logo
ಕನ್ನಡ ಸುದ್ದಿ  /  Karnataka  /  Vijayapura News Minister Mb Patil Responded To Chakravarthy Sulibele S Hitler Government Statement Mnk

Vijayapura News: ನೀವು ಮಾಡಿಟ್ಟ ಅನಾಹುತ ಸರಿಪಡಿಸ್ತಿದ್ದೇವೆ, ಹೀಗೆ ಮುಂದುವರಿದ್ರೆ ಜೈಲೇ ಗತಿ; ಸೂಲಿಬೆಲೆಗೆ ಎಂ.ಬಿ. ಪಾಟೀಲ್‌ ಎಚ್ಚರಿಕೆ

HT Kannada Desk HT Kannada

Jun 04, 2023 02:03 PM IST

ನೀವು ಮಾಡಿಟ್ಟ ಅನಾಹುತ ಸರಿಪಡಿಸ್ತಿದ್ದೇವೆ ಹೀಗೆ ಮುಂದುವರಿದ್ರೆ ಜೈಲೇ ಗತಿ; ಸೂಲಿಬೆಲೆಗೆ ಎಂ.ಬಿ. ಪಾಟೀಲ್‌ ಎಚ್ಚರಿಕೆ

    • ಕಳೆದ ನಾಲ್ಕು ವರ್ಷಗಳಲ್ಲಿ ಹಿಜಾಬ್, ಹಲಾಲ್, ಅಜಾನ್, ಪಠ್ಯ- ಪುಸ್ತಕ ಸೇರಿದಂತೆ ಹಲವಾರು ವಿಷಯದಲ್ಲಿ ನೀವು ಮಾಡಿರುವ ಅನಾಹುಗಳಿಗೆ ನಾವು ಇತೀಶ್ರೀ ಹಾಡುತ್ತೇವೆ. ಇನ್ನು ಮುಂದೆ ಈ ರೀತಿಯಾಗಿ ಮಾಡಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಂ.ಬಿ. ಪಾಟೀಲ್‌ ಎಚ್ಚರಿಕೆ ನೀಡಿದ್ದಾರೆ.  
ನೀವು ಮಾಡಿಟ್ಟ ಅನಾಹುತ ಸರಿಪಡಿಸ್ತಿದ್ದೇವೆ ಹೀಗೆ ಮುಂದುವರಿದ್ರೆ ಜೈಲೇ ಗತಿ; ಸೂಲಿಬೆಲೆಗೆ ಎಂ.ಬಿ. ಪಾಟೀಲ್‌ ಎಚ್ಚರಿಕೆ
ನೀವು ಮಾಡಿಟ್ಟ ಅನಾಹುತ ಸರಿಪಡಿಸ್ತಿದ್ದೇವೆ ಹೀಗೆ ಮುಂದುವರಿದ್ರೆ ಜೈಲೇ ಗತಿ; ಸೂಲಿಬೆಲೆಗೆ ಎಂ.ಬಿ. ಪಾಟೀಲ್‌ ಎಚ್ಚರಿಕೆ

Vijayapura News: ಈ ಹಿಂದೆ ನಾಲ್ಕು ವರ್ಷದಲ್ಲಿ ನೀವು ಮಾಡಿರುವ ಅನಾಹುತಗಳನ್ನು ಸರಿಪಡಿಸುತ್ತಿದ್ದೇವೆ ಎಂದು ಚಕ್ರವರ್ತಿ ಸೂಲಿಬೆಲೆಯ ಹಿಟ್ಲರ್ ಸರ್ಕಾರ ಹೇಳಿಕೆಗೆ ಸಚಿವ ಎಂ.ಬಿ.ಪಾಟೀಲ (M B Patil) ತಿರುಗೇಟು ನೀಡಿದರು.

ಟ್ರೆಂಡಿಂಗ್​ ಸುದ್ದಿ

Hassan Scandal; ಹಾಸನ ಹಗರಣದ ಸಂತ್ರಸ್ತೆ ನಾಪತ್ತೆ ಆತಂಕಕಾರಿ, ಪ್ರಜ್ವಲ್‌ ರೇವಣ್ಣ ಬಂಧನ ಯಾವಾಗ, ಫೇಸ್‌ಬುಕ್ ಪೋಸ್ಟಲ್ಲಿ ವಾಸು ಎಚ್‌ವಿ ಕಳವಳ

Bengaluru Rains: ದಾಖಲೆಯ ಬಿಸಿ ಕಂಡ ಬೆಂಗಳೂರಿನಲ್ಲಿ ಗುಡುಗು ಸಹಿತ ಮಳೆ; ರಣ ಬಿಸಿಲಿಗೆ ಬೆಂದ ಜನ ಫುಲ್ ಖುಷ್

NEP ಅಥವಾ SEP: ಪದವಿ ಕೋರ್ಸ್ ಪ್ರವೇಶ ಗೊಂದಲ ರಾಜ್ಯವ್ಯಾಪಿ; ಕರ್ನಾಟಕ ಸರ್ಕಾರದ ನಿರ್ಧಾರಕ್ಕೆ ವಿದ್ಯಾರ್ಥಿಗಳ ಹಪಾಹಪಿ

ಮೈಸೂರು ಕಾರವಾರ ಮೈಸೂರು ನಡುವೆ 2 ಟ್ರಿಪ್‌ ಬೇಸಿಗೆ ವಿಶೇಷ ರೈಲು ಸಂಚಾರ ಇಂದಿನಿಂದ, ವೇಳಾಪಟ್ಟಿ, ಇತರೆ ವಿವರ ಪ್ರಕಟಿಸಿದ ಕೊಂಕಣ ರೈಲ್ವೆ

ವಿಜಯಪುರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ನಾಲ್ಕು ವರ್ಷ ಏನು ಮಾಡಿದ್ದೀರಿ, ಹಿಂದೆ ನಾಲ್ಕು ವರ್ಷದಲ್ಲಿ ನೀವು ಮಾಡಿರುವ ಅನಾಹುತಗಳನ್ನು ನಾವು ಸರಿಪಡಿಸುತ್ತಿದ್ದೇವೆ. ಕಳೆದ ನಾಲ್ಕು ವರ್ಷದಲ್ಲಿ ಹಿಜಾಬ್, ಹಲಾಲ್, ಅಜಾನ್, ಪಠ್ಯ-ಪುಸ್ತಕ ಸೇರಿದಂತೆ ಹಲವಾರು ವಿಷಯದಲ್ಲಿ ನೀವು ಮಾಡಿರುವ ಅನಾಹುಗಳಿಗೆ ನಾವು ಇತೀಶ್ರೀ ಹಾಡುತ್ತೇವೆ. ಇನ್ನು ಮುಂದೆ ಈ ರೀತಿಯಾಗಿ ಮಾಡಿದರೆ ಜೈಲು ಕಂಬಿ ಎಣಿಸಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ವಿಜಯಪುರದ ಭವ್ಯ ಸ್ಮಾರಕಗಳ ಮೂಲ ನಾಮಗಳೇ ಮಾಯ; ಇವುಗಳ ಅಸಲಿ ಹೆಸರು ತಿಳಿಯಿರಿ PHOTOS

ಇನ್ನು ಹಿಂದಿನ ಸರ್ಕಾರದಲ್ಲಿ ಕೊರೊನಾ ಸಂದರ್ಭದಲ್ಲಿ ಹೊಡೆದ ಲೂಟಿ, ನೀರಾವರಿ, ಲೋಕೋಪಯೋಗಿ ಸೇರಿದಂತೆ ವಿವಿಧ ಇಲಾಖೆಯಲ್ಲಿ ನಡೆದ ಶೇ.40 ರಷ್ಟು ಬ್ರಹ್ಮಾಂಡ ಭ್ರಷ್ಟಾಚಾರ ಸೇರಿದಂತೆ ಎಲ್ಲವನ್ನೂ ಸಹ ತನಿಖೆ ನಡೆಸಲು ರಾಜ್ಯ ಸರ್ಕಾರ ಮುಂದಾಗಲಿದೆ ಎಂದರು.

ಹಿಂದಿನ ಸರ್ಕಾರ ಅನಾವಶ್ಯಕವಾಗಿ ಹಿಜಾಬ್, ಹಲಾಲ್ ಎನ್ನುವ ಅರ್ಥವಿಲ್ಲದ ವಿಚಾರಗಳನ್ನು ಮಾತ್ರ ಬಿತ್ತಿ ಕೋಮುದ್ವೇಷ ಬಿತ್ತಿದೆ, ಆದರೆ ನಮ್ಮ ಸರ್ಕಾರ ಎಲ್ಲ ಸಮಾಜಗಳ ರಕ್ಷಣೆಗೆ ಬದ್ಧವಾಗಿದೆ ಎಂದರು.

ಬಿಜೆಪಿ ಹಾಗೂ ಆರ್‌ಎಸ್‌ಎಸ್ ತನ್ನ ಅಜೆಂಡಾವನ್ನು ಪಠ್ಯಪುಸ್ತಕದಲ್ಲಿ ಅಳವಡಿಸಲು ಹೊರಟಿತ್ತು, ಉರಿಗೌಡ- ನಂಜೇಗೌಡದಂತ ಗಿರಾಕಿಗಳನ್ನು ಹುಟ್ಟಿಸಿದ್ದು ಬಿಜೆಪಿ, ಈ ಎಲ್ಲವನ್ನೂ ಪಠ್ಯಪುಸ್ತಕದಲ್ಲಿ ಅಳವಡಿಸಲು ಹೊರಟಿತ್ತು, ಮಕ್ಕಳು ಅಣ್ಣ ಬಸವಣ್ಣ, ಡಾ.ಬಿ.ಆರ್. ಅಂಬೇಡ್ಕರ, ಕೆಂಪೆಗೌಡರನ್ನು ಓದಬೇಕು, ಇವರ ಸಾಧನೆ ಪಠ್ಯದಲ್ಲಿ ಇರಬೇಕು ಎಂದರು.

ಇದನ್ನೂ ಓದಿ: ವರವಾಗದ ಕೃಷ್ಣ ಭಾಗ್ಯ!; ಕೇವಲ 2 ರೂಪಾಯಿಗೆ ಮಾರಾಟವಾಗ್ತಿದ್ದ ಸಸಿಗಳೀಗ 25 ರೂಪಾಯಿ, ಸಸಿಗೂ ತಟ್ಟಿತು ಬೆಲೆ ಏರಿಕೆ ಬಿಸಿ

ಪಠ್ಯದಲ್ಲಿ ಕೇಸರಿಕರಣ ಎನ್ನುವುದು ಒಪ್ಪುವುದಿಲ್ಲ, ಕೇಸರಿ ಎಂದರೆ ಅದು ಬಿಜೆಪಿ ಆಸ್ತಿಯಲ್ಲ, ಕೇಸರಿಯನ್ನು ಅವರಿಗೆ ಬರೆದುಕೊಟ್ಟಿಲ್ಲ, ಎಲ್ಲ ದೇವಾಲಯಗಳಲ್ಲಿಯೂ ಕೇಸರಿ ಇದೆ, ಆದರೆ ಬಿಜೆಪಿ ಕೇಸರಿಕರಣ ಎಂದು ಹೇಳಿ ಪಠ್ಯಪುಸ್ತಕವನ್ನು ಆರ್‌ಎಸ್‌ಎಸ್ ಅಜೆಂಡಾ ಅಳವಡಿಸಿತ್ತು ಎಂದರು.

ಮೀಸಲಾತಿ ವಿಷಯವಾಗಿ ಬಿಜೆಪಿ ನಾಟಕವಾಡಿತ್ತು, ಕೇವಲ ಚುನಾವಣೆ ಸಂದರ್ಭದಲ್ಲಿ ಮೀಸಲಾತಿ ಪ್ರಮಾಣ ಏರಿಕೆ ಎಂದು ಬಿಜೆಪಿ ಘೋಷಣೆ ಮಾಡಿತ್ತು ಇದು ಕೇವಲ ನಾಟಕ ಎಂದರು. ಮೀಸಲಾತಿ ಪ್ರಮಾಣ ಹೆಚ್ಚಳಕ್ಕೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದ್ದು ಕೂಡಲೇ ಪ್ರಧಾನಮಂತ್ರಿಗಳಿಗೆ ಪತ್ರ ಬರೆಯಲಾಗುವುದು ಎಂದರು.

    ಹಂಚಿಕೊಳ್ಳಲು ಲೇಖನಗಳು