ಕನ್ನಡ ಸುದ್ದಿ  /  ಕರ್ನಾಟಕ  /  Bengaluru News: 1 ಕೋಟಿ ರೂಪಾಯಿಯಲ್ಲಿ ಬೆಂಗಳೂರು ರೇಸ್‌ಕೋರ್ಸ್ ಜಂಕ್ಷನ್ ನವೀಕರಣ, ಆಟೋ ನಿಲ್ದಾಣಕ್ಕೆ ಜಾಗವೆಲ್ಲಿ, ಆಟೋ ಚಾಲಕರ ಪ್ರಶ್ನೆ

Bengaluru News: 1 ಕೋಟಿ ರೂಪಾಯಿಯಲ್ಲಿ ಬೆಂಗಳೂರು ರೇಸ್‌ಕೋರ್ಸ್ ಜಂಕ್ಷನ್ ನವೀಕರಣ, ಆಟೋ ನಿಲ್ದಾಣಕ್ಕೆ ಜಾಗವೆಲ್ಲಿ, ಆಟೋ ಚಾಲಕರ ಪ್ರಶ್ನೆ

Bengaluru Race Course Road junction makeover: ಬೆಂಗಳೂರಿನ ರೇಸ್‌ಕೋರ್ಸ್ ರಸ್ತೆ ಜಂಕ್ಷನ್‌ ನವೀಕರಣ ಕಾರ್ಯವನ್ನು ಬಿಬಿಎಂಪಿ ಕೈಗೆತ್ತಿಕೊಂಡಿದೆ. 1 ಕೋಟಿ ರೂ ವೆಚ್ಚದ ಯೋಜನೆ ಇದು. ಈಗ ಇರುವ ಆಟೋ ನಿಲ್ದಾಣಕ್ಕೆ ನವೀಕೃತ ಜಂಕ್ಷನ್‌ನಲ್ಲಿ ಜಾಗ ಇಟ್ಟಿಲ್ಲ. ಇದು ಸಹಜವಾಗಿಯೇ ಆಟೋ ಚಾಲಕರಲ್ಲಿ ಕಳವಳ ಮೂಡಿಸಿದೆ. ಈ ಯೋಜನೆ ಪ್ರಾಯೋಗಿಕವಲ್ಲ ಎಂಬ ಮಾತು ಕೇಳಿದೆ.

ಬೆಂಗಳೂರು ರೇಸ್‌ಕೋರ್ಸ್ ರಸ್ತೆ ಜಂಕ್ಷನ್‌ನ ಹೊಸ ರೂಪ. ಈ ಪರಿಕ್ಪಲನೆಯ ಪ್ರಸ್ತಾವನೆಯನ್ನು ಬಿಬಿಎಂಪಿ ಅಂಗೀಕರಿಸಿದ್ದು, ಅನುಷ್ಠಾನಕ್ಕೆ 1 ಕೋಟಿ ರೂಪಾಯಿ ಮೀಸಲಿಟ್ಟಿದೆ.
ಬೆಂಗಳೂರು ರೇಸ್‌ಕೋರ್ಸ್ ರಸ್ತೆ ಜಂಕ್ಷನ್‌ನ ಹೊಸ ರೂಪ. ಈ ಪರಿಕ್ಪಲನೆಯ ಪ್ರಸ್ತಾವನೆಯನ್ನು ಬಿಬಿಎಂಪಿ ಅಂಗೀಕರಿಸಿದ್ದು, ಅನುಷ್ಠಾನಕ್ಕೆ 1 ಕೋಟಿ ರೂಪಾಯಿ ಮೀಸಲಿಟ್ಟಿದೆ. (MRT/ HTKannada )

ಬೆಂಗಳೂರು ನಗರದ ರೇಸ್‌ಕೋರ್ಸ್ ರಸ್ತೆಯ ಜಂಕ್ಷನ್ ನವೀಕರಣ ಕೆಲಸ ಪ್ರಗತಿಯಲ್ಲಿದೆ. ಒಂದು ಕೋಟಿ ರೂಪಾಯಿ ವೆಚ್ಚದಲ್ಲಿ ನವೀಕರಣ ನಡೆಯುತ್ತಿದ್ದು, ಪ್ರಾಯೋಗಿಕವಲ್ಲದ ಸೃಜನಶೀಲ ವಿನ್ಯಾಸ ಎಂಬ ಕಾರಣಕ್ಕೆ ವ್ಯಾಪಕ ಟೀಕೆಗೆ ಒಳಗಾಗಿದೆ.

ಟ್ರೆಂಡಿಂಗ್​ ಸುದ್ದಿ

ಸದಾ ಸಂಚಾರ ದಟ್ಟಣೆಯಿಂದ ತುಂಬಿರುವ ಪ್ರದೇಶದ ಮಧ್ಯಭಾಗದಲ್ಲಿ ಆಸನ ವ್ಯವಸ್ಥೆ ಮಾಡುವ ಬಿಬಿಎಂಪಿಯ ಯೋಜನೆ ಪ್ರಾಯೋಗಿಕವಲ್ಲ ಎಂಬುದು ಬಹುತೇಕ ಸಾರ್ವಜನಿಕರ ಅಭಿಪ್ರಾಯ. ಅನೇಕರು ಈ ನವೀಕರಣ ಯೋಜನೆ ಕುರಿತು ಈಗಾಗಲೇ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬಿಬಿಎಂಪಿ ಪ್ರಸ್ತಾಪಿಸಿದ ಯೋಜನೆ ಪ್ರಕಾರ, ಜಂಕ್ಷನ್‌ನಲ್ಲಿ ಬಹುಕಮಾನು ಮಾದರಿಯ ರಚನೆ, ಮೊಬೈಲ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು ಆಸನಗಳ ಸ್ಥಾಪನೆ ಕೆಲಸ ಆಗಿದೆ. ವಾಹನಗಳ ಸುರಕ್ಷಿತ ಸಂಚಾರವನ್ನು ಸುಧಾರಿಸುವ ಜಂಕ್ಷನ್‌ನಲ್ಲಿ ಬಿಬಿಎಂಪಿ ಕೆಲವು ಮಾರ್ಪಾಡುಗಳನ್ನು ಮಾಡಿದ್ದರೂ, ಆಟೊ-ರಿಕ್ಷಾಗಳಿಗೆ ಗೊತ್ತುಪಡಿಸಿದ ಪಾರ್ಕಿಂಗ್ ಪ್ರದೇಶವನ್ನು ಒದಗಿಸದೆ ನಿರ್ಲಕ್ಷಿಸಲಾಗಿದೆ.

ಇದನ್ನು ಈ ಜಂಕ್ಷನ್‌ ಬದಿಗೆ ಆಟೋ ಸ್ಟಾಂಡ್‌ನಲ್ಲಿ ಆಟೋ ನಿಲ್ಲಿಸುತ್ತಿದ್ದ ಚಾಲಕರು ಕೂಡ ಗಮನಿಸಿದ್ದು, ಕಳವಳ ವ್ಯಕ್ತಪಡಿಸಿದ್ದಾರೆ. ಆಟೋ ನಿಲುಗಡೆಗೆ ಮೀಸಲಾದ ಸ್ಟ್ಯಾಂಡ್ ಇಲ್ಲ. ಹರೇಕೃಷ್ಣ ರಸ್ತೆ ಅಥವಾ ಶಿವಾನಂದ ಮೇಲ್ಸೇತುವೆ ಕಡೆಗೆ ಹೋಗುವ ಮುಖ್ಯರಸ್ತೆಯಲ್ಲೇ ಆಟೋಗಳನ್ನು ನಿಲ್ಲಿಸಬೇಕಷ್ಟೆ. ಇದು ಸಂಚಾರ ದಟ್ಟಣೆಗೆ ಕಾರಣವಾಗಬಹುದು ಎಂದು ತಮ್ಮ ಆತಂಕವನ್ನು ಅವರು ವ್ಯಕ್ತಪಡಿಸಿದ್ದಾರೆ.

ರೇಸ್‌ಕೋರ್ಸ್ ರಸ್ತೆ ಜಂಕ್ಷನ್ ನವೀಕರಣ ಯೋಜನೆ

ಬಿಬಿಎಂಪಿ ಯೋಜನಾ ಇಲಾಖೆಯು ರೇಸ್ ಕೋರ್ಸ್ ರಸ್ತೆ ಜಂಕ್ಷನ್ ಅನ್ನು ಮೊದಲ ಹಂತದಲ್ಲಿ ಗ್ರಾಮೀಣ ಸೊಗಡಿನಲ್ಲಿ ಅಭಿವೃದ್ಧಿಪಡಿಸಲು ನಿರ್ಧರಿಸಿದೆ. 1 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಜಂಕ್ಷನ್ ಅಭಿವೃದ್ಧಿಯಾಗಲಿದ್ದು, ನವೀಕರಣ ಕೆಲಸಗಳು ಶುರುವಾಗಿವೆ. ಗ್ರಾಮೀಣ ಪ್ರದೇಶಗಳಲ್ಲಿ ಕಂಡು ಬರುವ ಹಳ್ಳಿಕಟ್ಟೆ ನಿರ್ಮಾಣ, ಮೊಬೈಲ್ ಚಾರ್ಜಿಂಗ್ ಸೌಲಭ್ಯ, ಬೆಳಕಿನ ವ್ಯವಸ್ಥೆ ಮತ್ತು ಉದ್ಯಾನವನ ನಿರ್ಮಿಸುವ ಮೂಲಕ ಈ ಜಂಕ್ಷನ್‌ನ ಸೌಂದರ್ಯವನ್ನು ಹೆಚ್ಚಿಸಲು ಬಿಬಿಎಂಪಿ ನಿರ್ಧರಿಸಿದೆ.

ರೇಸ್ ಕೋರ್ಸ್ ರಸ್ತೆ ಮತ್ತು ಹರೇಕೃಷ್ಣ ರಸ್ತೆ ಕೂಡುವ ಪ್ರದೇಶದಲ್ಲಿ ರೇಸ್ ಕೋರ್ಸ್ ಮುಂಭಾಗ ಈ ವೃತ್ತವಿದೆ. ಈ ವೃತ್ತ ಬೆಂಗಳೂರಿನ ಪ್ರಮುಖ ವೃತ್ತಗಳಲ್ಲಿ ಒಂದ್ದಾಗಿದ್ದು, ನಗರದ ಹೃದಯ ಭಾಗದಲ್ಲಿದೆ. ವಿಧಾನಸೌಧ, ಶಾಸಕರ ಭವನ ಎಂಎಸ್ ಬಿಲ್ಡಿಂಗ್ ಜನರಲ್ ಪೋಸ್ಟ್ ಆಫೀಸ್ ಬಿಬಿಎಂಪಿ ಸೇರಿದಂತೆ ನಗರ ಪ್ರವೇಶಕ್ಕೆ ಇದೇ ವೃತ್ತ ಪ್ರವೇಶದ್ವಾರ. ಸಚಿವರು, ಶಾಸಕರು ಸೇರಿ ವಿಐಪಿಗಳು ಸಂಚರಿಸುವ ಮಾರ್ಗವೂ ಹೌದು. ಈ ವೃತ್ತಕ್ಕೆ ಸಮೀಪವೇ ಅನೇಕ ಸಚಿವರ ನಿವಾಸಗಳಿವೆ.

ಪಾದಾಚಾರಿಗಳಿಗೆ ಅನುಕೂಲ ಮಾಡಿಕೊಡುವ ಉದ್ದೇಶ ನವೀಕರಣದ್ದು. ವಿಶಾಲವಾದ ಪಾದಾಚಾರಿ ಮಾರ್ಗಗಳು, ಬಸ್ ನಿಲ್ದಾಣಕ್ಕೆ 100 ಮೀಟರ್ ವೃತ್ತಾಕಾರದ ಇಂಟರ್ ಸೆಕ್ಷನ್ ನಿರ್ಮಾಣವಾಗಲಿದೆ. ಪಾದಾಚಾರಿಗಳಿಗೆ ಅನುಕೂಲವಾಗುವ ಕಿಯೋಸ್ಕ್‌ಗಳು, ಆಸನಗಳ ವ್ಯವಸ್ಥೆ, ಮೊಬೈಲ್ ಚಾರ್ಜಿಂಗ್ ಮತ್ತು ಓದುವ ಹಾಗೂ ನಿರೀಕ್ಷಣಾ ಕೊಠಡಿಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ಪ್ರವೇಶ ಮತ್ತು ನಿರ್ಗಮನ ಸ್ಥಳದಲ್ಲಿ ರ‍್ಯಾಂಪ್‌ಗಳನ್ನು ನಿರ್ಮಾಣ ಮಾಡಲಾಗುತ್ತದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಟಿ20 ವರ್ಲ್ಡ್‌ಕಪ್ 2024