logo
ಕನ್ನಡ ಸುದ್ದಿ  /  ಕರ್ನಾಟಕ  /  Padmashri: 650 ಭತ್ತದ ತಳಿ ಸಂರಕ್ಷಣೆ, ಕಾಸರಗೋಡಿನ ಸತ್ಯನಾರಾಯಣ ಬೆಳೇರಿಗೆ ಪದ್ಮಶ್ರೀ ಮನ್ನಣೆ

Padmashri: 650 ಭತ್ತದ ತಳಿ ಸಂರಕ್ಷಣೆ, ಕಾಸರಗೋಡಿನ ಸತ್ಯನಾರಾಯಣ ಬೆಳೇರಿಗೆ ಪದ್ಮಶ್ರೀ ಮನ್ನಣೆ

Umesha Bhatta P H HT Kannada

Jan 26, 2024 02:32 PM IST

ತಮ್ಮ ಬಳಿ ಇರುವ ಭತ್ತದ ತಳಿಯೊಂದಿಗೆ ಸತ್ಯನಾರಾಯಣ ಬೆಳೇರಿ

    • Kasaragod News ಕಾಸರಗೋಡು ಜಿಲ್ಲೆ ಬೆಳ್ಳೂರು ಸಮೀಪದ ನೆಟ್ಟಣಿಗೆ ಗ್ರಾಮದ ಸತ್ಯನಾರಾಯಣ ಬೆಳೇರಿ ಅವರು ಭತ್ತದ ಸತ್ಯ ಎಂದೇ ಆ ಭಾಗದಲ್ಲಿ ಜನಪ್ರಿಯ. ಅವರಿಗೆ ಈ ಬಾರಿ ಪದ್ಮಶ್ರೀ ಗೌರವ.(ವರದಿ: ಹರೀಶ ಮಾಂಬಾಡಿ, ಮಂಗಳೂರು)
ತಮ್ಮ ಬಳಿ ಇರುವ ಭತ್ತದ ತಳಿಯೊಂದಿಗೆ ಸತ್ಯನಾರಾಯಣ ಬೆಳೇರಿ
ತಮ್ಮ ಬಳಿ ಇರುವ ಭತ್ತದ ತಳಿಯೊಂದಿಗೆ ಸತ್ಯನಾರಾಯಣ ಬೆಳೇರಿ

ಮಂಗಳೂರು: ದಶಕಗಳ ಹಿಂದೆ ಒಂದು ಮುಷ್ಟಿಯಷ್ಟು ರಾಜಕೆಯಮೆ ಎಂಬ ಭತ್ತದ ತಳಿಯನ್ನು ಸಂರಕ್ಷಿಸಲು ಹೊರಟ ಸತ್ಯನಾರಾಯಣ ಬೆಳೇರಿ ಈಗ 650ಕ್ಕೂ ಅಧಿಕ ಭತ್ತದ ತಳಿಗಳ ಸಂರಕ್ಷಕ. ಪದ್ಮಶ್ರೀ ಪುರಸ್ಕಾರಕ್ಕೆ ಅರ್ಹವಾಗಿ ಆಯ್ಕೆಯಾದ ಗಡಿನಾಡ ಕನ್ನಡಿಗ.ಇವರು 650ಕ್ಕೂ ಅಧಿಕ ಭತ್ತದ ತಳಿಗಳ ಸಂರಕ್ಷಕ. ಸುಮಾರು ನಾಲ್ಕು ಎಕರೆ ಜಾಗದಲ್ಲಿ ಒಂದಷ್ಟು ರಬ್ಬರ್, ಅಡಕೆ ನೆಟ್ಟರೆ, ಉಳಿದ ಕೇವಲ 25 ಸೆಂಟ್ಸ್ ಜಾಗದಲ್ಲಿ ಭತ್ತದ ತಳಿ ಸಂರಕ್ಷಣೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ದೊಡ್ಡಬಳ್ಳಾಪುರ: ಹೇಮಂತಗೌಡ ಹತ್ಯೆ ಪ್ರಕರಣದ 2ನೇ ಆರೋಪಿ ಬಂಧನ, ಪೊಲೀಸರ ಮೇಲೆ ಹಲ್ಲೆಗೆತ್ನಿಸಿದ್ದ ಕಾರಣ ಕಾಲಿಗೆ ಗುಂಡೇಟು

ಮಂಗಳೂರು ವಿಮಾನ ನಿಲ್ಧಾಣಕ್ಕೆ ಬಂದು ಗೊಂದಲಕ್ಕೆ ಒಳಗಾದ ಮಹಿಳೆ, ನೆರವಾದ ಭದ್ರತಾ ಸಿಬ್ಬಂದಿ, ನಾಪತ್ತೆ ಪ್ರಕರಣ ಸುಖಾಂತ್ಯ

ದಕ್ಷಿಣ ಕನ್ನಡದ ಮಂಗಳೂರು, ಪುತ್ತೂರಲ್ಲಿ ಹಲಸು, ಮಾವು ಸೇರಿ ವಿವಿಧ ಹಣ್ಣುಗಳ ಮೇಳ, ದಿನಾಂಕ ಮತ್ತು ಇತರೆ ವಿವರ

ಬೆಂಗಳೂರು: ಕೊನೆಗೂ ತೆರಿಗೆ ಕಟ್ಟಲು ಒಪ್ಪಿಕೊಂಡ ಮಂತ್ರಿ ಮಾಲ್; ಬೀಗ ತೆಗೆಯುವಂತೆ ಬಿಬಿಎಂಪಿಗೆ ಹೈಕೋರ್ಟ್‌ ನಿರ್ದೇಶನ

ಗ್ರೋ ಬ್ಯಾಗುಗಳನ್ನು ಇಟ್ಟುಕೊಂಡೇ, ಅವುಗಳ ಒಳಗೆ ಮರಳು, ಮಣ್ಣು ಉಮಿಕರಿಗಳನ್ನು ಸಮಪ್ರಮಾಣದಲ್ಲಿ ತುಂಬಿಸಿ ಜೀವಾಮೃತ ಕೊಟ್ಟು ಪ್ರತಿ ವರ್ಷ ಅನುಕ್ರಮಣಿಕೆಯಲ್ಲಿ ಇಷ್ಟೊಂದು ಸಂಖ್ಯೆಯ ತಳಿಗಳನ್ನು ಉಳಿಸಿದ್ದಾರೆ. ಭತ್ತದ ಕೃಷಿಯಲ್ಲಿ ತಳಿ ಸಂಗ್ರಹ ಸಾಧನೆಯನ್ನು ಮಾಡಿ ಈಗ ಸತ್ಯನಾರಾಯಣರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಈಗಾಗಲೇ ಭಾರತ ಸರಕಾರದ ಕೃಷಿ ಇಲಾಖೆ ಇವರಿಗೆ ಸಸ್ಯ ತಳಿ ಸಂರಕ್ಷಕ ಎಂಬ ರಾಷ್ಟ್ರ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಗದ್ದೆಗಳನ್ನು ಹುಡುಕುತ್ತಾ

ಕಾಸರಗೋಡು ಜಿಲ್ಲೆಯ ಬೆಳ್ಳೂರು ಗ್ರಾಮ ಪಂಚಾಯತ್ ನ ನೆಟ್ಟಣಿಗೆ ಗ್ರಾಮದ ಕಿನ್ನಿಂಗಾರು ಸಮೀಪದ ಬೆಳೇರಿ ನಿವಾಸಿ ಸತ್ಯನಾರಾಯಣ ಬೆಳೇರಿ ಸಾಧಾರಣ ಕೃಷಿ ಕುಟುಂಬದವರು.

ಊರಲ್ಲಿ ಅವರನ್ನು ಜನ ಭತ್ತದ ಸತ್ಯ ಎಂದೇ ಕರೆಯುತ್ತಾರೆ. ಏಕೆಂದರೆ ಎಲ್ಲಿಗೆ ಹೋದರು ಅವರಿಗೆ ಭತ್ತದ ಕುರಿತೇ ಆಸಕ್ತಿ. ಹೊಸ ತಳಿ ಕಂಡರೆ, ಇಲ್ಲವೇ ಈಗಾಗಲೇ ಬಳಸುತ್ತಿರುವ ತಳಿಯಲ್ಲೂ ವಿಭಿನ್ನತೆ ಇದ್ದರೆ ಅದರ ಮಾಹಿತಿಯನ್ನು ಸಂಗ್ರಹಿಸುತ್ತಾರೆ. ಮಾಹಿತಿಯನ್ನೂ ವಿನಿಯೋಗ ಮಾಡಿಕೊಳ್ಳುತ್ತಾರೆ. ಇದು ಅವರ ಸತ್ಯನಾರಾಯಣ ಬೆಳೇರಿ ಅವರ ವಿಶೇಷ.

ಕಡಿಮೆ ಜಾಗದಲ್ಲಿ ಸಾಧನೆ

ಸುಮಾರು 25 ಸೆಂಟ್ಸ್ ಸ್ಥಳದಲ್ಲಿ ಭತ್ತದ ತಳಿಯನ್ನು ಸಂರಕ್ಷಿಸುವುದು ಬೆಳೆಸುವುದನ್ನು ಮಾಡಿದ್ದಾರೆ. ಇವರಿಗೆ ಸುಮಾರು ನಾಲ್ಕು ಎಕರೆ ಸ್ಥಳವಿದ್ದರೂ ಈ ಸ್ಥಳ ಭತ್ತದ ಕೃಷಿಗೆ ಸೂಕ್ತವಲ್ಲ. ಆದ್ದರಿಂದ ಅಲ್ಲಿ ಅವರು ಕಂಗು, ತೆಂಗು, ರಬ್ಬರ್ ಬೆಳೆಸಿದ್ದಾರೆ. ಶ್ರೀಲಂಕ, ಜಪಾನ್, ಫಿಲಿಫೈನ್ಸ್ ಸಹಿತ ವಿದೇಶಿ ರಾಷ್ಟ್ರಗಹಳ ಭತ್ತದ ತಳಿಗಳನ್ನು ಅವರು ಬೆಳೆಸಿದ್ದಾರೆ. ಜೇನು ಸಾಕಾಣಿಕೆಯಲ್ಲೂ ಸತ್ಯನಾರಾಯಣ ಗಮನ ಸೆಳೆದಿದ್ದಾರೆ.

1973ರ ಜೂನ್ 15ರಂದು ಕುಂಞ್ ರಾಮ ಮಣಿಯಾಣಿ ಜಾನಕಿ ದಂಪತಿಗೆ ಜನಿಸಿದ ಸತ್ಯನಾರಾಯಣ ಅವರು ಪತ್ನಿ ಜಯಶ್ರೀ, ಮಕ್ಕಳಾದ ನವ್ಯಶ್ರೀ, ಗ್ರೀಷ್ಮಾ, ಅಭಿನವ ಅವರೊಂದಿಗೆ ವಾಸಿಸುತ್ತಿದ್ದಾರೆ. 12 ವರ್ಷಗಳಿಂದ ಅವರು, ಮರೆಯಾಗುತ್ತಿರುವ ದೇಸಿ ತಳಿಗಳ ಸಂರಕ್ಷಣೆ ಹಾಗೂ ಸಂವರ್ಧನೆಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.

ಮುಷ್ಟಿ ಭತ್ತದಿಂದ

ದಶಕಗಳ ಹಿಂದೆ ಹಿರಿಯ ಗಾಂಧೀವಾದಿ, ಕೃಷಿ ತಪಸ್ವಿ ಚೇರ್ಕಾಡಿ ರಾಮಚಂದ್ರ ರಾಯರು ನೀಡಿದ ಒಂದು ಮುಷ್ಟಿಯಷ್ಟು ರಾಜಕೆಯಮೆ ಎಂಬ ದೇಸಿ ಭತ್ತದ ತಳಿಯೊಂದಿಗೆ ಆರಂಭವಾದ ಇವರ ಕೆಲಸ ಇಂದು ಪದ್ಮಶ್ರೀ ಪ್ರಶಸ್ತಿ ದೊರಕುವಲ್ಲಿವರೆಗೆ ಬಂದಿದೆ.

ರಾಜಕಯಮೆ, ಗಂಧಸಾಲೆ, ಅತಿಕಾರ, ಸುಗ್ಗಿಕಯಮೆ, ನವರ, ಮೈಸೂರು ರಾಜರು ಬಳಸುತ್ತಿದ್ದ ರಾಜಮುಡಿ ಮತ್ತು ರಾಜಭೋಗ, ಉಪ್ಪು ನೀರಿನಲ್ಲೂ ಬೆಳೆಯುವ ಕಗ್ಗ, ಬರ ನಿರೋಧಕ ಪುಟ್ಟ ಭತ್ತ, ಅವಲಕ್ಕಿ ತಯಾರಿಸಲು ಪೂರಕವಾಗಿರುವ ಸ್ವರಟಾ, ಕರ್ನಾಟಕ, ಕೇರಳ, ತಮಿಳುನಾಡು, ಆಂಧ್ರ ಪ್ರದೇಶ, ಮಹಾರಾಷ್ಟ್ರ, ಒಡಿಶಾ ಸಹಿತ ದೇಶದ ಬಹುತೇಕ ಪ್ರದೇಶಗಳ ಭತ್ತದ ತಳಿಗಳ ಸಂಗ್ರಹ ಇವರಲ್ಲಿದೆ.

ಅವರು ಬೆಳೆದ ಭತ್ತದ ಬೀಜಗಳನ್ನು ಈಗಾಗಲೇ ದೇಶದ ಹಲವು ಕೃಷಿ ವಿಶ್ವವಿದ್ಯಾನಿಲಯಗಳಿಗೆ ಉಚಿತವಾಗಿ ನೀಡಿದ್ದಾರೆ. ಯೋಗ್ಯವಲ್ಲದ ಸ್ಥಳದಲ್ಲಿ ಭತ್ತದ ತಳಿಯನ್ನು ಸಂರಕ್ಷಿಸಿದ್ದು ಅವರ ಮಹತ್ವದ ಸಾಧನೆ.

(ವರದಿ: ಹರೀಶ ಮಾಂಬಾಡಿ, ಮಂಗಳೂರು)

ವಿಭಾಗ

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ