logo
ಕನ್ನಡ ಸುದ್ದಿ  /  ಕರ್ನಾಟಕ  /  Ashwath Narayan: ಕಾಂಗ್ರೆಸ್ ಇರೋ ಸೀಟು ಉಳಿಸಿಕೊಳ್ಳೋದೇ ಕಷ್ಟ; ಕಣ್ಣೀರು ಸುರಿಸುವ ಜೆಡಿಎಸ್‌ಗೆ ವೋಟು ಹಾಕಿದರೆ ವ್ಯರ್ಥ: ಅಶ್ವತ್ಥ್ ನಾರಾಯಣ

Ashwath Narayan: ಕಾಂಗ್ರೆಸ್ ಇರೋ ಸೀಟು ಉಳಿಸಿಕೊಳ್ಳೋದೇ ಕಷ್ಟ; ಕಣ್ಣೀರು ಸುರಿಸುವ ಜೆಡಿಎಸ್‌ಗೆ ವೋಟು ಹಾಕಿದರೆ ವ್ಯರ್ಥ: ಅಶ್ವತ್ಥ್ ನಾರಾಯಣ

Raghavendra M Y HT Kannada

Apr 22, 2023 10:25 PM IST

ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾರಾಯಣ ಗೌಡ ಪರ ಸಚಿವ ಅಶ್ವತ್ಥ್ ನಾರಾಯಣ ಪ್ರಚಾರ ಮಾಡಿದರು.

  • ಜನರ ನಾಡಿಮಿಡಿತ ಅರಿತಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಜೆಡಿಎಸ್ ನಾಯಕರ ಕಣ್ಣೀರಿಗೆ ಮರುಳಾದರೆ ನಮ್ಮ ಕಣ್ಣನ್ನೇ ನಾವು ಕಳೆದುಕೊಂಡಂತೆ ಅಷ್ಟೆ. ಅವರಿಗೆ ಮತ ಹಾಕುವುದರಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ ಎಂದು ಸಚಿವ ಅಶ್ವತ್ಥ್ ನಾರಾಯಣ ಹೇಳಿದ್ದಾರೆ.

ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾರಾಯಣ ಗೌಡ ಪರ ಸಚಿವ ಅಶ್ವತ್ಥ್ ನಾರಾಯಣ ಪ್ರಚಾರ ಮಾಡಿದರು.
ಕೆಆರ್ ಪೇಟೆ ವಿಧಾನಸಭಾ ಕ್ಷೇತ್ರದಲ್ಲಿ ನಾರಾಯಣ ಗೌಡ ಪರ ಸಚಿವ ಅಶ್ವತ್ಥ್ ನಾರಾಯಣ ಪ್ರಚಾರ ಮಾಡಿದರು.

ಕೆಆರ್ ಪೇಟೆ (ಮಂಡ್ಯ): ಕಾಂಗ್ರೆಸ್ (Congress) ಈಗಿರುವ ಸೀಟುಗಳನ್ನೇ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಇನ್ನ ಕಣ್ಣೀರು ಸುರಿಸುವ ಜೆಡಿಎಸ್‌ಗೆ (JDS) ವೋಟು ಹಾಕಿದರೆ ಅದು ವ್ಯರ್ಥ ಎಂದು ಉನ್ನತ ಶಿಕ್ಷಣ ಸಚಿವ ಡಾ ಸಿ ಎನ್ ಅಶ್ವತ್ಥ್ ನಾರಾಯಣ (Ashwath Narayana) ಹೇಳಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Tumkur News: ಮಾಗಡಿಗೆ ಕುಡಿಯುವ ನೀರು, ಎಕ್ಸ್‌ಪ್ರೆಸ್ ಲಿಂಕ್ ಕೆನಾಲ್ ಯೋಜನೆಗೆ ತುಮಕೂರಲ್ಲಿ ಭಾರೀ ವಿರೋಧ

Indian Railway: ಹುಬ್ಬಳ್ಳಿ ನೈರುತ್ಯ ವಲಯದಿಂದ ಬೇಸಿಗೆಯಲ್ಲಿ ವಿಶೇಷ ರೈಲು ಡಬಲ್‌, ಆದಾಯವೂ ಶೇ 134ಪಟ್ಟು ಏರಿಕೆ

Hassan News: ಭಾರೀ ಮಳೆಗೆ ತುಂಬಿದ್ದ ಕೆರೆಯಲ್ಲಿ ಈಜಲು ಹೋದ ನಾಲ್ವರು ಗೆಳೆಯರ ಸಾವು, ಹಾಸನ ಜಿಲ್ಲೆಯಲ್ಲಿ ದುರ್ಘಟನೆ

ಟಿ20 ವಿಶ್ವಕಪ್ 2024: ಸ್ಕಾಟ್ಲೆಂಡ್ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ರಾರಾಜಿಸಿದ ಕರ್ನಾಟಕದ ನಂದಿನಿ; ಸಹಕಾರಿ ಸಂಸ್ಥೆ ಹಿರಿಮೆ ಈಗ ವಿಶ್ವವ್ಯಾಪಿ

ಕೆ ಆರ್ ಪೇಟೆ ವಿಧಾನಸಭಾ ಕ್ಷೇತ್ರದ ಶೀಳನೆರೆ ಗ್ರಾಮದಲ್ಲಿ ನಾರಾಯಣಗೌಡ (Narayana Gowda) ಪರ ಚುನಾವಣಾ ಪ್ರಚಾರದಲ್ಲಿ (Election campaign) ಮಾತನಾಡಿದ ಅವರು, ಅಧಿಕಾರ ಕೊಟ್ಟಾಗಲೇ ಅವರು ಏನೂ ಮಾಡಲಿಲ್ಲ. ಆದ್ದರಿಂದ ಇಲ್ಲಿನ ಮತದಾರರು ತಾಲ್ಲೂಕಿನ ಅಭಿವೃದ್ದಿಗಾಗಿ ಬಿಜೆಪಿಗೆ ಮತ ಚಲಾಯಿಸಬೇಕು ಎಂದು ಮನವಿ ಮಾಡಿದ್ದಾರೆ.

ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಸೇರಿಕೊಂಡು ಜಿಲ್ಲೆಯ ಜೀವನಾಡಿಗಳಲ್ಲಿ ಒಂದಾದ ಮೈಶುಗರ್ ಕಾರ್ಖಾನೆಗೆ ಬೀಗ ಹಾಕಿದ್ದವು. ಆದರೆ ಬಿಜೆಪಿ ಸರ್ಕಾರ ಈ ಕಾರ್ಖಾನೆಗೆ ಮರುಜೀವ ನೀಡಿ, ರೈತರಿಗೆ ನೆರವು ನೀಡುತ್ತಿದೆ. ಒಕ್ಕಲಿಗರ ಮತವೆಲ್ಲ ಜೆಡಿಎಸ್‌ಗೆ ಅನ್ನುವ ಕಾಲವಿತ್ತು. ಆದರೆ ಅದರಿಂದ ಯಾವ ಪ್ರಯೋಜನವೂ ಇಲ್ಲ. ಕುಮಾರಸ್ವಾಮಿ ಸಿಎಂ ಆಗಿದ್ದಾಗಲೇ ಅಸಹಾಯಕತೆಯಿಂದ ಒದ್ದಾಡಿ, ತಮ್ಮನ್ನು ಸಾಂದರ್ಭಿಕ ಶಿಶು ಅಂತ ಗೋಳಾಡುತ್ತಿದ್ದರು. ಈಗಂತೂ ಆ ಪಕ್ಷಕ್ಕೆ ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರುವ ಶಕ್ತಿಯೇ ಇಲ್ಲ ಎಂದಿದ್ದಾರೆ.

ಜನರ ನಾಡಿಮಿಡಿತ ಅರಿತಿರುವ ಪಕ್ಷವೆಂದರೆ ಅದು ಬಿಜೆಪಿ ಮಾತ್ರ. ಜೆಡಿಎಸ್ ನಾಯಕರ ಕಣ್ಣೀರಿಗೆ ಮರುಳಾದರೆ ನಮ್ಮ ಕಣ್ಣನ್ನೇ ನಾವು ಕಳೆದುಕೊಂಡಂತೆ ಅಷ್ಟೆ. ಅವರಿಗೆ ಮತ ಹಾಕುವುದರಿಂದ ಜನರಿಗೆ ಯಾವ ಪ್ರಯೋಜನವೂ ಇಲ್ಲ. ಬಿಜೆಪಿ ಮಾತ್ರ ಆಡಳಿತ ಮತ್ತು ಅಭಿವೃದ್ಧಿ ಎರಡಕ್ಕೂ ಸಮಾನ ಮಹತ್ವ ಕೊಡುತ್ತೆ.

ಪ್ರತಿಯೊಬ್ಬರ ಏಳಿಗೆಗೂ ಶ್ರಮಿಸುತ್ತಿದೆ. ಕೇವಲ ಜಲ್‌ಜೀವನ್‌ ಮಿಷನ್‌ ಯೋಜನೆಯೊಂದರಲ್ಲೇ ಮಂಡ್ಯ ಜಿಲ್ಲೆಗೆ 700 ಕೋಟಿ ರೂಪಾಯಿ ಕೊಡಲಾಗಿದೆ. ಇದರಿಂದ ಪ್ರತಿಯೊಂದು ಮನೆಗೂ ನಲ್ಲಿ ನೀರಿನ ಸಂಪರ್ಕ ಬಂದು, ಜನರ ಜೀವನ ಬದುಕು ಸುಗಮವಾಗಿದೆ ಎಂದು ಸಚಿವ ಅಶ್ವತ್ಥ್ ನಾರಾಯಣ ವಿವರಿಸಿದ್ದಾರೆ.

ಮಂಡ್ಯ ಜಿಲ್ಲೆಯಲ್ಲಿ ಇದುವರೆಗೂ ಜೆಡಿಎಸ್‌ಗೆ ಮಣೆ ಹಾಕಿಕೊಂಡು ಬರಲಾಗಿದೆ. ಆದರೆ ಅದರಿಂದ ಜಿಲ್ಲೆಗೆ ಯಾವ ಪ್ರಯೋಜನವೂ ಆಗಿಲ್ಲ. ಆದರೆ ಕೆ.ಆರ್.ಪೇಟೆ ಉಪಚುನಾವಣೆಯಲ್ಲಿ ನಾರಾಯಣಗೌಡರು ಗೆದ್ದಮೇಲೆ ಇಲ್ಲಿ ಅಭಿವೃದ್ಧಿಯ ಮಹಾಪೂರವೇ ಆಗಿದೆ.

ಬಿಜೆಪಿ ರಾಜಕೀಯ ಲೆಕ್ಕಾಚಾರವನ್ನು ಮೀರಿ ಎಲ್ಲೆಡೆಗಳಲ್ಲೂ ಹತ್ತಾರು ಯೋಜನೆಗಳನ್ನು ಜಾರಿಗೆ ತಂದಿದೆ. ಈಗಾಗಲೇ ತಾಲ್ಲೂಕಿಗೆ ಮಂಜೂರಾಗಿರುವ ಏತನೀರಾವರಿ ಯೋಜನೆಯ ಕಾಮಗಾರಿ ಶೇಕಡ 80ರಷ್ಟು ಮುಗಿದಿದೆ. ಇದಕ್ಕೆ ನಾರಾಯಣಗೌಡರ ಪರಿಶ್ರಮವೇ ಕಾರಣವಾಗಿದೆ ಅಂತ ಹೇಳಿದ್ದಾರೆ.

ಕಾರ್ಯಕ್ರಮದಲ್ಲಿ ಬಿಜೆಪಿಯ ಮುಖಂಡರು ಮತ್ತು ಸಾವಿರಾರು ಕಾರ್ಯಕರ್ತರು ಉತ್ಸಾಹದಿಂದ ಪಾಲ್ಗೊಂಡಿದ್ದರು. ಇದಕ್ಕೂ ಮುನ್ನ ಜೆಡಿಎಸ್ ಮುಖಂಡರಾದ ಅಂಬರೀಶ್, ಸಂತೋಷ್‌ ಮುಂತಾದವರನ್ನು ಬಿಜೆಪಿಗೆ ಬರ ಮಾಡಿಕೊಂಡರು.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ