logo
ಕನ್ನಡ ಸುದ್ದಿ  /  latest news  /  March 29 Kannada News Updates: ಜಾಗತಿಕ ಭದ್ರತಾ ಸವಾಲಿನ ಸ್ವರೂಪ ಬದಲಾಗಿದೆ; ಎಸ್‌ಸಿಒ ಸಭೆಯಲ್ಲಿ ಅಜಿತ್‌ ದೋವಲ್‌ ಅಭಿಮತ
ಅಜಿತ್‌ ದೋವಲ್ (ANI)

March 29 Kannada News Updates: ಜಾಗತಿಕ ಭದ್ರತಾ ಸವಾಲಿನ ಸ್ವರೂಪ ಬದಲಾಗಿದೆ; ಎಸ್‌ಸಿಒ ಸಭೆಯಲ್ಲಿ ಅಜಿತ್‌ ದೋವಲ್‌ ಅಭಿಮತ

Mar 29, 2023 10:31 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Mar 29, 2023 10:31 PM IST

24 ಗಂಟೆಯಲ್ಲಿ ಮಹಾರಾಷ್ಟ್ರದಲ್ಲಿ ಕೋವಿಡ್​ಗೆ ಮೂವರು ಸಾವು

ಮಹಾರಾಷ್ಟ್ರದಲ್ಲಿ ಕಳೆದ 24 ಗಂಟೆಗಳಲ್ಲಿ 483 ಹೊಸ ಕೋವಿಡ್​​ ಪ್ರಕರಣಗಳು ಪತ್ತೆಯಾಗಿದ್ದು, ಮೂವರು ಸಾವನ್ನಪ್ಪಿದ್ದಾರೆ.

Mar 29, 2023 09:57 PM IST

ಸಿಇಟಿ: ಓಸಿಐ, ಪಿಐಒ ಅಭ್ಯರ್ಥಿಗಳಿಗೆ ನೋಂದಣಿಗೆ ಅವಕಾಶ

2023ನೇ ಸಾಲಿನ ಸಿಇಟಿ ಪರೀಕ್ಷೆಗೆ ತಮ್ಮ ಹೆಸರನ್ನು ನೋಂದಣಿ ಮಾಡಿಕೊಳ್ಳಲು ಹಾಗೂ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಲು ಸಾಗರೋತ್ತರ ಭಾರತೀಯ ಅಭ್ಯರ್ಥಿಗಳಿಗೆ (ಒಸಿಐ) ಮತ್ತು ಭಾರತೀಯ ಮೂಲದ ಅಭ್ಯರ್ಥಿಗಳಿಗೆ (ಪಿಐಒ) ಅವಕಾಶ ಮಾಡಿಕೊಡಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರದ ಕಾರ್ಯನಿರ್ವಾಹಕ ನಿರ್ದೇಶಕಿ ಎಸ್.ರಮ್ಯಾ ಅವರು ಬುಧವಾರ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಮೇಲ್ಕಂಡ ವಿಭಾಗಗಳ ಅಡಿ ಬರುವ ಅರ್ಹ ಅಭ್ಯರ್ಥಿಗಳು ಮಾರ್ಚ್ 30ರ ಗುರುವಾರ ಬೆಳಿಗ್ಗೆ 11 ಗಂಟೆಯಿಂದ ಏಪ್ರಿಲ್ 5ರ ಮಧ್ಯಾಹ್ನ 12 ಗಂಟೆಯವರೆಗೆ ಈ ಪ್ರಕ್ರಿಯೆಯನ್ನು ಪೂರೈಸಿಕೊಳ್ಳಬಹುದು ಎಂದಿದ್ದಾರೆ.

Mar 29, 2023 07:46 PM IST

ಬೆಂಗಳೂರಿನಲ್ಲಿ 'ಪಂಜಿನ ಮೆರವಣಿಗೆ'

ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅನರ್ಹಗೊಳಿಸಿರುವುದನ್ನು ಖಂಡಿಸಿ ಭಾರತೀಯ ಯುವ ಕಾಂಗ್ರೆಸ್ ಬೆಂಗಳೂರಿನಲ್ಲಿ 'ಪಂಜಿನ ಮೆರವಣಿಗೆ' ನಡೆಸಿದ್ದು, ಬಳಿಕ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

Mar 29, 2023 06:20 PM IST

ಬಳ್ಳಾರಿ ಮೇಯರ್​​ ಸ್ಥಾನ ಕಾಂಗ್ರೆಸ್​ ಪಾಲು

ಬಳ್ಳಾರಿ ಮಹಾನಗರದ ಮೇಯರ್ ಸ್ಥಾನ ಕಾಂಗ್ರೆಸ್​​ ಪಾಲಾಗಿದೆ. ಡಿ.ತ್ರಿವೇಣಿ ಅವರು ಬಳ್ಳಾರಿ ಮೇಯರ್​ ಆಗಿ ಹಾಗೂ ಬಿ. ಜಾನಕಿ ಅವರು ಉಪ ಮೇಯರ್ ಆಗಿ ಆಯ್ಕೆಯಾಗಿದ್ದಾರೆ.

Mar 29, 2023 04:53 PM IST

ಪ್ರಧಾನಿ ಮೋದಿಯಿಂದ ಉನ್ನತ ಮಟ್ಟದ ಸಭೆ

ಭಾರತದಲ್ಲಿ ಕೋವಿಡ್-19, ಇನ್‌ಫ್ಲುಯೆನ್ಜಾ ವೈರಸ್ ಹೆಚ್ಚಳವಾದ ಹಿನ್ನೆಲೆ ಪ್ರಧಾನಿ ಮೋದಿ ಇಂದು ಆರೋಗ್ಯ ಸಚಿವಾಲಯದ ಅಧಿಕಾರಿಗಳ ಜೊತೆ ಉನ್ನತ ಮಟ್ಟದ ಸಭೆ ನಡೆಸಿದ್ದಾರೆ.

Mar 29, 2023 03:12 PM IST

ರಾಜ್ಯಸಭಾ ಕಲಾಪ ಮುಂದೂಡಿಕೆ

ಸಂಸತ್ತಿನಲ್ಲಿ 2ನೇ ಅವಧಿಯ ಬಜೆಟ್​ ಅಧಿವೇಶನ ನಡೆಯುತ್ತಿದ್ದು, ರಾಜ್ಯಸಭಾ ಕಲಾಪವನ್ನು ಏಪ್ರಿಲ್​ 3ಕ್ಕೆ ಮುಂದೂಡಲಾಗಿದೆ. 

Mar 29, 2023 01:45 PM IST

ಜಾಗತಿಕ ಭದ್ರತಾ ಸವಾಲಿನ ಸ್ವರೂಪ ಬದಲಾಗಿದೆ; ಎಸ್‌ಸಿಒ ಸಭೆಯಲ್ಲಿ ಅಜಿತ್‌ ದೋವಲ್‌ ಅಭಿಮತ

ಜಾಗತಿಕ ಭದ್ರತಾ ಸವಾಲಿನ ಸ್ವರೂಪ ಬದಲಾಗಿದದ್ದು, ಶಾಂಘೈ ಸಹಕಾರ ಸಂಘದ ಸದಸ್ಯ ರಾಷ್ಟ್ರಗಳೂ ಈ ಪರಿಣಾಮವನ್ನು ಎದುರಿಸುತ್ತಿವೆ ಎಂದು ಭಾರತದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್‌ ಹೇಳಿದ್ದಾರೆ. ಅವರು  ನವದೆಹಲಿಯಲ್ಲಿ ನಡೆದ ಎಸ್‌ಸಿಒ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಯನ್ನುದ್ದೇಶಿಸಿ ಮಾತನಾಡಿದರು.

Mar 29, 2023 12:10 PM IST

March 29 Kannada News Updates: ಮೇ 10ರಂದು ನಡೆಯಲಿದೆ ಕರ್ನಾಟಕ ವಿಧಾನಸಭೆ ಚುನಾವಣೆ: ಇಲ್ಲಿದೆ ಮಾಹಿತಿ

ಮೇ 10ರಂದು ನಡೆಯಲಿದೆ ಕರ್ನಾಟಕ ವಿಧಾನಸಭೆ ಚುನಾವಣೆ ನಡೆಯಲಿದ್ದು, ರಾಜ್ಯದಲ್ಲಿ ಒಂದೇ ಹಂತದಲ್ಲಿ ಮತದಾನ ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ. ಮೇ.13ರಂದು ಚುನಾವಣಾ ಫಲಿತಾಂಶ ಘೋಷಣೆಯಾಗಲಿದೆ.

Mar 29, 2023 11:57 AM IST

ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

*ಶಾಂತಿಯುತ ಮತದಾನಕ್ಕೆ ಚುನಾವಣಾ ಆಯೋಗದ ಬದ್ಧತೆ.

*ಸೂಕ್ಷ್ಮ ಮತಗಟ್ಟೆಗಳ ಮೇಲೆ ಹೆಚ್ಚಿನ ನಿಗಾ.

*ಯುವ ಮತದಾರರನ್ನು ಮತದಾನಕ್ಕೆ ಪ್ರೆರೇಪಿಸಲು ಅಭಿಯಾನ.

*ಚುನಾವಣೆಗೆ ಸಂಪೂರ್ಣ ಸಿದ್ಧವಾದ ಕರ್ನಾಟದ ಎಲ್ಲಾ ಜಿಲ್ಲಾಡಳಿತಗಳು.

Mar 29, 2023 12:36 PM IST

ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ ಮುಖ್ಯಾಂಶಗಳು

*24 ಮೇ 2023 ರಂದು ಕರ್ನಾಟಕ ವಿಧಾನಸಭೆ  ಅವಧಿ ಅಂತ್ಯ.

*ರಾಜ್ಯದಲ್ಲಿ ಒಟ್ಟು 224 ವಿಧಾನಸಭಾ ಕ್ಷೇತ್ರಗಳು

*36 ಮೀಸಲು ವಿಧಾನಸಭಾ ಕ್ಷೇತ್ರಗಳು

*ಒಟ್ಟು 5.22 ಕೋಟಿ ಮತದಾರರು.

*2.62 ಕೋಟಿ ಪುರುಷ ಮತದಾರರು.

*2.59 ಕೋಟಿ ಮಹಿಳಾ ಮತದಾರರು.

*9.17 ಲಕ್ಷ ಮತದಾರರಿಂದ ಮೊದಲ ಬಾರಿಗೆ ಮತದಾನ.

*ಕರ್ನಾಟಕದಲ್ಲಿ ಮೊದಲ ಬಾರಿಗೆ 'ವೋಟ್‌ ಫ್ರಾಮ್‌ ಹೋಮ್‌' ಸೌಲಭ್ಯ.

Mar 29, 2023 11:44 AM IST

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ: ಚುನಾವಣಾ ಆಯೋಗದ ಪತ್ರಿಕಾಗೋಷ್ಠಿ

ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌ ನವದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದಾರೆ.

Mar 29, 2023 07:24 AM IST

ಎಸ್‌ಸಿಒ ರಾಷ್ಟ್ರೀಯ ಭದ್ರತಾ ಸಲಹೆಗಾರರ ಸಭೆಗೆ ಭಾರತದ ಆತಿಥ್ಯ

ಭಾರತವು ಇಂದು ಶಾಂಘೈ ಸಹಕಾರ ಒಕ್ಕೂಟ(SCO)ದ ರಾಷ್ಟ್ರೀಯ ಭದ್ರತಾ ಸಲಹೆಗಾರರ ​​ಸಭೆಯನ್ನು ಆಯೋಜಿಸಲಿದೆ. ಪಾಕಿಸ್ತಾನ ಮತ್ತು ಚೀನಾದ ಪ್ರತಿನಿಧಿಗಳು ವಿಡಿಯೋ ಕಾನ್ಫರೆನ್ಸ್‌ ಮೂಲಕ ಈ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ.

Mar 29, 2023 07:23 AM IST

ಬಿಜೆಪಿ ಕೇಂದ್ರ ಕಚೇರಿಯ ವಿಸ್ತರಿತ ಕಟ್ಟಡ ಉದ್ಘಾಟಿಸಿದ ಪ್ರಧಾನಿ ಮೋದಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಬಿಜೆಪಿ ಕೇಂದ್ರ ಕಚೇರಿಯ ವಿಸ್ತರಿತ ಕಟ್ಟಡವನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ. ಈ ವೇಳೆ ಭ್ರಷ್ಟಾಚಾರ ಮುಕ್ತ ಭಾರತ ನಿರ್ಮಾಣಕ್ಕೆ ಬಿಜೆಪಿ ಅವಶ್ಯ ಎಂದು ಪ್ರಧಾನಿ ಮೋದಿ ಅಭಿಪ್ರಾಯಪಟ್ಟರು.

Mar 29, 2023 07:21 AM IST

ಚೀನಾ ಗುಮ್ಮ: ರಕ್ಷಣಾ ಬಜೆಟ್‌ ಗಾತ್ರ ಹೆಚ್ಚಳಕ್ಕೆ ಮುಂದಾದ ಅಮೆರಿಕ

ಚೀನಾದೊಂದಿಗಿನ ತೀವ್ರ ಸ್ಪರ್ಧೆಯ ಹಿನ್ನೆಲೆಯಲ್ಲಿ, ಅಮೆರಿಕವು ತನ್ನ ರಕ್ಷಣಾ ಬಜೆಟ್‌ ಗಾತ್ರವನ್ನು ಹೆಚ್ಚಿಸಿಕೊಳ್ಳಲು ಮುಂದಾಗಿದೆ. ಈ ಕುರಿತು ಮಾಹಿತಿ ನೀಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಲಾಯ್ಡ್‌ ಆಸ್ಟಿನ್‌, ಬರೋಬ್ಬರಿ 842 ಶತಕೋಟಿ ಅಮೆರಿಕನ್‌ ಡಾಲರ್ ಬಜೆಟ್ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

Mar 29, 2023 07:20 AM IST

ಇಂಗ್ಲೆಂಡ್‌ ಭೇಟಿಗೆ ಸಜ್ಜಾದ ಬೈಡನ್:‌ ಭಯೋತ್ಪಾದಕ ದಾಳಿ ಬೆದರಿಕೆ ತೀವ್ರ!

ಅಮೆರಿಕ ಅಧ್ಯಕ್ಷ ಜೋ ಬೈಡನ್‌ ಅವರು ಇಂಗ್ಲೆಂಡ್‌ಗೆ ಭೇಟಿ ನೀಡಲಿದ್ದು, ಇದಕ್ಕೂ ಮೊದಲೇ ಉತ್ತರ ಐರ್ಲೆಂಡ್‌ನಲ್ಲಿ ಭಯೋತ್ಪಾದಕ ದಾಳಿಯ ಬೆದರಿಕೆ ಹೆಚ್ಚಾಗಿದೆ. ಬೈಡನ್‌ ಭೇಟಿ ಸಂದರ್ಭದಲ್ಲಿ ಭಯೋತ್ಪಾದಕ ದಾಳಿಗಳು ನಡೆಯಬಹುದು ಎಂದು ಗುಪ್ತಚರ ಮೂಲಗಳು ಎಚ್ಚರಿಕೆ ನೀಡಿವೆ.

Mar 29, 2023 07:20 AM IST

ಸಿಎಂ ಬೊಮ್ಮಾಯಿ ಆಪ್ತ ಮಂಜುನಾಥ್‌ ಕುನ್ನೂರ ಕಾಂಗ್ರೆಸ್‌ ಸೇರ್ಪಡೆ!

ಕಾಂಗ್ರೆಸ್ ಸೇರ್ಪಡೆಯಾದ ಮಾಜಿ ಸಂಸದ, ಹಾವೇರಿ ಜಿಲ್ಲೆ ಶಿಗ್ಗಾವ್ ನ ಬಿಜೆಪಿ ಮುಖಂಡ ಹಾಗೈ ಸಿಎಂ ಬಸವರಾಜ ಬೊಮ್ಮಾಯಿ ಅವರ ಆಪ್ತ ಮಂಜುನಾಥ್ ಕುನ್ನೂರ ಹಾಗೂ ಅವರ ಪುತ್ರ ರಾಜು ಕುನ್ನೂರ ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಅದೇ ರೀತಿ ಕೆ.ಆರ್. ಪೇಟೆಯ ಜೆಡಿಸ್ ನಾಯಕ ದೇವರಾಜ್, ಶಿವಮೊಗ್ಗದ ಬಿಜೆಪಿ ಮುಖಂಡ ಅರುಣ್ ಕೂಡ ಕಾಂಗ್ರೆಸ್‌ ಪಕ್ಷವನ್ನು ಸೇರಿಕೊಂಡಿದ್ದಾರೆ.

ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮ
ಕಾಂಗ್ರೆಸ್‌ ಸೇರ್ಪಡೆ ಕಾರ್ಯಕ್ರಮ (Verified Twitter)

    ಹಂಚಿಕೊಳ್ಳಲು ಲೇಖನಗಳು