logo
ಕನ್ನಡ ಸುದ್ದಿ  /  Karnataka  /  Dividing Belagavi Bifurcation Of Belagavi Satish Jarkiholi Congress Govt Cm Siddaramaiah Belagavi News In Kannada Uks

Dividing Belagavi: ಬೆಳಗಾವಿ ಜಿಲ್ಲೆ ವಿಭಜನೆಗೆ ಬದ್ಧ ಎಂದ ಸತೀಶ್‌ ಜಾರಕಿಹೊಳಿ; ಬೆಳಗಾವಿ ಜಿಲ್ಲಾ ವಿಭಜನೆ ಸುಲಭವೆ? ಇಲ್ಲಿದೆ ವಿಶೇಷ ವರದಿ

Umesh Kumar S HT Kannada

May 30, 2023 07:07 PM IST

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಬೆಳಗಾವಿ ಜಿಲ್ಲೆಯ ಮ್ಯಾಪ್‌

  • Dividing Belagavi: ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ. ಭಾಷಾ ಕಾರಣಕ್ಕಾಗಿ ಜಿಲ್ಲೆ ವಿಭಜನೆಗೆ ಕನ್ನಡಪರ ಸಂಘಟನೆಗಳು ವಿರೋಧ ವಕ್ತಪಡಿಸುತ್ತ ಬಂದಿವೆ. ಸಚಿವ ಸತೀಶ್‌ ಜಾರಕಿಹೊಳಿ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಪ್ರಸ್ತಾಪ ಮಾಡಿರುವುದು ಗಮನಸೆಳೆದಿದೆ. ಈ ವಿದ್ಯಮಾನದ ವಿಶೇಷ ವರದಿ ಇಲ್ಲಿದೆ.

ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಬೆಳಗಾವಿ ಜಿಲ್ಲೆಯ ಮ್ಯಾಪ್‌
ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಮತ್ತು ಬೆಳಗಾವಿ ಜಿಲ್ಲೆಯ ಮ್ಯಾಪ್‌

ಬೆಳಗಾವಿ ಜಿಲ್ಲೆ ವಿಭಜನೆ (Dividing Belagavi) ವಿಚಾರ ಈಗ ಮತ್ತೆ ಮುನ್ನೆಲೆಗೆ ಬಂದಿದೆ. 1990ರ ದಶಕದಲ್ಲಿ ಮೊದಲ ಬಾರಿಗೆ ಜಿಲ್ಲೆ ವಿಭಜನೆ ವಿಚಾರ ಚರ್ಚೆಗೆ ಒಳಗಾಗಿತ್ತು. ಅಲ್ಲಿಂದೀಚೆಗೆ ಪದೇಪದೆ ಈ ವಿಚಾರ ಚರ್ಚೆಗೆ ಒಳಗಾದರೂ, ಫಲ ಸಿಕ್ಕಿರಲಿಲ್ಲ. ಈಗ ಸಚಿವ ಸತೀಶ್‌ ಜಾರಕಿಹೊಳಿ (Satish Jarkiholi) ಈ ವಿಚಾರ ಪ್ರಸ್ತಾಪಿಸಿದ್ದು, ಬೆಳಗಾವಿ ಜಿಲ್ಲಾ ವಿಭಜನೆಗೆ ಪ್ರಾಮುಖ್ಯತೆ ಸಿಕ್ಕಿದೆ.

ಟ್ರೆಂಡಿಂಗ್​ ಸುದ್ದಿ

MLC Election 2024: ಪ್ರಜ್ವಲ್ ಪ್ರಕರಣ ನಡುವೆಯೇ ವಿಧಾನ ಪರಿಷತ್ 6 ಸ್ಥಾನಗಳಿಗೆ ಜೂನ್ 3 ರಂದು ಚುನಾವಣೆ; ಜೂ 6 ಕ್ಕೆ ಫಲಿತಾಂಶ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಬೆಳಗಾವಿಯಲ್ಲಿ ಸುದ್ದಿಗಾರರ ಜತೆಗೆ ಮಾತನಾಡಿದ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ, ಬೆಳಗಾವಿ ವಿಭಜನೆಗೆ ನಾವು ಬದ್ಧರಿದ್ದೇವೆ. ಬೆಳಗಾವಿ ಜಿಲ್ಲೆ ದೊಡ್ಡದಿದೆ. ಅದು ವಿಭಜನೆ ಆಗಲೇಬೇಕು. ಅದರಲ್ಲಿ ಸಂದೇಹ ಇಲ್ಲ. ಬೃಹತ್‌ ಜಿಲ್ಲೆಯಾಗಿರುವ ಬೆಳಗಾವಿಯನ್ನು ಮುನ್ನಡೆಸುವುದು ಸುಲಭವಲ್ಲ. ಜಿಲ್ಲಾ ವಿಭಜನೆ ಬಗ್ಗೆ ನಾವು ಮುಖ್ಯಮಂತ್ರಿ ಸಿದ್ದರಾಮಯ್ಯ (Chief Minister Siddaramaiah) ಅವರಿಗೆ ಮನವಿ ಮಾಡುತ್ತೇವೆ. ಸರ್ಕಾರದ ಮೇಲೆ ಒತ್ತಡವನ್ನೂ ಹೇರುತ್ತೇವೆ ಎಂದು ಹೇಳಿದರು.

ಜಿಲ್ಲೆಯನ್ನು ಮೂರು ತುಂಡಾಗಿ ವಿಭಜಿಸಿ ಮೂರು ಹೊಸ ಜಿಲ್ಲೆ ರಚಿಸಬೇಕು. ಬೆಳಗಾವಿ, ಗೋಕಾಕ್‌, ಚಿಕ್ಕೋಡಿ ಮೂರು ಜಿಲ್ಲೆ ಆಗಬೇಕು. ಜಿಲ್ಲೆ ವಿಭಜನೆ ಆದರೂ, ಆ ಮೂರೂ ಜಿಲ್ಲೆಗಳಿಗೆ ನನ್ನ ಪ್ರವೇಶ ಇದ್ದೇ ಇದೆ. ಜಿಲ್ಲೆ ವಿಭಜಿಸಬೇಕು ಎಂಬ ಬೇಡಿಕೆ ಇರಿಸುವುದಕ್ಕೆ ಎಲ್ಲರಿಗೂ ಹಕ್ಕು ಇದೆ ಎಂದು ಅವರು ಹೇಳಿದರು.

ಬೆಳಗಾವಿ ಜಿಲ್ಲೆ ವಿಭಜನೆ ಸುಲಭವೇ? ಗಮನಿಸಬೇಕಾದ ಅಂಶಗಳೇನು?

ಮೂರು ವರ್ಷದ ಹಿಂದೆ ದೊಡ್ಡ ಜಿಲ್ಲೆ ಬಳ್ಳಾರಿಯನ್ನು ವಿಭಜಿಸಿ ವಿಜಯನಗರ ಜಿಲ್ಲೆ ರಚನೆಗೆ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿದ ಸಂದರ್ಭದಲ್ಲಿ ಬೆಳಗಾವಿ ಜಿಲ್ಲೆ ವಿಭಜನೆ ವಿಚಾರ ಪ್ರಸ್ತಾಪವಾಗಿತ್ತು.

ಬೆಳಗಾವಿ ಜಿಲ್ಲೆ ವಿಭಜನೆ ಆದರೇನು ಪ್ರಯೋಜನ ಎಂಬ ಪ್ರಶ್ನೆಗೆ ಆಡಳಿತ ಸುಧಾರಣೆಗೆ ನೆರವಾಗುತ್ತದೆ ನೇರ ಪ್ರತಿಪಾದನೆ ಎದುರಾಗುತ್ತದೆ. ಇದು ಮಹಾರಾಷ್ಟ್ರದ ಗಡಿ ಜಿಲ್ಲೆಯಾದ ಕಾರಣ, ಇತರೆ ಕಾಳಜಿ ಕೂಡ ಮುಖ್ಯವಾಗುತ್ತದೆ. ವಿಶೇಷವಾಗಿ ಭಾಷೆಗೆ ಸಂಬಂಧಿಸಿದ ಕಾಳಜಿ ಹೆಚ್ಚು ಪ್ರಾಮುಖ್ಯತೆ ಪಡೆಯುತ್ತದೆ. ಇದು ಜಿಲ್ಲೆಯ ರಾಜಕೀಯ ನಾಯಕರ ರಾಜಕೀಯ ಬದುಕಿನ ಮೇಲೂ ಪರಿಣಾಮ ಉಂಟುಮಾಡುವಂಥದ್ದು.

ಜಿಲ್ಲೆಯ ವಿಸ್ತಾರವನ್ನು ಗಮನಿಸಿದರೆ ಬೆಳಗಾವಿ ವಿಭಜನೆಗೆ ಸೂಕ್ತವೆಂದು ಭಾವಿಸುವ ಅನೇಕರು ಇದ್ದಾರೆ. ಈ ಜಿಲ್ಲೆಯಲ್ಲಿ 506 ಗ್ರಾಮಪಂಚಾಯಿತಿಗಳಿವೆ. ಇದು ಕರ್ನಾಟಕದಲ್ಲೇ ಗರಿಷ್ಠ ಗ್ರಾಮಪಂಚಾಯಿತಿ ಹೊಂದಿರುವ ಜಿಲ್ಲೆ.

ಜಿಲ್ಲೆಯ 14 ತಾಲೂಕುಗಳ 18 ವಿಧಾನಸಭಾ ಕ್ಷೇತ್ರಗಳಲ್ಲಿ 55 ಲಕ್ಷ ಜನ ನೆಲೆಸಿದ್ದಾರೆ. ಚಿಕ್ಕೋಡಿಯ ಕೆಲವು ಗ್ರಾಮಗಳ ಜನರು ಜಿಲ್ಲಾ ಕೇಂದ್ರಕ್ಕೆ ಬರುವುದಕ್ಕೆ 200 ಕಿ.ಮೀ. ದೂರ ಪ್ರಯಾಣಿಸಬೇಕಾದ ಅನಿವಾರ್ಯತೆ ಇದೆ. ಇತರ ದೊಡ್ಡ ಪಟ್ಟಣಗಳಾದ ಚಿಕ್ಕೋಡಿ, ಗೋಕಾಕ, ಬೈಲಹೊಂಗಲ, ಹುಕ್ಕೇರಿ, ಅಥಣಿ, ಮತ್ತು ಖಾನಾಪುರಗಳಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್, ಕೆಎಂಎಫ್ ಡೈರಿಗಳು, ಗ್ರಾಹಕರ ವಿವಾದ ಪರಿಹಾರ ವೇದಿಕೆಗಳು, ಜಿಲ್ಲಾ ಪಂಚಾಯಿತಿಗಳು, ನಬಾರ್ಡ್ ಕಚೇರಿಗಳು ಮತ್ತು ಹೆಸ್ಕಾಂ ವಿತರಣಾ ಕೇಂದ್ರಗಳಂತಹ ಏಜೆನ್ಸಿಗಳು ಅಥವಾ ಸೌಲಭ್ಯಗಳಿಂದ ವಂಚಿತವಾಗಿವೆ. ಭೌಗೋಳಿಕ ಮತ್ತು ಜನಸಂಖ್ಯೆ ದೃಷ್ಟಿಯಿಂದ ಈ ಜಿಲ್ಲೆಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳೂ ಕಡಿಮೆ ಇವೆ.

ಜೆ.ಎಚ್‌.ಪಟೇಲರ ಕಾಲದಲ್ಲಿ ವಿಭಜನೆಗೆ ಆದೇಶವಾಗಿತ್ತು..

ಅದು 1997ರ ಕಾಲಘಟ್ಟ. ಅಂದು ಮುಖ್ಯಮಂತ್ರಿ ಆಗಿದ್ದ ಜೆ.ಎಚ್.ಪಟೇಲರು ಬೆಳಗಾವಿ ವಿಭಜನೆ ಮಾಡಿ ಚಿಕ್ಕೋಡಿ ಜಿಲ್ಲೆ ರಚಿಸಲು ಆದೇಶ ನೀಡಿದ್ದರು. ಆಗ ಭಾಷಾವಾರು ಕಾರಣಗಳಿಗಾಗಿ 1997ರಿಂದ ಬೆಳಗಾವಿ ಜಿಲ್ಲೆಯನ್ನು ವಿಭಜಿಸುವ ಯೋಜನೆಗೆ ಕನ್ನಡಪರ ಸಂಘಟನೆಗಳು ತೀವ್ರ ವಿರೋಧ ವ್ಯಕ್ತಪಡಿಸಿದ್ದವು. ಬೆಳಗಾವಿ ಮತ್ತು ಸುತ್ತಮುತ್ತಲಿನ ಪಟ್ಟಣಗಳಲ್ಲಿ ಕೋಪಗೊಂಡ ಪ್ರತಿಭಟನೆಗಳಾಗಿದ್ದವು. ಜಿಲ್ಲೆ ಇಬ್ಭಾಗವಾದರೆ ಜಿಲ್ಲೆಯಲ್ಲಿ ಕನ್ನಡ ಭಾಷಿಗರು ಅಲ್ಪ ಸಂಖ್ಯಾತರಾಗುತ್ತಾರೆ ಎಂದು ಕನ್ನಡ ಮುಖಂಡರು ಆತಂಕ ವ್ಯಕ್ತಪಡಿಸಿದರು. ಕನ್ನಡ ಪರ ಸಂಘಟನೆಗಳ ಕಾರ್ಯಕರ್ತರು 29 ದಿನಗಳ ಕಾಲ ಪ್ರತಿಭಟನೆ ನಡೆಸಿದರೂ ರಾಜ್ಯ ಸರ್ಕಾರ ಪಟ್ಟು ಬಿಟ್ಟಿರಲಿಲ್ಲ. ಕೊನೆಗೆ ಪಟೇಲ್ ಅವರು ವಿಭಜನೆಯನ್ನು ತಡೆಹಿಡಿಯುವ ಆದೇಶ ನೀಡಿದರು. ಮಹಾರಾಷ್ಟ್ರದ ಜತೆಗಿನ ಗಡಿ ವಿವಾದ ಇತ್ಯರ್ಥವಾಗುವವರೆಗೆ ಬೆಳಗಾವಿ ಅವಿಭಜಿತವಾಗಿರುತ್ತದೆ ಎಂದು ಹೇಳಿ ಆ ವಿವಾದ ತಣ್ಣಗಾಗಿಸಿದ್ದರು.

    ಹಂಚಿಕೊಳ್ಳಲು ಲೇಖನಗಳು