logo
ಕನ್ನಡ ಸುದ್ದಿ  /  ಕರ್ನಾಟಕ  /  Uttara Kannada News: ಸ್ವಾವಲಂಬಿ ಬದುಕಿನ ಆಸೆಗೆ ಬಲ ತುಂಬಿದ ಉದ್ಯೋಗ ಖಾತ್ರಿ, ಕೋಳಿ ಶೆಡ್ ಎಂಬ ಜೀವನಾಧಾರ

Uttara Kannada News: ಸ್ವಾವಲಂಬಿ ಬದುಕಿನ ಆಸೆಗೆ ಬಲ ತುಂಬಿದ ಉದ್ಯೋಗ ಖಾತ್ರಿ, ಕೋಳಿ ಶೆಡ್ ಎಂಬ ಜೀವನಾಧಾರ

HT Kannada Desk HT Kannada

Nov 18, 2023 06:00 AM IST

ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಳಿ ಶೆಡ್ ಕಟ್ಟಿಕೊಂಡಿರುವ ಫಲಾನುಭವಿಗಳು

    • ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಯೋಜನೆಯ ಸವಲತ್ತುಗಳನ್ನು ಪಡೆದ ಹಲವರು ಮಾದರಿ ಬದುಕು ರೂಪಿಸಿಕೊಂಡಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಳಿ ಶೆಡ್ ಕಟ್ಟಿಕೊಂಡಿರುವ ಫಲಾನುಭವಿಗಳು
ಉತ್ತರ ಕನ್ನಡ ಜಿಲ್ಲೆಯಲ್ಲಿ ಕೋಳಿ ಶೆಡ್ ಕಟ್ಟಿಕೊಂಡಿರುವ ಫಲಾನುಭವಿಗಳು

ಕಾರವಾರ: ಉದ್ಯೋಗ ಖಾತರಿ ಯೋಜನೆಯಡಿ ಕೋಳಿ, ಕುರಿ, ಹಂದಿ ಶೆಡ್ ಹಾಗೂ ದನದ ಕೊಟ್ಟಿಗೆಯಂತಹ ಕಾಮಗಾರಿಗಳು ಸಾರ್ವಜನಿಕರಿಗೆ ಹೊಸ ಭರವಸೆ ಮೂಡಿಸುತ್ತಿವೆ. ಈ ಕಾಮಗಾರಿಗಳು ಅದೆಷ್ಟೋ ಕುಟುಂಬಗಳ ಸ್ವಾವಲಂಬನೆಗೆ ಸಾಕ್ಷಿಯಾಗಿವೆ. ನಗರೀಕರಣ ಎಂಬ ಶಬ್ದದ ಸೋಂಕು ತಾಗದ ಉತ್ತರ ಕನ್ನಡ ಜಿಲ್ಲೆಯ ಹಲವು ಹಳ್ಳಿಗಳ ಜನರಿಗೆ ಕೋಳಿ ಶೆಡ್ ನಿರ್ಮಾಣವೂ ಬದುಕಿಗೆ ದಾರಿಯಾಗುತ್ತಿವೆ.

ಟ್ರೆಂಡಿಂಗ್​ ಸುದ್ದಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ರಿಸಲ್ಟ್‌ ಪ್ರಕಟ, ಉತ್ತರ ಪತ್ರಿಕೆಯ ಸ್ಕ್ಯಾನ್ಡ್‌ ಪ್ರತಿ ಪಡೆಯಲು ಮೇ 16, ಮರುಮೌಲ್ಯಮಾಪನಕ್ಕೆ ಮೇ 22 ಕೊನೇ ದಿನ

2288 ಶಾಲೆಗಳಿಗೆ ಶೇ 100 ಫಲಿತಾಂಶ, ಶೂನ್ಯ ಫಲಿತಾಂಶ ಪಡೆದ ಶಾಲೆಗಳೆಷ್ಟು? ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶದ ಸಮಗ್ರ ವರದಿ

ಎಸ್‌ಎಸ್‌ಎಲ್‌ಸಿ ಟಾಪರ್‌ ಅಂಕಿತಾ ಬಸಪ್ಪ ಕೊನ್ನೂರ್‌ಗೆ ಐಎಎಸ್‌ ಅಧಿಕಾರಿಯಾಗುವಾಸೆ; ಸ್ಟಡಿಗೆ ಯೂಟ್ಯೂಬ್‌ ಬಳಸಿಕೊಂಡ ಜಾಣೆ

SSLC Result 2024: ಎಸ್ಸೆಸ್ಸೆಲ್ಸಿ ಫಲಿತಾಂಶ, 14ನೇ ಸ್ಥಾನದಿಂದ ಪ್ರಥಮ ಸ್ಥಾನಕ್ಕೆ ಜಿಗಿದ ಉಡುಪಿ; ಈ ಬಾರಿ ದಕ್ಷಿಣ ಕನ್ನಡ ದ್ವಿತೀಯ

ಕೃಷಿ ಭೂಮಿಯನ್ನು ನಂಬಿ ಬದುಕುವ ಜನರು ಉತ್ತರ ಕನ್ನಡ ಜಿಲ್ಲೆಯವರು. ಆದರೆ ಇಲ್ಲಿ ಹೆಚ್ಚಿನವರು ದೊಡ್ಡ ಹಿಡುವಳಿದಾರರು. ಸಣ್ಣ ಪ್ರಮಾಣದ ರೈತರು ಕೃಷಿ ಭೂಮಿ ಹೊಂದಿದರೂ ನಾನಾ ರೀತಿಯ ಸಮಸ್ಯೆಗಳನ್ನು ಅನುಭವಿಸುತ್ತಿದ್ದಾರೆ. ಕೆಲವರಂತೂ ಭೂಮಿ ಇದ್ದೂ ಇಲ್ಲದಂಥ ಸ್ಥಿತಿಗೆ ತಲುಪಿದ್ದಾರೆ. ಈ ಕಾರಣದಿಂದ ಬೇರೆಯವರ ಹೊಲ, ತೋಟಗಳಲ್ಲಿಯೋ ಅಥವಾ ಬೇರೆಡೆ ತೆರಳಿ ಕೂಲಿ ಮಾಡಬೇಕಾದ ಪರಿಸ್ಥಿತಿಯೂ ಇದೆ. ಇದು ಉತ್ತರ ಕನ್ನಡವೆಂದೇನಲ್ಲ, ಕರಾವಳಿಯ ಹಲವು ಭಾಗಗಳಲ್ಲಿ ರೈತರ ಕೃಷಿ ಭೂಮಿ ಇದ್ದರೂ ಇಲ್ಲದಂತಹ ಪರಿಸ್ಥಿತಿ ಇದೆ. ಹೀಗಿರುವಾಗ ಕೂಲಿ ಮಾಡಿಯೇ ಜೀವನ ಸಾಗಿಸುತ್ತಿದ್ದಾರೆ. ಕೂಲಿಯೊಂದಿಗೆ ಪ್ರಾಣಿ ಸಾಕುವುದು ಸಹಜ. ಕೆಲವು ಕುಟುಂಬಗಳು ಇದನ್ನೇ ಒಂದು ಉದ್ಯೋಗವನ್ನಾಗಿ ಮಾಡಿಕೊಳ್ಳುತ್ತಿರುವುದು ಉತ್ತಮ ಬೆಳವಣಿಗೆ.

ನೆರವಾಯಿತು ಯೋಜನೆ

ಉತ್ತರ ಕನ್ನಡ ಜಿಲ್ಲೆಯಲ್ಲಿ ಸರ್ಕಾರದ ಯೋಜನೆಯ ಸವಲತ್ತುಗಳನ್ನು ಪಡೆದ ಹಲವರು ಮಾದರಿ ಬದುಕು ರೂಪಿಸಿಕೊಂಡಿದ್ದಾರೆ. ಅಂಕೋಲ ತಾಲ್ಲೂಕು ಬೆಳಂಬರ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿ ಈಗಾಗಲೇ 13ಕ್ಕೂ ಹೆಚ್ಚು ಕೋಳಿ ಶೇಡ್‌ಗಳು ನಿರ್ಮಾಣವಾಗಿವೆ. ಇದರ ಫಲಾನುಭವಿಗಳು ಉತ್ತಮ ಆದಾಯ ಗಳಿಸುತ್ತಿದ್ದಾರೆ.

'ನಾವು ಕಳೆದ 30 ವರ್ಷಗಳಿಂದಲೂ ಕೋಳಿ ಸಾಕಾಣಿಕೆ ಮಾಡುತ್ತಿದ್ದೇವೆ. ಈ ವರ್ಷ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೋಳಿ ಶೆಡ್ ನೀಡಿರುವುದು ನಮಗೆ ತುಂಬಾ ಅನುಕೂಲವಾಗಿದೆ' ಎಂದು ಕೋಳಿ ಶೆಡ್ ನಿರ್ಮಿಸಿಕೊಂಡ ಗಂಗೇಗೌಡ ಪ್ರತಿಕ್ರಿಯಿಸಿದರು. 'ನಮ್ಮಲ್ಲಿ ಪ್ಯಾರೇಟ್ ನೋಸ್, ಕೋಚಿಯಂತಹ ಉತ್ತಮ ಕೋಳಿ ತಳಿಗಳಿದ್ದು, ಜೋಡಿ ಮರಿಗೆ 1 ಸಾವಿರ, 2 ಸಾವಿರ ರೂಗಳಿಗೆ ಮಾರಾಟವಾಗುತ್ತದೆ. ಹಾಗೂ ಬೆಳೆದ ಕೋಳಿಗಳು 2 ಸಾವಿರದಿಂದ 5 ಸಾವಿರ ರೂವರೆಗೂ ಮಾರಾಟವಾಗುತ್ತವೆ. ಕೋಳಿ ಶೆಡ್ ನಿರ್ಮಾಣವಾದ್ದರಿಂದ ಮಳೆ ಗಾಳಿಯಿಂದ ನಮ್ಮ ಕೋಳಿಗಳು ಸುರಕ್ಷಿತವಾಗಿವೆ' ಎನ್ನುತ್ತಾರೆ ಫಲಾನುಭವಿ ಮಂಜುನಾಥ ಗೌಡ.

ಶೆಡ್ ನಿರ್ಮಾಣವಾಗದಿದ್ದರೆ ಈ ಅವಕಾಶ ಸಿಗುತ್ತಿರಲಿಲ್ಲ. ಶೆಡ್ ನಿರ್ಮಾಣಕ್ಕೆ ದೊಡ್ಡ ಪ್ರಮಾಣದ ಆರ್ಥಿಕ ಶಕ್ತಿಯೂ ಇಲ್ಲದವರಿಗೆ ಇಂಥ ಯೋಜನೆಗಳಿಂದ ಅನುಕೂಲವಾಗುತ್ತದೆ ಎಂದು ಫಲಾನುಭವಿಗಳು ಹೇಳುತ್ತಾರೆ.

ನರೇಗಾ ಯೋಜನೆಯಡಿ 60 ಸಾವಿರ ರೂ ವೆಚ್ಚದಲ್ಲಿ 2021-22ನೇ ಸಾಲಿನಲ್ಲಿ 10 ಹಾಗೂ 2022-23ನೇ ಸಾಲಿನ 7 ಕೋಳಿಶೆಡ್‌ಗಳು ನಿರ್ಮಾಣಗೊಂಡಿವೆ. ಇನ್ನೂ ಕೋಳಿಗಳಿಗೆ ಮಾರುಕಟ್ಟೆ ವ್ಯವಸ್ಥೆ ನೋಡುವುದಾದರೆ ನೇರವಾಗಿ ಮನೆಗಳಿಗೆ ಬೇರೆ ಬೇರೆ ಊರುಗಳಿಂದ ವ್ಯಾಪಾರಿಗಳು ಬರುತ್ತಾರೆ. ಅಲ್ಲದೆ ಈ ಕೋಳಿಗಳು ನಾಟಿ ತಳಿಗಳಾಗಿದ್ದು, ಇಲ್ಲಿನ ಪರಿಸರಕ್ಕೆ ಒಗ್ಗಿಕೊಂಡಿರುತ್ತವೆ.

    ಹಂಚಿಕೊಳ್ಳಲು ಲೇಖನಗಳು