logo
ಕನ್ನಡ ಸುದ್ದಿ  /  ಕರ್ನಾಟಕ  /  Bpl Card: ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರು ಅರ್ಹರು? ಕಾರ್ಡ್‌ಗೆ ನಾನು ಅರ್ಹ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

BPL Card: ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರು ಅರ್ಹರು? ಕಾರ್ಡ್‌ಗೆ ನಾನು ಅರ್ಹ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

Jun 03, 2023 11:30 AM IST

ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರು ಅರ್ಹರು? ಕಾರ್ಡ್‌ಗೆ ನಾನು ಅರ್ಹ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

    • ಬಿಪಿಎಲ್‌ ಕಾರ್ಡ್‌ಗಳನ್ನು ಪಡೆಯಲು ಸರ್ಕಾರ ಒಂದಷ್ಟು ಮಾನದಂಡಗಳನ್ನು ವಿಧಿಸಿದೆ.  ಆ ಮಾನದಂಡಗಳ್ಯಾವವು? ಯಾರು BPL ಕಾರ್ಡ್‌ ಪಡೆಯಲು ಅರ್ಹರು, ಯಾರಿಗೆ ಸರ್ಕಾರದ ಈ ಸೌಲಭ್ಯ ದಕ್ಕಲಿದೆ? ಇಲ್ಲಿದೆ ಮಾಹಿತಿ. 
ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರು ಅರ್ಹರು? ಕಾರ್ಡ್‌ಗೆ ನಾನು ಅರ್ಹ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ
ಬಿಪಿಎಲ್‌ ಕಾರ್ಡ್‌ ಪಡೆಯಲು ಯಾರು ಅರ್ಹರು? ಕಾರ್ಡ್‌ಗೆ ನಾನು ಅರ್ಹ ಎಂಬುದನ್ನು ತಿಳಿಯುವುದು ಹೇಗೆ? ಇಲ್ಲಿದೆ ಮಾಹಿತಿ

BPL Card: ರಾಜ್ಯದಲ್ಲಿ ಕಾಂಗ್ರೆಸ್‌ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ, ನೀಡಿದ್ದ ಐದು ಗ್ಯಾರಂಟಿಗಳನ್ನು ನೀಡುವುದಾಗಿ ಹೇಳಿದೆ. ಅದರಂತೆ ರಾಜ್ಯದಲ್ಲಿ ಇದೀಗ ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸುವವರ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಹೀಗೆ ಅರ್ಜಿ ಸಲ್ಲಿಸುವುದಕ್ಕೂ ಮುನ್ನ ನೀವು ಬಿಪಿಎಲ್‌ ಕಾರ್ಡ್‌ ಪಡೆಯುವುದಕ್ಕೆ ನೀವು ಅರ್ಹರೇ ಎಂಬುದನ್ನು ಒಮ್ಮೆ ತಿಳಿದುಕೊಳ್ಳಿ. ಬಳಿಕ ಅರ್ಜಿ ಸಲ್ಲಿಸಿ. ಇಲ್ಲಿದೆ ನೋಡಿ ವಿವರ.

ಟ್ರೆಂಡಿಂಗ್​ ಸುದ್ದಿ

Mangalore News: ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ; ಏರ್ಪೋರ್ಟ್‌ಗೆ ಬಿಗಿ ಭದ್ರತೆ, ವಾರದ ಹಿಂದಿನ ಪ್ರಕರಣ ತಡವಾಗಿ ಬೆಳಕಿಗೆ

ಸಂಚಾರ ನಿಯಮ ಉಲ್ಲಂಘನೆ ಪ್ರಕರಣ ಕರ್ನಾಟಕದಲ್ಲಿ 3.25 ಕೋಟಿ, ಬೆಂಗಳೂರಲ್ಲಿ 2.68 ಕೋಟಿ, ದಂಡ ವಸೂಲಿಗೆ ಬಾಕಿ

Prajwal Revanna Scandal: ಪ್ರಜ್ವಲ್ ರೇವಣ್ಣಗೆ ಮತ್ತೆ ಲುಕ್‌ಔಟ್ ನೊಟೀಸ್ ಜಾರಿ ಮಾಡಿದ ಎಸ್‌ಐಟಿ, ನೀವು ತಿಳಿಯಬೇಕಾದ 10 ಅಂಶಗಳಿವು

ಬೆಂಗಳೂರು: ಬ್ಯೂಟಿಷಿಯನ್ ಮನೆಯ ಕೀ ಕದ್ದು ನಕಲಿ ಕೀ ಮಾಡಿಸಿಕೊಂಡು ಕಳವು ಮಾಡಿದ್ದ ಮೂವರು ಕಳ್ಳರ ಬಂಧನ

ಬಿಪಿಎಲ್‌ ಅಂದರೆ ಬಡತನ ರೇಖೆಗಿಂತ ಕೆಳಗಿನವರು (Below Poverty Line) ಎಂದರ್ಥ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಬಿಪಿಎಲ್‌ ಕಾರ್ಡ್‌ ವಿತರಣೆಗೆ ಅದರದೇ ಆದ ಒಂದಷ್ಟು ಪ್ರಾಥಮಿಕ ಮಾನದಂಡಗಳನ್ನು ವಿಧಿಸಿದೆ. ಅದರ ಆಧಾರದ ಮೇಲೆ, ಆದಾಯ ಮತ್ತು ಮಾಡುತ್ತಿರುವ ಉದ್ಯೋಗದ ಮೇಲೆ ಕಾರ್ಡ್‌ ವಿತರಿಸುತ್ತದೆ.

ಬಿಪಿಎಲ್‌ ಕಾರ್ಡ್‌ ಪಡೆಯಲು ಅರ್ಹತೆ ಏನಿರಬೇಕು/ ಏನಿರಬಾರದು

  • ಗ್ರಾಮೀಣ ಪ್ರದೇಶದಲ್ಲಿ ವಾರ್ಷಿಕ 12,000 ರೂಪಾಯಿಗಿಂತಲೂ ಕಡಿಮೆ ಆದಾಯ ಹೊಂದಿರುವವರು ಬಿಪಿಎಲ್‌ ಕಾರ್ಡ್‌ಗೆ ಅರ್ಜಿ ಸಲ್ಲಿಸಬಹುದು.
  • ಅದೇ ರೀತಿ ನಗರ, ಪಟ್ಟಣ ಪ್ರದೇಶದಲ್ಲಿ ವಾರ್ಷಿಕ 17,000 ರೂಪಾಯಿಗಿಂತೂ ಕಡಿಮೆ ಆದಾಯ ಹೊಂದಿರುವವರು ಅರ್ಜಿ ಸಲ್ಲಿಸಬಹುದು.
  • ಈ ಮೇಲೆ ಹೇಳಿದ ಆದಾಯವನ್ನು ಮೀರಿದರೆ ಅಂತವರಿಗೆ ಬಿಪಿಎಲ್‌ ಕಾರ್ಡ್‌ ಅರ್ಜಿ ಸಲ್ಲಿಸಲು ಅವಕಾಶ ಇರುವುದಿಲ್ಲ.
  • ಕರ್ನಾಟಕದ ನಿವಾಸಿ ಆಗಿರಬೇಕು
  • ಅಭ್ಯರ್ಥಿಯು ಆದಾಯ ತೆರಿಗೆ ಪಾವತಿದಾರರಾಗಿರಬಾರದು

ಇದನ್ನೂ ಓದಿ: BPL Card: ಬಿಪಿಎಲ್‌ ಕಾರ್ಡ್‌ಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸುವುದು ಹೇಗೆ? ಕಾಂಗ್ರೆಸ್‌ ಗ್ಯಾರಂಟಿ ಪಡೆಯಲು ಪಡಿತರ ಚೀಟಿ ಪಡೆಯುವ ವಿಧಾನ

ಈ ಉದ್ಯೋಗದಲ್ಲಿರಬಾರದು

  • ಸರ್ಕಾರಿ ನೌಕರಿಯಲ್ಲಿರುವವರು ಅರ್ಜಿ ಸಲ್ಲಿಸುವಂತಿಲ್ಲ
  • ಸಾರ್ವಜನಿಕ ವಲಯದ ಉದ್ಯಮಗಳು, ಮಂಡಳಿಗಳು, ನಿಗಮಗಳ ಉದ್ಯೋಗಿಗಳೂ ಇದರ ಅಡಿಯಲ್ಲಿ ಬರುತ್ತಾರೆ
  • ಸ್ವಾಯತ್ತ ಮಂಡಳಿಗಳು, ಸಂಸ್ಥೆಗಳ ಉದ್ಯೋಗಿಗಳಾಗಿರಬಾರದು.
  • ಸಹಕಾರಿ ಸಂಸ್ಥೆಗಳ ಖಾಯಂ ಉದ್ಯೋಗಿಗಳಾಗಿರಬಾರದು
  • ಆಸ್ಪತ್ರೆಗಳಲ್ಲಿನ ವೈದ್ಯರು
  • ವಕೀಲರು ಮತ್ತು ಲೆಕ್ಕಪರಿಶೋಧಕರಾಗಿರಬಾರದು

ಕೃಷಿ ಭೂಮಿ ಎಷ್ಟಿದ್ದರೆ ಸಿಗುವುದಿಲ್ಲ ಬಿಪಿಎಲ್‌ ಕಾರ್ಡ್‌?

  • ಮೂರು ಹೆಕ್ಟೇರ್ (7.5 ಎಕರೆ) ಭೂಮಿ ಹೊಂದಿದವರಿಗೆ ಬಿಪಿಎಲ್‌ ಕಾರ್ಡ್‌ ಸಿಗುವುದಿಲ್ಲ
  • ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳ ನೌಕರರಿಗೂ ಕಾರ್ಡ್‌ ಸಿಗುವುದಿಲ್ಲ
  • ಜೀವನೋಪಾಯಕ್ಕೆ ಬಳಸುವ ಒಂದು ವಾಹನ ಹೊರತುಪಡಿಸಿ 100 ಸಿಸಿ ಅಧಿಕ ಸಿಸಿ ಇರುವ ವಾಹನ ಹೊಂದಿರಬಾರದು
  • ವಾಹನಗಳಿಗೆ ಸಂಬಂಧಿಸಿದಂತೆ, ವೈಯಕ್ತಿಕ ವಾಹನಗಳನ್ನು ಮಾತ್ರ ಪರಿಗಣಿಸಲಾಗುವುದು. ಬಡತನ ರೇಖೆಗಿಂತ ಕೆಳಗಿರುವ ಪಡಿತರ ಚೀಟಿಗೆ ಅರ್ಹತೆ ಇಲ್ಲದಿದ್ದಲ್ಲಿ ಆಟೋರಿಕ್ಷಾಗಳನ್ನು ಪಟ್ಟಿಯಲ್ಲಿ ಪರಿಗಣಿಸಲಾಗುವುದಿಲ್ಲ. ಅವರು ಒಂದು ಆಟೋವನ್ನು ಹೊಂದಿದ್ದರೆ ಮಾತ್ರ ಸಂಪೂರ್ಣವಾಗಿ ವಿನಾಯಿತಿ ನೀಡಲಾಗುತ್ತದೆ.
  • ಅಧಿಸೂಚಿತ ಗುತ್ತಿಗೆದಾರರು, ಎಪಿಎಂಸಿ ವ್ಯಾಪಾರಿಗಳು ಅಥವಾ ಕಮಿಷನ್ ಏಜೆಂಟ್‌ಗಳಿಗೂ ಕಾರ್ಡ್‌ ಲಭ್ಯವಾಗುವುದಿಲ್ಲ
  • ತಿಂಗಳಿಗೆ ರೂ 450 ಅಥವಾ ಅದಕ್ಕಿಂತ ಹೆಚ್ಚಿನ ವಿದ್ಯುತ್ ಬಿಲ್ ಪಾವತಿಸುವವರೂ ಬಿಪಿಎಲ್‌ ಕಾರ್ಡ್‌ಗೆ ಅರ್ಹರಲ್ಲ
  • ಬಹು-ರಾಷ್ಟ್ರೀಯ ಕಂಪನಿಗಳು ಅಥವಾ ಕೈಗಾರಿಕೆಗಳ ಉದ್ಯೋಗಿಗಳಿಗೂ ಈ ಕಾರ್ಡ್‌ ಲಭ್ಯವಾಗುವುದಿಲ್ಲ.

    ಹಂಚಿಕೊಳ್ಳಲು ಲೇಖನಗಳು