logo
ಕನ್ನಡ ಸುದ್ದಿ  /  ಕರ್ನಾಟಕ  /  Svym Jnanadeepa: ಮಕ್ಕಳ ಆಲೋಚನೆಗಳಲ್ಲಿ ವೈಜ್ಞಾನಿಕ ಹಿನ್ನೆಲೆ ಇರಲಿ

SVYM Jnanadeepa: ಮಕ್ಕಳ ಆಲೋಚನೆಗಳಲ್ಲಿ ವೈಜ್ಞಾನಿಕ ಹಿನ್ನೆಲೆ ಇರಲಿ

HT Kannada Desk HT Kannada

Dec 09, 2022 07:20 AM IST

ಸರಕಾರಿ ಪ್ರೌಢಶಾಲೆ ಚಿಮ್ಮಲಗಿಯ ಮುಖ್ಯೋಪಾಧ್ಯಾಯ ನಾರಾಯಣ ಬಾಬಾನಗರ ವಿಜ್ಞಾನ ಸ್ಪರ್ಧೆಗಳಿಗೆ ಸ್ಪರ್ಧೆ ಹೇಗೆ ? ಎಂಬ ವಿಷಯವನ್ನು ಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ಪ್ರಸ್ತುತಿ ಮಾಡಿದರು.

  • SVYM Jnanadeepa: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ಚಿಮ್ಮಲಗಿಯ ಮುಖ್ಯೋಪಾಧ್ಯಾಯ ನಾರಾಯಣ ಬಾಬಾನಗರ ವಿಜ್ಞಾನ ಸ್ಪರ್ಧೆಗಳಿಗೆ ಸ್ಪರ್ಧೆ ಹೇಗೆ ? ಎಂಬ ವಿಷಯ ಪ್ರಸ್ತುತಿ ಮಾಡಿದರು.

ಸರಕಾರಿ ಪ್ರೌಢಶಾಲೆ ಚಿಮ್ಮಲಗಿಯ ಮುಖ್ಯೋಪಾಧ್ಯಾಯ ನಾರಾಯಣ ಬಾಬಾನಗರ ವಿಜ್ಞಾನ ಸ್ಪರ್ಧೆಗಳಿಗೆ ಸ್ಪರ್ಧೆ ಹೇಗೆ ? ಎಂಬ ವಿಷಯವನ್ನು ಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ಪ್ರಸ್ತುತಿ ಮಾಡಿದರು.
ಸರಕಾರಿ ಪ್ರೌಢಶಾಲೆ ಚಿಮ್ಮಲಗಿಯ ಮುಖ್ಯೋಪಾಧ್ಯಾಯ ನಾರಾಯಣ ಬಾಬಾನಗರ ವಿಜ್ಞಾನ ಸ್ಪರ್ಧೆಗಳಿಗೆ ಸ್ಪರ್ಧೆ ಹೇಗೆ ? ಎಂಬ ವಿಷಯವನ್ನು ಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ ಏರ್ಪಡಿಸಿದ್ದ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಕಾರ್ಯಕ್ರಮದಲ್ಲಿ ಪ್ರಸ್ತುತಿ ಮಾಡಿದರು.

ಧಾರವಾಡ: ಮಕ್ಕಳು ಕಾಣುವುದನ್ನು ಕುತೂಹಲದ ಕಣ್ಣಿನಿಂದ ಕಾಣುವಂತಾಗಬೇಕು ಎಂಬ ಕಿವಿಮಾತನ್ನು ಹೇಳುವ ಮೂಲಕ ಮಕ್ಕಳಿಗೆ ಲಭ್ಯ ಇರುವಂತಹ ವಿಜ್ಞಾನ ಮತ್ತು ಗಣಿತ ಚಟುವಟಿಕೆಗಳ ಮೇಲೆ ಬೆಳಕು ಚೆಲ್ಲಿದರು ಸರಕಾರಿ ಪ್ರೌಢಶಾಲೆ ಚಿಮ್ಮಲಗಿಯ ಮುಖ್ಯೋಪಾಧ್ಯಾಯ ನಾರಾಯಣ ಬಾಬಾನಗರ.

ಟ್ರೆಂಡಿಂಗ್​ ಸುದ್ದಿ

BMTC Updates; ಬೆಂಗಳೂರಿನಲ್ಲಿ ಐಪಿಎಲ್ ಪಂದ್ಯ, ಸಂಚಾರ ದಟ್ಟಣೆ ಕಡಿಮೆ ಮಾಡಲು ಬಿಎಂಟಿಸಿ ವಿಶೇಷ ಬಸ್ ಸಂಚಾರ, ಮಾರ್ಗ ಮತ್ತು ಇತರೆ ವಿವರ

ಕರ್ನಾಟಕ ಹವಾಮಾನ ಮೇ 4; ಬೆಂಗಳೂರು, ಮೈಸೂರು, ಮಂಡ್ಯ, ಕೋಲಾರ ಸುತ್ತಮುತ್ತ ಅಲ್ಲಲ್ಲಿ ಮಳೆ, ಉಳಿದೆಡೆ ಒಣಹವೆ

ಸಂಪಾದಕೀಯ: ಸಂತ್ರಸ್ತರ ಮೇಲೆ ಪ್ರಶ್ನೆಗಳ ದಾಳಿ, ಪ್ರಜ್ವಲ್ ರೇವಣ್ಣ ಲೈಂಗಿಕ ಹಗರಣದಲ್ಲಿ ಬಿಚ್ಚಿಕೊಳ್ಳುತ್ತಿದೆ ಸಮಾಜದ ಕರಾಳ ಮುಖ

ಬೆಂಗಳೂರು ಎಡಿಎ ರಂಗಮಂದಿರದಲ್ಲಿ ಕಲಾವಿದೆ ವಿದ್ಯಾಶ್ರೀ ಎಚ್‌ಎಸ್ ಅವರ ಭರತನಾಟ್ಯ ರಂಗಾರೋಹಣ ಇಂದು

ಅವರು ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್, ಧಾರವಾಡ ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗಾಗಿ ಬುಧವಾರ (ಡಿ.7) ಏರ್ಪಡಿಸಿದ ಜ್ಞಾನದೀಪ ವೆಬಿನಾರ್‌ನಲ್ಲಿ ವಿಜ್ಞಾನ ಸ್ಪರ್ಧೆಗಳಿಗೆ ಸ್ಪರ್ಧೆ ಹೇಗೆ ? ಎಂಬ ವಿಷಯ ಪ್ರಸ್ತುತಿ ಮಾಡಿದರು.

NCERT ಯಿಂದ ಪ್ರೌಢಶಾಲೆಯ ಮಕ್ಕಳಿಗೆ ನಡೆಸಲಾಗುವ ವಿಜ್ಞಾನ ಪ್ರದರ್ಶನ, ಪ್ರಾಥಮಿಕ ಮತ್ತು ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಇನಸ್ಪೈಯರ್‌ ಅವಾರ್ಡ್ ಅಥವಾ ಮಾನಕ ಎಂದು ಕರೆಯಲಾಗುವ ಕಾರ್ಯಕ್ರಮ , ವಿಜ್ಞಾನ ನಾಟಕ ಸ್ಪರ್ಧೆ , ಮಕ್ಕಳ ವಿಜ್ಞಾನ ಗೋಷ್ಠಿ , ಮಕ್ಕಳ ವಿಜ್ಞಾನ ಸಮಾವೇಶ, ಗ್ರಾಮೀಣ ತಂತ್ರಜ್ಞಾನ ರಸಪ್ರಶ್ನೆ ಹೀಗೆ ತಂತ್ರಜ್ಞಾನ ಆಧಾರಿತ ಸ್ಪರ್ಧೆ ಗಣಿತ ಮತ್ತು ವಿಜ್ಞಾನ ರಸಪ್ರಶ್ನೆ ಸ್ಪರ್ಧೆ ಇತ್ಯಾದಿಗಳ ಕುರಿತು ಮಾಹಿತಿಯನ್ನು ನೀಡಿದರು . ಇನಸ್ಪೈಯರ್‌ ಅವಾರ್ಡ್‌ ಕುರಿತು ಜಾಲತಾಣದಲ್ಲಿ ಮಾಹಿತಿ ಲಭ್ಯ ಇದನ್ನು ಮಕ್ಕಳು ಗಮನಿಸಬಹುದು ಎಂದರು.

ವೆಬಿನಾರ್‌ನಲ್ಲಿ ಪಾಲ್ಗೊಂಡ ಮಕ್ಕಳು ಮತ್ತು ಪಾಲಕರ ಒಂದು ನೋಟ

ಇದಕ್ಕೂ ಮೊದಲು ಮಕ್ಕಳು ಸುತ್ತಲಿನ ನಿಸರ್ಗದ ಚಟುವಟಿಕೆಗಳನ್ನು ಕೂಲಂಕಷವಾಗಿ ಗಮನಿಸುವುದನ್ನು ರೂಢಿಸಿಕೊಳ್ಳಬೇಕು. ಹೀಗೆ ವೈಚಾರಿಕತೆಯಿಂದ ವೈಜ್ಞಾನಿಕತೆಯೆಡೆಗೆ ಸಾಗುವತ್ತ ನಮ್ಮ ಗಮನ ಹರಿಸಬೇಕು ಎಂಬ ಕಿವಿಮಾತು ಹೇಳಿದರು.

ಸಮಸ್ಯೆಗಳ ಗುರುತಿಸುವಿಕೆಯ ಐಡಿಯಾ ಜೆನರೇಷನ್ ಕಾಂಪಿಟೆಶನ್ ಸ್ಪರ್ದೆ ಮಾಡಿ ಪಟ್ಟಿ ತಯಾರಿಸುವುದು. ಅದರಿಂದ ನಿಸರ್ಗದ ಚಟುವಟಿಕೆಗಳಾದ ತೆಂಗಿನ ಕಾಯಿ ಕೀಳುವುದು , ಬೆರಣಿ ಉರಿಸುವಿಕೆಯಿಂದ ಹೊಗೆ ಕಡಿಮೆಗೊಳಿಸಬಹುದು, ಇಂತಹ ವಿಷಯಗಳನ್ನು ಹುಡುಕುವುದೇ ಇನ್ನೋವೇಷನ್ ಹಂತ ಇಂತವುಗಳನ್ನು ಸೂಕ್ಷ್ಮವಾಗಿ ಗಮನಿಸಬೇಕು. ಶಾಲೆಯಲ್ಲಿ ಮಕ್ಕಳಿಗೆ ಹೊಳೆಯುವ ನವ ಆವಿಷ್ಕಾರಗಳಿಗೆ ಪೂರಕವಾಗುವ ವಿಷಯಗಳನ್ನು ಸಂಗ್ರಹಿಸುವ ಪೆಟ್ಟಿಗೆ ಇಡುವ ಮೂಲಕ ಮಕ್ಕಳು ವೈಜ್ಞಾನಿಕತೆಯತ್ತ ತೆರೆದುಕೊಳ್ಳಲು ಅವಕಾಶ ನೀಡಬೇಕು ಎಂದು ಅಭಿಪ್ರಾಯ ಪಟ್ಟರು.

ತೆಂಗಿನ ಹಾಲು ಸಂಗ್ರಹಿಸುವ ಮಾದರಿ, ಜೋಳದ ಶೇಖರಣೆಗೆ ಬ್ಲೀಚಿಂಗ್ ಪೌಡರ ಬದಲಾಗಿ ಸಸ್ಯದ ಎಲೆಗಳನ್ನು ಬಳಸಿ ಇಡುವ ಬಗ್ಗೆ ಮತ್ತು ಅದರ ಪ್ರಮಾಣದ ಅಳತೆಯನ್ನು ನಿರ್ಧರಿಸುವ ಕುರಿತು , ವಿಕಲ ಚೇತನರಿಗೆ ಸಹಾಯವಾಗುವ ಪೋರ್ಟೆಬಲ್ ಸೈಕಲ್ ಮಾದರಿಗಳನ್ನು ತಯಾರಿಸುವುದು, ಕಸದ ಸಂಗ್ರಹಣಾ ಮಾದರಿಗಳ ತಯಾರಿಕೆ, ನೀರನ್ನು ಶುಚಿಗೊಳಿಸುವ ಮಾದರಿ, ಧಾನ್ಯಗಳ ಒಣಗಿಸುವ ಮಾದರಿ, ಗಿಣ್ಣದ ಹಾಲು ಸಂಗ್ರಹಣಾ ಮಾದರಿ, ಪ್ರಾಣಿಗಳನ್ನು ಹಿಡಿಯುವ ಮಾದರಿ ,ರೋಗಿಗಳು ಚಟುವಟಿಕೆಗಳು ಸರಾಗವಾಗಿ ಸಾಗಲು ಸಹಾಯಕವಾಗುವ ಮಾದರಿ , ಬೇರೆ ಬೇರೆ ಎತ್ತರದಲ್ಲಿ ಕೈ ತೊಳೆಯುವ ತೊಟ್ಟಿ ನಿರ್ಮಾಣ, ಗ್ರಾಮೀಣ ವ್ಯವಸಾಯ ಚಟುವಟಿಕೆಗಳ ಮಾದರಿ , ಮಕ್ಕಳು ಇಂತಹ ಪ್ರಶ್ನೆಗಳ ಕುರಿತು ಹೆಚ್ಚು ಯೋಚಿಸುವಂತಾಗಬೇಕು, ಇದರಿಂದ ವಿಜ್ಞಾನ ವಸ್ತು ಪ್ರದರ್ಶನ ಮತ್ತು ಇನಸ್ಪೈರ್ಡ ಅವಾರ್ಡ್‌ಗೆ ಸಿದ್ಧತೆ ಮಾಡಿಕೊಳ್ಳಲು ಸಾದ್ಯವಾಗುತ್ತದೆ ಎಂದು ಅವರು ವಿವರಿಸಿದರು.

ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 622 ವಿದ್ಯಾರ್ಥಿಗಳು ಮತ್ತು 788 ವಿದ್ಯಾರ್ಥಿನಿಯರು ಸೇರಿದಂತೆ 1410 ಮಕ್ಕಳು ಪಾಲ್ಗೊಂಡು ಹಲವು ಪ್ರಶ್ನೆಗಳನ್ನು ಕೇಳಿದರು.

ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಬುಧವಾರ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ವೆಬಿನಾರ್‌ಗಳನ್ನು ಸಂಘಟಿಸುತ್ತಿದೆ.

    ಹಂಚಿಕೊಳ್ಳಲು ಲೇಖನಗಳು