logo
ಕನ್ನಡ ಸುದ್ದಿ  /  ಕರ್ನಾಟಕ  /  Ramanagara News: ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿದ್ದಕ್ಕೆ ಲಂಚ ಕೇಳಿದ ವೈದ್ಯರು, ಇಬ್ಬರು ವೈದ್ಯರನ್ನು ಅಮಾನತು ಮಾಡಿದ ಆರೋಗ್ಯ ಇಲಾಖೆ

Ramanagara News: ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿದ್ದಕ್ಕೆ ಲಂಚ ಕೇಳಿದ ವೈದ್ಯರು, ಇಬ್ಬರು ವೈದ್ಯರನ್ನು ಅಮಾನತು ಮಾಡಿದ ಆರೋಗ್ಯ ಇಲಾಖೆ

HT Kannada Desk HT Kannada

Nov 26, 2022 07:34 PM IST

ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿದ್ದಕ್ಕೆ ಲಂಚ ಕೇಳಿದ ವೈದ್ಯರು, ಇಬ್ಬರು ವೈದ್ಯರ ಅಮಾನತು

    • ಸರಕಾರಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸಿದ್ದಕ್ಕೆ ಅಲ್ಲಿನ ವೈದ್ಯರು ಲಂಚ ಕೇಳಿದ ವಿಡಿಯೋ ವೈರಲ್‌ ಆಗಿದೆ. ಇದೀಗ ಆ ಇಬ್ಬರು ವೈದ್ಯರನ್ನು ಉದ್ಯೋಗದಿಂದ ಅಮಾನತು ಮಾಡಲಾಗಿದೆ. 
ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿದ್ದಕ್ಕೆ ಲಂಚ ಕೇಳಿದ ವೈದ್ಯರು, ಇಬ್ಬರು ವೈದ್ಯರ ಅಮಾನತು
ಆರೋಗ್ಯ ಕೇಂದ್ರದಲ್ಲಿ ಹೆರಿಗೆ ಮಾಡಿದ್ದಕ್ಕೆ ಲಂಚ ಕೇಳಿದ ವೈದ್ಯರು, ಇಬ್ಬರು ವೈದ್ಯರ ಅಮಾನತು

ರಾಮನಗರ: ಸರಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸೇವೆ ಪಡೆಯುವ ಬಡವರನ್ನು ಅಲ್ಲಿನ ಸಿಬ್ಬಂದಿ ವರ್ಗ, ವೈದ್ಯರು ಯಾವ ರೀತಿ ಸುಲಿಗೆ ಮಾಡುತ್ತಾರೆ ಎನ್ನುವುದಕ್ಕೆ ಸಾಕ್ಷಿಯೆಂಬಂತೆ ವಿಡಿಯೋವೊಂದು ಸಾಮಾಜಿಕ ತಾಣಗಳಲ್ಲಿ ವೈರಲ್‌ ಆಗುತ್ತಿದೆ. ಅಲ್ಲಿನ ಇಬ್ಬರು ವೈದ್ಯರು ಮಹಿಳೆಯೊಬ್ಬರ ಹೆರಿಗೆ ಮಾಡಿದ್ದಕ್ಕೆ ಪ್ರತಿಯಾಗಿ ಆರು ಸಾವಿರ ರೂಪಾಯಿ ಲಂಚ ಕೇಳಿದ್ದರು. ಈ ಲಂಚ ಕೇಳಿದ ವಿಡಿಯೋ ವೈರಲ್‌ ಆಗಿತ್ತು. ಇದೀಗ ಆರೋಗ್ಯ ಇಲಾಖೆಯು ಆ ಇಬ್ಬರು ವೈದ್ಯರನ್ನು ಸೇವೆಯಿಂದ ಅಮಾನತು ಮಾಡಿದೆ.

ಟ್ರೆಂಡಿಂಗ್​ ಸುದ್ದಿ

SWRailway Updates: ಬೇಸಿಗೆಯ ಪ್ರಯಾಣಿಕ ದಟ್ಟಣೆ ನಿವಾರಣೆಗೆ ಕರ್ನಾಟಕದಲ್ಲಿ 9 ವಿಶೇಷ ರೈಲು ಸಂಚಾರ; ಭಾರತೀಯ ರೈಲ್ವೆ ವೇಳಾಪಟ್ಟಿ

BMTC Updates; ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ, ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಎಂಟಿಸಿ ವಿಶೇಷ ಬಸ್ ಸಂಚಾರ, ಮಾರ್ಗ ಮತ್ತು ಇತರೆ ವಿವರ

ಕರ್ನಾಟಕ ಹವಾಮಾನ ಮೇ 4; ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ ಸುತ್ತಮುತ್ತ ಅಲ್ಲಲ್ಲಿ ಮಳೆ, ಉಳಿದೆಡೆ ಒಣಹವೆ

ಸಂಪಾದಕೀಯ: ಸಂತ್ರಸ್ತರ ಮೇಲೆ ಪ್ರಶ್ನೆಗಳ ದಾಳಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಬಿಚ್ಚಿಕೊಳ್ಳುತ್ತಿದೆ ಸಮಾಜದ ಕರಾಳ ಮುಖ

ಬಿಡದಿಯ ಮಂಜುನಾಥ್‌ ಎಂಬವರ ಪತ್ನಿಗೆ ನಾಲ್ಕು ದಿನದ ಹಿಂದೆ ಇಲ್ಲಿನ ಆರೋಗ್ಯ ಕೇಂದ್ರದಲ್ಲಿ ಶಸ್ತ್ರಚಿಕಿತ್ಸೆ ಮೂಲಕ ಹೆರಿಗೆ ಮಾಡಿದ್ದಾರೆ. ಬಾಣಂತಿಯನ್ನು ಡಿಸ್‌ಚಾರ್ಜ್‌ ಮಾಡಲು ಆರು ಸಾವಿರ ರೂಪಾಯಿ ಲಂಚ ಕೇಳಿದ್ದಾರೆ. ನನ್ನಲ್ಲಿ ಎರಡು ಸಾವಿರ ರೂಪಾಯಿ ಮಾತ್ರ ಇದೆ ಎಂದಾಗಲೂ "ನಾವು ಎಲ್ಲರಿಗೂ ಎರಡೆರಡು ಸಾವಿರ ರೂ. ನೀಡಬೇಕು, ಆರು ಸಾವಿರ ರೂ. ನೀಡಿʼʼ ಎಂದು ಆ ಡಾಕ್ಟರ್‌ ಹೇಳುತ್ತಾರೆ. ಇದೀಗ ಲಂಚಕ್ಕೆ ಬೇಡಿಕೆ ಇಟ್ಟ ಪ್ರಸೂತಿ ತಜ್ಞರಾದ ಡಾ. ಶಶಿಕಲಾ ಮತ್ತು ಡಾ. ಐಶ್ವರ್ಯ ಅವರನ್ನು ಸೇವೆಯಿಂದ ಅಮಾನತು ಮಾಡಲಾಗಿದೆ.

ವೈದ್ಯರು ಲಂಚ ಕೇಳಿದ ಘಟನೆಯನ್ನು ಮಂಜುನಾಥ್‌ ಅವರು ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದರು. "ನನ್ನ ಬಳಿ ಎರಡು ಸಾವಿರ ರೂ. ಮಾತ್ರ ಇದೆ. ನನಗೆ ಇನ್ನೂ ಸಂಬಳ ಆಗಿಲ್ಲ. ಹಣ ಇಲ್ಲʼʼ ಎಂದು ಮಂಜುನಾಥ್‌ ಹೇಳಿದ್ದಾರೆ. ಈ ಸಂದರ್ಭದಲ್ಲಿ ಮೂರು ಜನರಿಗೆ ಎರಡೆರಡು ಸಾವಿರ ರೂ. ಹಂಚಬೇಕು. ನೀವು ನೀಡಿದ ಹಣದಲ್ಲಿ ಐನೂರು ನೀಡಲು ಆಗುವುದಿಲ್ಲʼʼ ಎಂದು ವೈದ್ಯರು ಹೇಳಿದ್ದು ವಿಡಿಯೋ ರೆಕಾರ್ಡ್‌ನಲ್ಲಿದೆ.

ಇನ್ನು 2 ಸಾವಿರ ಕೊಟ್ಟರೆ ಏನು ಮಾಡುವುದು? ಇಲ್ಲಿ ಎಲ್ಲರಿಗೂ 500 ರೂಪಾಯಿಯಾದರೂ ಹಣ ಕೊಡ್ಬೇಕು. ಹೀಗಾಗಿ ಆರು ಸಾವಿರ ರೂಪಾಯಿ ನೀಡಿದರೂ ಸಾಕಾಗುವುದಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಈ ಎಲ್ಲಾ ದೃಶ್ಯ, ಸಂಭಾಷಣೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಎಲ್ಲಾ ದೃಶ್ಯ, ಸಂಭಾಷಣೆ ಮೊಬೈಲ್‌ ಕ್ಯಾಮರಾದಲ್ಲಿ ಸೆರೆಯಾಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ವೈದ್ಯೆ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಲಂಚ ಪಡೆದ ಇಬ್ಬರು ವೈದ್ಯರನ್ನು ಇದೀಗ ಅಮಾನತು ಮಾಡಲಾಗಿದೆ. ವಿಡಿಯೋ ವೈರಲ್ ಆಗುತ್ತಿದ್ದಂತೆ ಪ್ರಸೂತಿ ತಜ್ಞೆ ಡಾ. ಶಶಿಕಲಾ ಹಾಗೂ ಡಾ. ಐಶ್ವರ್ಯ ಅವರನ್ನು ಅಮಾನತು ಮಾಡಿ ರಾಮನಗರ ಡಿಹೆಚ್ಓ ಆದೇಶ ನೀಡಿದ್ದಾರೆ. ಈ ಪ್ರಕರಣ ಸಂಬಂಧ ಈಗಾಗಲೇ ನೋಟೀಸ್ ನೀಡಲಾಗಿತ್ತು, ಲಂಚ ಪಡೆಯುತ್ತಿರುವ ಬಗ್ಗೆ ವೀಡಿಯೋದಲ್ಲಿ ಸ್ಪಷ್ಟವಾಗಿದೆ. ಹಾಗಾಗಿ ಇಬ್ಬರನ್ನೂ ಅಮಾನತು ಮಾಡಿದ್ದೇವೆ. ಈ ಬಗ್ಗೆ ಸಂಪೂರ್ಣ ವರದಿ ಸಂಗ್ರಹಿಸಿ ಕ್ರಮಕೈಗೊಳ್ಳುತ್ತೇವೆ ಅಂತ ಡಿಹೆಚ್ಓ ಹೇಳಿದ್ದಾರೆ.

ಇದೇ ರೀತಿ ಈ ಆಸ್ಪತ್ರೆಯಲ್ಲಿ ಯಾರಿಗೆಲ್ಲ ಹಣ ನೀಡಲಾಗುತ್ತಿತ್ತು, ಹಣ ಹಂಚಿಕೆಯ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಅಧಿಕಾರಿಗಳು ಹೇಳಿದ್ದಾರೆ. ಮಂಜುನಾಥ್‌ ಅವರು ಸರಕಾರಿ ಆಸ್ಪತ್ರೆಯ ಲಂಚದ ಹಾವಳಿ ಕುರಿತು ವಿಡಿಯೋ ಮಾಡಿರುವುದಕ್ಕೆ ಶ್ಲಾಘನೆಯೂ ವ್ಯಕ್ತವಾಗಿದೆ. ಈ ರೀತಿ ಮಾಡಿದರೆ ಮಾತ್ರ ಲಂಚದಾಹಿ ವೈದ್ಯರಿಗೆ ಬುದ್ಧಿ ಬರೋದು ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.

    ಹಂಚಿಕೊಳ್ಳಲು ಲೇಖನಗಳು