logo
ಕನ್ನಡ ಸುದ್ದಿ  /  ಕರ್ನಾಟಕ  /  Sharavathi Project: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ; ಸರ್ಕಾರದ ಅನುಮೋದನೆಗೆ ಹೊಸ ಪ್ರಸ್ತಾವನೆ

Sharavathi project: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ; ಸರ್ಕಾರದ ಅನುಮೋದನೆಗೆ ಹೊಸ ಪ್ರಸ್ತಾವನೆ

HT Kannada Desk HT Kannada

Feb 02, 2023 04:34 PM IST

ವಿಕಾಸ ಸೌಧದಲ್ಲಿ ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್.‌ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ್‌ ನಾಯ್ಕ್‌ ಮತ್ತು ಅಧಿಕಾರಿಗಳು ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರವಾಗಿ ಸಭೆ ನಡೆಸಿದರು.

  • Sharavathi project: ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಬಿಡುಗಡೆಗೆ ಕೇಂದ್ರ ಸರ್ಕಾರದ ಅನುಮೋದನೆಗಾಗಿ ಹೊಸ ಪ್ರಸ್ತಾವನೆ ಸಲ್ಲಿಸಲು ರಾಜ್ಯದ ಉನ್ನತ ಮಟ್ಟದ ಸಮಿತಿ ಗುರುವಾರ ತೀರ್ಮಾನಿಸಿದೆ.  

ವಿಕಾಸ ಸೌಧದಲ್ಲಿ ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್.‌ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ್‌ ನಾಯ್ಕ್‌ ಮತ್ತು ಅಧಿಕಾರಿಗಳು ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರವಾಗಿ ಸಭೆ ನಡೆಸಿದರು.
ವಿಕಾಸ ಸೌಧದಲ್ಲಿ ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್.‌ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ್‌ ನಾಯ್ಕ್‌ ಮತ್ತು ಅಧಿಕಾರಿಗಳು ಶರಾವತಿ ಮುಳುಗಡೆ ಸಂತ್ರಸ್ತರ ವಿಚಾರವಾಗಿ ಸಭೆ ನಡೆಸಿದರು.

ಬೆಂಗಳೂರು: ಶಿವಮೊಗ್ಗ ಜಿಲ್ಲೆಯ ಶರಾವತಿ ನದಿ ಯೋಜನೆಯಿಂದಾಗಿ ನಿರಾಶ್ರಿತರಾದ 11,000 ರಿಂದ 12,000 ಕುಟುಂಬಗಳ ಪರವಾಗಿ ಸುಮಾರು 9,600 ಎಕರೆ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡಲು ಮತ್ತು ದಶಕಗಳ ಹಿಂದೆ ಪುನರ್ವಸತಿ ಕಲ್ಪಿಸಲು ತಯಾರಿಸಿದ ಮನವಿಯೊಂದಿಗೆ ಕೇಂದ್ರವನ್ನು ಸಂಪರ್ಕಿಸಲು ರಾಜ್ಯ ಸರ್ಕಾರದ ಉನ್ನತ ಮಟ್ಟದ ಸಮಿತಿ ಗುರುವಾರ ನಿರ್ಧರಿಸಿದೆ.

ಟ್ರೆಂಡಿಂಗ್​ ಸುದ್ದಿ

Ambulance Strike: ಅನಿರ್ಧಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿದ 108 ಆರೋಗ್ಯ ಕವಚ ಸಿಬ್ಬಂದಿ; ಸಚಿವರ ಮಾತುಕತೆ ಯಶಸ್ವಿ

ಕೈಮಗ್ಗ ಜವಳಿ ತಂತ್ರಜ್ಞಾನ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ್ ಪ್ರವೇಶ, ಯಾರಿಗೆ ಉಂಟು ಅವಕಾಶ

ಕರ್ನಾಟಕದ 2ನೇ ಹಂತದ ಮತದಾನ ಮುಕ್ತಾಯ, ಘರ್ಷಣೆ, ಬಿಸಿಲ ನಡುವೆ ಭಾರೀ ಹಕ್ಕು ಚಲಾವಣೆ

Bangalore News: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನ; ಎಸ್‌ಐಟಿ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ

ವಿಕಾಸ ಸೌಧದಲ್ಲಿ ಈ ಕುರಿತು ಗೃಹ ಸಚಿವ ಅರಗ ಜ್ಞಾನೇಂದ್ರ ಮತ್ತು ಮಾಜಿ ಸಿಎಂ ಬಿ.ಎಸ್.‌ಯಡಿಯೂರಪ್ಪ, ಸಂಸದ ಬಿ.ವೈ.ರಾಘವೇಂದ್ರ, ಶಾಸಕರಾದ ಹರತಾಳು ಹಾಲಪ್ಪ, ಅಶೋಕ್‌ ನಾಯ್ಕ್‌ ಮತ್ತು ಅಧಿಕಾರಿಗಳು ಸಭೆ ನಡೆಸಿದರು. ಶರಾವತಿ ಮುಳುಗಡೆ ಸಂತ್ರಸ್ತರಿಗೆ ಭೂಮಿ ಬಿಡುಗಡೆಗೆ ಸರ್ಕಾರದ ಅನುಮೋದನೆಗಾಗಿ ಹೊಸ ಪ್ರಸ್ತಾವನೆ ಸಲ್ಲಿಸಲು ತೀರ್ಮಾನಿಸಲಾಗಿದೆ.

ಸಭೆಯ ಮು‍ಖ್ಯಾಂಶಗಳು ಹೀಗಿವೆ..

  • ಸರ್ಕಾರದ 27 ಆದೇಶಗಳಲ್ಲಿ ಪುನರ್ವಸತಿಗೆ ಬಿಡುಗಡೆಯಾದ ಪ್ರದೇಶ 9,119 ಎಕರೆ ಎಂದು ಉಲ್ಲೇಖವಿದೆ. ಇದನ್ನು ಕೇಂದ್ರ ಸರ್ಕಾರದ ಆದೇಶಕ್ಕೆ ಸಲ್ಲಿಸಬೇಕಾಗಿದೆ.
  • 98 ಪ್ರಸ್ತಾವಗಳಲ್ಲಿ ಅಳತೆ ಮಾಡಿದ್ದ ವಿಸ್ತೀರ್ಣ 9,653 ಎಕರೆಯಾಗಿತ್ತದೆ. ಸ್ಥಳ ಪರೀಶಿಲನೆ ನಡೆಸಿ ಅಳತೆ ಮಾಡಿರುವ ವಿಸ್ತೀರ್ಣ 10315 ಎಕರೆಯಾಗಿರುತ್ತದೆ.
  • ಸರ್ಕಾರಿ ಅದೇಶ ಗಳಲ್ಲಿ ಬಿಡುಗಡೆಯಾಗಿರುವ ವಿಸ್ತೀರ್ಣಕ್ಕಿಂತ ಅಂದಾಜು 1196 ಎಕರೆಯ ಹೆಚ್ಚು ವಿಸ್ತೀರ್ಣ ಪ್ರಸ್ತಾವನೆಗಳಲ್ಲಿ ಬಂದಿದ್ದು ಈ ಹೆಚ್ಚವರಿ ವಿಸ್ತೀರ್ಣವನ್ನು ಸರ್ಕಾರದ ಗಮನಕ್ಕೆ ತರಬೇಕಾಗಿದೆ.
  • ಈಗಾಗಲೇ 15 ರಿಂದ 20 ಗ್ರಾಮಗಳಲ್ಲಿ ಸರ್ವೆ ಮಾಡಬೇಕೆಂದು ಹೊಸದಾಗಿ ಅರ್ಜಿಗಳು ಬಂದಿದ್ದು ಮುಂದೆಯೂ ಸಹ ಹೊಸ ಅರ್ಜಿಗಳು ಬರುವ ಸಂಭವವಿದ್ದು ಈ ಬಗ್ಗೆ ಹೊಸದಾಗಿ ನಿರ್ಣಯ ಕೈಗೊಳ್ಳಲು ಸಭೆಯಲ್ಲಿ ತೀರ್ಮಾನ‌ ಮಾಡಲಾಯಿತು.

ಸಭೆಯ ಬಳಿಕ ನಾಯಕರು ಏನು ಹೇಳಿದ್ರು?

ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಯಡಿಯೂರಪ್ಪ, ಅರಣ್ಯ ಭೂಮಿಯಲ್ಲಿ ಇನ್ನೂ ಹಕ್ಕು ಪಡೆಯದಿರುವ ನಿರಾಶ್ರಿತ ಕುಟುಂಬಗಳ ಪರವಾಗಿ ಅರಣ್ಯ ಭೂಮಿಯನ್ನು ಡಿನೋಟಿಫೈ ಮಾಡುವಂತೆ ಕೇಂದ್ರಕ್ಕೆ ಹೊಸ ಪ್ರಸ್ತಾವನೆಯನ್ನು ಕಳುಹಿಸಲಾಗುವುದು ಎಂದು ಹೇಳಿದರು.

"ನಾವು ಕೇಂದ್ರ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವ ಭೂಪೇಂದರ್ ಯಾದವ್ ಅವರನ್ನು ಭೇಟಿ ಮಾಡಿದ್ದೇವೆ ಮತ್ತು ಸುಮಾರು 11,000 ರಿಂದ 12,000 ಸ್ಥಳಾಂತರಗೊಂಡ ಜನರ (ಕುಟುಂಬಗಳು) ಸಂಕಟದ ಬಗ್ಗೆ ತಿಳಿಸಿದ್ದೇವೆ. ಜಮೀನು ಸರ್ವೆ ಮಾಡಿ ಪ್ರಸ್ತಾವನೆ ಕಳುಹಿಸುವಂತೆ ತಿಳಿಸಿದ್ದಾರೆ’ ಎಂದು ಯಡಿಯೂರಪ್ಪ ಹೇಳಿದರು.

ಭೂಮಿಯಲ್ಲಿ ವಾಸಿಸುವವರಿಗೆ ಮಾಲೀಕತ್ವದ ಹಕ್ಕು ಸಿಕ್ಕಿಲ್ಲ. ಇದು ಭೂರಹಿತರಿಗೆ ಸಮಾನವಾಗಿದೆ. ಜಿಲ್ಲಾಡಳಿತವು ಸರ್ವೆ ಪೂರ್ಣಗೊಳಿಸಿ 9,600 ಎಕರೆ ಜಮೀನಿನಲ್ಲಿ ಮಾಲೀಕತ್ವ ನೀಡಲು ಪ್ರಸ್ತಾವನೆ ಸಿದ್ಧಪಡಿಸಿದೆ. ಇಂದೇ ಪ್ರಸ್ತಾವನೆ ಕಳುಹಿಸುತ್ತೇವೆ ಎಂದು ಯಡಿಯೂರಪ್ಪ ಹೇಳಿದರು.

ಗಮನಿಸಬಹುದಾದ ಸುದ್ದಿಗಳು

ಹದಿಹರೆಯದಲ್ಲಿ ಹೊಂಗನಸುಗಳು ಸಹಜ. ಮನಸ್ಸಿನ ಭಾವನೆಗಳು ಬಹಳ ಸೂಕ್ಷ್ಮವಾಗಿರುತ್ತವೆ. ಅದರಲ್ಲೂ ಹದಿಹರೆಯದಲ್ಲಿ ಹುಡುಗರಿಗೆ ಹುಡುಗಿಯರನ್ನು ಕಂಡಾಗ, ಹುಡುಗಿಯರಿಗೆ ಹುಡುಗರನ್ನು ಕಂಡಾಗ ಉಂಟಾಗುವ ಭಾವನಾ ವ್ಯತ್ಯಾಸಗಳು ಸೂಕ್ಷ್ಮವಾದವು. ಅಂತಹ ಸನ್ನಿವೇಶದಲ್ಲಿ ಒಂದು ಪರೀಕ್ಷಾ ಕೊಠಡಿಯಲ್ಲಿ 50 ವಿದ್ಯಾರ್ಥಿನಿಯರು, ಅವರ ನಡುವೆ ಒಬ್ಬನೇ ಒಬ್ಬ ವಿದ್ಯಾರ್ಥಿ! ವಿವರ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

Cyber fraud: ಆರೋಪಿಗಳು ಅಕ್ರಮ ಪ್ರೀ-ಹೋಸ್ಟೆಡ್‌ ಗೇಮಿಂಗ್‌ ವೆಬ್‌ಸೈಟ್‌ ಮೂಲಕ ದೇಶಾದ್ಯಂತ ವಂಚನೆ ಎಸಗುತ್ತಿದ್ದರು. ಆರೋಪಿಗಳನ್ನು ಶ್ರೀಯಾನ್ಶ್‌ ಚಂದ್ರಶೇಖರ್‌, ಆಯುಷ್‌ ದೇವಾಂಗನ್‌, ಯಶ್‌ ಗಣವೀರ್‌ ಎಂದು ಗುರುತಿಸಲಾಗಿದೆ. ಇವರು ರಾಯ್‌ಪುರ ಮತ್ತು ಬೆಂಗಳೂರು ಕೇಂದ್ರಿತವಾಗಿ ಈ ವಂಚನಾ ಕೃತ್ಯಗಳನ್ನು ಎಸಗುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಪೂರ್ಣ ವರದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು