logo
ಕನ್ನಡ ಸುದ್ದಿ  /  ಕರ್ನಾಟಕ  /  ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಸೇರಿದೆ ಬೆಂಗಳೂರಿನ ಈ ರಸ್ತೆ; ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುವ ಸ್ಥಳವಿದು

ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಸೇರಿದೆ ಬೆಂಗಳೂರಿನ ಈ ರಸ್ತೆ; ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುವ ಸ್ಥಳವಿದು

Reshma HT Kannada

Feb 01, 2024 04:04 PM IST

ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಸೇರಿದೆ ಬೆಂಗಳೂರಿನ ಈ ರಸ್ತೆ

    • ಆಫೀಸ್‌ ಆಫ್‌ ದಿ ಯುನೈಟೆಡ್‌ ಸ್ಟೇಟ್ಸ್‌ ಟ್ರೇಡ್‌ ರೆಪ್ರೆಸೆಂಟೇಟಿವ್‌ (USTR) ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಇದರಲ್ಲಿ ಬೆಂಗಳೂರಿನ ಈ ಪ್ರಸಿದ್ಧ ರಸ್ತೆಗೂ ಸ್ಥಾನವಿದೆ. ಪ್ರತಿದಿನ ಕೋಟ್ಯಂತರ ರೂಪಾಯಿ ವ್ಯವಹಾರ ನಡೆಯುವ ಈ ರಸ್ತೆ ಯಾವುದು ನೋಡಿ. (ಬರಹ: ಎಚ್. ಮಾರುತಿ)
ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಸೇರಿದೆ ಬೆಂಗಳೂರಿನ ಈ ರಸ್ತೆ
ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಗೆ ಸೇರಿದೆ ಬೆಂಗಳೂರಿನ ಈ ರಸ್ತೆ

ಬೆಂಗಳೂರು: ಅಮೆರಿಕದ ವ್ಯಾಪಾರ ಪ್ರತಿನಿಧಿಗಳ ಸಂಸ್ಥೆಯು (ಯುಎಸ್‌ಟಿಆರ್‌) 2023ರ ವಿಶ್ವದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಬೆಂಗಳೂರಿನ ಎಸ್‌ಪಿ ರೋಡ್‌ ಕೂಡ ಸೇರಿದೆ. ಸದರ್‌ ಪತ್ರಪ್ಪ ರಸ್ತೆಯನ್ನು ಶಾರ್ಟ್‌ ಆಗಿ ಎಸ್‌ಸಿ ರೋಡ್‌ ಎಂದು ಕರೆಯಲಾಗುತ್ತದೆ.

ಟ್ರೆಂಡಿಂಗ್​ ಸುದ್ದಿ

Education News: 5, 8 ಮತ್ತು 9 ನೇ ತರಗತಿಯ ವಿದ್ಯಾರ್ಥಿಗಳು ಪಾಸ್; ಮುಂದಿನ ತರಗತಿಗೆ ಮುಂದುವರೆಸಲು ಅನುಮತಿ

Karnataka Rains: ಉಡುಪಿ, ಕೊಡಗು, ಗದಗ, ಶಿವಮೊಗ್ಗ ಸಹಿತ 12 ಜಿಲ್ಲೆಗಳಲ್ಲಿಂದು ಭಾರೀ ಮಳೆ ಮುನ್ಸೂಚನೆ, ಬೆಂಗಳೂರಲ್ಲಿ ಸಾಧಾರಣ ಮಳೆ

Hubli News: ಹುಬ್ಬಳ್ಳಿ ಅಂಜಲಿ ಅಂಬಿಗೇರ ಪ್ರಕರಣ, ಎಸಿಪಿ ಸಸ್ಪೆಂಡ್‌, ನೂತನ ಡಿಸಿಪಿ ನೇಮಕ

Mangalore News: ಪದ್ಮಶ್ರೀ ಹರೇಕಳ ಹಾಜಬ್ಬರ ಶಾಲೆಯಲ್ಲಿ ದುರಂತ, ಮಳೆಗೆ ಶಿಥಿಲಗೊಂಡ ಆವರಣಗೋಡೆ, ಗೇಟು ಕುಸಿದು ಬಾಲಕಿ ದುರ್ಮರಣ

ಸರ್ಕಾರಿ ಸ್ವಾಮ್ಯದ ಈ ಸಂಸ್ಥೆಯು 2023ರಲ್ಲಿನ ವಿಶ್ವದ ಕುಖ್ಯಾತ 39 ಆನ್‌ಲೈನ್‌ ಮಾರ್ಕೆಟ್‌ ಮತ್ತು 33 ಭೌತಿಕ ಮಾರುಕಟ್ಟೆಗಳ ಪಟ್ಟಿಯನ್ನು ಪ್ರಕಟಿಸಿದೆ. ಈ ಮಾರುಕಟ್ಟೆಗಳು ನಕಲಿ ಟ್ರೇಡ್‌ಮಾರ್ಕ್ ಸೃಷ್ಟಿ ಅಥವಾ ಹಕ್ಕುಸ್ವಾಮ್ಯ ಚೌರ್ಯದಲ್ಲಿ ತೊಡಗಿವೆ ಎಂದು ಹೇಳಿದೆ. ಕೋಲ್ಕತ್ತಾದ ಕಿಡ್ಡರ್‌ಪೋರ್‌ ಮಾರುಕಟ್ಟೆ, ಮುಂಬೈನ ಹೀರಾ ಪನ್ನಾ ಮತ್ತು ನವದೆಹಲಿಯ ಪ್ರಸಿದ್ಧ ಕರೋಲ್ ಬಾಗ್ ಮಾರುಕಟ್ಟೆಗಳು ಈ ಪಟ್ಟಿಯಲ್ಲಿವೆ. ದೇಶದ ಜನಪ್ರಿಯ ಇ–ಕಾರ್ಮಸ್‌ ಉದ್ಯಮ ಇಂಡಿಯಾ ಮಾರ್ಟ್‌, ವೆಗಾಮೂವೀಸ್‌, ಡಬ್ಲ್ಯುಎಚ್‌ಎಂಸಿಎಸ್‌ ಸ್ಟಾಟರ್ಸ್‌ ಕೂಡ ಪಟ್ಟಿಯಲ್ಲಿವೆ.

ಎಸ್‌ಪಿ ರಸ್ತೆಯಲ್ಲಿ ಎಲೆಕ್ಟ್ರಾನಿಕ್ ಬಿಡಿ ಭಾಗಗಳು, ಡಿಜಿಟಲ್ ಉತ್ಪನ್ನಗಳ ಮಾರಾಟ ಮತ್ತು ರಿಪೇರಿ ಮಾಡುವುದಕ್ಕೆ ಹೆಸರುವಾಸಿಯಾಗಿದೆ. ಇಂತಹ ಮಾರುಕಟ್ಟೆಗಳಲ್ಲಿ ವಹಿವಾಟು ನಡೆಸದಂತೆ ಎಚ್ಚರಿಕೆ ನೀಡಿದ್ದರೂ ಗ್ರಾಹಕರ ಬಜೆಟ್‌ಗೆ ತಕ್ಕಂತೆ ಉತ್ಪನ್ನಗಳು ಇಲ್ಲಿ ಲಭ್ಯವಾಗುತ್ತವೆ. ಆ ಕಾರಣಕ್ಕೆ ಇಂತಹ ಸ್ಥಳಗಳನ್ನು ಗ್ರಾಹಕರನ್ನು ಹೆಚ್ಚು ಸೆಳೆಯುತ್ತಿವೆ.

ಶೋರೂಮ್‌ಗಳಿಗಿಂತ ಕಡಿಮೆ ದರದಲ್ಲಿ ಎಲೆಕ್ಟ್ರಾನಿಕ್ ಉತ್ಪನ್ನಗಳು ಸಿಗುತ್ತಿದ್ದು, ವಿದ್ಯಾರ್ಥಿಗಳ ನೆಚ್ಚಿನ ಮಾರುಕಟ್ಟೆಯಾಗಿದೆ. ಆಗಾಗ್ಗೆ ಈ ಮಾರುಕಟ್ಟೆ ಮೇಲೆ ದಾಳಿ ನಡೆಯುತ್ತಿರುತ್ತದೆ. 1957ರ ಕಾಪಿ ರೈಟ್ ಕಾಯಿದೆ ಪ್ರಕಾರ ದೂರು ಸಲ್ಲಿಸಲು, ತನಿಖೆ ನಡೆಸಲು ಅವಕಾಶ ಇದೆ.

ಬೆಂಗಳೂರಿನ ಹಲಸೂರು ಗೇಟ್, ಎಸ್‌ಆರ್ ನಗರ ಮತ್ತು ಎಸ್‌ಜೆ ಪಾರ್ಕ್ ಪೊಲೀಸ್ ಠಾಣೆಗಳಲ್ಲಿ ಹೆಚ್ಚಿನ ದೂರುಗಳು ದಾಖಲಾಗುತ್ತವೆ. ಹಾಗೆಂದು ಇಲ್ಲಿ ಮಾರಾಟವಾಗುವ ಎಲ್ಲ ವಸ್ತುಗಳೂ ಕಳಪೆ ಎಂದು ಹೇಳುವಂತಿಲ್ಲ. ಗುಣಮಟ್ಟದ ಉತ್ಪನ್ನಗಳೂ ಮಾರಾಟವಾಗುತ್ತವೆ.

ಚೀನಾ ಮೂಲದ ಇ–ಕಾರ್ಮಸ್‌ ಮತ್ತು ವಾಣಿಜ್ಯ ಮಾರುಕಟ್ಟೆಯಾದ ಟಾವೊಬಾವೊ, ವಿಚಾಟ್‌, ಡಿಎಚ್‌ಗೇಟ್‌, ಪಿಂಡೂಡುವೋ ಈ ಪಟ್ಟಿಯಲ್ಲಿವೆ.

ಈ ಮಾರುಕಟ್ಟೆಗಳಲ್ಲಿ ನಕಲಿ ವ್ಯಾಪಾರ ಹೆಚ್ಚಾಗಿ ನಡೆಯುತ್ತದೆ. ಜನರಿಂದ ದೋಚಿದ ಸರಕುಗಳ ಮಾರಾಟ ಎಗ್ಗಿಲ್ಲದೆ ನಡೆಯುತ್ತಿದೆ. ಇದರಿಂದ ಕಾರ್ಮಿಕರು, ಗ್ರಾಹಕರು ಮತ್ತು ಸಣ್ಣ ವ್ಯಾಪಾರಕ್ಕೆ ಹಾನಿಯಾಗುತ್ತಿದೆ. ಅಮೆರಿಕದ ಆರ್ಥಿಕತೆಗೂ ಇಂತಹ ಮಾರುಕಟ್ಟೆಗಳು ಅಪಾಯ ತಂದೊಡುತ್ತಿವೆ ಎಂದು ಅಮೆರಿಕದ ವ್ಯಾಪಾರ ಪ್ರತಿನಿಧಿ ಕ್ಯಾಥರೀನ್‌ ತೈ ಕಳವಳ ವ್ಯಕ್ತಪಡಿಸಿದ್ದಾರೆ. ಈ ವರ್ಷದ ಕುಖ್ಯಾತ ಮಾರುಕಟ್ಟೆಗಳ ಪಟ್ಟಿಯು ಮಹತ್ವದ್ದಾಗಿದ್ದು, ಏಕೆಂದರೆ, ನಕಲಿ ಸರಕುಗಳ ಸಂಭಾವ್ಯ ಅಪಾಯಗಳನ್ನು ಒತ್ತಿ ಹೇಳುತ್ತದೆ ಎಂದು ಅವರು ಹೇಳಿದ್ದಾರೆ.

ಯುಎಸ್‌ಟಿಆರ್‌ 2006ರಲ್ಲಿ ಮೊದಲ ಬಾರಿಗೆ ಕುಖ್ಯಾತ ಮಾರುಕಟ್ಟೆಗಳನ್ನು ಗುರುತಿಸಲು ಆರಂಭಿಸಿತ್ತು. ಫೆಬ್ರವರಿ 2011ರಿಂದ, ಯುಎಸ್‌ಟಿಆರ್‌ ಸಾರ್ವಜನಿಕ ಜಾಗೃತಿ ಹೆಚ್ಚಿಸಲು ಮತ್ತು ಮಾರುಕಟ್ಟೆಗಳನ್ನು ರಕ್ಷಿಸಲು, ದೇಶದ ಹಿತ ಕಾಪಾಡುವ ದೃಷ್ಟಿಯಿಂದ ಹಾಗೂ ಬೌದ್ಧಿಕ ಆಸ್ತಿ ಜಾರಿ ಪ್ರಯತ್ನಗಳಿಗೆ ಒತ್ತು ನೀಡಲು ಇಂತಹ ಪಟ್ಟಿಯನ್ನು ಬಿಡುಗಡೆ ಮಾಡುತ್ತಿದೆ.

ವಿಶ್ವದಲ್ಲೇ ನಕಲಿ ಉತ್ಪನ್ನಗಳ ಮಾರುಕಟ್ಟೆಯಲ್ಲಿ ಮೊದ ಮೂಲವಾಗಿ ಚೀನಾ ಮೊದಲ ಸ್ಥಾನದಲ್ಲಿ ಮುಂದುವರೆದಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ