logo
ಕನ್ನಡ ಸುದ್ದಿ  /  ಕರ್ನಾಟಕ  /  ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಶೀಘ್ರದಲ್ಲೇ ಪ್ರಕಟ; ಕಳೆದ ವರ್ಷ ಹೀಗಿತ್ತು 10ನೇ ತರಗತಿ ರಿಸಲ್ಟ್‌

ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಶೀಘ್ರದಲ್ಲೇ ಪ್ರಕಟ; ಕಳೆದ ವರ್ಷ ಹೀಗಿತ್ತು 10ನೇ ತರಗತಿ ರಿಸಲ್ಟ್‌

Umesh Kumar S HT Kannada

May 07, 2024 10:42 AM IST

ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಶೀಘ್ರದಲ್ಲೇ ಪ್ರಕಟ (ಸಾಂಕೇತಿಕ ಚಿತ್ರ)

  • ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಶೀಘ್ರದಲ್ಲೇ ಪ್ರಕಟವಾಗಲಿದೆ. ಇದಕ್ಕೆ ಬೇಕಾದ ಸಿದ್ಧತೆಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ ಮಾಡುತ್ತಿದ್ದು, ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಿದೆ. ಈ ಸಂದರ್ಭದಲ್ಲಿ ಒಂದು ಹಿನ್ನೋಟದಂತೆ ಗಮನಿಸುವುದಾದರೆ, ಕಳೆದ ವರ್ಷ ಹೀಗಿತ್ತು 10ನೇ ತರಗತಿ ರಿಸಲ್ಟ್‌.

ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಶೀಘ್ರದಲ್ಲೇ ಪ್ರಕಟ (ಸಾಂಕೇತಿಕ ಚಿತ್ರ)
ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಶೀಘ್ರದಲ್ಲೇ ಪ್ರಕಟ (ಸಾಂಕೇತಿಕ ಚಿತ್ರ) (PTI)

ಬೆಂಗಳೂರು: ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯಮಾಪನ ಮಂಡಳಿ (KSEAB) ಶೀಘ್ರದಲ್ಲೇ ತನ್ನ ಅಧಿಕೃತ ವೆಬ್‌ಸೈಟ್ kseab.karnataka.gov.in ನಲ್ಲಿ 2024ರ ಎಸ್‌ಎಸ್‌ಎಲ್‌ಸಿ ಫಲಿತಾಂಶ (SSLC Result 2024) ವನ್ನು ಬಿಡುಗಡೆ ಮಾಡಲಿದೆ. ಕಳೆದ ವರ್ಷ ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ (Karnataka SSLC Result 2023) ಹೇಗೆ ಬಂದಿತ್ತು ಎಂಬುದರ ಅವಲೋಕನಕ್ಕೆ ಈ ಸಂದರ್ಭ ಒಂದು ನಿಮಿತ್ತ.

ಟ್ರೆಂಡಿಂಗ್​ ಸುದ್ದಿ

Indian Railways: ಬೆಂಗಳೂರು-ಧರ್ಮಪುರಿ, ಹರಿಪ್ರಿಯಾ, ಮೈಸೂರು-ಕಾಚೀಗುಡ, ವಾಸ್ಕೋ ಸಹಿತ 7 ರೈಲುಗಳ ಸಂಚಾರ ಸಮಯ ಬದಲು

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಕಳೆದ ವರ್ಷದ ಎಸ್‌ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶ ಗಮನಿಸಿದರೆ, ಬಾಲಕಿಯರೇ ಮೇಲುಗೈ ಸಾಧಿಸಿದ್ದರು. ಉತ್ತೀರ್ಣ ಪ್ರಮಾಣ ಗಮನಿಸಿದರೆ ರಾಜ್ಯಕ್ಕೆ ಚಿತ್ರದುರ್ಗ ಜಿಲ್ಲೆ ಮೊದಲ ಸ್ಥಾನ, ಮಂಡ್ಯ ಎರಡನೇ ಸ್ಥಾನ ಮತ್ತು ಯಾದಗಿರಿ ಕೊನೆಯ ಸ್ಥಾನದಲ್ಲಿ ಕಂಡುಬಂದಿದ್ದವು. ಸಾಮಾನ್ಯವಾಗಿ ಮೊದಲ ಎರಡು ಸ್ಥಾನಗಳಲ್ಲಿ ಕಂಡುಬರುತ್ತಿದ್ದ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿ ಜಿಲ್ಲೆಗಳು 13, 18,19ನೇ ಸ್ಥಾನದಲ್ಲಿ ಕಂಡಿದ್ದವು. ಕಳೆದ ವರ್ಷ ಅಂದರೆ 2023ರಲ್ಲಿ ಮಾರ್ಚ್ 31ರಿಂದ ಏಪ್ರಿಲ್‌ 15ರವರೆಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆದಿತ್ತು.

ಕರ್ನಾಟಕದಲ್ಲಿ 2023ರಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಉತ್ತೀರ್ಣ ಪ್ರಮಾಣ ಶೇಕಡ 83.88 ದಾಖಲಾಗಿತ್ತು. ಅಂದರೆ, ಒಟ್ಟು 7,00,619 ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದರು. ಬಾಲಕರು – 3,41,108( 80.08%) ಹಾಗೂ ಬಾಲಕಿಯರು – 3,59,511( 87.98%) ಉತ್ತೀರ್ಣರಾಗಿದ್ದರು. ನಾಲ್ವರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದರು. ಬೆಂಗಳೂರಿನ ನ್ಯೂಮೆಕಾಲೆ ಇಂಗ್ಲಿಷ್ ಹೈಸ್ಕೂಲ್ ವಿದ್ಯಾರ್ಥಿನಿ ಭೂಮಿಕಾ ಪೈ, ಚಿಕ್ಕಬಳ್ಳಾಪುರದ ಬಾಲಗಂಗಾದರನಾಥ ಪ್ರೌಢಶಾಲೆಯ ಯಶಸ್ ಗೌಡ, ಬೆಳಗಾವಿ ಸವದತ್ತಿ ಕುಮಾರೇರ್ಶವರ ಹೈಸ್ಕೂಲ್‌ನ ಅನುಪಮಾ ಶ್ರೀಶೈಲ, ಮುದ್ದೇಬಿಹಾಳ ನಾಗರಬೆಟ್ಟ ಆಕ್ಸ್‌ಫರ್ಡ್‌ ಇಂಗ್ಲಿಷ್ ಮೀಡಿಯಂ ಹೈಸ್ಕೂಲ್‌ನ ಭೀಮನಗೌಡ ಹನುಮಂತಗೌಡ ಬಿರಾದಾರ ಪಾಟೀಲ 100ಕ್ಕೆ 100 ಫಲಿತಾಂಶ ಪಡೆದವರು.

ಎಸ್‌ಎಸ್‌ಎಲ್‌ಸಿ ಫಲಿತಾಂಶ 2023 - ಜಿಲ್ಲೆಗಳ ಶೇಕಡಾವಾರು ಫಲಿತಾಂಶ ಹೀಗಿತ್ತು

1) ಚಿತ್ರದುರ್ಗ-96.8

2) ಮಂಡ್ಯ- 96.74

3) ಹಾಸನ- 96.68

4) ಬೆಂಗಳೂರು ಗ್ರಾಮಾಂತರ- 96.48

5) ಚಿಕ್ಕಬಳ್ಳಾಪುರ-96.15

6) ಕೋಲಾರ- 94.6

7) ಚಾಮರಾಜನಗರ- 94.37

8) ಮಧುಗಿರಿ- 93-23

9) ಕೊಡಗು- 93.19

10) ವಿಜಯನಗರ- 91.41

11) ವಿಜಯಪುರ-91.23

12) ಚಿಕ್ಕೋಡಿ-91.07

13) ಉತ್ತರ ಕನ್ನಡ- 90.53

14) ದಾವಣಗೆರೆ- 90.43

15) ಕೊಪ್ಪಳ- 90.27

16) ಮೈಸೂರು-89.75

17) ಚಿಕ್ಕಮಗಳೂರು-89.69

18) ಉಡುಪಿ-89.49

19) ದಕ್ಷಿಣ ಕನ್ನಡ-89.47

20) ತುಮಕೂರು-89.43

21) ರಾಮನಗರ-89.42

22) ಹಾವೇರಿ-89.11

23) ಶಿರಸಿ-87.39

24) ಧಾರವಾಡ-86.55

25) ಗದಗ-86.51

26) ಬೆಳಗಾವಿ-85.85

27) ಬಾಗಲಕೋಟೆ-85.14

28) ಕಲಬುರಗಿ-84.51

29) ಶಿವಮೊಗ್ಗ-84.04

30) ರಾಯಚೂರು- 84.02

31) ಬಳ್ಳಾರಿ-81.54

32) ಬೆಂಗಳೂರು ಉತ್ತರ-80.93

33) ಬೆಂಗಳೂರು ದಕ್ಷಿಣ-78.95

34) ಬೀದರ್‌-78.73

35) ಯಾದಗಿರಿ- 75.49

2023ರ ಮಾರ್ಚ್‌ 31ರಿಂದ ಏಪ್ರಿಲ್‌ 15ರವರೆಗೆ ನಡೆದಿತ್ತು ಎಸ್‌ಎಸ್‌ಎಲ್‌ಸಿ ಪರೀಕ್ಷೆ

ಕರ್ನಾಟಕದಲ್ಲಿ ಕಳೆದ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆಯು 2023ರ ಮಾರ್ಚ್ 31ರಿಂದ ಏಪ್ರಿಲ್ 15 ರ ತನಕ ನಡೆಯಿತು. ಕರ್ನಾಟಕದ 15,498 ಪ್ರೌಢಶಾಲೆಗಳ ವಿದ್ಯಾರ್ಥಿಗಳು 3,305 ಕೇಂದ್ರಗಳಲ್ಲಿ ಒಟ್ಟು 7,94,611 ಶಾಲಾ ವಿದ್ಯಾರ್ಥಿಗಳು, 20,750 ಪುನರಾವರ್ತಿತ ವಿದ್ಯಾರ್ಥಿಗಳು, 18,272 ಖಾಸಗಿ ವಿದ್ಯಾರ್ಥಿಗಳು, 8,859 ಖಾಸಗಿ ಪುನರಾವರ್ತಿತ ವಿದ್ಯಾರ್ಥಿಗಳು ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದಿದ್ದರು. 63 ಸಾವಿರ ಶಿಕ್ಷಕರು ಮೌಲ್ಯಮಾಪನ ನಡೆಸಿದ್ದರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ