logo
ಕನ್ನಡ ಸುದ್ದಿ  /  Karnataka  /  Upsc Civils 2022 Results Pooja From Mysore Ranks 390th In Upsc Exam Rmy

UPSC Civils 2022 results: ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಪೂಜಾಗೆ 390ನೇ ಸ್ಥಾನ

HT Kannada Desk HT Kannada

May 23, 2023 06:10 PM IST

2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಪೂಜಾ 390ನೇ ಸ್ಥಾನ ಪಡೆದಿದ್ದಾರೆ.

  • ಮೈಸೂರಿನ ಪೂಜಾ ಎಂಬುವರು ಯುಪಿಎಸ್‌ಸಿ ಪರೀಕ್ಷೆಯಲ್ಲಿ 390ನೇ ಸ್ಥಾನ ಪಡೆಯುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ.

2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಪೂಜಾ 390ನೇ ಸ್ಥಾನ ಪಡೆದಿದ್ದಾರೆ.
2022ನೇ ಸಾಲಿನ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಮೈಸೂರಿನ ಪೂಜಾ 390ನೇ ಸ್ಥಾನ ಪಡೆದಿದ್ದಾರೆ.

ಮೈಸೂರು: ಭಾರತ ಲೋಕಸೇವಾ ಆಯೋಗವು ನಡೆಸಿದ 2022ನೇ ಸಾಲಿನ ನಾಗರಿಕ ಸೇವಾ ಪರೀಕ್ಷೆಯ ಫಲಿತಾಂಶ (UPSC Civils 2022 results) ಪ್ರಕಟವಾಗಿದ್ದು, ಮೈಸೂರಿನ ಕುವೆಂಪುನಗರದ ಪೂಜಾ (Pooja) ಅವರು 390ನೇ ರ‍್ಯಾಂಕ್ ಪಡೆದು ಸಾಧನೆ ಮಾಡಿದ್ದಾರೆ.

ಟ್ರೆಂಡಿಂಗ್​ ಸುದ್ದಿ

Udupi News: ಪಾತ್ರ ಮುಗಿಸಿ, ಬಣ್ಣ ತೆಗೆಯುವಾಗಲೇ ಇಹಲೋಕ ತ್ಯಜಿಸಿದ ಯಕ್ಷಗಾನ ಕಲಾವಿದ ಗಂಗಾಧರ್ ಪುತ್ತೂರು

Bangalore News: ಶೂನ್ಯ ಮಳೆಯೊಂದಿಗೆ ಏಪ್ರಿಲ್ ತಿಂಗಳು ಮುಗಿಸಿದ ಬೆಂಗಳೂರು; 1983ರ ಬಳಿಕ ಇದೇ ಮೊದಲು; ವರದಿ

Tumkur News: ತುಮಕೂರಲ್ಲಿ ಕಾಡು ಪ್ರಾಣಿಗಳಿಗೆ ನೀರು ಹಂಚುವ ಜಲದಾನಿಗಳು, ಅರಣ್ಯ ಇಲಾಖೆ ಸಾಥ್

Shimoga News: ಮಲೆನಾಡಿನ ಹಸಿರ ನಡುವೆ ಹಿರೇ ಭಾಸ್ಕರ ಜಲಾಶಯ ದರ್ಶನ, ಏನಿದರ ವಿಶೇಷ, ಹೇಗೆ ಹೋಗಬೇಕು

ಕುವೆಂಪುನಗರದ ಕಾವೇರಿ ಶಾಲೆಯಲ್ಲಿ 1ರಿಂದ 10ನೇ ತರಗತಿ, ಮರಿಮಲ್ಲಪ್ಪ ಪಿಯು ಕಾಲೇಜಿನಲ್ಲಿ ಪಿಯು ಹಾಗೂ ಗೋಕುಲಂನ ವಿದ್ಯಾವರ್ಧಕ ಎಂಜಿನಿಯರಿಂಗ್ ಕಾಲೇಜಿನಲ್ಲಿ ಪದವಿ ಪಡೆದಿರುವ ಪೂಜಾ ಮುಕುಂದ ಹಾಗೂ ಪದ್ಮಾವತಿ ದಂಪತಿಯ ಪುತ್ರಿ.

ಪೂಜಾ ಯಾವುದೇ ಕೋಚಿಂಗ್ ಕೇಂದ್ರಗಳಲ್ಲಿ ತರಬೇತಿ ಪಡೆಯದೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವುದು ವಿಶೇಷ. ಕಳೆದ ಬಾರಿ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಸಂದರ್ಶನ ಹಂತದವರೆಗೂ ಹೋಗಿದ್ದರು. ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆದಿರಲಿಲ್ಲ. ಆದರೆ ಎರಡನೇ ಬಾರಿ ಪರೀಕ್ಷೆಯಲ್ಲಿ ಯಶಸ್ಸು ಗಳಿಸಿದ್ದಾರೆ.

2019ರಲ್ಲಿ ಪದವಿ ಮುಗಿಸಿದ್ದ ಇವರು 2020 ಡಿಸೆಂಬರ್‌ನಿಂದ ತಯಾರಿ ಆರಂಭಿಸಿ ಅಣಕು ಪರೀಕ್ಷೆಗಳನ್ನು ತೆಗೆದುಕೊಂಡಿದ್ದರು. ಈ ಬಾರಿ ಸಂದರ್ಶನ ತರಬೇತಿಯನ್ನು ಮಾತ್ರ ಬೆಂಗಳೂರಿನ ಇನ್‌ಸೈಟ್ಸ್ ಆನ್ ಇಂಡಿಯಾದಲ್ಲಿ ಪಡೆದಿದ್ದಾರೆ.

ಐಎಎಸ್ ಅಥವಾ ಐಪಿಎಸ್ ಹುದ್ದೆ ಸಿಗುವ ನಿರೀಕ್ಷೆ ಇದೆ ಎಂದು ಪೂಜಾ ತಿಳಿಸಿದ್ದಾರೆ. ʻಶಿಸ್ತು ಹಾಗೂ ಶ್ರಮವನ್ನು ಪರೀಕ್ಷೆ ಬೇಡುತ್ತದೆ. ಉತ್ತಮವಾಗಿ ತಯಾರಿ ನಡೆಸಿದ್ದರೆ, ಯಾವುದಕ್ಕೂ ತಲೆ ಕೆಡಿಸಿಕೊಳ್ಳಬಾರದು. ಧೈರ್ಯದಿಂದ ಮುನ್ನುಗ್ಗಬೇಕುʼ ಎಂದು ಪೂಜಾ ತಮ್ಮ ತಯಾರಿ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು