logo
ಕನ್ನಡ ಸುದ್ದಿ  /  ಕರ್ನಾಟಕ  /  Karnataka Poll 2023: ನೀತಿ ಸಂಹಿತೆ ಉಲ್ಲಂಘನೆ ಕಾಣಿಸ್ತಾ? ಸಿವಿಜಿಲ್‌ ಆಪ್‌ನಲ್ಲಿ ರಿಪೋರ್ಟ್‌ ಮಾಡಿ- ಜಾಗೃತ ಮತದಾರರಾಗಿ!

Karnataka Poll 2023: ನೀತಿ ಸಂಹಿತೆ ಉಲ್ಲಂಘನೆ ಕಾಣಿಸ್ತಾ? ಸಿವಿಜಿಲ್‌ ಆಪ್‌ನಲ್ಲಿ ರಿಪೋರ್ಟ್‌ ಮಾಡಿ- ಜಾಗೃತ ಮತದಾರರಾಗಿ!

HT Kannada Desk HT Kannada

Mar 29, 2023 01:08 PM IST

ಚುನಾವಣಾ ಆಯೋಗವು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ನೀಡಲು ಸಿವಿಜಿಲ್ ಆಪ್ ಅನ್ನು ಮತದಾರರಿಗೆ ಪರಿಚಯಿಸಿದೆ.

  • Karnataka Poll 2023: ಕಳೆದ ವರ್ಷ ಮತದಾರರ ಬಳಕೆಗಾಗಿ ಸಿ ವಿಜಿಲ್‌ ಅಪ್ಲಿಕೇಶನ್‌ (cVIGIL) ಅನ್ನು ಪರಿಚಯಿಸಲಾಗಿದೆ. ಸಿವಿಜಿಲ್‌ ಅಂದರೆ ಸಿಟಿಜನ್ಸ್‌ ವಿಜಿಲೆನ್ಸ್‌ ಎಂದು ಅರ್ಥ. ಅದರ ಬಳಕೆಯನ್ನು ಮತದಾರರು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಈ ಆಪ್‌ ಬಗ್ಗೆ ಜಾಗೃತಿ ಇದೆ. ಬಳಸುತ್ತಿದ್ದಾರೆ ಕೂಡ.

ಚುನಾವಣಾ ಆಯೋಗವು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ನೀಡಲು ಸಿವಿಜಿಲ್ ಆಪ್ ಅನ್ನು ಮತದಾರರಿಗೆ ಪರಿಚಯಿಸಿದೆ.
ಚುನಾವಣಾ ಆಯೋಗವು, ಚುನಾವಣಾ ನೀತಿ ಸಂಹಿತೆ ಉಲ್ಲಂಘನೆಯ ಬಗ್ಗೆ ದೂರು ನೀಡಲು ಸಿವಿಜಿಲ್ ಆಪ್ ಅನ್ನು ಮತದಾರರಿಗೆ ಪರಿಚಯಿಸಿದೆ. (HT_PRINT)

ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆ ಆಗಿದ್ದು, ಮೇ 10ಕ್ಕೆ ಮುಹೂರ್ತ ಫಿಕ್ಸ್‌ ಆಗಿದೆ. ಮೇ 13 ರಂದು ಫಲಿತಾಂಶ ಪ್ರಕಟವಾಗಲಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 5: ಬೆಂಗಳೂರು ನಗರ ಸೇರಿ ಇಂದು 8 ಜಿಲ್ಲೆಗಳಿಗೆ ಮಳೆಯ ಮುನ್ಸೂಚನೆ; ಈ ಭಾಗದಲ್ಲಿ ಶಾಖದ ಅಲೆ ಹೆಚ್ಚಾಗುವ ಸಾಧ್ಯತೆ

Prajwal Revanna Scandal: ಸಂತ್ರಸ್ತ ಮಹಿಳೆ ಅಪಹರಣ ಆರೋಪ ಪ್ರಕರಣ; ಜೆಡಿಎಸ್ ನಾಯಕ, ಮಾಜಿ ಸಚಿವ ಎಚ್‌ಡಿ ರೇವಣ್ಣ ಬಂಧನ

ಬೆಂಗಳೂರು ಸುತ್ತ ಮುತ್ತ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆ; ಅತ್ತ ಕರಾವಳಿ, ಉತ್ತರ ಕರ್ನಾಟಕದಲ್ಲಿ ಮತ್ತಷ್ಟು ಬಿಸಿಯ ಎಚ್ಚರಿಕೆ

SSLC Result 2024: ಎಸ್‌ಎಸ್‌ಎಲ್‌ಸಿ ರಿಸಲ್ಟ್ ಯಾವಾಗ? ಫಲಿತಾಂಶ ನೋಡುವುದು ಹೇಗೆ ಸಂಪೂರ್ಣ ಮಾಹಿತಿ ಇಲ್ಲಿದೆ

ಭಾರತದ ಮುಖ್ಯ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ಅವರು ಇಂದು ಚುನಾವಣಾ ದಿನಾಂಕ ಘೋಷಿಸಿದರು. ಈ ಸಂದರ್ಭದಲ್ಲಿ ಮಾದರಿ ನೀತಿ ಸಂಹಿತೆ ಕೂಡ ಇಂದೇ ಜಾರಿಯಾಗಿದೆ ಎಂದು ಹೇಳಿದರು. ಇದಲ್ಲದೆ, ಮತದಾರರಿಗೆ ಆಮಿಷ ಒಡ್ಡುವ ವಿಚಾರ ಪ್ರಸ್ತಾಪಿಸಿದ ಅವರು ನೀತಿ ಸಂಹಿತೆ ಜಾರಿಗೆ ಮೊದಲೇ ಕರ್ನಾಟಕದಲ್ಲಿ ಅದನ್ನು ತಡೆಯುವ ಕೆಲಸ ಶುರುವಾಗಿದೆ. ಈಗಾಗಲೇ ಕೋಟ್ಯಂತರ ರೂಪಾಯಿ ಬೆಲೆ ಬಾಳುವ ಕುಕ್ಕರ್‌, ಸೀರೆ ಮುಂತಾದ ವಸ್ತುಗಳನ್ನು ವಶಪಡಿಸಿ ಅದನ್ನು ಹಂಚಲು ತಗೆದುಕೊಂಡು ಹೋದವರ ವಿರುದ್ಧ ಕ್ರಿಮಿನಲ್‌ ಕೇಸ್‌ ದಾಖಲಿಸಲಾಗಿದೆ.

ಈಶಾನ್ಯ ರಾಜ್ಯಗಳ ಚುನಾವಣೆಯ ವಿದ್ಯಮಾನವನ್ನು ಪ್ರಸ್ತಾಪಿಸಿದ ರಾಜೀವ್‌ ಕುಮಾರ್‌, ಅಲ್ಲಿನ ಗ್ರಾಮಗಳಲ್ಲಿ ಜನರೇ ಎಚ್ಚೆತ್ತುಕೊಂಡು ಆಮಿಷ ಒಡ್ಡುವವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸುತ್ತಿದ್ದರು. ಆ ಮಟ್ಟಿಗೆ ಅವರು ಜಾಗೃತರಾಗಿದ್ದರು. ಇಂತಹ ಜಾಗೃತಿ ಕರ್ನಾಟಕದಲ್ಲೂ ಇರುವುದು ಗಮನಕ್ಕೆ ಬಂದಿದೆ.

ಕಳೆದ ವರ್ಷ ಮತದಾರರ ಬಳಕೆಗಾಗಿ ಸಿ ವಿಜಿಲ್‌ ಅಪ್ಲಿಕೇಶನ್‌ (cVIGIL) ಅನ್ನು ಪರಿಚಯಿಸಲಾಗಿದೆ. ಸಿವಿಜಿಲ್‌ ಅಂದರೆ ಸಿಟಿಜನ್ಸ್‌ ವಿಜಿಲೆನ್ಸ್‌ ಎಂದು ಅರ್ಥ. ಅದರ ಬಳಕೆಯನ್ನು ಮತದಾರರು ಮಾಡುತ್ತಿದ್ದಾರೆ. ಕರ್ನಾಟಕದಲ್ಲಿ ಈಗಾಗಲೇ ಈ ಆಪ್‌ ಬಗ್ಗೆ ಜಾಗೃತಿ ಇದೆ. ಬಳಸುತ್ತಿದ್ದಾರೆ ಕೂಡ. ಇದು ಇನ್ನಷ್ಟು ಹೆಚ್ಚಾಗಬೇಕು. ಮುಕ್ತ, ನ್ಯಾಯಯುತ ಮತದಾನ ಪ್ರಕ್ರಿಯೆಯನ್ನು ನಾವು ಖಾತರಿಪಡಿಸಬೇಕು. ಮರುಮತದಾನ ಇಲ್ಲದ, ಹಿಂಸಾಚಾರ ಇಲ್ಲದ ಚುನಾವಣೆ ನಡೆಯಬೇಕು ಎಂದು ಹೇಳಿದರು.

ಕರ್ನಾಟಕದಲ್ಲಿ ಸಿ ವಿಜಿಲ್‌ ಆಪ್‌ ಹೆಚ್ಚು ಅಗತ್ಯವಾಗಿದ್ದು, ಇಲ್ಲಿ ಹಣದ ಪ್ರಭಾವ ಹೆಚ್ಚು . ಚುನಾವಣೆಗೂ ಮೊದಲೇ ಮತದಾರರಿಗೆ ಆಮಿಷ ಒಡ್ಡುವ ಕೆಲಸವನ್ನು ಹಾಲಿ ಶಾಸಕರು ಮತ್ತು ಕಳೆದ ಚುನಾವಣೆಯಲ್ಲಿ ಸೋತವರು ಶುರುಮಾಡಿಕೊಂಡಿದ್ದರು. ಮತದಾರರಿಗೆ ಕುಕ್ಕರ್‌, ಸೀರೆ, ಹಾಟ್‌ಬಾಕ್ಸ್‌ ಮುಂತಾದ ಉಡುಗೊರೆ ನೀಡುವ ಕೆಲಸ ಪ್ರಗತಿಯಲ್ಲಿತ್ತು. ಆದರೆ, ಇದಕ್ಕೆ ಕಳೆದ ಕೆಲವು ವಾರಗಳ ಹಿಂದೆ ಪೊಲೀಸರು ಬ್ರೇಕ್‌ ಹಾಕಲಾರಂಭಿಸಿದ್ದರು ಎಂಬ ವಿಚಾರವನ್ನು ಅವರು ಉಲ್ಲೇಖಿಸಿದರು.

ಸಿವಿಜಿಲ್‌ ಆಪ್‌ ಬಳಸುವುದು ಹೇಗೆ?

ಸಿವಿಜಿಲ್‌ ಆಪ್‌ ಬಳಸುವುದಕ್ಕೆ ನೀವು ಅನಾಮಧೇಯವಾಗಿ ಅಥವಾ ನಿಮ್ಮ ಮೊಬೈಲ್ ಸಂಖ್ಯೆಯ ಮೂಲಕ ಲಾಗಿನ್ ಆಗಬಹುದು. ಆದಾಗ್ಯೂ, ನೀವು ಅನಾಮಧೇಯ ಬಳಕೆದಾರರಂತೆ ದೂರು ಸಲ್ಲಿಸಿದರೆ, ನೀವು ನಿಮ್ಮ ದೂರಿನ ಅಪ್ಡೇಟ್‌ ಪಡೆಯುವುದು ಸಾಧ್ಯವಾಗುವುದಿಲ್ಲ. ಒಮ್ಮೆ ಲಾಗ್ ಇನ್ ಮಾಡಿದ ನಂತರ, ನೀವು ಫೋಟೋವನ್ನು ಕ್ಲಿಕ್ ಮಾಡಬಹುದು ಅಥವಾ ವೀಡಿಯೊವನ್ನು ರೆಕಾರ್ಡ್ ಮಾಡಬಹುದು (2 ನಿಮಿಷಗಳವರೆಗೆ) ಮತ್ತು ಭೌಗೋಳಿಕ ಮಾಹಿತಿ ವ್ಯವಸ್ಥೆಯಿಂದ ಸ್ವಯಂಚಾಲಿತ ಸ್ಥಳ ಮ್ಯಾಪಿಂಗ್ ಜತೆಗೆ ಅದನ್ನು ಡಿಜಿಟಲ್ ಪುರಾವೆಯಾಗಿ ಸಲ್ಲಿಸಬಹುದಾಗಿದೆ.

ಈ ರೀತಿ, ದೂರನ್ನು ಯಶಸ್ವಿಯಾಗಿ ಸಲ್ಲಿಸಿದ ನಂತರ, ನಿಮ್ಮ ಮೊಬೈಲ್‌ನಲ್ಲಿ ಅಪ್ಡೇಟ್‌ ಟ್ರ್ಯಾಕ್ ಮಾಡಲು ಮತ್ತು ವಿವರ ಸ್ವೀಕರಿಸಲು ನೀವು ನಿಮ್ಮ ದೂರಿಗೆ ಸಂಬಂಧಿಸಿದ ಪ್ರತ್ಯೇಕ ಐಡಿಯನ್ನು ಸ್ವೀಕರಿಸುತ್ತೀರಿ. ಇದರಲ್ಲಿ ನೀವು ಬಹು ಘಟನೆಗಳನ್ನು ವರದಿ ಮಾಡಬಹುದು. ಅವೆಲ್ಲದಕ್ಕೂ ಅಂದರೆ ಪ್ರತಿ ದೂರಿಗೆ, ನೀವು ಪ್ರತ್ಯೇಕ ಟ್ರ್ಯಾಕಿಂಗ್ ಐಡಿಯನ್ನು ಪಡೆಯುತ್ತೀರಿ.

ಮುಖ್ಯ ಚುನಾವಣಾ ಆಯುಕ್ತರು ಹೇಳಿದ ಪ್ರಕಾರ, ಇಂತಹ ದೂರುಗಳಿಗೆ ಆಯೋಗವು 100 ನಿಮಿಷದ ಒಳಗೆ ಪ್ರತಿಸ್ಪಂದಿಸುತ್ತದೆ.

ಸಿವಿಜಿಲ್‌ ಆಪ್‌ ಬಗ್ಗೆ ಹಿಂದಿನ ಆಯುಕ್ತರು ನೀಡಿದ ಮಾಹಿತಿಯ ವಿಡಿಯೋ ಇಲ್ಲಿದೆ. ಇದನ್ನು ಬಳಸುವುದು ಹೇಗೆ ಎಂಬ ನಿರೂಪಣೆಯೂ ಇಲ್ಲಿದೆ.

ಇವಿಜಿಲ್‌ ಅಪ್ಲಿಕೇಶನ್‌ ಬಳಸುವುದಕ್ಕೆ ಇರುವಂತಹ ಯೂಸರ್‌ ಮ್ಯಾನುವಲ್‌ ಕೂಡ ಇಲ್ಲಿದೆ.

    ಹಂಚಿಕೊಳ್ಳಲು ಲೇಖನಗಳು