logo
ಕನ್ನಡ ಸುದ್ದಿ  /  ಕರ್ನಾಟಕ  /  ಕರ್ನಾಟಕ ಹವಾಮಾನ ಮಾರ್ಚ್ 16; ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ; 40 ಹೋಬಳಿಗಳಲ್ಲಿ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ತಾಪಮಾನ

ಕರ್ನಾಟಕ ಹವಾಮಾನ ಮಾರ್ಚ್ 16; ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ; 40 ಹೋಬಳಿಗಳಲ್ಲಿ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ತಾಪಮಾನ

Umesh Kumar S HT Kannada

Mar 16, 2024 06:16 AM IST

ಕರ್ನಾಟಕ ಹವಾಮಾನ ಮಾರ್ಚ್ 16

  • ಕರ್ನಾಟಕ ಹವಾಮಾನ ಮಾರ್ಚ್ 16: ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದ್ದು, ಇಂದು ಬೆಂಗಳೂರಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ವಿವಿಧೆಡೆ ತಾಪಮಾನ ಹೆಚ್ಚಳವಾಗಲಿದ್ದು, 40 ಹೋಬಳಿಗಳಲ್ಲಿ 40 ಡಿಗ್ರಿ ಸೆಲ್ಶಿಯಸ್‌ಗಿಂತ ಹೆಚ್ಚು ತಾಪಮಾನ ಇರಲಿದೆ ಎಂದು ಭಾರತದ ಹವಾಮಾನ ಇಲಾಖೆ ಮುನ್ಸೂಚನಾ ವರದಿ ಹೇಳಿದೆ.

ಕರ್ನಾಟಕ ಹವಾಮಾನ ಮಾರ್ಚ್ 16
ಕರ್ನಾಟಕ ಹವಾಮಾನ ಮಾರ್ಚ್ 16

ಬೆಂಗಳೂರು: ಕರ್ನಾಟಕದಲ್ಲಿ ಒಣಹವೆ ಮುಂದುವರಿಯಲಿದ್ದು, ವಿವಿಧೆಡೆ ತಾಪಮಾನ ಹೆಚ್ಚಳವಾಗಲಿದೆ. ಬೆಂಗಳೂರಲ್ಲಿ ಇಂದು ಭಾಗಶಃ ಮೋಡ ಕವಿದ ವಾತಾವರಣ ಇರಲಿದೆ. ಮಾರ್ಚ್‌ 17ರ ಬೆಳಗ್ಗೆ 8.30ರ ತನಕ ಈ ವಾತಾವರಣ, ಹವಾಮಾನ ಮುಂದುವರಿಯಲಿದೆ ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.

ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ
ಟ್ರೆಂಡಿಂಗ್​ ಸುದ್ದಿ

Elephant Census2024: ದಕ್ಷಿಣ ಭಾರತದ ರಾಜ್ಯಗಳಲ್ಲಿ ಮೇ 23ರಿಂದ ಆನೆಗಣತಿಗೆ ಸಿದ್ದತೆ, ಕರ್ನಾಟಕದಲ್ಲೂ ತಯಾರಿ, ಏನಿದರ ವಿಶೇಷ

ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ವಾಪಸ್ ಬಂದಿಲ್ಲ; ಲೋಕಸಭಾ ಚುನಾವಣೆ ಫಲಿತಾಂಶ ತನಕ ಬರುವ ನಿರೀಕ್ಷೆಯೂ ಇಲ್ಲ, ಎಸ್‌ಐಟಿ ಮೂಲ ಹೇಳಿಕೆ

ವಿಜಯಪುರದಿಂದ ಅಯೋಧ್ಯೆಗೆ ಬೈಕ್ ಸವಾರಿ; ಪ್ರಯಾಣಕ್ಕೆಷ್ಟು ದಿನ, ರೂಟ್ ಯಾವುದು ಶಿವಾನಂದ ಪರೀಟ ಅನುಭವ ಕಥನ

ಬಿಬಿಎಂಪಿಗೆ 10 ವರ್ಷದ ಹಿಂದೆ ಸೇರ್ಪಡೆಯಾದ 110 ಗ್ರಾಮಗಳಿಗೆ ಕಾವೇರಿ 5 ನೇ ಹಂತದಲ್ಲಿ ನೀರಿನ ಸಂಪರ್ಕ, ಅಧಿಕಾರಿಗಳಿಗೆ ಜಲಮಂಡಳಿ ಸೂಚನೆ

ಇದರಂತೆ, ಒಳನಾಡಿನ ಕೆಲವು ಕಡೆಗಳಲ್ಲಿ ಅಂದರೆ ಬಾಗಲಕೋಟೆ, ಧಾರವಾಡ, ಗದಗ, ಕಲಬುರಗಿ, ಕೊಪ್ಪಳ, ಬೆಂಗಳೂರು, ಹಾಸನ, ಕೋಲಾರ, ಮಂಡ್ಯ, ಮೈಸೂರು ಜಿಲ್ಲೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಶಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.

ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ನೀಡಿರುವ ಮಾಹಿತಿ ಪ್ರಕಾರ ನಿನ್ನೆ (ಮಾರ್ಚ್‌ 15) ಯಾದಗಿರಿ ಜಿಲ್ಲೆಯ ಹತ್ತಿಕುಣಿ ಹೋಬಳಿಯಲ್ಲಿ ದಾಖಲಾದ ಅತ್ಯಧಿಕ ಗರಿಷ್ಠ ತಾಪಮಾನ 42.7 ಡಿಗ್ರಿ ಸೆಲ್ಶಿಯಸ್‌ ದಾಖಲಾಗಿತ್ತು. ರಾಜ್ಯದ 40 ಹೋಬಳಿಗಳಲ್ಲಿ ನಿನ್ನೆ 42.7 ಡಿಗ್ರಿ ಸೆಲ್ಶಿಯಸ್‌ ಮತ್ತು 40 ಡಿಗ್ರಿ ಸೆಲ್ಶಿಯಸ್ ನಡುವೆ ತಾಪಮಾನ ದಾಖಲಾಗಿತ್ತು. ಜೇವರ್ಗಿಯ ಯಡ್ರಾಮಿ ಹೋಬಳಿಯಲ್ಲಿ 12 ಗ್ರಾಮ ಪಂಚಾಯಿತಿ ಮಟ್ಟದಲ್ಲಿ 40 ಡಿಗ್ರಿ ಸೆಲ್ಶಿಯಸ್ ತಾಪಮಾನ ಇತ್ತು.

ಬೆಂಗಳೂರು ಹವಾಮಾನ ಇಂದು (ಮಾ.16) ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಕನಿಷ್ಠ 24 ಡಿಗ್ರಿ ಸೆಲ್ಶಿಯಸ್

ಬೆಂಗಳೂರು ನಗರದಲ್ಲಿ ಆಕಾಶ ನಿರ್ಮಲವಾಗಿರಲಿದೆ. ರಾಜಧಾನಿಯ ಸುತ್ತಮುತ್ತ ಮಳೆಯ ಲಕ್ಷಣಗಳಿಲ್ಲ. ಮಾರ್ಚ್‌ 17ರ ಬೆಳಗ್ಗೆ 8.30ರ ತನಕ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಶಿಯಸ್ ದಾಖಲಾಗುವ ಸಾಧ್ಯತೆ ಇದೆ ಎಂದು ಬೆಂಗಳೂರು ಹವಾಮಾನ ಕೇಂದ್ರ ತಿಳಿಸಿದೆ.

ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ 2- 3 ಡಿಗ್ರಿ ಸೆಲ್ಶಿಯಸ್‌ ಹೆಚ್ಚಳವಾಗಲಿದೆ. ವಿಶೇಷವಾಗಿ ಬೆಂಗಳೂರು ನಗರದಲ್ಲಿ ಗರಿಷ್ಠ ಉಷ್ಣಾಂಶ 35 ಡಿಗ್ರಿ ಸೆಲ್ಶಿಯಸ್‌, ಕನಿಷ್ಠ ಉಷ್ಣಾಂಶ 24 ಡಿಗ್ರಿ ಸೆಲ್ಶಿಯಸ್ ಇರಬಹುದು ಎಂದು ಬೆಂಗಳೂರು ಹವಾಮಾನ ಕೇಂದ್ರದ ವಿಜ್ಞಾನಿ ಸುಂದರ್ ಎಂ ಮೇತ್ರಿ ಹೇಳಿದ್ದಾರೆ.

ಬೆಂಗಳೂರು ನಗರ ಜಿಲ್ಲೆಯಲ್ಲಿ ಉಷ್ಣಾಂಶ ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ಇರಬಹುದು. ನಿನ್ನೆ (ಮಾ.15)ಬೆಂಗಳೂರು ನಗರ ಜಿಲ್ಲೆಯ ಗರಿಷ್ಠ ತಾಪಮಾನ 34.6 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ ಉಷ್ಣಾಂಶ 24.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು. ಇದೇ ರೀತಿ ಬೆಂಗಳೂರು ಗ್ರಾಮಾಂತರದಲ್ಲಿ ಕೂಡ ಉಷ್ಣಾಂಶ ಗರಿಷ್ಠ 35 ಡಿಗ್ರಿ ಸೆಲ್ಶಿಯಸ್ ಮತ್ತು ಕನಿಷ್ಠ 24 ಡಿಗ್ರಿ ಸೆಲ್ಶಿಯಸ್ ಅಂದಾಜಿಸಲಾಗಿದೆ. ನಿನ್ನೆ (ಮಾರ್ಚ್ 15) ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗರಿಷ್ಠ ತಾಪಮಾನ 35.2 ಡಿಗ್ರಿ ಸೆಲ್ಶಿಯಸ್ ದಾಖಲಾಗಿತ್ತು ಎಂದು ಬೆಂಗಳೂರು ಹವಾಮಾನ ಕೇಂದ್ರದ ವರದಿ ಹೇಳಿದೆ.

ಪ್ರಮುಖ ನಗರಗಳ ತಾಪಮಾನ

ಭಾರತೀಯ ಹವಾಮಾನ ಇಲಾಖೆಯ ದತ್ತಾಂಶ ಪ್ರಕಾರ, ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು (ಮಾರ್ಚ್‌ 16 ರ) ಬೆಳಗ್ಗೆ 6 ಗಂಟೆಗೆ ದಾಖಲಾಗಿರುವ ತಾಪಮಾನಗಳ ವಿವರ.

ಬೆಂಗಳೂರು – 27.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 50)

ಮಂಗಳೂರು – 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 70)

ಚಿತ್ರದುರ್ಗ – 27 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 79)

ಗದಗ – 28.6 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 44)

ಹೊನ್ನಾವರ – 29.8 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 56)

ಕಲಬುರಗಿ – 31 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 28)

ಬೆಳಗಾವಿ – 28 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 51)

ಕಾರವಾರ – 31.4 ಡಿಗ್ರಿ ಸೆಲ್ಶಿಯಸ್ (ತೇವಾಂಶ ಶೇ 57 )

----------------------

(This copy first appeared in Hindustan Times Kannada website. To read more like this please logon to kannada.hindustantimes.com)

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ