logo
ಕನ್ನಡ ಸುದ್ದಿ  /  Karnataka  /  Cm Bommai Temporarily Stays Milk Price Hike In Karnataka

CM Bommai on Milk Price: ಹಾಲಿನ ದರ ಏರಿಕೆಗೆ ಸಿಎಂ ತಾತ್ಕಾಲಿಕ ತಡೆ : ನ. 20ರ ನಂತರ ತೀರ್ಮಾನ ಎಂದ ಬೊಮ್ಮಾಯಿ

HT Kannada Desk HT Kannada

Nov 14, 2022 09:22 PM IST

ಹಾಲಿನ ದರ ಏರಿಕೆಗೆ ಸಿಎಂ ತಾತ್ಕಾಲಿಕ ತಡೆ

    • ಹಾಲಿನ ದರ ಏರಿಕೆ ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.
 ಹಾಲಿನ ದರ ಏರಿಕೆಗೆ ಸಿಎಂ ತಾತ್ಕಾಲಿಕ ತಡೆ
ಹಾಲಿನ ದರ ಏರಿಕೆಗೆ ಸಿಎಂ ತಾತ್ಕಾಲಿಕ ತಡೆ

ಸೇಡಂ (ಕಲಬುರಗಿ): ಹಾಲಿನ ದರ ಏರಿಕೆ ಬಗ್ಗೆ ಈ ತಿಂಗಳ 20ರ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ತೀರ್ಮಾನೀಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ತಿಳಿಸಿದರು.

ಟ್ರೆಂಡಿಂಗ್​ ಸುದ್ದಿ

ತಾಳಿ, ಕೈಬಳೆ ಬಗ್ಗೆ ಸುಳ್ಳು ಹೇಳ್ಕೊಂಡು ತಿರುಗೋ ಪ್ರಧಾನಿ, ಇಷ್ಟೊಂದು ಸುಳ್ಳು ಹೇಳೋ ಮೋದಿಗೆ ನಾಚಿಕೆನೇ ಆಗಲ್ಲ: ಸಿದ್ದರಾಮಯ್ಯ ತಿರುಗೇಟು

Belagavi News: ನೇಹಾಹಿರೇಮಠ ಹತ್ಯೆಗೆ ಮೋದಿ ಖಂಡನೆ, ಪಿಎಫ್‌ಐ ಸಂಘಟನೆ ಬೆಂಬಲಕ್ಕೆ ಕಾಂಗ್ರೆಸ್‌ ವಿರುದ್ದ ಆಕ್ರೋಶ

Hassan Sex Scandal: ಹಾಸನದ ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಪ್ರಜ್ವಲ್ ರೇವಣ್ಣಗೆ ಪೆನ್‌ಡ್ರೈವ್ ಉರುಳು; ಎಸ್‌ಐಟಿ ತನಿಖೆಗೆ ಸರ್ಕಾರ ನಿರ್ಧಾರ

ಮಳೆಯಿಲ್ಲದೆ ಸೊರಗುತ್ತಿರುವ ನದಿಗಳು; ಏಪ್ರಿಲ್ 28ರ ಕರ್ನಾಟಕದ ಪ್ರಮುಖ ಜಲಾಶಯಗಳ ನೀರಿನ ಮಟ್ಟ ಹೀಗಿದೆ

ಇಂದು ಸೇಡಂನಲ್ಲಿ ಹಾಲಿನ ದರ ಪರಿಷ್ಕರಣೆ ಬಗ್ಗೆ ಮಾಧ್ಯಮವರಿಗೆ ಪ್ರತಿಕ್ರಿಯಿಸುತ್ತಾ, ಕಳೆದ ಹಲವಾರು ತಿಂಗಳಿನಿಂದ ಚರ್ಚೆಯಾಗುತ್ತಿದ್ದು, ಈ ತಿಂಗಳ 20ನೇ ತಾರೀಖಿನ ನಂತರ ಕರ್ನಾಟಕ ಸಹಕಾರಿ ಹಾಲು ಉತ್ಪಾದಕರ ಮಹಾಮಂಡಳದ ಅಧ್ಯಕ್ಷರು ಹಾಗೂ ಹಿರಿಯ ಅಧಿಕಾರಿಗಳ ಸಭೆ ನಡೆಸಿ ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳುವುದಾಗಿ ಹೇಳಿದರು.

ಇಂದು ಗ್ರಾಹಕರಿಗೆ ಶಾಕ್‌ ನೀಡಿದ್ದ ಕೆಎಂಎಫ್‌

ಶೀಘ್ರದಲ್ಲೇ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು ಎಂದು ಇತ್ತೀಚೆಗಷ್ಟೇ ಕೆಎಂಎಫ್‌ ಅಧ್ಯಕ್ಷ ಹಾಗೂ ಅರಬಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದ್ದರು. ಅದರಂತೆಯೇ ಇಂದು ಮಧ್ಯರಾತ್ರಿಯಿಂದಲೇ ಜಾರಿಗೆ ಬರುವಂತೆ ಹಾಲು ಹಾಗೂ ಮೊಸರಿನ ಬೆಲೆ ಏರಿಸಿ, ಕರ್ನಾಟಕ ಹಾಲು ಮಹಾಮಂಡಳಿ ಗ್ರಾಹಕರಿಗೆ ಶಾಕ್‌ ನೀಡಿತ್ತು.

ಪ್ರತಿ ಲೀಟರ್ ಹಾಲಿನ ಬೆಲೆ 3 ರೂಪಾಯಿ ಹೆಚ್ಚಳ ಮಾಡಲಾಗುತ್ತಿದೆ. ಇದರಿಂದ ಗ್ರಾಹಕರ ಜೇಬಿಗೆ ಕತ್ತರಿ ಬಿದ್ದರೂ, ಹೈನುಗಾರರಿಗೆ ವರದಾನವಾಗಲಿದೆ. ಹಾಲಿನ ದರ ಪರಿಷ್ಕರಣೆಯ ಹಣ ಸಂಪೂರ್ಣವಾಗಿ ಹೈನುಗಾರರು ಅಥವಾ ರೈತರಿಗೆ ಸಂದಾಯವಾಗಲಿದೆ. ಅಂದರೆ, ಹೆಚ್ಚಳ ಮಾಡಲಾದ ದರವನ್ನು ಪ್ರೋತ್ಸಾಹ ಧನದ ರೂಪದಲ್ಲಿ ರೈತರಿಗೆ ನೀಡಲಾಗುವುದು ಎಂದು ಕೆಎಂಫ್​​ ತಿಳಿಸಿತ್ತು.

ರಾಜ್ಯದ 16 ಹಾಲು ಒಕ್ಕೂಟಗಳು, ಕೆಎಂಎಫ್ ವತಿಯಿಂದ ದರ ಪರಿಷ್ಕರಿಸುವಂತೆ ಮುಖ್ಯಮಂತ್ರಿಗೆ ಪ್ರಸ್ತಾವನೆ ಸಲ್ಲಿಸಿದ್ದವು. ಹೀಗಾಗಿ ರೈತರ ಹೈನುಗಾರಿಕೆ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯ ಎಂದು ಕೆಎಂಎಫ್‌ ಅಧ್ಯಕ್ಷರು ಹೇಳಿದ್ದರು.

ಹಾಲು ಒಕ್ಕೂಟಗಳ ಮನವಿ ಮೇರೆಗೆ ಹಾಲಿನ ದರ ಹೆಚ್ಚಳ ಮಾಡುವಂತೆ ಕಳೆದ 8 ತಿಂಗಳಿನಿಂದ ಕೆಎಂಎಫ್‌ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತಿದೆ. ಆದರೆ ಸರ್ಕಾರ ಸ್ಪಂದಿಸಿರಲಿಲ್ಲ. ಹೀಗಾಗಿ ರೈತರು ಒತ್ತಾಸೆಯನ್ನು ಗಮನದಲ್ಲಿಟ್ಟುಕೊಂಡು ರಾಜ್ಯ ಸರ್ಕಾರದ ಅನುಮೋದನೆ ಇಲ್ಲದೆ, ಕೆಎಂಎಫ್ ಹಾಲಿನ ಬೆಲೆ ಹೆಚ್ಚಿಸಿತ್ತು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು