logo
ಕನ್ನಡ ಸುದ್ದಿ  /  ಕರ್ನಾಟಕ  /  ಲೋಕಸಭೆ ಚುನಾವಣೆ; ಕರ್ನಾಟಕದ ಎರಡನೇ ಹಂತದ ಮತದಾನ, 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆ, ಮತದಾನ ಶುರು

ಲೋಕಸಭೆ ಚುನಾವಣೆ; ಕರ್ನಾಟಕದ ಎರಡನೇ ಹಂತದ ಮತದಾನ, 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆ, ಮತದಾನ ಶುರು

Umesha Bhatta P H HT Kannada

May 07, 2024 07:41 AM IST

ಲೋಕಸಭೆ ಚುನಾವಣೆ; ಕರ್ನಾಟಕದ ಎರಡನೇ ಹಂತದ ಮತದಾನದಲ್ಲಿ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಇದು 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆಯಾಗಿದ್ದು ಮತದಾನ ಶುರುವಾಗಿದೆ. ದೇವಗಿರಿ ಮತ್ತು ಬೀದರ್‌ನಲ್ಲಿ ಮತದಾನದ ಬಳಿಕ ಸಂಭ್ರಮ ವ್ಯಕ್ತಪಡಿಸಿದ ಮತದಾರರು.

  • ಲೋಕಸಭೆ ಚುನಾವಣೆ; ಕರ್ನಾಟಕದ ಎರಡನೇ ಹಂತದ ಮತದಾನ ಪ್ರಕ್ರಿಯೆ ಇಂದು ನಡೆಯಲಿದೆ. 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆಯ ದಿನವೂ ಇದೇ ಆಗಿದ್ದು, ಮತದಾನ ಶುರುವಾಗಿದೆ. ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಬೆಳಗ್ಗೆ 7 ಗಂಟೆಯಿಂದ ಶುರುವಾಗಿದ್ದು, ಸಂಜೆ 6 ಗಂಟೆ ತನಕ ನಡೆಯಲಿದೆ. 

ಲೋಕಸಭೆ ಚುನಾವಣೆ; ಕರ್ನಾಟಕದ ಎರಡನೇ ಹಂತದ ಮತದಾನದಲ್ಲಿ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಇದು 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆಯಾಗಿದ್ದು ಮತದಾನ ಶುರುವಾಗಿದೆ. ದೇವಗಿರಿ ಮತ್ತು ಬೀದರ್‌ನಲ್ಲಿ ಮತದಾನದ ಬಳಿಕ ಸಂಭ್ರಮ ವ್ಯಕ್ತಪಡಿಸಿದ ಮತದಾರರು.
ಲೋಕಸಭೆ ಚುನಾವಣೆ; ಕರ್ನಾಟಕದ ಎರಡನೇ ಹಂತದ ಮತದಾನದಲ್ಲಿ ಉತ್ತರ ಕರ್ನಾಟಕ ಭಾಗದ 14 ಕ್ಷೇತ್ರಗಳಲ್ಲಿ ಚುನಾವಣೆ ನಡೆಯುತ್ತಿದೆ. ಇದು 4 ಸಚಿವರ ಮಕ್ಕಳಿಗೆ ಸತ್ವ ಪರೀಕ್ಷೆಯಾಗಿದ್ದು ಮತದಾನ ಶುರುವಾಗಿದೆ. ದೇವಗಿರಿ ಮತ್ತು ಬೀದರ್‌ನಲ್ಲಿ ಮತದಾನದ ಬಳಿಕ ಸಂಭ್ರಮ ವ್ಯಕ್ತಪಡಿಸಿದ ಮತದಾರರು.

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭೆ ಚುನಾವಣೆಯ ಎರಡನೇ ಹಂತದ ಮತದಾನಕ್ಕೆ ಸಿದ್ದತೆಗಳು ಬಹುತೇಕ ಪೂರ್ಣಗೊಂಡಿವೆ. 14 ಲೋಕಸಭಾ ಕ್ಷೇತ್ರಗಳಿಗೆ ಮತದಾನ ಇಂದು (ಮೇ 7) ಶುರುವಾಗಿದೆ. ಬಿರುಬಿಸಲಿನ ನಡುವೆಯೂ ಉತ್ತರ ಕರ್ನಾಟಕ, ಕರಾವಳಿ, ಮಲೆನಾಡು ಹಾಗೂ ಮಧ್ಯ ಕರ್ನಾಟಕದ ಜಿಲ್ಲೆಗಳಲ್ಲಿ ಮತದಾನ ಬೆಳಿಗ್ಗೆ7ರಿಂದ ಸಂಜೆ 6 ರವರಗೆ ನಡೆಯಲಿದೆ. ಈ ಚುನಾವಣೆಯಲ್ಲಿ ಕರ್ನಾಟಕ ಕಾಂಗ್ರೆಸ್‌ದ ನಾಲ್ವರು ಹಿರಿಯ ಸಚಿವರ ಮಕ್ಕಳೂ ಮೊದಲ ಬಾರಿಗೆ ಚುನಾವಣೆ ಎದುರಿಸುತ್ತಿದ್ದಾರೆ. ಈ ಕಾರಣದಿಂದ ಲೋಕಸಭೆ ಚುನಾವಣೆಯು ಅವರ ರಾಜಕೀಯ ಭವಿಷ್ಯವನ್ನೂ ನಿರ್ಧಾರ ಮಾಡಲಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದ ಎರಡನೇ ಹಂತದ ಮತದಾನ ಸಾಕಷ್ಟು ಮಹತ್ವವನ್ನು ಪಡೆದುಕೊಂಡಿದೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಹವಾಮಾನ ಮೇ 19; ರಾಜ್ಯದಲ್ಲಿ ಮಳೆ, ಶಿವಮೊಗ್ಗ, ಕೊಡಗು, ಚಿಕ್ಕಮಗಳೂರಲ್ಲಿ ಆರೆಂಜ್ ಅಲರ್ಟ್‌, 12 ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್‌

Bus Accident: ಫ್ಲೈ ಓವರ್‌ಗೆ ಹಾರಿದ ಸಾರಿಗೆ ಬಸ್‌ ಪ್ರಯಾಣಿಕರು ಪಾರಾಗಿದ್ದೇ ರೋಚಕ; ನೆಲಮಂಗಲದಲ್ಲಿ ಸಿನಿಮಾ ಸ್ಟಂಟ್ ನಂತೆ ಸಂಭವಿಸಿದ ಅಪಘಾತ

Hassan Scandal: 100 ಕೋಟಿ ರೂ. ಆಫರ್ ವಿಚಾರವನ್ನು ಎಸ್‌ಐಟಿ ನೋಡಿಕೊಳ್ಳುತ್ತೆ, ದೇವರಾಜೇಗೌಡ ಜೈಲಲ್ಲೇ ಇರ್ತಾರೆ: ಗೃಹ ಸಚಿವ

Hassan Scandal : ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ವಾರೆಂಟ್‌ ಹೊರಡಿಸಿದ ಬೆಂಗಳೂರು ನ್ಯಾಯಾಲಯ

ಉತ್ತರ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕದ ಬೀದರ್‌, ಕಲಬುರಗಿ, ರಾಯಚೂರು, ಬಳ್ಳಾರಿ, ಕೊಪ್ಪಳ, ಕಿತ್ತೂರು ಕರ್ನಾಟಕದ ವಿಜಯಪುರ, ಬಾಗಲಕೋಟೆ, ಚಿಕ್ಕೋಡಿ. ಬೆಳಗಾವಿ, ಹಾವೇರಿ, ಧಾರವಾಡ, ಕರಾವಳಿ ಭಾಗದ ಉತ್ತರ ಕನ್ನಡ, ಮಧ್ಯ ಕರ್ನಾಟಕದ ದಾವಣಗೆರೆ, ಮಲೆನಾಡಿನ ಶಿವಮೊಗ್ಗ ಲೋಕಸಭಾ ಕ್ಷೇತ್ರಗಳಲ್ಲಿ ಮತದಾನ ನಡೆಯಲಿದೆ. ಉಡುಪಿ ಜಿಲ್ಲೆಯ ಒಂದು ವಿಧಾನಸಭಾ ಕ್ಷೇತ್ರ ಬೈಂದೂರಿನಲ್ಲಿ ಈಗ ಮತದಾನ ನಡೆಯುತ್ತಿದೆ.

ಮಾಜಿ ಸಿಎಂಗಳು, ಮಕ್ಕಳು

ಈ ಚುನಾವಣೆಯಲ್ಲಿ ಇಬ್ಬರು ಮಾಜಿ ಸಿಎಂಗಳಾದ ಜಗದೀಶ್‌ ಶೆಟ್ಟರ್‌ ಹಾಗೂ ಬಸವರಾಜ ಬೊಮ್ಮಾಯಿ ಕಣದಲ್ಲಿದ್ದಾರೆ. ಇಬ್ಬರು ಕೇಂದ್ರ ಸಚಿವರಾದ ಪ್ರಲ್ಹಾದ ಜೋಶಿ ಹಾಗೂ ಭಗವಂತ ಖೂಬಾ ಸ್ಪರ್ಧೆಯಲ್ಲಿದ್ದಾರೆ. ಮಾಜಿ ಸಿಎಂಗಳ ಮಕ್ಕಳಾದ ಬಿ.ವೈ.ರಾಘವೇಂದ್ರ, ಗೀತಾ ಶಿವರಾಜಕುಮಾರ್‌ ಅವರು ಶಿವಮೊಗ್ಗದಲ್ಲಿ ಮುಖಾಮುಖಿಯಾಗಿದ್ದಾರೆ.ದಾವಣಗೆರೆಯಲ್ಲಿ ಸಚಿವ ಮಲ್ಲಿಕಾರ್ಜುನ ಪತ್ನಿ ಪ್ರಭಾ ಮಲ್ಲಿಕಾರ್ಜುನ, ಸಂಸದ ಸಿದ್ದೇಶ್ವರ ಪತ್ನಿ ಗಾಯತ್ರಿ ಸಿದ್ದೇಶ್ವರ ಎದುರಾಳಿಗಳಾಗಿದ್ದಾರೆ.

ರಾಯಚೂರು ಹಾಗೂ ಕಲಬುರಗಿಯಲ್ಲಿ ಮಾಜಿ ಅಧಿಕಾರಿಗಳು ತುರುಸಿನ ಸ್ಪರ್ಧೆ ಎದುರಿಸುತ್ತಿದ್ದಾರೆ. ರಾಯಚೂರು ಡಿಸಿಯಾಗಿದ್ದ ಕುಮಾರನಾಯಕ್‌ ಹಾಗೂ ಮಲ್ಲಿಕಾರ್ಜುನ ಖರ್ಗೆ ಅವರ ಅಳಿಯ ರಾಧಾಕೃಷ್ಣದೊಡ್ಡಮನಿ ಅವರು ಕಲಬುರಗಿ ಕಣದಲ್ಲಿದ್ದಾರೆ.

ಸಚಿವರ ಮಕ್ಕಳ ಕಣ

ಈ ಬಾರಿ ಚುನಾವಣೆಗೆ ಕಾಂಗ್ರೆಸ್‌ನಿಂದ ಆರು ಸಚಿವರ ಮಕ್ಕಳು ಅವಕಾಶ ಪಡೆದಿದ್ದಾರೆ. ಇದರಲ್ಲಿ ಸಚಿವ ಶಿವಾನಂದ ಪಾಟೀಲ್‌ ಪುತ್ರಿ ಸಂಯುಕ್ತಾ ಪಾಟೀಲ್‌ ಬಾಗಲಕೋಟೆಯಿಂದ, ಸತೀಶ್‌ ಜಾರಕಿಹೊಳಿ ಪುತ್ರಿ ಪ್ರಿಯಾಂಕ ಜಾರಕಿಹೊಳಿ ಚಿಕ್ಕೋಡಿಯಿಂದ, ಈಶ್ವರ ಖಂಡ್ರೆ ಅವರ ಪುತ್ರ ಸಾಗರ್‌ ಖಂಡ್ರೆ ಬೀದರ್‌ನಿಂದ ಹಾಗೂ ಲಕ್ಷ್ಮಿ ಹೆಬ್ಬಾಳಕರ್‌ ಪುತ್ರ ಮೃಣಾಲ್‌ ಹೆಬ್ಬಾಳಕರ್‌ ಅವರು ಬೆಳಗಾವಿಯಿಂದ ಕಣದಲ್ಲಿದ್ದಾರೆ. ಈ ನಾಲ್ಕು ಕ್ಷೇತ್ರಗಳಲ್ಲೂ ನಾಲ್ವರು ಯುವ ಮುಖಗಳಿಗೆ ಹಿರಿಯರೇ ಸವಾಲು ಹಾಕಿದ್ದಾರೆ.

ಎರಡು ಕಡೆ ಬಂಡಾಯ

ಎರಡನೇ ಹಂತದ ಮತದಾನ ನಡೆಯುತ್ತಿರುವ ಕೇತ್ರಗಳಲ್ಲಿ ಎರಡು ಕಡೆ ಮಾತ್ರ ಬಂಡಾಯದ ವಾತಾವರಣವಿದೆ. ಶಿವಮೊಗ್ಗದಲ್ಲಿ ತಮ್ಮ ಪುತ್ರನಿಗೆ ಟಿಕೆಟ್‌ ಸಿಗದೇ ಇದ್ದುದಕ್ಕೆ ಬಂಡೆದ್ದು ಮಾಜಿ ಡಿಸಿಎಂ ಕೆ.ಎಸ್‌.ಈಶ್ವರಪ್ಪ ಬಂಡಾಯವಾಗಿ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಅವರು ಬಿಜೆಪಿಗೆ ತೊಡರುಗಾಲಾಗಬಹುದು. ಅದೇ ರೀತಿ ದಾವಣಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಪ್ರಬಲ ಟಿಕೆಟ್‌ ಆಕಾಂಕ್ಷಿಯಾಗಿದ್ದ ವಿನಯಕುಮಾರ್‌ ಕಣದಲ್ಲಿ ಉಳಿದಿದ್ದಾರೆ. ಅವರು ಅಲ್ಲಿ ಕಾಂಗ್ರೆಸ್‌ಗೆ ಕೊಂಚ ಹಿನ್ನಡೆ ಉಂಟು ಮಾಡಬಹುದು ಎನ್ನಲಾಗುತ್ತಿದೆ.

ಮತದಾರರು ಎಷ್ಟು

ಕರ್ನಾಟಕದ ಉತ್ತರ ಭಾಗದ 14 ಕ್ಷೇತ್ರಗಳಲ್ಲಿ ಎರಡುನೂರಕ್ಕೂ ಅಧಿಕ ಅಭ್ಯರ್ಥಿಗಳ ಅದೃಷ್ಟ ಪರೀಕ್ಷೆ ಕಂಡು ಬರಲಿದೆ. ಈ ಭಾಗದಲ್ಲಿ ಒಟ್ಟು 2 ಕೋಟಿ 57 ಲಕ್ಷ ಮತದಾರ ಪೈಕಿ, 1 ಕೋಟಿ 29 ಲಕ್ಷ ಪುರುಷ ಮತದಾರರಿದ್ದಾರೆ. ಮಹಿಳಾ ಮತದಾರರ ಸಂಖ್ಯೆ 1 ಕೋಟಿ 28 ಲಕ್ಷ ರಷ್ಟಿದೆ.

ಈ ಬಾರಿ ಬಿಸಿಲಿನ ವಾತಾವರಣ ಹಿಂದೆಂದಿಗೂ ಹೆಚ್ಚು ಇರುವುದರಿಂದ ಮತದಾರರು ಹಾಗೂ ಸಿಬ್ಬಂದಿಗೆ ಸಾಕಷ್ಟು ವ್ಯವಸ್ಥೆಗಳನ್ನು ಮಾಡಲಾಗಿದೆ. ಮತಗಟ್ಟೆ ಬಳಿ ನೆರಳಿನ ವ್ಯವಸ್ಥೆ, ಮತದಾನ ಕೇಂದ್ರದ ಒಳಗೆ ಬಿಸಿಲಿನಿಂದ ಸಿಬ್ಬಂದಿಗೆ ತೊಂದರೆಯಾಗದಂತೆ ನೋಡಿಕೊಳ್ಳಲಾಗುತ್ತಿದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ