logo
ಕನ್ನಡ ಸುದ್ದಿ  /  ಕರ್ನಾಟಕ  /  Cm Bommai On Cong Guarantee Scheme: ಸೋಲಿನ ಹತಾಶೆಯಿಂದ ಕಾಂಗ್ರೆಸ್ ಬೋಗಸ್ ಕಾರ್ಡಿನ ಗ್ಯಾರಂಟಿ ಸರಣಿ ಮುಂದುವರಿಸಿದೆ: ಸಿಎಂ ಟೀಕೆ

CM Bommai on Cong Guarantee Scheme: ಸೋಲಿನ ಹತಾಶೆಯಿಂದ ಕಾಂಗ್ರೆಸ್ ಬೋಗಸ್ ಕಾರ್ಡಿನ ಗ್ಯಾರಂಟಿ ಸರಣಿ ಮುಂದುವರಿಸಿದೆ: ಸಿಎಂ ಟೀಕೆ

HT Kannada Desk HT Kannada

Mar 20, 2023 09:42 PM IST

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

  • ಕಾಂಗ್ರೆಸ್ ನವರು ಬೋಗಸ್, ಸುಳ್ಳು ಹೇಳುವುದಕ್ಕೆ ಕಾರಣ ಅವರು ಹತಾಶರಾಗಿದ್ದಾರೆ. ಗೆಲ್ಲುವುದಕ್ಕೆ ಸಾಧ್ಯವಾಗದೆ ಇರುವುದರಿಂದ ಬೋಗಸ್ ಘೋಷಣೆ ಮಾಡುತ್ತಿದ್ದಾರೆ. ಸುಳ್ಳು ಹೇಳಿ ಮೋಸ ಮಾಡಲು ತಯಾರಾಗಿದ್ದಾರೆ ಎಂದು ಸಿಎಂ ಬೊಮ್ಮಾಯಿ ಟೀಕಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ
ಹುಬ್ಬಳ್ಳಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ

ಹುಬ್ಬಳ್ಳಿ: ಕಾಂಗ್ರೆಸ್ ಸೋಲಿನ ಹತಾಶೆಯಿಂದ ಬೋಗಸ್ ಕಾರ್ಡಿನ ಗ್ಯಾರಂಟಿ ಸರಣಿ ಮುಂದುವರಿಸಿದೆ. ಇದು ನಾಲ್ಕನೇಯದ್ದು, ಮೂರು ಬೋಗಸ್ ಘೋಷಣೆ ಮಾಡಿದ್ದರು. ಇದೊಂದು ಕೂಡ ಬೋಗಸ್ ಗ್ಯಾರಂಟಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ‌ ಟೀಕಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Hassan Scandal: ಪ್ರಜ್ವಲ್‌ ರೇವಣ್ಣ ಪ್ರಕರಣ, ಎಸ್‌ಐಟಿಯಿಂದ ಸಹಾಯವಾಣಿ, ಈ ಸಂಖ್ಯೆಗೆ ಮಾಹಿತಿ ನೀಡಿ

Karnataka Rains: 6 ದಿನ ಕರ್ನಾಟಕ ಬಹುತೇಕ ಕಡೆ ಮಳೆ; ಬೆಂಗಳೂರು, ಮೈಸೂರು ಸಹಿತ ಕೆಲವೆಡೆ ಗುಡುಗು, ಸಿಡಿಲಿನ ಮುನ್ನೆಚ್ಚರಿಕೆ

ಮೋದಿ ಸಾಧನೆ ಶೂನ್ಯ, ಈ ಲೋಕಸಭಾ ಚುನಾವಣೆ ಎರಡನೇ ಸ್ವಾತಂತ್ರ್ಯ ಹೋರಾಟವಿದ್ದಂತೆ: ಸಿಎಂ ಸಿದ್ದರಾಮಯ್ಯ

Prajwal Revanna Scandal: ಪ್ರಜ್ವಲ್ ರೇವಣ್ಣ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿ; ಶೀಘ್ರದಲ್ಲೇ ಹಾಸನ ಸಂಸದ ಇರುವ ಸ್ಥಳ ಪತ್ತೆ

ಹುಬ್ಬಳ್ಳಿಯ ವಿಮಾನ ನಿಲ್ದಾಣದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜಸ್ಥಾನದಲ್ಲಿ ಪದವೀಧರರಿಗೆ ಪ್ರತಿ ತಿಂಗಳು ಮಾಶಾಸನ ಕೊಡುತ್ತೇವೆ ಎಂದಿದ್ದರು. ಇದುವರೆಗೂ ಕೊಟ್ಟಿಲ್ಲ. ಛತ್ತೀಸ್ ಗಢದಲ್ಲಿ 1,500 ರೂಪಾಯಿ ಕೊಡುತ್ತೇವೆಂದರು, ಅದನ್ನು ಕೊಡಲಿಲ್ಲ. ಹೀಗೆ ಅವರು ನಾಲ್ಕು ರಾಜ್ಯಗಳಲ್ಲಿ ಹೇಳಿದ ಹಾಗೇ ಎಲ್ಲಿಯೂ ನಡೆದುಕೊಂಡಿಲ್ಲ. ಅದರ ಪಟ್ಟಿಯನ್ನು ನಾವು ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.

ಗೆಲ್ಲುವುದಕ್ಕೆ ಸಾಧ್ಯವಾಗದೆ ಬೋಗಸ್ ಘೋಷಣೆ

ಕಾಂಗ್ರೆಸ್ ನವರು ಬೋಗಸ್, ಸುಳ್ಳು ಹೇಳುವುದಕ್ಕೆ ಕಾರಣ ಅವರು ಹತಾಶರಾಗಿದ್ದಾರೆ. ಅವರು ಗೆಲ್ಲುವುದಕ್ಕೆ ಸಾಧ್ಯವಾಗದೆ ಇರುವುದರಿಂದ ಬೋಗಸ್ ಘೋಷಣೆ ಮಾಡುತ್ತಿದ್ದಾರೆ. ಸುಳ್ಳು ಹೇಳಿ ಮೋಸ ಮಾಡಲು ತಯಾರಾಗಿದ್ದಾರೆ. ಇದನ್ನು ಜನರು ನಂಬಲ್ಲ ಎಂದು ಸಿಎಂ ಬೊಮ್ಮಾಯಿ ಹೇಳಿದ್ದಾರೆ.

ಹಿಂದೆ ಇವರೇ 2013ರಲ್ಲಿ ಹತ್ತು ಕೆಜಿ ಅಕ್ಕಿ ಕೊಡುತ್ತಿದ್ದರು. ಇವರು ಬಂದ ಮೇಲೆ 5 ಕೆಜಿ ಅಕ್ಕಿ ಕೊಡುವುದನ್ನು ನಿಲ್ಲಿಸಿದ್ದಾರೆ. ಚುನಾವಣೆ ಬಂದಾಗ ಏಳು ಕೆಜಿ ಅಕ್ಕಿಯನ್ನು ಸಿದ್ದರಾಮಯ್ಯ ಘೋಷಣೆ ಮಾಡಿದ್ದಾರೆ. ಕಾಂಗ್ರೆಸ್ ಚುನಾವಣೆ ಬಂದಾಗ ಬೋಗಸ್ ಪಾಲಿಸಿ ಮಾಡಿ, ಸುಳ್ಳು ಹೇಳುವಂತಹದ್ದು ಕಾಂಗ್ರೆಸ್ ನ ಗುಣಧರ್ಮ ಎಂದರು.

ರಾಹುಲ್ ಗಾಂಧಿ ಮಹಾನ್ ನಾಯಕರು ಹೊರದೇಶಕ್ಕೆ ಹೋದವರು. ಈ ದೇಶದ ಬಗ್ಗೆ ಗೌರವ ಇರುವವರು, ಹೋರ ದೇಶಕ್ಕೆ ಹೋದಾಗ ಕೀಳುಮಟ್ಟದಲ್ಲಿ ಮಾತನಾಡುತ್ತಾರೆ. ಅವರಿಗೆ ಕರ್ನಾಟಕದ ಬಗ್ಗೆ ವಿಶ್ವಾಸ ಪ್ರೀತಿ ಬದ್ಧತೆ ಇಲ್ಲ. ಹೀಗಾಗಿ ಜನರನ್ನು ಮರಳು ಮಾಡುವ ಪ್ರಯತ್ನ ಮಾಡುತ್ತಿದ್ದಾರೆ, ಕರ್ನಾಟಕ ಜನತೆ ಮರಳು ಆಗಲ್ಲ ಎಂದಿದ್ದಾರೆ.

ಉರಿಗೌಡ -ನಂಜೇಗೌಡ ವಿಚಾರ ಸಂಶೋಧನೆ ಆಗಲಿ

ಉರಿಗೌಡ -ನಂಜೆಗೌಡ ಅದು ಏನಾದರೂ ಆಗಲಿ. ಈ ಬಗ್ಗೆ ಸಂಶೋಧನಾ ಆಗಿ ಸತ್ಯ ಹೊರಗೆ ಬರಲಿ ಎಂದು ಸಿಎಂ ಬಸವರಾಜ ಬೊಮ್ಮಾಯಿ‌ ಹೇಳಿದ್ದಾರೆ.

ಕಾಂಗ್ರೆಸ್ ನಿಂದ ಗ್ಯಾರಂಟಿ ನಂಬರ್ 4 ಯುವನಿಧಿ ಘೋಷಣೆ

ಕಾಂಗ್ರೆಸ್ ನಾಯಕರು ಇವತ್ತು ಬೆಳಗಾವಿಯಲ್ಲಿ ನಡೆದ ಯುವಕ್ರಾಂತಿ ಸಮಾವೇಶದಲ್ಲಿ ಕಾಂಗ್ರೆಸ್ ಗ್ಯಾರಂಟಿ ನಂಬರ್ 4 ‘ಯುವನಿಧಿ’ ಯೋಜನೆಯನ್ನು ಘೋಷಿಸಿದ್ದಾರೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇಂದು ಘೋಷಣೆ ಮಾಡಿರುವ ಯುವನಿಧಿ ಯೋಜನೆಯಲ್ಲಿ ನಿರುದ್ಯೋಗಿ ಪದವೀಧರರಿಗೆ ಪ್ರತಿ ತಿಂಗಳು 3,000 ಹಾಗೂ ಡಿಪ್ಲೊಮಾ ಪದವೀಧರರಿಗೆ ಪ್ರತಿ 1,500 ರೂ. ಭತ್ಯೆ ನೀಡಲಿದ್ದಾರೆ. ಮುಂದಿನ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿರುದ್ಯೋಗ ಪದವೀಧರರಿಗೆ ಈ ಭತ್ಯೆ ಸಿಗಲಿದೆ.

ಗ್ಯಾರಂಟಿ ನಂಬರ್ 1 ಗೃಹಜ್ಯೋತಿ ಯೋಜನೆ ಮೂಲಕ ಪ್ರತಿ ಮನೆಗೆ 200 ಯೂನಿಟ್ ವಿದ್ಯುತ್ ಉಚಿತವಾಗಿ ನೀಡುವುದು, ಗ್ಯಾರಂಟಿ ನಂಬರ್ 2 ಗೃಹಲಕ್ಷ್ಮಿ ಯೋಜನೆ ಮೂಲಕ ಮನೆಯೊಡತಿಗೆ 2 ಸಾವಿರ ಪ್ರೋತ್ಸಾಹ ಧನ ಹಾಗೂ ಗ್ಯಾರಂಟಿ ನಂಬರ್ 3 ಅನ್ನ ಭಾಗ್ಯ ಯೋಜನೆ ಮೂಲಕ ಬಡ ಕುಟುಂಬ ಸದಸ್ಯರಿಗೆ ತಲಾ 10 ಕೆ.ಜಿ ಅಕ್ಕಿ ಉಚಿತವಾಗಿ ನೀಡುವುದಾಗಿ ಕಾಂಗ್ರೆಸ್ ಈ ಮೊದಲು ಘೋಷಣೆ ಮಾಡಿತ್ತು.

ರಾಜ್ಯ ವಿಧಾನಸಭೆಗೆ ಮೇ ನಲ್ಲಿ ಚುನಾವಣೆ ನಡೆಯಲಿದ್ದು, ಈ ತಿಂಗಳ ಅಂತ್ಯದ ವೇಳೆಗೆ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ. ಇದಕ್ಕಾಗಿ ಚುನಾವಣಾ ಆಯೋಗ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದೆ.

    ಹಂಚಿಕೊಳ್ಳಲು ಲೇಖನಗಳು