logo
ಕನ್ನಡ ಸುದ್ದಿ  /  ಕರ್ನಾಟಕ  /  Exam Preparation: ಪರೀಕ್ಷಾ ತಯಾರಿಗೆ ಆತ್ಮ ವಿಶ್ವಾಸ ಮತ್ತು ದೃಢಸಂಕಲ್ಪ ಮೂಲಮಂತ್ರ; ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್‌ ಬೊಮ್ಮಕ್ಕನವರ

Exam preparation: ಪರೀಕ್ಷಾ ತಯಾರಿಗೆ ಆತ್ಮ ವಿಶ್ವಾಸ ಮತ್ತು ದೃಢಸಂಕಲ್ಪ ಮೂಲಮಂತ್ರ; ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್‌ ಬೊಮ್ಮಕ್ಕನವರ

HT Kannada Desk HT Kannada

Feb 16, 2023 06:58 PM IST

ಜ್ಞಾನದೀಪ ವೆಬಿನಾರಿನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

  • Exam preparation: ಧಾರವಾಡ ಗ್ರಾಮೀಣದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್‌ ಬೊಮ್ಮಕ್ಕನವರ ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ವೆಬಿನಾರಿನಲ್ಲಿ ʻಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ನಮ್ಮ ತಯಾರಿʼ ಎಂಬ ವಿಷಯವನ್ನು ಶಾಲಾ ಮಕ್ಕಳಿಗೆ ಅರ್ಥವಾಗುವಂತೆ ಪ್ರಸ್ತುತಪಡಿಸಿದರು.

ಜ್ಞಾನದೀಪ ವೆಬಿನಾರಿನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು
ಜ್ಞಾನದೀಪ ವೆಬಿನಾರಿನಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು

ಪರೀಕ್ಷಾ ಸಮಯ ಸಮೀಪದಲ್ಲಿದೆ. ವಿದ್ಯಾರ್ಥಿಗಳು ಪರೀಕ್ಷೆಯ ತಯಾರಿ ನಡೆಸಲು ಆರಂಭಿಸಿದ್ದಾರೆ. ಆತ್ಮವಿಶ್ವಾಸ ಮತ್ತು ದೃಢ ಸಂಕಲ್ಪಗಳು ಪರೀಕ್ಷಾ ತಯಾರಿಯ ಮೂಲ ಮಂತ್ರಗಳು ಎಂದು ಧಾರವಾಡ ಗ್ರಾಮೀಣದ ಕ್ಷೇತ್ರ ಶಿಕ್ಷಣಾಧಿಕಾರಿ ಉಮೇಶ್‌ ಬೊಮ್ಮಕ್ಕನವರ ಹೇಳಿದರು.

ಟ್ರೆಂಡಿಂಗ್​ ಸುದ್ದಿ

ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಕಲಾವಿದೆ ವಿದ್ಯಾಶ್ರೀ ಎಚ್‌ಎಸ್ ಅವರ ಭರತನಾಟ್ಯ ರಂಗಾರೋಹಣ ನಾಳೆ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಅವರು ಬುಧವಾರ (ಫೆ.15) Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ವೆಬಿನಾರಿನಲ್ಲಿ ʻಆತ್ಮ ವಿಶ್ವಾಸದಿಂದ ಪರೀಕ್ಷೆ ಎದುರಿಸಲು ನಮ್ಮ ತಯಾರಿʼ ಎಂಬ ವಿಷಯವನ್ನು ಶಾಲಾ ಮಕ್ಕಳಿಗೆ ಅರ್ಥವಾಗುವಂತೆ ಪ್ರಸ್ತುತಪಡಿಸಿದರು.

ಪರೀಕ್ಷೆಗಳು ಕೇವಲ ಪಠ್ಯಪುಸ್ತಕಗಳಿಗೆ ಮಾತ್ರ ಸೀಮಿತವಾಗಿಲ್ಲ. ನಮ್ಮ ಜೀವನಕ್ಕೂ ಸಂಬಂಧಿಸಿದ್ದು. ಸಾಮಾನ್ಯವಾಗಿ ಜೀವನದ ಪ್ರತಿ ಹಂತದಲ್ಲೂ ನಾವೆಲ್ಲ ಪರೀಕ್ಷೆಗಳನ್ನು ಎದುರಿಸಿರುತ್ತೇವೆ. ಆದರೆ, ಅವೆಲ್ಲವೂ ಲಿಖಿತ ರೂಪದಲ್ಲಿರದೇ ಪ್ರಾಯೋಗಿಕ ರೂಪದಲ್ಲಿರುತ್ತವೆ. ಅಂಕಗಳಿಂದ ಪ್ರಮಾಣಿಕರಿಸುವ ಗುಣಕಗಳಾಗಿ ಪರೀಕ್ಷೆಗಳು ಜರುಗುತ್ತವೆ ಎಂಬುದನ್ನು ಬೊಮ್ಮಕ್ಕನವರ ತಿಳಿಸಿದರು.

ಈ ಪರೀಕ್ಷೆಗಳನ್ನು ಎದುರಿಸುವಲ್ಲಿ ನಮ್ಮ ತಯಾರಿಯು ಉತ್ತಮವಾಗಿದ್ದರೆ ಉತ್ತಮ ಅಂಕಗಳನ್ನು ಪಡೆಯಬಹುದು. ಈ ನಿಟ್ಟಿನಲ್ಲಿ ಮಕ್ಕಳು ಒಂದು ಯೋಜನೆಯನ್ನು ರೂಪಿಸಿಕೊಂಡು ಶ್ರದ್ಧೆಯಿಂದ ನಿರಂತರ ಅಭ್ಯಾಸದಲ್ಲಿ ತೊಡಗಿದ್ದೇ ಆದರೆ ಉತ್ತಮ ಅಂಕಗಳೊಂದಿಗೆ ಉತ್ತೀರ್ಣರಾಗಬಹುದು. ಇದರ ಅನುಷ್ಠಾನಕ್ಕೆ ವಿದ್ಯಾರ್ಥಿಯು ಹೊಂದಿರಲೇ ಬೇಕಾದ ಗುಣಗಳೆಂದರೆ ದೂರದೃಷ್ಟಿ, ಶಿಸ್ತು, ಆಸಕ್ತಿ, ಸಮಯಪಾಲನೆ ಮತ್ತು ನಿರಂತರ ಪರಿಶ್ರಮ. ದಿನದ ಪ್ರತಿ ಕ್ಷಣವು ಅತ್ಯಮೂಲ್ಯವಾಗಿದ್ದು ಸಮಯ ವ್ಯರ್ಥವಾಗದಂತೆ ಸಮಯ ಪಾಲನೆ ಮಾಡಬೇಕು.

ನಕಾರಾತ್ಮಕ ಚಿಂತನೆಗಳಿಗೆ ಅವಕಾಶ ನೀಡದೇ, ಸಕಾರಾತ್ಮಕ ಚಿಂತನೆಗಳಿಗೆ ಒತ್ತು ನೀಡಬೇಕು. ಹಣ್ಣು- ಹಂಪಲು ತರಕಾರಿಗಳನ್ನು ಸೇವಿಸುವ ಮೂಲಕ ಸಮತೋಲಿತ ಆಹಾರ ಸೇವನೆಯನ್ನು ರೂಢಿಸಿಕೊಳ್ಳಬೇಕು. ಓದು ಕಲಿಕೆಯ ಭಾಗವಾಗಿದ್ದು ಅರ್ಥೈಸಿಕೊಂಡು ಓದುವುದನ್ನು ರೂಢಿಸಿಕೊಂಡು ಕ್ರಿಯಾತ್ಮಕ ಅಧ್ಯಯನದಲ್ಲಿ ತೊಡಗಿಕೊಳ್ಳಬೇಕು.

ಈ ನಿಟ್ಟಿನಲ್ಲಿ ಮಕ್ಕಳಿಗೆ ಪಾಲಕ ಪೋಷಕರ ಸಹಕಾರ ತುಂಬಾ ಅಗತ್ಯ ಎಂದು ತಿಳಿಸುವ ಮೂಲಕ ಎಂದು ಉತ್ತಮ ಸಲಹೆಗಳನ್ನು ಉಮೇಶ್‌ ಬೊಮ್ಮಕ್ಕನವರ ಶಾಲಾ ಮಕ್ಕಳಿಗೆ ನೀಡಿದರು.

ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 752 ವಿದ್ಯಾರ್ಥಿಗಳು ಮತ್ತು 1130 ವಿದ್ಯಾರ್ಥಿನಿಯರು ಸೇರಿದಂತೆ 1882 ಮಕ್ಕಳು ಪಾಲ್ಗೊಂಡರು.

ಗಮನಿಸಬಹುದಾದ ಸುದ್ದಿಗಳು

Karnataka State Budget 2023-24: ನಾಳೆ ಕರ್ನಾಟಕ ಬಜೆಟ್‌, ರಾಜ್ಯ ಬಜೆಟ್‌ ಬಗ್ಗೆ ಈ 10 ವಿಷಯ ನಿಮಗೆ ಗೊತ್ತೆ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ನಾಳೆ 2023-24ನೇ ಸಾಲಿನ ರಾಜ್ಯ ಬಜೆಟ್‌ ಮಂಡಿಸಲಿದ್ದಾರೆ. ಕೇಂದ್ರ ಬಜೆಟ್‌ಗೆ ಹೋಲಿಸಿದರೆ ರಾಜ್ಯ ಬಜೆಟ್‌ ಸಾಕಷ್ಟು ಭಿನ್ನವಾಗಿರುತ್ತದೆ. ರಾಜ್ಯದ ಬಜೆಟ್‌ನ ಮಂಡನೆ, ಸಿದ್ಧತೆ, ಮುದ್ರಣ ಸೇರಿದಂತೆ ಹಲವು ಮಹತ್ವದ ಮಾಹಿತಿಗಳು ಇಲ್ಲಿವೆ. ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

KaSaPa datti awards 2021: ‌ಕನ್ನಡ ಸಾಹಿತ್ಯ ಪರಿಷತ್‌ನ 2021ನೇ ಸಾಲಿನ ದತ್ತಿ ಪುರಸ್ಕಾರ ಪ್ರಕಟ; ಯಾವ ಕೃತಿಗೆ ಯಾವ ಪುರಸ್ಕಾರ - ವಿವರ

ಕನ್ನಡ ಸಾಹಿತ್ಯ ಪರಿಷತ್ತು 2021ನೇ ಸಾಲಿನ ವಿವಿಧ ದತ್ತಿ ಪ್ರಶಸ್ತಿಗಾಗಿ 49 ವಿಭಾಗಕ್ಕೆ 53 ಕೃತಿಗಳನ್ನು ಆಯ್ಕೆ ಮಾಡಿದೆ. ಕನ್ನಡ ಸಾಹಿತ್ಯ ಪರಿಷತ್ತಿನ ಆವರಣದ ಶ್ರೀ ಕೃಷ್ಣರಾಜ ಪರಿಷತ್ತಿನ ಮಂದಿರದಲ್ಲಿ ಮಾರ್ಚ್‌ 12ರಂದು ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪರಿಷತ್ತಿನ ಅಧ್ಯಕ್ಷ ಡಾ.ಮಹೇಶ ಜೋಶಿ ತಿಳಿಸಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

No income tax: ಈ ರಾಜ್ಯದ ಜನ ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವುದೇ ಇಲ್ಲ; ಯಾಕೆ? ಎಂದು ಹುಬ್ಬೇರಿಸಬೇಡಿ!

ನಮ್ಮ ದೇಶದಲ್ಲಿ ಎಲ್ಲ ರಾಜ್ಯಗಳ ಜನರೂ ಆದಾಯ ತೆರಿಗೆ ಪಾವತಿಸುತ್ತಿದ್ದಾರೆ ಎಂದು ಭಾವಿಸಿದ್ದೀರಾ? ಹಾಗಿದ್ದರೆ ಆ ತಪ್ಪು ಕಲ್ಪನೆಯಿಂದ ಹೊರಬನ್ನಿ. ನಮ್ಮ ದೇಶದ ಈ ರಾಜ್ಯದ ಜನರು ಕೇಂದ್ರ ಸರ್ಕಾರಕ್ಕೆ ಆದಾಯ ತೆರಿಗೆ ಪಾವತಿಸುವುದಿಲ್ಲ. ಯಾಕೆ? ಎಂದು ಹುಬ್ಬೇರಿಸಬೇಡಿ. ಇಲ್ಲಿದೆ ವಿವರ.

    ಹಂಚಿಕೊಳ್ಳಲು ಲೇಖನಗಳು