರಗಿಯಿಂದ ಹೊರಡುವುದು 5.15 AM

ಬೆಂಗಳೂರು ತಲುಪುವುದು 2 PM

ಬೆಂಗಳೂರಿನಿಂದ ಹೊರಡುವುದು 2.40 PM

ಕಲಬುರಗಿ ತಲುಪುವುದು 11.30 PM

ಚೇರ್ ಕಾರ್‌ ಟಿಕೆಟ್ ದರ

ಕಲಬುರಗಿ - ಬೆಂಗಳೂರು

ಬೆಂಗಳೂರು- ಕಲಬುರಗಿ

ಎಕ್ಸಿಕ್ಯೂಟಿವ್ ಕ್ಲಾಸ್‌ ಟಿಕೆಟ್ ದರ

ಕಲಬುರಗಿ - ಬೆಂಗಳೂರು

ಬೆಂಗಳೂರು- ಕಲಬುರಗಿ

(ದರ ನಿಗದಿಯಾದ ಮಾಹಿತಿ ಲಭ್ಯವಾಗಿಲ್ಲ)

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ