logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Election: ಸಮೀಕ್ಷೆಗಳು ಹೇಳುತ್ತಿವೆ ಸಿದ್ದರಾಮಯ್ಯ ಸಿಎಂ ಸ್ಥಾನದ ಫೆವರಿಟ್!; ಬೊಮ್ಮಾಯಿ, ಡಿಕೆಶಿ ಪರ ಮತದಾರನ ನಿಲುವೇನು?

Karnataka Election: ಸಮೀಕ್ಷೆಗಳು ಹೇಳುತ್ತಿವೆ ಸಿದ್ದರಾಮಯ್ಯ ಸಿಎಂ ಸ್ಥಾನದ ಫೆವರಿಟ್!; ಬೊಮ್ಮಾಯಿ, ಡಿಕೆಶಿ ಪರ ಮತದಾರನ ನಿಲುವೇನು?

May 03, 2023 11:42 AM IST

ಸಮೀಕ್ಷೆಗಳು ಹೇಳುತ್ತಿವೆ ಸಿದ್ದರಾಮಯ್ಯ ಸಿಎಂ ಸ್ಥಾನದ ಫೇವರಿಟ್!; ಬೊಮ್ಮಾಯಿ, ಡಿಕೆಶಿ ಪರ ಮತದಾರನ ನಿಲುವೇನು?

    • ಮುಂದಿನ ಸಿಎಂ ಯಾರಾಗಬೇಕು, ಯಾರಾದರೆ ಚೆನ್ನ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ NDtv ಸರ್ವೇ ನಡೆಸಿದೆ. ಆ ಸಮೀಕ್ಷೆಯಲ್ಲಿ ಮತದಾರರು ಅಚ್ಚರಿಯ ಆಯ್ಕೆ ನೀಡಿದ್ದಾರೆ.
ಸಮೀಕ್ಷೆಗಳು ಹೇಳುತ್ತಿವೆ ಸಿದ್ದರಾಮಯ್ಯ ಸಿಎಂ ಸ್ಥಾನದ ಫೇವರಿಟ್!; ಬೊಮ್ಮಾಯಿ, ಡಿಕೆಶಿ ಪರ ಮತದಾರನ ನಿಲುವೇನು?
ಸಮೀಕ್ಷೆಗಳು ಹೇಳುತ್ತಿವೆ ಸಿದ್ದರಾಮಯ್ಯ ಸಿಎಂ ಸ್ಥಾನದ ಫೇವರಿಟ್!; ಬೊಮ್ಮಾಯಿ, ಡಿಕೆಶಿ ಪರ ಮತದಾರನ ನಿಲುವೇನು?

Karnataka Election 2023: ರಾಜ್ಯ ರಾಜಕಾರಣದಲ್ಲೀಗ ಅಧಿಕಾರದ ಗದ್ದುಗೆಗಾಗಿ ರಾಷ್ಟ್ರೀಯ ಪಕ್ಷಗಳು ಮತ್ತು ಪ್ರಾದೇಶಿಕ ಪಕ್ಷಗಳ ನಡುವೆ ತುರುಸಿನ ಹೋರಾಟ ನಡೆಯುತ್ತಿದೆ. ಈ ನಡುವೆ ಕರ್ನಾಟಕದಲ್ಲಿ ಮುಂದಿನ ಸಿಎಂ ಯಾರಾಗಬೇಕು, ಯಾರಾದರೆ ಚೆನ್ನ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ NDtv ಸರ್ವೇ ನಡೆಸಿದೆ. ಆ ಸಮೀಕ್ಷೆಯಲ್ಲಿ ಮತದಾರರು ಅಚ್ಚರಿಯ ಆಯ್ಕೆ ನೀಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Indian Railways: ಬೆಂಗಳೂರು-ಧರ್ಮಪುರಿ, ಹರಿಪ್ರಿಯಾ, ಮೈಸೂರು-ಕಾಚೀಗುಡ, ವಾಸ್ಕೋ ಸಹಿತ 7 ರೈಲುಗಳ ಸಂಚಾರ ಸಮಯ ಬದಲು

ಪ್ರಜ್ವಲ್ ರೇವಣ್ಣ ಕೇಸ್‌; ಜರ್ಮನಿಯಿಂದ ಲಂಡನ್‌ಗೆ ಹೊರಟ್ರಾ ಹಾಸನ ಸಂಸದ, 2 ದಿನಗಳ 10 ವಿದ್ಯಮಾನಗಳು

Raghunandan S Kamath Death: ಐಸ್ ಕ್ರೀಮ್ ಮ್ಯಾನ್ ಆಫ್ ಇಂಡಿಯಾ ಖ್ಯಾತಿಯ ನ್ಯಾಚುರಲ್ ಐಸ್ ಕ್ರೀಂನ ರಘುನಂದನ್ ಕಾಮತ್ ಇನ್ನಿಲ್ಲ

ಪ್ರಜ್ವಲ್‌ ರೇವಣ್ಣ ಕೇಸ್‌; ಮೊದಲ ಬಾರಿ ಪ್ರತಿಕ್ರಿಯೆ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ; ಕಾನೂನು ಕ್ರಮಕ್ಕೆ ತಕರಾರು ಇಲ್ಲ

ಲೋಕನೀತಿ ಸೆಂಟರ್ ಫಾರ್ ದಿ ಡೆವಲಪಿಂಗ್ ಸೊಸೈಟಿಗಳ (CSDS) ಸಹಭಾಗಿತ್ವದಲ್ಲಿ ಸಾರ್ವಜನಿಕ ಅಭಿಪ್ರಾಯವನ್ನು ಸಂಗ್ರಹಿಸಲಾಗಿದ್ದು, ಅದನ್ನು NDtv ಬಹಿರಂಗಪಡಿಸಿದೆ. ಈ ಪಬ್ಲಿಕ್‌ ಒಪಿನಿಯನ್‌ ಪೋಲ್‌ನಲ್ಲಿ ಕರ್ನಾಟಕದ ಮುಂದಿನ ಸಿಎಂ ಆಯ್ಕೆಗೆ ಸಿದ್ದರಾಮಯ್ಯ ಅವರೇ ಮೊದಲ ಮತ್ತು ಅತ್ಯಂತ ಜನಪ್ರಿಯ ಆಯ್ಕೆಯಾಗಿದ್ದಾರೆ ಎಂಬ ಅಂಶ ಬಯಲಾಗಿದೆ. ಹಾಲಿ ಸಿಎಂ ಬಿಜೆಪಿ ನಾಯಕ ಬಸವರಾಜ ಬೊಮ್ಮಾಯಿ ಎರಡನೇ ಸ್ಥಾನದಲ್ಲಿದ್ದಾರೆ.

ಮೊದಲ ಮತ್ತು ಎರಡನೇ ಸ್ಥಾನದಲ್ಲಿ ಈ ಇಬ್ಬರು ಸ್ಥಾನ ಪಡೆದರೆ ಮೂರನೇ ಸ್ಥಾನದಲ್ಲಿ ಜೆಡಿಎಸ್‌ನ ಕುಮಾರಸ್ವಾಮಿ ಮೆಚ್ಚುಗೆ ಪಡೆದುಕೊಂಡಿದ್ದಾರೆ. ನಾಲ್ಕನೇ ಸ್ಥಾನದಲ್ಲಿ ಡಿಕೆ ಶಿವಕುಮಾರ್‌ ಇದ್ದಾರೆ. ಹಿರಿಯ ಮತದಾರರ ಮನದಲ್ಲಿ ಸಿಎಂ ಸ್ಥಾನಕ್ಕೆ ಸಿದ್ದರಾಮಯ್ಯ ಅವರಿಗೆ ಹೆಚ್ಚಿನ ಒಲವು ವ್ಯಕ್ತವಾದರೆ, ಯುವಕರು ಬಸವರಾಜ್‌ ಬೊಮ್ಮಾಯಿ ಅವರತ್ತ ವಾಲಿದ್ದಾರೆ ಎಂದು ಸಮೀಕ್ಷೆಯಿಂದ ತಿಳಿದುಬಂದಿದೆ.

ಶೇ. 40ರಷ್ಟು ಮಂದಿ ಸಿದ್ದರಾಮಯ್ಯ ಪರವಾಗಿದ್ದರೆ, ಶೇ. 22ರಷ್ಟು ಮಂದಿ ಬೊಮ್ಮಾಯಿಗೆ ಸೈ ಎಂದಿದ್ದಾರೆ. ಎಚ್‌ಡಿ ಕುಮಾರಸ್ವಾಮಿ ಅವರಿಗೆ ಶೇ. 15, ಡಿಕೆ ಶಿವಕುಮಾರ್‌ ಅವರಿಗೆ ಶೇ. 4 ಮತ್ತು ಸಕ್ರಿಯ ರಾಜಕಾರಣದಿಂದ ಹಿಂದೆ ಸರಿದ ಮಾಜಿ ಸಿಎಂ ಬಿಎಸ್‌ವೈಗೆ ಶೇ. 5ರಷ್ಟು ಮಂದಿ ತಮ್ಮ ಅಭಿಮತ ವ್ಯಕ್ತಪಡಿಸಿದ್ದಾರೆ.

ಏಜ್‌ ಫ್ಯಾಕ್ಟರ್‌ ಏನು ಹೇಳುತ್ತೆ?

ವಯಸ್ಸಿನ ಆಧಾರದ ಮೇಲೆ ಬೊಮ್ಮಾಯಿ ಮತ್ತು ಸಿದ್ದರಾಮಯ್ಯ ಇಬ್ಬರ ಪೈಕಿ ಯಾರ ಕಡೆ ಹೆಚ್ಚಿನ ಒಲವಿದೆ ಎಂಬ ಅಂಶವೂ ಸರ್ವೇಯಲ್ಲಿ ಹೊರಬಿದ್ದಿದೆ. 18ರಿಂದ 25ವರ್ಷ ಒಳಗಿನ ಮತದಾರರಲ್ಲಿ ಸಿದ್ದರಾಮಯ್ಯ ಪರ ಶೇ. 40 ಒಲವು ಸೃಷ್ಟಿಯಾದರೆ, ಬೊಮ್ಮಾಯಿ ಪರ ಕೇವಲ ಶೇ. 28 ರಷ್ಟಿದೆ. ಅದೇ ರೀತಿ 56 ವರ್ಷ ಮತ್ತು ಅದಕ್ಕಿಂತ ಮೇಲ್ಪಟ್ಟವರ ಪ್ರಕಾರ ಶೇ. 44 ವೋಟು ಸಿದ್ದರಾಮಯ್ಯಗಿದ್ದರೆ, ಶೇ. 22ರಷ್ಟು ಬೊಮ್ಮಾಯಿ ಪರವಾಗಿದೆ. ಈ ಮೂಲಕ 56 ವರ್ಷ ಮೇಲ್ಪಟ್ಟವರು ಸಮೀಕ್ಷೆಯಲ್ಲಿ ಸಿದ್ದುಗೆ ಜೈಕಾರ ಕೂಗಿದ್ದಾರೆ.

ಇದು ವ್ಯಕ್ತಗತ ಲೆಕ್ಕಾಚಾರವಾದರೆ, ಇನ್ನು ಕೆಲವರು ವ್ಯಕ್ತಿ ಬದಲು ಪಕ್ಷ ನೋಡಿ ನಾವು ವೋಟ್‌ ಮಾಡುತ್ತೇವೆ ಎಂದೂ ಹೇಳಿಕೊಂಡಿದ್ದಾರೆ. ಶೇ. 56ರಷ್ಟು ಮಂದಿ ನಾವು ಪಕ್ಷ ನೋಡಿ ಮತ ಹಾಕುತ್ತೇವೆ ಎಂದರೆ, ಶೇ. 38ರಷ್ಟು ಮಂದಿ ನಾವು ಅಭ್ಯರ್ಥಿ ನೋಡಿ ಮತ ಹಾಕುತ್ತೇವೆ ಎಂದಿದ್ದಾರೆ. ಇನ್ನುಳಿದ ಶೇ.4 ರಷ್ಟು ಮಂದಿ ಸಿಎಂ ಅಭ್ಯರ್ಥಿ ಯಾರು ಎಂಬುದನ್ನು ಗಮನಿಸಿ ಮತಚಲಾಯಿಸುತ್ತಾರೆ ಎಂದು ಸರ್ವೇಯಲ್ಲಿ ತಿಳಿಸಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ