logo
ಕನ್ನಡ ಸುದ್ದಿ  /  ಕರ್ನಾಟಕ  /  Bangalore Traffic Rules: ಬೆಂಗಳೂರಲ್ಲಿ ಫುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡಿದರೆ ಜೈಲು

Bangalore traffic rules: ಬೆಂಗಳೂರಲ್ಲಿ ಫುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡಿದರೆ ಜೈಲು

HT Kannada Desk HT Kannada

Aug 29, 2022 09:04 AM IST

Bangalore traffic rules: ಬೆಂಗಳೂರಲ್ಲಿ ಫುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡಿದರೆ ಜೈಲು

    • ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ನಗರಗಳ ಪ್ರಮುಖ ಭಾಗಗಳಲ್ಲಿ ಕಾರು ಅಥವಾ ಬೈಕ್‌ ಪಾರ್ಕಿಂಗ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ನಿಗದಿತ ಪಾರ್ಕಿಂಗ್‌ ಸ್ಥಳ ಎಲ್ಲೋ ದೂರದಲ್ಲಿರುವುದರಿಂದ ರಸ್ತೆ ಬದಿಯಲ್ಲಿ ಅಥವಾ ಫುಟ್‌ಪಾತ್‌ನಲ್ಲಿ ವಾಹನ ಪಾರ್ಕಿಂಗ್‌ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈ ರೀತಿ ನಿರ್ಬಂಧಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್‌ ಮಾಡಿದರೆ ದಂಡ ಮಾತ್ರವಲ್ಲದೆ ಜೈಲೂಟವೂ ಗ್ಯಾರಂಟಿ.
Bangalore traffic rules: ಬೆಂಗಳೂರಲ್ಲಿ ಫುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡಿದರೆ ಜೈಲು
Bangalore traffic rules: ಬೆಂಗಳೂರಲ್ಲಿ ಫುಟ್‌ಪಾತ್‌ ಮೇಲೆ ಪಾರ್ಕಿಂಗ್‌ ಮಾಡಿದರೆ ಜೈಲು

ಬೆಂಗಳೂರಿನಲ್ಲಿ ವಾಹನಗಳ ದಟ್ಟಣೆ ಹೆಚ್ಚಿದ್ದು, ನಗರಗಳ ಪ್ರಮುಖ ಭಾಗಗಳಲ್ಲಿ ಕಾರು ಅಥವಾ ಬೈಕ್‌ ಪಾರ್ಕಿಂಗ್‌ ಮಾಡುವುದೇ ದೊಡ್ಡ ಸಮಸ್ಯೆಯಾಗಿರುತ್ತದೆ. ನಿಗದಿತ ಪಾರ್ಕಿಂಗ್‌ ಸ್ಥಳ ಎಲ್ಲೋ ದೂರದಲ್ಲಿರುವುದರಿಂದ ರಸ್ತೆ ಬದಿಯಲ್ಲಿ ಅಥವಾ ಫುಟ್‌ಪಾತ್‌ನಲ್ಲಿ ವಾಹನ ಪಾರ್ಕಿಂಗ್‌ ಮಾಡುವುದು ಸಾಮಾನ್ಯವಾಗಿದೆ. ಆದರೆ, ಈ ರೀತಿ ನಿರ್ಬಂಧಿತ ಸ್ಥಳಗಳಲ್ಲಿ ವಾಹನ ಪಾರ್ಕಿಂಗ್‌ ಮಾಡಿದರೆ ದಂಡ ಮಾತ್ರವಲ್ಲದೆ ಜೈಲೂಟವೂ ಗ್ಯಾರಂಟಿ.

ಟ್ರೆಂಡಿಂಗ್​ ಸುದ್ದಿ

Bangalore News: ಬೆಂಗಳೂರಲ್ಲಿ ನಾಯಿಗಳಿಗೆ ಊಟ ಹಾಕಲು ಸಮಯ ನಿಗದಿಗೆ ಮುಂದಾದ ಪಾಲಿಕೆ, ಸಾರ್ವಜನಿಕರ ಆಕ್ರೋಶ

Bangalore Rain: ಬೆಂಗಳೂರಿಗೆ ತಂಪೆರದ ಮಳೆ; ರಾಜ್ಯದಲ್ಲಿ ಮತ್ತೆರಡು ದಿನ ಮಳೆ ಸಂಭವ, ಮಳೆಗೆ ಕುಣಿದು ಕುಪ್ಪಳಿಸಿದ ಮಕ್ಕಳು

Forest Tales: ಅಜಯ್‌ ಮಿಶ್ರ ಎಂಬ ಅಧಿಕಾರಿ ರೂಪಿಸಿದ ಅಂಚೆಯೊಳಗಿನ ಅರಣ್ಯ ಲೋಕ, ನೋಡುವ ಆಸಕ್ತಿಯುಂಟೆ

Breaking News: ಬೆಳ್ತಂಗಡಿ ಮಾಜಿ ಶಾಸಕ ಕೆ ವಸಂತ ಬಂಗೇರ ನಿಧನ

ಪಾದಚಾರಿ ಮಾರ್ಗ ಅತಿಕ್ರಮಿಸಿಕೊಂಡು ಜನರಿಗೆ ತೊಂದರೆ ಮಾಡುವವವರಿಗೆ ಬೆಂಗಳೂರು ಸಂಚಾರ ಪೊಲೀಸರು ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 283 ಅನ್ವಯ ಶಿಕ್ಷೆ ವಿಧಿಸಲು ಮುಂದಾಗಿದ್ದಾರೆ. ಒಂದೆರಡು ಬಾರಿ ತಪ್ಪು ಪುನಾರವರ್ತನೆ ಮಾಡಿದ ವಾಹನ ಚಾಲಕರಿಂದ ಪೊಲೀಸರು ಬಾಂಡ್‌ ಬರೆಸಿಕೊಳ್ಳಲು ಆರಂಭಿಸಿದ್ದಾರೆ. ದಂಡದ ಜತೆ ಮುಚ್ಚಳಿಕೆ ಪತ್ರ ಬರೆಯಲು ಆರಂಭಿಸಿರುವುದು ವಾಹನ ಚಾಲಕರಿಗೆ ಎಚ್ಚರಿಕೆಯಾಗಿದೆ.

ಮೊದಲ ಬಾರಿಗೆ ಅಥವಾ ಎರಡನೇ ಬಾರಿ ಈ ರೀತಿ ಸಂಚಾರ ನಿಯಮ ಉಲ್ಲಂಘಿಸಿದರೆ ಐಪಿಸಿ ಸೆಕ್ಷನ್ 283ರ ಅಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದಂಡ ವಿಧಿಸುತ್ತಾರೆ. ವಾಹನ ಮಾಲೀಕರು ಕೋರ್ಟ್‌ಗೆ ಹೋಗಿ ದಂಡ ಪಾವತಿಸಬೇಕಿರುತ್ತದೆ.

ಈ ರೀತಿ ವಾಹನ ಚಾಲಕರು ಬರೆದುಕೊಟ್ಟ ಮುಚ್ಚಳಿಕೆ ಪತ್ರಕ್ಕೆ ಒಂದು ವರ್ಷ ವ್ಯಾಲಿಡಿಟಿ ಇರುತ್ತದೆ. ಈ ನಡುವೆ ಮತ್ತೆ ತಪ್ಪು ಪುನಾರವರ್ತಿಸಿದರೆ ಒಂದು ಲಕ್ಷ ರೂ.ವರೆಗೆ ದಂಡ ವಿಧಿಸಬಹುದು. ಈ ರೀತಿ ಹಲವು ಬಾರಿ ತಪ್ಪು ಪುನಾರವರ್ತನೆ ಮಾಡಿದರೆ ಜೈಲು ಸೇರಬೇಕಾಗುತ್ತದೆ ಎಂದು ಪೊಲೀಸರು ಎಚ್ಚರಿಸಿದ್ದಾರೆ.

ಪೊಲೀಸರು ಸವಾರರಿಗೆ ಯಾವ ಸಂದರ್ಭಗಳಲ್ಲಿ ದಂಡ ಹಾಕುವಂತಿಲ್ಲ?

ಕೆಲವು ತಿಂಗಳ ಹಿಂದ ಸಂಚಾರ ಪೊಲೀಸರಿಂದ ವಾಹನ ಸವಾರರಿಗೆ ಅನಗತ್ಯ ತೊಂದರೆಯಾಗುವುದನ್ನು ತಪ್ಪಿಸಲು ವಿವಿಧ ಮಾನದಂಡಗಳನ್ನು ಹಾಕಲಾಗಿದೆ. ಶಿರಸ್ತ್ರಾಣ ಧರಿಸಿಕೊಂಡು ಸಂಚಾರ ನಿಯಮ ಪಾಲನೆ ಮಾಡುತ್ತಾ ಬರುವ ವಾಹನವನ್ನು ಅನಾವಶ್ಯಕವಾಗಿ ತಡೆಯುವಂತೆ ಇಲ್ಲ. ವಾಹನಗಗಳನ್ನು ಪರಿಶೀಲನೆ ನೆಪದಲ್ಲಿ ಅನಗತ್ಯವಾಗಿ ತಡೆಯಬಾರದು. ವಾಹನ ಸಂಚಾರ ನಿಯಮ ಉಲ್ಲಂಘಿಸಿರುವುದರ ಕುರಿತು ವಿಡಿಯೋ ಅಥವಾ ಫೋಟೊ ದಾಖಲೆಯನ್ನು ಪೊಲೀಸರು ಹೊಂದಿರಬೇಕು.

ಕುಡಿದು ವಾಹನ ಚಾಲನೆ ಮಾಡುವವರನ್ನು ತಪಾಸಣೆ ಮಾಡಬಹುದು. ಈ ತಪಾಸಣೆಯನ್ನು ವಿಡಿಯೋ ಮಾಡಿಕೊಳ್ಳಬೇಕು. ಅಂತಾರಾಜ್ಯ ವಾಹನಗಳನ್ನೂ ಅನಗತ್ಯವಾಗಿ ನಿಲ್ಲಿಸಬಾರದು. ಹಳೆ ಕೇಸ್‌ ಇರುವ ವಾಹನಗಳನ್ನು ನಿಲ್ಲಿಸಿ ದಾಖಲೆ ಪರಿಶೀಲನೆ ಮಾಡಬಹುದು.

ದಂಡ ಹಾಕಲು ಅವಕಾಶ

ಸಂಚಾರ ನಿಯಮ ಉಲ್ಲಂಘಿಸುವವರನ್ನು ಹಿಡಿದು ದಾಖಲೆ ಪರಿಶೀಲನೆ ಮಾಡಬೇಕು. ಹೆಲ್ಮೆಟ್‌ ಹಾಕಿದ್ದರೂ ಹೆಡ್‌ಫೋನ್‌, ಇಯರ್‌ ಫೋನ್‌ ಬಳಸಿ ಮಾತನಾಡುತ್ತ ಬಂದರೆ ಅವರನ್ನು ಹಿಡಿದು ದಂಡ ಹಾಕಬೇಕು. ಪ್ರತಿಯೊಬ್ಬ ಸಿಬ್ಬಂಧಿಯೂ ಬಾಡಿ ವೋರ್ನ್‌ ಕ್ಯಾಮೆರಾ ಹಾಕಬೇಕು. ಕದ್ದ ವಾಹನ ಎಂದು ಗೊತ್ತಾದರೆ ಅಂತಹ ವಾಹನ ಹಿಡಿಯಬಹುದು.

ವಿಭಾಗ

    ಹಂಚಿಕೊಳ್ಳಲು ಲೇಖನಗಳು