logo
ಕನ್ನಡ ಸುದ್ದಿ  /  ಕರ್ನಾಟಕ  /  Bjp Mla Divorce Case: ಡಿವೋರ್ಸ್‌ ಕೇಸ್‌ನಲ್ಲಿ ಬಿಜೆಪಿ ಶಾಸಕ ಕುಮಾರಸ್ವಾಮಿಗೆ ಹಿನ್ನಡೆ

BJP MLA Divorce Case: ಡಿವೋರ್ಸ್‌ ಕೇಸ್‌ನಲ್ಲಿ ಬಿಜೆಪಿ ಶಾಸಕ ಕುಮಾರಸ್ವಾಮಿಗೆ ಹಿನ್ನಡೆ

HT Kannada Desk HT Kannada

Jan 07, 2023 08:56 AM IST

ಕರ್ನಾಟಕ ಹೈಕೋರ್ಟ್‌

  • BJP MLA Divorce Case: ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪತ್ನಿ ಸವಿತಾರಿಂದ ಡಿವೋರ್ಸ್‌ ಕೋರಿ ಮೈಸೂರು ಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿ ಕೋರ್ಟ್‌ ದಂಪತಿಗೆ ವಿಚ್ಛೇದನ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಸವಿತಾ ಹೈಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, ಮೈಸೂರು ಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ.

ಕರ್ನಾಟಕ ಹೈಕೋರ್ಟ್‌
ಕರ್ನಾಟಕ ಹೈಕೋರ್ಟ್‌ (HT_PRINT)

ಮೂಡಿಗೆರೆಯ ಶಾಸಕ, ಬಿಜೆಪಿ ನಾಯಕ ಎಂ.ಪಿ.ಕುಮಾರಸ್ವಾಮಿ(MP Kumaraswamy)ಗೆ ವಿಚ್ಛೇದನ ಕೇಸ್‌ನಲ್ಲಿ ಹಿನ್ನಡೆ ಉಂಟಾಗಿದೆ. ಮೈಸೂರು ಕೋರ್ಟ್‌ನಲ್ಲಿ ಅವರು ವಿಚ್ಛೇದನ ಪಡೆದಿದ್ದರು. ಅದಕ್ಕೆ ಈಗ ಹೈಕೋರ್ಟ್‌ ತಡೆ ನೀಡಿದೆ.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು: ಲಾಲ್‌ಬಾಗ್‌ನಲ್ಲಿ ಮೇ 23 ರಿಂದ ಜೂನ್ 9 ರ ತನಕ ಬೃಹತ್ ಮಾವು ಹಲಸಿನ ಮೇಳ, ಒಂದೇ ಸೂರಿನಡಿ ಹತ್ತಾರು ಬಗೆಯ ಹಣ್ಣು

ಕರ್ನಾಟಕ ಬರ ಪರಿಸ್ಥಿತಿ; 32 ಲಕ್ಷಕ್ಕೂ ಅಧಿಕ ರೈತರಿಗೆ 3454 ಕೋಟಿ ರೂ ಪರಿಹಾರ, ರಾಜ್ಯದಿಂದಲೂ 16 ಲಕ್ಷ ರೈತ ಕುಟುಂಬಕ್ಕೆ ತಲಾ 3,000 ರೂ

ಕರಾವಳಿಯಲ್ಲಿ ಹೃದಯಾಘಾತದಿಂದಾಗಿ ಇಬ್ಬರ ಸಾವು; ಖೋಟಾ ನೋಟು ಪ್ರಕರಣ ಆರೋಪಿಗಳಿಂದ ಮಹತ್ವದ ಮಾಹಿತಿ

ಅಂಜಲಿ ಅಂಬಿಗೇರ ಸಹೋದರಿ ಯಶೋದಾ ಆತ್ಮಹತ್ಯೆ ಯತ್ನ, ಹುಬ್ಬಳ್ಳಿ ಅಂಜಲಿ ಹತ್ಯೆ ಕೇಸ್‌ ಸಂಬಂಧಿಸಿದ ಇತ್ತೀಚಿನ 10 ವಿದ್ಯಮಾನಗಳು

ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪತ್ನಿ ಸವಿತಾರಿಂದ ಡಿವೋರ್ಸ್‌ ಕೋರಿ ಮೈಸೂರು ಕೋರ್ಟ್‌ ಮೆಟ್ಟಿಲೇರಿದ್ದರು. ಅಲ್ಲಿ ಕೋರ್ಟ್‌ ದಂಪತಿಗೆ ವಿಚ್ಛೇದನ ನೀಡಿತ್ತು. ಆದರೆ, ಇದನ್ನು ಪ್ರಶ್ನಿಸಿ ಸವಿತಾ ಹೈಕೋರ್ಟ್‌ ಮೊರೆ ಹೋಗಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್‌, ಮೈಸೂರು ಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ.

ಶಾಸಕ ಎಂ.ಪಿ.ಕುಮಾರಸ್ವಾಮಿ 2ನೇ ಮದುವೆಯಾಗುವ ಸಾಧ್ಯತೆ ಇದೆ. ವಿಚ್ಛೇದನ ಪಡೆಯುವ ಇಚ್ಛೆ ಇಲ್ಲ. ಹೀಗಾಗಿ ಮೈಸೂರು ಕೋರ್ಟ್‌ ನೀಡಿರುವ ಡಿವೋರ್ಸ್‌ ಆದೇಶಕ್ಕೆ ತಡೆ ನೀಡಬೇಕು ಎಂದು ಸವಿತಾ ತಮ್ಮ ವಕೀಲ ಕೆ.ಎ.ಚಂದ್ರಶೇಖರ್‌ ಮೂಲಕ ಹೈಕೋರ್ಟ್‌ಗೆ ಸಲ್ಲಿಸಿದ ಅರ್ಜಿಯಲ್ಲಿ ತಿಳಿಸಿದ್ದರು. ವಿಚಾರಣೆ ವೇಳೆ ವಕೀಲ ಕೆ.ಎ.ಚಂದ್ರಶೇಖರ್‌ ಕೂಡ ಇದೇ ವಾದವನ್ನು ಮಂಡಿಸಿದರು. ಇದನ್ನು ಆಲಿಸಿದ ಹೈಕೋರ್ಟ್‌ ಪೀಠ, ಮೈಸೂರು ಕೋರ್ಟ್‌ ಆದೇಶಕ್ಕೆ ತಡೆ ನೀಡಿದೆ.

ಅಕ್ರಮ ಸಂಬಂಧ ವಿಚಾರವಾಗಿ ಆಕ್ಷೇಪ ವ್ಯಕ್ತಪಡಿಸಿದ ಕಾರಣ ಶಾಸಕ ಎಂ.ಪಿ.ಕುಮಾರಸ್ವಾಮಿ ಅವರು ಪತ್ನಿಗೆ ಸಾರ್ವಜನಿಕರ ಎದುರೇ ಹೊಡೆದಿದ್ದರು. ಈ ಘಟನೆ 2016ರಲ್ಲಿ ನಡೆದಿತ್ತು. ಅದಾಗಿ 2017ರಲ್ಲಿ ಪತ್ನಿ ಸವಿತಾ ಮೈಸೂರಿನ ಜೆಎಂಎಫ್‌ಸಿ ಕೋರ್ಟ್‌ನಲ್ಲಿ ಡಿವೋರ್ಸ್‌ ಮತ್ತು ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದ್ದರು.

ಅಂದು ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿಯಲ್ಲಿ ಸವಿತಾ, ಗಂಡನಿಗೆ ಅಕ್ರಮ ಸಂಬಂಧ ಇದ್ದು, ಹೆಂಡತಿಯಾದ ನನಗೆ ಕೊಡಬೇಕಾದ ಸ್ಥಾನಮಾನಗಳನ್ನು ಪತಿ ಕೊಡುತ್ತಿಲ್ಲ. ಇದರಿಂದ ನಾನು ಬೇಸತ್ತಿದ್ದು, ಗಂಡನಿಂದ ವಿಚ್ಛೇದನ ಕೊಡಿಸಿ ಜೀವನಾಂಶಕ್ಕೆ ಪ್ರತಿ ತಿಂಗಳೂ 1.5 ಲಕ್ಷ ರೂಪಾಯಿ ಹಾಗೂ 2.50 ಕೋಟಿ ರೂಪಾಯಿ ಆಸ್ತಿಯನ್ನು ಕೊಡಿಸಬೇಕು. ನ್ಯಾಯಾಲಯದ ವೆಚ್ಚಕ್ಕಾಗಿ 5 ಲಕ್ಷ ರೂಪಾಯಿ ಕೊಡಬೇಕೆಂದು ಮನವಿ ಮಾಡಿಕೊಂಡಿದ್ದರು.

ಗಮನಾರ್ಹ ಸುದ್ದಿಗಳು

SDPI in Karnataka: ಕರ್ನಾಟಕದಲ್ಲಿ ಎಸ್‌ಡಿಪಿಐ ನಿಷೇಧಕ್ಕೆ ಚಿಂತನೆ ಎನ್ನುತ್ತಿವೆ ವರದಿಗಳು

SDPI in Karnataka: ನಿಷೇಧಿತ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾ (PFI)ದ ರಾಜಕೀಯ ಘಟಕವೇ ಸೋಷಿಯಲ್‌ ಡೆಮಾಕ್ರಟಿಕ್‌ ಪಾರ್ಟಿ ಆಫ್‌ ಇಂಡಿಯಾ. ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ 2020ರಲ್ಲಿ ನಡೆದ ಗಲಭೆಯಲ್ಲಿ ಎಸ್‌ಡಿಪಿಐ ಕೈವಾಡ ಇರುವುದು ದೃಢಪಟ್ಟ ಕಾರಣ ರಾಜ್ಯ ಬಿಜೆಪಿ ಸರ್ಕಾರ ಈ ಚಿಂತನೆ ನಡೆಸಿದೆ ಎಂದು ವರದಿ ಹೇಳಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Ediga-Billava Yatra: ಸಮುದಾಯದ ಹಿತಕ್ಕಾಗಿ ಈ ಪಾದಯಾತ್ರೆ; ಸರ್ಕಾರ ಎಚ್ಚೆತ್ತುಕೊಳ್ಳಲಿ ಎಂದ ಡಾ. ಪ್ರಣವಾನಂದ ಸ್ವಾಮೀಜಿ

Ediga-Billava Yatra: ಕಲಬುರ್ಗಿ ಕರದಾಳು ಬ್ರಹ್ಮಶ್ರೀ ನಾರಾಯಣಗುರು ಶಕ್ತಿಪೀಠದ ಡಾ. ಪ್ರಣವಾನಂದ ಸ್ವಾಮೀಜಿ ನೇತೃತ್ವದ ಮಂಗಳೂರಿನಿಂದ ಬೆಂಗಳೂರಿಗೆ ಈಡಿಗ - ಬಿಲ್ಲವ ಮಹಾಪಾದಯಾತ್ರೆ (Ediga-Billava Yatra) ಶುರುವಾಗಿದೆ. ಇದಕ್ಕೆ ಕುದ್ರೋಳಿ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ಶುಕ್ರವಾರ ಚಾಲನೆ ಸಿಕ್ಕಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

Which RTO services are online: ಆರ್‌ಟಿಒದ ಈ 58 ಸೇವೆಗಳನ್ನು ಆನ್‌ಲೈನಲ್ಲೇ ಪಡೆಯಿರಿ; ಆಧಾರ್‌ ದೃಢೀಕರಣ ಇದ್ದರೆ ಸಾಕು

Which RTO services are online: ಸರ್ಕಾರದ ಅಧಿಸೂಚನೆ ಪ್ರಕಾರ, ಯಾವನೇ ವ್ಯಕ್ತಿ ಪರಿವಾಹನ್‌ ಪೋರ್ಟಲ್‌ ಮೂಲಕ ಆನ್‌ಲೈನ್‌ ಸೇವೆ ಪಡೆಯುವುದಾದರೆ, ಆಧಾರ್‌ ದೃಢೀಕರಣ ಪ್ರಕ್ರಿಯೆ ನಡೆಸಬೇಕು. ಆಧಾರ್‌ ಸಂಖ್ಯೆ ಇಲ್ಲದೇ ಇರುವಂಥವರು ಸಮೀಪದ ಆರ್‌ಟಿಒ ಕಚೇರಿಗೆ ತೆರಳಿ ಪರ್ಯಾಯ ಗುರುತು ದಾಖಲೆ ಪತ್ರ ನೀಡಿ ಆ ಸೇವೆಯನ್ನು ಪಡೆಯಬಹುದಾಗಿದೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ