logo
ಕನ್ನಡ ಸುದ್ದಿ  /  ಕರ್ನಾಟಕ  /  Value Education: ಅಮೂಲ್ಯ ಜೀವನದ ತಳಹದಿಯೇ ಮೌಲ್ಯ ಶಿಕ್ಷಣ; ಜ್ಞಾನದೀಪ ವೆಬಿನಾರಿನಲ್ಲಿ ಪ್ರಭಂಜನ್‌

Value education: ಅಮೂಲ್ಯ ಜೀವನದ ತಳಹದಿಯೇ ಮೌಲ್ಯ ಶಿಕ್ಷಣ; ಜ್ಞಾನದೀಪ ವೆಬಿನಾರಿನಲ್ಲಿ ಪ್ರಭಂಜನ್‌

HT Kannada Desk HT Kannada

Feb 02, 2023 03:24 PM IST

ಜ್ಞಾನದೀಪ ವೆಬಿನಾರ್‌ನ ವೈವಿಧ್ಯಮಯ ನೋಟ

  • Value education: ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ಬುಧವಾರ, Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಆನ್‌ಲೈನ್‌ ವೆಬಿನಾರಿನಲ್ಲಿ ʻಮೌಲ್ಯ ಶಿಕ್ಷಣʼ ಎಂಬ ವಿಷಯವನ್ನು ಮೈಸೂರಿನ ವಿವೇಕ ವಿದ್ಯಾವಾಹಿನಿ ಸಂಸ್ಥೆಯ ಪ್ರಭಂಜನ್ ಪ್ರಸ್ತುತಪಡಿಸಿದರು. 

ಜ್ಞಾನದೀಪ ವೆಬಿನಾರ್‌ನ ವೈವಿಧ್ಯಮಯ ನೋಟ
ಜ್ಞಾನದೀಪ ವೆಬಿನಾರ್‌ನ ವೈವಿಧ್ಯಮಯ ನೋಟ

ಧಾರವಾಡ: ಶಿಕ್ಷಣ ಇಂದು ಕೇವಲ ಪಠ್ಯಪುಸ್ತಕ ಮತ್ತು ತರಗತಿಗಳಿಗೆ ಮಾತ್ರ ಸೀಮಿತವಾಗಿಲ್ಲ. ಬದಲಾಗಿ, ದೈನಂದಿನ ಜೀವನದಲ್ಲಿ ನಡೆಯುವ ಚಟುವಟಿಕೆಗಳು ಮತ್ತು ಘಟನೆಗಳು ನಮ್ಮ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ ಎಂದು ಮೈಸೂರಿನ ವಿವೇಕ ವಿದ್ಯಾವಾಹಿನಿ ಸಂಸ್ಥೆಯ ಪ್ರಭಂಜನ್ ಹೇಳಿದರು.

ಟ್ರೆಂಡಿಂಗ್​ ಸುದ್ದಿ

Ambulance Strike: ಅನಿರ್ಧಿಷ್ಟಾವಧಿ ಮುಷ್ಕರದಿಂದ ಹಿಂದೆ ಸರಿದ 108 ಆರೋಗ್ಯ ಕವಚ ಸಿಬ್ಬಂದಿ; ಸಚಿವರ ಮಾತುಕತೆ ಯಶಸ್ವಿ

ಕೈಮಗ್ಗ ಜವಳಿ ತಂತ್ರಜ್ಞಾನ ಡಿಪ್ಲೋಮಾ (ಡಿ.ಹೆಚ್.ಟಿ.ಟಿ) ಕೋರ್ಸ್ ಪ್ರವೇಶ, ಯಾರಿಗೆ ಉಂಟು ಅವಕಾಶ

ಕರ್ನಾಟಕದ 2ನೇ ಹಂತದ ಮತದಾನ ಮುಕ್ತಾಯ, ಘರ್ಷಣೆ, ಬಿಸಿಲ ನಡುವೆ ಭಾರೀ ಹಕ್ಕು ಚಲಾವಣೆ

Bangalore News: ಬಿಟ್ ಕಾಯಿನ್ ಹಗರಣದ ಪ್ರಮುಖ ಆರೋಪಿ ಶ್ರೀಕಿ ಬಂಧನ; ಎಸ್‌ಐಟಿ ವಿಚಾರಣೆಗೆ ತಪ್ಪಿಸಿಕೊಳ್ಳುತ್ತಿದ್ದ ಆರೋಪಿ

ಅವರು ಬುಧವಾರ, Wednesday Webinar - ಜ್ಞಾನ ದೀಪ, ಮಕ್ಕಳಿಗೊಂದು ಜೀವನ ಪಾಠ ಆನ್‌ಲೈನ್‌ ವೆಬಿನಾರಿನಲ್ಲಿ ʻಮೌಲ್ಯ ಶಿಕ್ಷಣʼ ಎಂಬ ವಿಷಯವನ್ನು ಪ್ರಸ್ತುತಪಡಿಸಿದರು.

ಒಬ್ಬ ವ್ಯಕ್ತಿಯ ಜೀವನದ ಸಮಗ್ರ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುವ ಅಂಶವೆಂದರೆ ಅದು ಮೌಲ್ಯ ಶಿಕ್ಷಣ. ಶಿಕ್ಷಣವು ಒಂದು ಪ್ರಕ್ರಿಯೆಯಾಗಿ, ಜೀವನದುದ್ದಕ್ಕೂ ಮುಂದುವರಿಯುತ್ತದೆ ಮತ್ತು ತರಗತಿಯ ಒಳಗೆ ಮತ್ತು ಹೊರಗೆ ಎರಡೂ ಕಡೆಯೂ ಶಿಕ್ಷಣ ಲಭ್ಯವಾಗುತ್ತದೆ ಎಂಬುದನ್ನು ಪ್ರಭಂಜನ್ ತಿಳಿಯ ಪಡಿಸಿದರು.

ಮೌಲ್ಯಾಧಾರಿತ ಕಲಿಕೆಯು ವ್ಯಕ್ತಿಯ ವ್ಯಕ್ತಿತ್ವ ಬೆಳವಣಿಗೆಗೆ ಒತ್ತು ನೀಡುವ ತರಬೇತಿಯ ಒಂದು ರೂಪವಾಗಿದ್ದು, ಈ ರೀತಿಯ ಶಿಕ್ಷಣವು ನಮ್ಮದೇ ನಿಜ ಜೀವನದ ಸಂದರ್ಭಗಳನ್ನು ಸುಲಭವಾಗಿ ನಿಭಾಯಿಸಲು ಕಲಿಸುತ್ತದೆ. ಭವಿಷ್ಯವನ್ನು ರೂಪಿಸುವಲ್ಲಿ ನಿಯಂತ್ರಣವನ್ನು ಕಾಯ್ದುಕೊಳ್ಳುವಲ್ಲಿ ಸಹಾಯ ಮಾಡುತ್ತವೆ ಎಂಬುದನ್ನು ತಿಳಿಸಿದರು.

ಮೌಲ್ಯಗಳ ಮೂಲ, ಸಾಕ್ಷರತೆ ಅಥವಾ ಅಕ್ಷರ ಕಲಿಕೆ‌ಯಲ್ಲ ಬದಲಾಗಿ ಉತ್ತಮ ವ್ಯಕ್ತಿತ್ವಕ್ಕೆ ಪೂರಕವಾಗುವ ಗುಣಗಳನ್ನು ರೂಢಿಸಿಕೊಳ್ಳುವುದು ಆಗಿದೆ. ಮಕ್ಕಳು ತಮ್ಮ ವ್ಯಕ್ತಿತ್ವ ವಿಕಸನ ವಿಷಯದಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದು ಇಂದಿನ ಅಗತ್ಯತೆಗಳಲ್ಲಿ ಒಂದಾಗಿದೆ. ಪ್ರಸ್ತುತ ಸಮಾಜದಲ್ಲಿ ಕೇವಲ ಅಕ್ಷರ ಜ್ಞಾನವಿದ್ದರೆ ಸಾಲದು. ಅದರೊಟ್ಟಿಗೆ ಯಾವ ಸಂದರ್ಭದಲ್ಲಿ, ಯಾರೊಂದಿಗೆ, ಹೇಗೆ ವರ್ತಿಸಬೇಕು ಎಂಬುದರ ಅರಿವನ್ನು ನಾವು ಹೊಂದಿರ ಬೇಕಾಗಿರುವುದು ಮುಖ್ಯವಾಗಿದೆ. ಇಂದು ಮೌಲ್ಯಗಳ ಪ್ರಾಮುಖ್ಯತೆಯು ಎಷ್ಟಿದೆಯೆಂದರೆ ಕಲಿಕೆಯಿಲ್ಲದೆಯೇ ಬೆಳೆಯಬಹುದೇನೋ ಆದರೆ ಮೌಲ್ಯ ರಹಿತ ವ್ಯಕ್ತಿತ್ವ ಬೆಳೆಯಲು ಸಾಧ್ಯವಿಲ್ಲ. ಯಾವುದೋ ಒಂದು ಮಾರ್ಗದಿಂದ ಬೆಳೆದರೂ, ಅದರ ಜೀವಿತಾವಧಿಯು ಅಲ್ಪವೇ ಎಂಬುದನ್ನು ತಿಳಿಸಿದರು.

ಯುವಪೀಳಿಗೆಯನನ್ನು ರೂಪಿಸುವಲ್ಲಿ ಮತ್ತು ಬದಲಾಗುತ್ತಿರುವ ಸನ್ನಿವೇಶಗಳಿಗೆ ಹೊಂದಿಕೊಳ್ಳುವಲ್ಲಿ ಮೌಲ್ಯ ಶಿಕ್ಷಣವು ಸಹಾಯ ಮಾಡುತ್ತದೆ. ವ್ಯಕ್ತಿಯು ಸಾಮಾಜಿಕ, ನೈತಿಕ ಮತ್ತು ಪ್ರಜಾಸತ್ತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ಸಹಾಯ ಮಾಡುವಲ್ಲಿ ಮೌಲ್ಯ ಶಿಕ್ಷಣವು ಪ್ರಮುಖ ಪಾತ್ರವನ್ನು ವಹಿಸುತ್ತದೆ ಎಂಬುದನ್ನು ಪ್ರಭಂಜನ್‌ ವಿವರಿಸಿದರು.

ಬುಧವಾರ ನಡೆದ ಈ ವೆಬಿನಾರಲ್ಲಿ 50 ಸರ್ಕಾರಿ ಶಾಲೆಗಳಿಂದ 582 ವಿದ್ಯಾರ್ಥಿಗಳು ಮತ್ತು 725 ವಿದ್ಯಾರ್ಥಿನಿಯರು ಸೇರಿದಂತೆ 1307 ಮಕ್ಕಳು ಪಾಲ್ಗೊಂಡು ಹಲವು ಪ್ರಶ್ನೆಗಳನ್ನು ಕೇಳುವ ಮೂಲಕ ಕಾರ್ಯಕ್ರಮ ಯಶಸ್ವಿಗೊಳಿಸಿದರು.

ಶಾಲಾ ಶಿಕ್ಷಣ ಕಾರ್ಯಕ್ರಮದ ಭಾಗವಾಗಿ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಮಕ್ಕಳಿಗೆ ಪಠ್ಯ ವಿಷಯಗಳ ಹೊರತಾಗಿ ಜ್ಞಾನ ವೃದ್ಧಿಗೆ ಪೂರಕವಾಗುವಂತಹ ವಿಷಯಗಳ ಮೇಲೆ ವಿವಿಧ ಸಂಪನ್ಮೂಲ ವ್ಯಕ್ತಿಗಳಿಂದ ಪ್ರತಿ ಬುಧವಾರ Wednesday Webinar - ಜ್ಞಾನ ದೀಪ ಮಕ್ಕಳಿಗೊಂದು ಜೀವನ ಪಾಠ ಎಂಬ ಶೀರ್ಷಿಕೆಯಲ್ಲಿ ಸ್ವಾಮಿ ವಿವೇಕಾನಂದ ಯೂತ್ ಮೂವ್ ಮೆಂಟ್ (SVYM) ವೆಬಿನಾರ್‌ಗಳನ್ನು ಸಂಘಟಿಸುತ್ತಿದೆ.

ಗಮನಿಸಬಹುದಾದ ಸುದ್ದಿ

ಹದಿಹರೆಯದಲ್ಲಿ ಹೊಂಗನಸುಗಳು ಸಹಜ. ಮನಸ್ಸಿನ ಭಾವನೆಗಳು ಬಹಳ ಸೂಕ್ಷ್ಮವಾಗಿರುತ್ತವೆ. ಅದರಲ್ಲೂ ಹದಿಹರೆಯದಲ್ಲಿ ಹುಡುಗರಿಗೆ ಹುಡುಗಿಯರನ್ನು ಕಂಡಾಗ, ಹುಡುಗಿಯರಿಗೆ ಹುಡುಗರನ್ನು ಕಂಡಾಗ ಉಂಟಾಗುವ ಭಾವನಾ ವ್ಯತ್ಯಾಸಗಳು ಸೂಕ್ಷ್ಮವಾದವು. ಅಂತಹ ಸನ್ನಿವೇಶದಲ್ಲಿ ಒಂದು ಪರೀಕ್ಷಾ ಕೊಠಡಿಯಲ್ಲಿ 50 ವಿದ್ಯಾರ್ಥಿನಿಯರು, ಅವರ ನಡುವೆ ಒಬ್ಬನೇ ಒಬ್ಬ ವಿದ್ಯಾರ್ಥಿ! ವಿವರ ಓದಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು