Kenda Movie Song: ಅಪ್ಪನ ಸಾಹಿತ್ಯಕ್ಕೆ ಮಗನ ಟ್ಯೂನ್‌; ಜಯಂತ್‌ ಕಾಯ್ಕಿಣಿ ಬರೆದ ಕೆಂಡ ಚಿತ್ರದ ಹಾಡಿಗೆ ರಿತ್ವಿಕ್‌ ಕಾಯ್ಕಿಣಿ ಮ್ಯೂಸಿಕ್‌-sandalwood news lyrical song of the movie kenda is released music by rithvik kaikini with lyrics by jayant kaikini mnk ,ಮನರಂಜನೆ ಸುದ್ದಿ
ಕನ್ನಡ ಸುದ್ದಿ  /  ಮನರಂಜನೆ  /  Kenda Movie Song: ಅಪ್ಪನ ಸಾಹಿತ್ಯಕ್ಕೆ ಮಗನ ಟ್ಯೂನ್‌; ಜಯಂತ್‌ ಕಾಯ್ಕಿಣಿ ಬರೆದ ಕೆಂಡ ಚಿತ್ರದ ಹಾಡಿಗೆ ರಿತ್ವಿಕ್‌ ಕಾಯ್ಕಿಣಿ ಮ್ಯೂಸಿಕ್‌

Kenda Movie Song: ಅಪ್ಪನ ಸಾಹಿತ್ಯಕ್ಕೆ ಮಗನ ಟ್ಯೂನ್‌; ಜಯಂತ್‌ ಕಾಯ್ಕಿಣಿ ಬರೆದ ಕೆಂಡ ಚಿತ್ರದ ಹಾಡಿಗೆ ರಿತ್ವಿಕ್‌ ಕಾಯ್ಕಿಣಿ ಮ್ಯೂಸಿಕ್‌

ಹಾಡುಗಳಿಗೆ ಸಾಹಿತ್ಯ ಒದಗಿಸುವ ಖ್ಯಾತ ಗೀತ ಸಾಹಿತಿ ಜಯಂತ್‌ ಕಾಯ್ಕಿಣಿ ಕೆಂಡ ಸಿನಿಮಾದ ಹಾಡೊಂದಕ್ಕೂ ಸಾಹಿತ್ಯ ಬರೆದಿದ್ದಾರೆ. ವಿಶೇಷ ಏನೆಂದರೆ, ಈ ಹಾಡಿಗೆ ಸಂಗೀತ ನೀಡಿರುವುದು ಅವರ ಪುತ್ರ ರಿತ್ವಿಕ್‌ ಕಾಯ್ಕಿಣಿ.

Kenda Movie Song: ಅಪ್ಪನ ಸಾಹಿತ್ಯಕ್ಕೆ ಮಗನ ಟ್ಯೂನ್‌; ಜಯಂತ್‌ ಕಾಯ್ಕಿಣಿ ಬರೆದ ಕೆಂಡ ಚಿತ್ರದ ಹಾಡಿಗೆ ರಿತ್ವಿಕ್‌ ಕಾಯ್ಕಿಣಿ ಮ್ಯೂಸಿಕ್‌
Kenda Movie Song: ಅಪ್ಪನ ಸಾಹಿತ್ಯಕ್ಕೆ ಮಗನ ಟ್ಯೂನ್‌; ಜಯಂತ್‌ ಕಾಯ್ಕಿಣಿ ಬರೆದ ಕೆಂಡ ಚಿತ್ರದ ಹಾಡಿಗೆ ರಿತ್ವಿಕ್‌ ಕಾಯ್ಕಿಣಿ ಮ್ಯೂಸಿಕ್‌

Kenda Movie Song: ಗಂಟುಮೂಟೆ’ ಚಿತ್ರತಂಡದ ಕಡೆಯಿಂದ ರೂಪುಗೊಂಡಿರುವ ಕೆಂಡ ಚಿತ್ರ ಹಂತ ಹಂತವಾಗಿ ಕುತೂಹಲದ ಕಾವೇರಿಸಿಕೊಂಡು ಸಾಗಿ ಬಂದಿತ್ತು. ಇದೀಗ ಕೆಂಡ ಬಿಡುಗಡೆಯ ಹೊಸ್ತಿಲಿನಲ್ಲಿ ನಿಂತಿದೆ. ಈ ಹೊತ್ತಿನಲ್ಲಿ ಜಯಂತ್‌ ಕಾಯ್ಕಿಣಿ ರಚಿಸಿದ `ತಾಜಾ ತಾಜಾ ಸುದ್ದಿ’ ಗೀತೆಗೆ ಪುತ್ರ ರಿತ್ವಿಕ್‌ ಕಾಯ್ಕಿಣಿ ಪ್ರಥಮ ಬಾರಿ ಸಂಗೀತ ಸಂಯೋಜಿಸಿರುವ ಲಿರಿಕಲ್ ವಿಡಿಯೋ ಹಾಡಿನ ಬಿಡುಗಡೆ ಕಾರ್ಯಕ್ರಮ ಎಸ್ಆರ್ವಿ ಚಿತ್ರಮಂದಿರದಲ್ಲಿ ಅದ್ದೂರಿಯಾಗಿ ನಡೆಯಿತು. ತಂಡಕ್ಕೆ ಶುಭಹಾರೈಸಲು ಯೋಗರಾಜ ಭಟ್, ಸಂಗೀತ ಸಂಯೋಜಕ ವಿ. ಹರಿಕೃಷ್ಣ, ಡಿ.ಬೀಟ್ಸ್‌ನ ಶೈಲಜಾನಾಗ್ ಮತ್ತು ಜಯಂತ್‌ ಕಾಯ್ಕಣಿ ಆಗಮಿಸಿದ್ದರು.

ವಿಕಟ ಕವಿ ಯೋಗರಾಜ್ ಭಟ್ ಮಾತನಾಡಿ, ಬೆಳಿಗ್ಗೆ ಸ್ನಾನದ ಮನೆಯಲ್ಲಿ ಇರುವಾಗ ನನ್ನ ಹಾಡು ಇಡೀ ಪ್ರಪಂಚ ತಿರುಗಿ ನೋಡುತ್ತೆ ಎನ್ನುವ ಕನಸು. ಹೊರಗೆ ಬಂದಾಗ ಯಾರಿಗೂ ಗೊತ್ತಿಲ್ಲವೆಂಬ ದುಗುಡ. ಒಂದು ವರ್ಷ ಕಷ್ಟಪಟ್ಟು ಚಿತ್ರ ಬಿಡುಗಡೆ ಮಾಡಿದ ನಂತರ, ಚಿತ್ರಮಂದಿರದಿಂದ ಆಚೆ ಬರುವ ಪ್ರೇಕ್ಷಕ ಮುಂದೆ ಯಾವುದು ಅಂತ ಕೇಳುತ್ತಾನೆ. ಆಗ ಅದಕ್ಕಿಂತಲೂ ಉತ್ತಮವಾದುದನ್ನು ಕೊಡಬೇಕು ಎನ್ನುವ ಛಲ ಹುಟ್ಟಿಕೊಳ್ಳುವುದು ಒಂಥರ ಡೇಂಜರ್. ನಾನು ಅಂದುಕೊಂಡಿದ್ದು ಏನು ಇಲ್ಲ. ಹಾಗೆ ನಾಲ್ಕು ಮಂದಿ ತಿರುಗಿ ನೋಡುವಂತೆ ಮಾಡೋದು ತುಂಬ ಕಷ್ಟದ ಕೆಲಸ. ಅಲ್ಲಿ ಸಕ್ಸಸ್ ಕಂಡರೆ, ಇಲ್ಲಿ ವಿರುದ್ಧವಾಗಿರುತ್ತದೆ. ಪ್ರತಿ ಸಿನಿಮಾವು ಇವರೆಡು ಡೇಂಜರ್‌ಗೆ ಬದುಕಬೇಕು. ಇವರೆಡು ಡೇಂಜರ್‌ಗಳ ಮಧ್ಯೆ ಇರೋದು ಸೃಜನಾತ್ಮಕ ಕ್ರಿಯೆ. ಇವೆಲ್ಲವು ನಿಮ್ಮೊಂದಿಗೆ ಸದಾ ಕಾಲ ಕಾಡಲಿ ಎಂದು ಮಾತಿಗೆ ವಿರಾಮ ಹಾಕಿದರು.

ಹಾಡು ಅನ್ನೋದು ಮಾರ್ಕೆಟ್‌ನಲ್ಲಿ ಎಷ್ಟು ಇದೆ ಅಂದರೆ, ನೂರಾರು ಹಾಡುಗಳ ಮಧ್ಯೆ ನಮ್ಮ ಗೀತೆಯನ್ನು ಹುಡುಕುವುದು ಸವಾಲಿನ ಕೆಲಸ ಆಗಿರುತ್ತದೆ. ಅವುಗಳ ಮಧ್ಯೆ ನಮ್ಮ ಸಾಂಗ್ ಗುರುತಿಸಿಕೊಳ್ಳಬೇಕೆಂಬುದು ಪ್ರತಿಯೊಬ್ಬ ಸಂಗೀತ ನಿರ್ದೇಶಕನ ಆಸೆಯಾಗಿರುತ್ತದೆ. ಬರಹಗಾರನ ಶ್ರಮ ಗೆದ್ದಾಗ ಖುಷಿ ಕೊಡುತ್ತೆ. ಸೋತಾಗ ಜವಬ್ದಾರಿ ಹೆಚ್ಚಾಗುತ್ತದೆ. ಇದರಲ್ಲಿರುವ ಮೂರು ಗೀತೆಗಳು ಯಾವುದೇ ಸಂಗೀತದ ಛಾಯೆ ಕಾಣಿಸುವುದಿಲ್ಲ. ಅದೇ ತಂಡದ ಮೊದಲ ಗೆಲುವು ಎನ್ನಬಹುದು.

ಶೈಲಜಾ ನಾಗ್ ಹೇಳುವಂತೆ ಪ್ರತಿಯೊಂದು ಸಿನಿಮಾದ ಹಿಂದೆ ಶ್ರಮ ಇದ್ದೇ ಇರುತ್ತದೆ. ಯಾವುದೇ ನಿರ್ಮಾಪಕ ಹಣ ವಾಪಸ್ಸು ಬರಲೆಂದೇ ಬಂಡವಾಳ ಹೂಡುತ್ತಾನೆ. ಸುಮ್ಮನೆ ತಮಾಷೆಗೆ ಮಾಡುವುದಿಲ್ಲ. ಇದು ಕೂಡ ವ್ಯಾಪಾರ. ಬೇರೆ ಭಾಷೆಗಳ ನಡುವೆ ನಮ್ಮ ಚಿತ್ರ ಗುರುತಿಸಿಕೊಳ್ಳುವಂತೆ ಮಾಡಬೇಕಾಗಿದೆ. ಆಗ ಮಾತ್ರ ಎಲ್ಲಾ ಕಡೆ ಗುರುತಿಸಿಕೊಳ್ಳಲು ಸಾಧ್ಯವಾಗುತ್ತದೆ ಎಂಬುದು ಅವರ ಅಭಿಪ್ರಾಯವಾಗಿತ್ತು.

ಕೆಲವು ಸಲ ಹಾಡು ಬರೆಯುವಾಗ, ಈ ಸಾಲು ಎಲ್ಲೋ ಬಂದಿದೆಯೆಲ್ಲಾ ಅಂತ ಪಕ್ಕಕ್ಕೆ ಇಟ್ಟಿದ್ದುಂಟು. ಆಮೇಲೆ ನಾನೇ ಬರೆದುದಲ್ವ ಅಂತ ಗೊತ್ತಾಗುತ್ತದೆ. ತಂತ್ರಜ್ಞಾನ ಬದಲಾದಂತೆ ಮೂಲ ಹಾಡನ್ನು ಯಾರು ಕೇಳುವುದಿಲ್ಲ. ನಿರ್ದೇಶಕರು ಹಾಡು ಬರೆದುಕೊಡಿ ಎಂದು ಕೇಳಿಕೊಂಡು ಬಂದಾಗ, ನನ್ನ ಹಾಡು ಹಿಟ್ ಆಗಲೆಂದು ಬರೆಯುತ್ತೇನೆ. ಅದರಿಂದ ನಿಮ್ಮ ಚಿತ್ರಕ್ಕೆ ಸಹಾಯವಾಗಲಿ. ಹಾಡು ಚಿತ್ರದ ನಿರೂಪಣೆಯ ಭಾಗವಾಗಿರುತ್ತದೆ. ಇಂತಹ ಹೊಸ ತಲೆಮಾರಿನ ಚಿತ್ರಗಳು ಜನರಿಗೆ ತಲುಪಲಿ ಎಂದು ಜಯಂತ್ ಕಾಯ್ಕಿಣಿ ಹೇಳಿದರು.

ಮಾಯಾನಗರಿ ಬೆಂಗಳೂರಲ್ಲಿ ಹತಾಶೆಗೊಳಗಾದ ಯುವ ಸಮೂಹದ ಬಗ್ಗೆ, ರಾಜಕೀಯ, ಅಪರಾಧ ಕೃತ್ಯದ ವಿಚಾರಗಳು ಸೇರಿದಂತೆ ಒಂದಷ್ಟು ಅಂಶಗಳು ಚಿತ್ರದಲ್ಲಿದೆ. ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಕಥಾನಾಯಕ ಹೇಗೆ ಈ ವ್ಯವಸ್ಥೆಯ ಚಕ್ರವ್ಯೂಹಕ್ಕೆ ಸಿಲುಕುತ್ತಾನೆ. ಒಟ್ಟಾರೆಯಾಗಿ ಈ ದಿನಮಾನದ ಮಟ್ಟಿಗೆ ವಿಭಿನ್ನ ಚಿತ್ರವಾಗಲಿದೆಯಂತೆ. ನಾಯಕನಾಗಿ ಬಿ.ವಿ.ಭರತ್, ಪ್ರಣವಿ ಶ್ರೀಧರ್, ವಿನೋದ್ ರವೀಂದ್ರನ್, ಗೋಪಾಲ್ ಕೃಷ್ಣ ದೇಶಪಾಂಡೆ ಉಳಿದಂತೆ ಬಹುತೇಕ ರಂಗಭೂಮಿ ಪ್ರತಿಭೆಗಳು ಈ ಸಿನಿಮಾದಲ್ಲಿ ನಟಿಸಿದ್ದಾರೆ.

mysore-dasara_Entry_Point