logo
ಕನ್ನಡ ಸುದ್ದಿ  /  ಕರ್ನಾಟಕ  /  Pfi Bhagya Poster: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿತ್ರದುರ್ಗದಲ್ಲಿ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನ

PFI Bhagya poster: ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಚಿತ್ರದುರ್ಗದಲ್ಲಿ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನ

HT Kannada Desk HT Kannada

Oct 11, 2022 09:47 AM IST

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ವಿವಿಧೆಡೆ ಗೋಚರಿಸಿರುವ ಪಿಎಫ್‌ಐ ಭಾಗ್ಯ ಪೋಸ್ಟರ್‌

    • PFI Bhagya poster: ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿ ಸಂಚರಿಸುತ್ತಿದೆ. ಇದೇ ವೇಳೆ, ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧದ ಪಿಎಫ್‌ಐ ಭಾಗ್ಯ ಪೋಸ್ಟರ್‌ ಅಭಿಯಾನ ಗಮನಸೆಳೆದಿದೆ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ವಿವಿಧೆಡೆ ಗೋಚರಿಸಿರುವ ಪಿಎಫ್‌ಐ ಭಾಗ್ಯ ಪೋಸ್ಟರ್‌
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ನಗರದಲ್ಲಿ ವಿವಿಧೆಡೆ ಗೋಚರಿಸಿರುವ ಪಿಎಫ್‌ಐ ಭಾಗ್ಯ ಪೋಸ್ಟರ್‌

ರಾಹುಲ್‌ ಗಾಂಧಿ ನೇತೃತ್ವದ ಭಾರತ್‌ ಜೋಡೋ ಯಾತ್ರೆ ಚಿತ್ರದುರ್ಗ ಜಿಲ್ಲೆಯಲ್ಲಿದೆ. ಇಂದು ಬೆಳಗ್ಗೆ ಹಿರಿಯೂರು ತಾಲೂಕು ಹರ್ತಿಕೋಟೆಯಿಂದ ಪಾದಯಾತ್ರೆ ಶುರುವಾಗಿದೆ. ಈ ನಡುವೆ, ಚಿತ್ರದುರ್ಗದ ಚಳ್ಳಕೆರೆ ನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಪಿಎಫ್‌ಐ ಭಾಗ್ಯದ ಪೋಸ್ಟರ್‌ ಅಭಿಯಾನ ಗಮನಸೆಳೆದಿದೆ.

ಟ್ರೆಂಡಿಂಗ್​ ಸುದ್ದಿ

Liquid Nitrogen Paan: ಮದುವೆಯಲ್ಲಿ ಲಿಕ್ವಿಡ್ ನೈಟ್ರೋಜನ್ ಪಾನ್ ತಿಂದು 12 ವರ್ಷದ ಬಾಲಕಿ ಹೊಟ್ಟೆಯಲ್ಲಿ ರಂಧ್ರ

Bangalore News?:ಆಸ್ತಿ ತೆರಿಗೆ ಸಂಗ್ರಹ; ಗುರಿ ತಲುಪದ ಬಿಬಿಎಂಪಿ; ತಲುಪಬೇಕಿದ್ದ ಗುರಿ ಏನು? ಸಂಗ್ರಹವಾಗಿದ್ದು ಎಷ್ಟು?

BMTC News: ಬಿಎಂಟಿಸಿ ಬಸ್‌ಗಳ ಮಾರ್ಗ ಫಲಕಗಳಿಗೆ ಹೊಸ ಆಯಾಮ ನೀಡಿದ ಬೆಂಗಳೂರು ವಿದ್ಯಾರ್ಥಿ ಅಮೋಘ್‌ ಸಾಧನೆ!

Mangalore News: ಶಿರಾಡಿ ಘಾಟ್ ನಲ್ಲಿ ಭೀಕರ ಅಪಘಾತ ದಕ್ಷಿಣ ಕನ್ನಡದ ತಾಯಿ, ಮಗ ದುರ್ಮರಣ

ಚಳ್ಳಕೆರೆಯ ವಿವಿಧೆಡೆ ಈ ಪೋಸ್ಟರ್‌ ಗೋಚರಿಸಿದ್ದು, ʻಸಿದ್ರಾಮುಲ್ಲಾನ ಉಗ್ರ ಭಾಗ್ಯ ಮತ್ತು ಲೀಲೆಗಳನ್ನು ತಿಳಿಯಲು ಸ್ಕ್ಯಾನ್‌ ಮಾಡಿʼ ಎಂಬ ಒಕ್ಕಣೆ ಪೋಸ್ಟರ್‌ನ ಕೆಳಭಾಗದಲ್ಲಿದೆ. ಮೇಲ್ಭಾಗದಲ್ಲಿ ʻಪಿಎಫ್‌ಐ ಭಾಗ್ಯʼ ಎಂಬ ಶೀರ್ಷಿಕೆ ಇದೆ. ಅದರ ಎಡ ಮತ್ತು ಬಲ ಬದಿಗೆ ಎರಡು ಕ್ಯೂ ಆರ್‌ ಕೋಡ್‌ಗಳಿವೆ. ಆ ಕ್ಯೂಆರ್‌ ಕೋಡ್‌ಗಳ ಕೆಳಗೆ ಸಿದ್ದರಾಮಯ್ಯ ಟಿಪ್ಪು ಮಾದರಿಯಲ್ಲಿ ಉಡುಪು ಧರಿಸಿ ಖಡ್ಗ ಹಿಡಿದಿರುವ ಫೋಟೋ ಕೂಡ ಇದೆ.

ರಾಹುಲ್‌ ಗಾಂಧಿ ಅವರ ಭಾರತ್‌ ಜೋಡೋ ಯಾತ್ರೆ ಸಾಗುವ ಮಾರ್ಗದಲ್ಲೇ ಈ ಪೋಸ್ಟರ್‌ಗಳು ಗೋಚರಿಸಿವೆ. ಸೋಮವಾರ ತಡರಾತ್ರಿ ಯಾರೋ ಅಪರಿಚಿತರು ಈ ಪೋಸ್ಟರ್‌ಗಳನ್ನು ಅಂಟಿಸಿದ್ದಾರೆ ಎಂಬ ಸಂದೇಹವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.

ಪೇಸಿಎಂ ಅಭಿಯಾನಕ್ಕೆ ಪ್ರತಿ ಅಭಿಯಾನ?

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ವಿರುದ್ಧ ಪೇಸಿಎಂ ಅಭಿಯಾನ ಮಾಡಿದ್ದಕ್ಕೆ ಪ್ರತಿಯಾಗಿ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಈ ಅಭಿಯಾನ ಶುರು ಮಾಡಿರಬಹುದು ಎಂದು ಹೇಳಲಾಗುತ್ತಿದೆ.

ಪೇಸಿಎಂ ಅಭಿಯಾನ ಮಾಡಿದಾಗ 40 ಪರ್ಸೆಂಟ್‌ ಸರ್ಕಾರ ಎಂಬ ಟೀಕೆಯನ್ನು ಕಾಂಗ್ರೆಸ್‌ ನಾಯಕರು ಮಾಡಿದ್ದರು. ಅಲ್ಲದೆ, ಕೆಲಸ ಆಗಬೇಕಾದರೆ ಸಿಎಂಗೆ ಕಮಿಷನ್‌ ನೀಡಬೇಕು ಎಂಬುದನ್ನು ಬಿಂಬಿಸುವ ಕೆಲಸ ಈ ಅಭಿಯಾನದ ಮೂಲಕ ಮಾಡಿದ್ದರು.

ಇದು ಪೋಸ್ಟರ್‌ ಅಭಿಯಾನಗಳ ಹಿನ್ನೆಲೆ

ಸೆಪ್ಟೆಂಬರ್‌ ಕೊನೆಯ ಭಾಗದಲ್ಲಿ ರಾಜ್ಯ ರಾಜಧಾನಿ ಬೆಂಗಳೂರಿನ ತುಂಬ ಪೇಸಿಎಂ ಪೋಸ್ಟರ್‌ ಅಭಿಯಾನ (PAYCM Campaign) ನಡೆದಿತ್ತು. ಇದರಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮುಖವನ್ನು ಹೋಲುವ ಮುಖವೂ ಇತ್ತು. ಇದೇ ರೀತಿಯ ಪೋಸ್ಟರ್‌ - '40% ಸಿಎಂಗೆ ಸ್ವಾಗತ' - ಕಳೆದ ವಾರ ಹೈದರಾಬಾದ್‌ನಲ್ಲಿ ಬಿಜೆಪಿ ಆಯೋಜಿಸಿದ್ದ ಹೈದರಾಬಾದ್ 'ವಿಮೋಚನಾ ದಿನ' ಕಾರ್ಯಕ್ರಮದ ವೇಳೆ ಕಾಣಿಸಿದ್ದವು. ಪೂರ್ಣ ವಿವರಕ್ಕೆ - PayCM Campaign: ಬೆಂಗಳೂರು ತುಂಬ ಪೇಸಿಎಂ ಅಭಿಯಾನ!; ಸಾಮಾಜಿಕ ತಾಣದಲ್ಲಿ ಪ್ರೊಮೋಟ್‌ ಮಾಡ್ತಿದೆ ಕಾಂಗ್ರೆಸ್‌; ಇಲ್ಲಿವೆ ಫೋಟೋ, ವಿಡಿಯೋ ಲಿಂಕ್

ಈ ಪೇಸಿಎಂ ಅಭಿಯಾನಕ್ಕೆ ತೀವ್ರ ಕಿಡಿಕಾರಿರುವ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಪೇಸಿಎಂ ಎಂದರೆ ʼಪೇ ಕಾಂಗ್ರೆಸ್‌ ಮೇಡಂʼ ಎಂದು ವ್ಯಂಗ್ಯವಾಡಿದ್ದಾರೆ. 'ಸ್ಕ್ಯಾಮ್ ರಾಮಯ್ಯ' ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದ ಕಟೀಲ್‌, ಸಿದ್ದರಾಮಯ್ಯ ಅವಧಿಯ ಎಲ್ಲಾ ಹಗರಣಗಳನ್ನು ಬಯಲಿಗೆಳೆಯಲಾಗುವುದು ಎಂದು ಕಿಡಿಕಾರಿದರು. ಅತ್ತ ವಿಧಾನಸಭೆಯಲ್ಲೂ ಪೇಸಿಎಂ ಅಭಿಯಾನ ಭಾರೀ ಸದ್ದು ಮಾಡಿತ್ತು. - PayCM Campaign: ಪೇಸಿಎಂ ಅಂದ್ರೆ ʼಪೇ ಕಾಂಗ್ರೆಸ್‌ ಮೇಡಂʼ ಎಂದರ್ಥ: ಕಟೀಲ್‌ ಕಿಡಿನುಡಿ!

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ