BMTC Updates; ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ, ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಎಂಟಿಸಿ ವಿಶೇಷ ಬಸ್ ಸಂಚಾರ, ಮಾರ್ಗ ಮತ್ತು ಇತರೆ ವಿವರ
May 04, 2024 09:27 AM IST
ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯಗಳು ನಡೆಯುವಾಗ ಆ ಭಾಗದಲ್ಲಿ ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಎಂಟಿಸಿ ವಿಶೇಷ ಬಸ್ ಸಂಚಾರ ನಡೆಸಲಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮೇ 4 ರಿಂದ ನಡೆಯುವ ಐಪಿಎಲ್ ಪಂದ್ಯಗಳಿಗಾಗಿ ಬಿಎಂಟಿಸಿ ವಿಶೇಷ ಬಸ್ ಸೇವೆಯನ್ನು ಪ್ರಾರಂಭಿಸುತ್ತಿದೆ. ಮೂರು ಪಂದ್ಯಗಳು ಬೆಂಗಳೂರಿನಲ್ಲಿ ನಡೆಯುತ್ತಿದ್ದು, ಪಂದ್ಯ ನಡೆಯುವ ದಿನಗಳಲ್ಲಿ ಈ ವಿಶೇಷ ಬಸ್ ಸಂಚಾರ ಇರಲಿದೆ. ಮಾರ್ಗ ಮತ್ತು ಇತರೆ ವಿವರ.
ಬೆಂಗಳೂರು: ಐಪಿಎಲ್ ಪಂದ್ಯಗಳು ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ದಿನಗಳಲ್ಲಿ ಅಂದರೆ, ಇಂದು (ಮೇ 4), 12 ಮತ್ತು 18 ರಂದು ಕ್ರೀಡಾಂಗಣ ಸಮೀಪದಿಂದ ನಗರದ ವಿವಿಧ ಭಾಗಗಳಿಗೆ ವಿಶೇಷ ಬಸ್ ಸೇವೆಗಳನ್ನು ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಘೋಷಿಸಿದೆ. ಈ ಬಸ್ ಸೇವೆಯಿಂದ ಐಪಿಎಲ್ ಪಂದ್ಯ ವೀಕ್ಷಿಸಲು ಬರುವ ಐಪಿಎಲ್ ಅಭಿಮಾನಿಗಳಿಗೆ ಆರ್‌ಸಿಬಿ ಅಭಿಮಾನಿಗಳಿಗೆ ಅನುಕೂಲವಾಗಲಿದೆ.
ವಿಶೇಷವಾಗಿ ಸಂಚಾರದಟ್ಟಣೆ ಹೆಚ್ಚಿರುವ ಸಂದರ್ಭದಲ್ಲಿ ಕ್ರೀಡಾಂಗಣಕ್ಕೆ ಪ್ರಯಾಣಿಸುವಾಗ ಎದುರಾಗುವ ಸವಾಲುಗಳಿಗೆ ಪರಿಹಾರವಾಗಲಿದೆ. ಬಸ್ ಕಾರ್ಯಾಚರಣೆಗಳನ್ನು ವಿಸ್ತರಿಸುವ ಮೂಲಕ, ಕ್ರೀಡಾಂಗಣದ ಪ್ರದೇಶದ ಸುತ್ತಲಿನ ಸಂಚಾರ ದಟ್ಟಣೆಯನ್ನು ನಿವಾರಿಸಲು ಮತ್ತು ಪ್ರೇಕ್ಷಕರಿಗೆ ಆರಾಮದಾಯಕ ಪ್ರಯಾಣದ ಅನುಭವವನ್ನು ಒದಗಿಸುವ ಗುರಿಯನ್ನು ಹೊಂದಿರುವುದಾಗಿ ಬಿಎಂಟಿಸಿ ಹೇಳಿಕೊಂಡಿದೆ.
ಯಾವೆಲ್ಲ ಮಾರ್ಗದಲ್ಲಿ ಬಿಎಂಟಿಸಿ ಬಸ್ ಸೇವೆ
SBS 1K - ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕಾಡುಗೋಡಿ - ಮಾರ್ಗ: ಎಚ್‌ಎಎಲ್ ರಸ್ತೆ
G2 - ಚಿನ್ನಸ್ವಾಮಿ ಕ್ರೀಡಾಂಗಣದಿಂದ ಸರ್ಜಾಪುರ
G3 - ಚಿನ್ನಸ್ವಾಮಿ ಕ್ರೀಡಾಂಗಣದಿಂದ ಎಲೆಕ್ಟ್ರಾನಿಕ್ ಸಿಟಿ ಮಾರ್ಗ: ಹೊಸೂರು ರಸ್ತೆ
G4- ಚಿನ್ನಸ್ವಾಮಿ ಕ್ರೀಡಾಂಗಣದಿಂದ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
G6 - ಚಿನ್ನಸ್ವಾಮಿ ಕ್ರೀಡಾಂಗಣದಿಂದ ಕೆಂಗೇರಿ ಎಚ್‌ಬಿ ಕ್ವಾರ್ಟರ್ಸ್- ಮಾರ್ಗ: ಎಂಸಿಟಿಸಿ ನಾಯಂಡಹಳ್ಳಿ
G7 ಚಿನ್ನಸ್ವಾಮಿ ಕ್ರೀಡಾಂಗಣದಿಂದ ಜನಪ್ರಿಯ ಟೌನ್‌ಶಿಪ್ - ಮಾರ್ಗ: ಮಾಗಡಿ ರಸ್ತೆ
G9- ಚಿನ್ನಸ್ವಾಮಿ ಕ್ರೀಡಾಂಗಣದಿಂದ ಯಲಹಂಕ 5 ನೇ ಹಂತ
G10- ಚಿನ್ನಸ್ವಾಮಿ ಕ್ರೀಡಾಂಗಣದಿಂದ ಆರ್‌ಕೆ ಹೆಗ್ಗಡೆ ನಗರ - ಮಾರ್ಗ: ನಾಗವಾರ, ಟ್ಯಾನರಿ ರೋಡ್
G11- ಬಾಗಲೂರು (ಹೆಣ್ಣೂರು ರೋಡ್)
317G -ಹೊಸಕೋಟೆ
13 - ಬನಶಂಕರಿ
ಪಾರ್ಕಿಂಗ್ ಕಿರಿಕಿರಿ, ಸಂಚಾರ ದಟ್ಟಣೆ ನಿವಾರಣೆಗೆ ಬಿಎಂಟಿಸಿ ಉಪಕ್ರಮ
ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ಈ ಉಪಕ್ರಮದೊಂದಿಗೆ, ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯ ನಡೆಯುವಾಗ ಸುತ್ತಮುತ್ತಲಿನ ರಸ್ತೆಯಲ್ಲಿ ಉಂಟಾಗಬಹುದಾದ ಸಂಚಾರ ದಟ್ಟಣೆ, ಟ್ರಾಫಿಕ್ ಕಿರಿಕಿರಿ ನಿವಾರಿಸುವುದಕ್ಕೆ ಸಂಚಾರ ಪೊಲೀಸರ ಜೊತೆಗೆ ಕೈ ಜೋಡಿಸಿದೆ. ಈ ರೀತಿ ದೊಡ್ಡ ಪ್ರಮಾಣದ ಸಾರ್ವಜನಿಕ ಕಾರ್ಯಕ್ರಮ ನಡೆಯುವಾಗ ಸಾರ್ವಜನಿಕ ಸಾರಿಗೆ ಬಳಕೆಯನ್ನು ಉತ್ತೇಜಿಸುವ ನಿಟ್ಟಿನಲ್ಲಿಯೂ ಬಿಎಂಟಿಸಿಯ ನಡೆ ಮಹತ್ವ ಪಡೆದುಕೊಂಡಿದೆ.
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.
ಓದಬಹುದಾದ ಇನ್ನಷ್ಟು ಸ್ಟೋರಿಗಳು
1) ತಮಿಳುನಾಡು ಕ್ರಿಕೆಟಿಗರ ಆಯ್ಕೆ ವಿಚಾರದಲ್ಲಿ ಬಿಸಿಸಿಐ ಪಕ್ಷಪಾತ; ನಟರಾಜನ್ ಕೈಬಿಟ್ಟಿದ್ದಕ್ಕೆ ಮಾಜಿ ಆಟಗಾರ ಗಂಭೀರ ಆರೋಪ
2) ರೊವ್ಮನ್ ಪೊವೆಲ್ ನಾಟೌಟ್ ಆಗಿದ್ದರೂ ಗೆಲ್ತಿರಲಿಲ್ಲ ರಾಜಸ್ಥಾನ; ಇನ್ನಾದರೂ ಈ ನಿಯಮಕ್ಕೆ ತರಬೇಕು ತಿದ್ದುಪಡಿ
3) ರೋಹಿತ್ ಶರ್ಮಾ ನಂತರ ಭಾರತ ತಂಡದ ನಾಯಕತ್ವ ವಹಿಸಲು ತಾಕತ್ತಿರುವ ನಾಲ್ವರು ಕ್ರಿಕೆಟಿಗರನ್ನು ಹೆಸರಿಸಿದ ಇರ್ಫಾನ್ ಪಠಾಣ್- ವಿವರ ಓದಿಗೆ ಇಲ್ಲಿ ಕ್ಲಿಕ್ ಮಾಡಿ
4) ವಿರಾಟ್ ಕೊಹ್ಲಿ ಸ್ಟ್ರೈಕ್ರೇಟ್ ಕುರಿತ ಪ್ರಶ್ನೆ; ನಕ್ಕು ಸುಮ್ಮನಾದ ರೋಹಿತ್ ಶರ್ಮಾ, ಅದೆಲ್ಲಾ ಮ್ಯಾಟರೇ ಅಲ್ಲ ಎಂದ ಅಗರ್ಕರ್