logo
ಕನ್ನಡ ಸುದ್ದಿ  /  latest news  /  March 30 Kannada News Updates: ಅಮೆರಿಕ ಸೇನೆಯ 2 ಹೆಲಿಕಾಪ್ಟರ್‌ಗಳು ಪತನ: 9 ಯೋಧರು ಹುತಾತ್ಮ
ಸಾಂದರ್ಭಿಕ ಚಿತ್ರ

March 30 Kannada News Updates: ಅಮೆರಿಕ ಸೇನೆಯ 2 ಹೆಲಿಕಾಪ್ಟರ್‌ಗಳು ಪತನ: 9 ಯೋಧರು ಹುತಾತ್ಮ

Mar 30, 2023 10:21 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Mar 30, 2023 10:21 PM IST

ಏಪ್ರಿಲ್ 5ರಂದು ಕೋಲಾರದಿಂದಲೇ ಸತ್ಯಮೇವ ಜಯತೆ ಆಂದೋಲನಕ್ಕೆ ರಾಹುಲ್ ಗಾಂಧಿಯಿಂದ ಚಾಲನೆ

ಮೋದಿ ಉಪನಾಮ' ಹೇಳಿಕೆ ನೀಡಿ ಲೋಕಸಭೆಯಿಂದ ಅನರ್ಹಗೊಂಡಿರುವ ಕಾಂಗ್ರೆಸ್​ ನಾಯಕ ರಾಹುಲ್​ ಗಾಂಧಿ ಎಲ್ಲಿ ಆ ಹೇಳಿಕೆ ನೀಡಿದ್ದರೋ ಅಲ್ಲಿಗೆ ಬಂದು ಅಂದರೆ ಕೋಲಾರದಲ್ಲಿ ಕಾಂಗ್ರೆಸ್ ಪಕ್ಷದ ಸತ್ಯಮೇವ ಜಯತೆ ಆಂದೋಲನಕ್ಕೆ ಚಾಲನೆ ನೀಡಿ ಮಾತನಾಡಲಿದ್ದಾರೆ ಎಂದು ಕಾಂಗ್ರೆಸ್ ಧುರೀಣ ಎಮ್ ಆರ್ ಸೀತಾರಾಮ್ ತಿಳಿಸಿದ್ದಾರೆ. 

Mar 30, 2023 08:19 PM IST

ಅಮೆರಿಕ ಸೇನೆಯ 2 ಹೆಲಿಕಾಪ್ಟರ್‌ಗಳು ಪತನ: 9 ಯೋಧರು ಹುತಾತ್ಮ

ಕೆಂಟುಕಿಯಲ್ಲಿ ತರಬೇತಿ ಕಾರ್ಯಾಚರಣೆಯಲ್ಲಿದ್ದ ಅಮೆರಿಕ ಸೇನೆಯ 2 ಬ್ಲ್ಯಾಕ್ ಹಾಕ್ ಹೆಲಿಕಾಪ್ಟರ್‌ಗಳು ಪತನವಾಗಿದ್ದು, ಒಂಬತ್ತು ಸೈನಿಕರು ಹುತಾತ್ಮರಾಗಿದ್ದಾರೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.

Mar 30, 2023 06:34 PM IST

ಮೆಟ್ಟಿಲುಬಾವಿ ಕುಸಿತ: ಸಾವಿನ ಸಂಖ್ಯೆ 13ಕ್ಕೆ ಏರಿಕೆ

ಮಧ್ಯಪ್ರದೇಶದ ಇಂದೋರ್‌ನಲ್ಲಿ ದೇವಸ್ಥಾನದ ಮೆಟ್ಟಿಲುಬಾವಿ ಕುಸಿತದಲ್ಲಿ ಮೃತಪಟ್ಟವರ ಸಂಖ್ಯೆ 13 ಕ್ಕೆ ಏರಿಕೆಯಾಗಿದೆ.

Mar 30, 2023 05:18 PM IST

ಮೊಸರು ಪ್ಯಾಕೆಟ್‌ ಮೇಲೆ 'ದಹಿ' ಮುದ್ರಣ ಆದೇಶ ಹಿಂಪಡೆದ ಎಫ್‌ಎಸ್‌ಎಸ್‌ಎಐ

ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ಹಿಂದಿ ಹೇರಿಕೆ ಬಗ್ಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಮೊಸರಿನ ಪ್ಯಾಕೆಟ್‌ಗಳ ಮೇಲೆ ಹಿಂದಿಯಲ್ಲಿ ‘ದಹಿ’ ಎಂದು ಮುದ್ರಿಸುವಂತೆ ಹೊರಡಿಸಿದ್ದ ಆದೇಶವನ್ನು ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (ಎಫ್‌ಎಸ್‌ಎಸ್‌ಎಐ) ಇಂದು (ಗುರುವಾರ -ಮಾರ್ಚ್​ 30) ಹಿಂಪಡೆದಿದೆ.

Mar 30, 2023 04:07 PM IST

ದೇವಾಲಯದ ಮೆಟ್ಟಿಲುಬಾವಿ ಕುಸಿದು ನಾಲ್ವರು ಸಾವು

ಮಧ್ಯಪ್ರದೇಶದ ಇಂದೋರ್‌ನಲ್ಲಿ ದೇವಸ್ಥಾನದ ಮೆಟ್ಟಿಲುಬಾವಿ ಕುಸಿದು ನಾಲ್ವರು ಸಾವನ್ನಪ್ಪಿದ್ದಾರೆ. ಒಟ್ಟು 19 ಮಂದಿಯನ್ನು ರಕ್ಷಿಸಲಾಗಿದೆ. ಇಂದೋರ್‌ನ ಬೆಳೇಶ್ವರ ಮಹಾದೇವ್ ಜುಲೇಲಾಲ್ ದೇವಸ್ಥಾನದಲ್ಲಿರುವ ಪುರಾತನ ಮೆಟ್ಟಿಲುಬಾವಿ ಇದಾಗಿದೆ. ರಕ್ಷಣಾ ಕಾರ್ಯಾಚರಣೆ ಮುಂದುವರೆದಿದೆ.

Mar 30, 2023 03:01 PM IST

ರಾಮ ನವಮಿ ಆಚರಣೆ ವೇಳೆ ದೇಗುಲಕ್ಕೆ ಬೆಂಕಿ

ಇಂದು ದೇಶದೆಲ್ಲೆಡೆ ರಾಮ ನವಮಿ ಸಂಭ್ರಮ ಜೋರಾಗಿದೆ. ಆದರೆ ಆಂಧ್ರ ಪ್ರದೇಶದ ಪಶ್ಚಿಮ ಗೋದಾವರಿ ಜಿಲ್ಲೆಯ ದುವ ಗ್ರಾಮದ ವೇಣುಗೋಪಾಲ ಸ್ವಾಮಿ ದೇವಾಲಯದಲ್ಲಿ ರಾಮ ನವಮಿ ಆಚರಣೆ ವೇಳೆ ಅಗ್ನಿ ಅವಘಡ ಸಂಭವಿಸಿದೆ. ದೇಗುಲಕ್ಕೆ ಬೆಂಕಿ ಹೊತ್ತಿಕೊಳ್ಳುತ್ತಿದ್ದಂತೆಯೇ ಭಕ್ತರು ಭಯಭೀತರಾಗಿ ಓಡಿದ್ದಾರೆ. ಸದ್ಯ ಯಾವುದೇ ಸಾವು-ನೋವು ಸಂಭವಿಸಿಲ್ಲ.

Mar 30, 2023 01:45 PM IST

ಕಾಂಗ್ರೆಸ್‌ ಪಕ್ಷಕ್ಕೆ ಸೇರ್ಪಡೆಗೊಂಡ ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್

ಗುಬ್ಬಿ ಕ್ಷೇತ್ರದ ಜೆಡಿಎಸ್ ಶಾಸಕ ಶ್ರೀನಿವಾಸ್ ಬೆಂಗಳೂರಿನಲ್ಲಿ ಕರ್ನಾಟಕ ಕಾಂಗ್ರೆಸ್ ಮುಖ್ಯಸ್ಥ ಡಿಕೆ ಶಿವಕುಮಾರ್ ಮತ್ತು ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಅವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾದರು.

Mar 30, 2023 11:45 AM IST

‘ಸನ್ಯಾಸ ದೀಕ್ಷಾ ಮಹೋತ್ಸವ’ದಲ್ಲಿ ಭಾಗಿಯಾದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್

ಹರಿದ್ವಾರದ ಹರ್ ಕಿ ಪೌರಿಯಲ್ಲಿ ಆಯೋಜಿಸಲಾದ 'ಸನ್ಯಾಸ ದೀಕ್ಷಾ ಮಹೋತ್ಸವ'ದಲ್ಲಿ ಯೋಗ ಗುರು ರಾಮದೇವ್ ಮತ್ತು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭಾಗವಹಿಸಿದ್ದರು.

Mar 30, 2023 10:25 AM IST

ಮಹಾರಾಷ್ಟ್ರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ: ಪೊಲೀಸ್‌ ವಾಹನಗಳಿಗೆ ಬೆಂಕಿ!

ನಿನ್ನೆ ಸಂಜೆ ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿ,  ಕ್ಷುಲ್ಲಕ ಕಾರಣಕ್ಕೆ ಎರಡು ಗುಂಪುಗಳ ನಡುವೆ ಹಿಂಸಾತ್ಮಕ ಘರ್ಷಣೆ ನಡೆದಿದ್ದು, ಕಿಡಿಗೇಡಿಗಳು ಪೊಲೀಸ್‌ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.  ರಾಮ ನವಮಿ ಪ್ರಯುಕ್ತ ನಡೆದ ಮೆರವಣಿಗೆಯಲ್ಲಿ ಮಸೀದಿ ಮುಂದೆ ಸಂಗೀತ ಹಚ್ಚಿರುವ ವಿಚಾರದಲ್ಲಿ ಎರಡು ಗುಂಪುಗಳ ನಡುವೆ ಘರ್ಷಣೆ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Mar 30, 2023 09:15 AM IST

ಪ್ರಜಾಪ್ರಭುತ್ವದ ಮೂಲಭೂತ ತತ್ವಗಳ ಪಾಲನೆ ಮುಖ್ಯ: ರಾಹುಲ್‌ ಅನರ್ಹತೆಗೆ ಜರ್ಮನಿ ಪ್ರತಿಕ್ರಿಯೆ

ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾದ ನಂತರ ಲೋಕಸಭೆಯಿಂದ ಅನರ್ಹಗೊಂಡಿರುವ ರಾಹುಲ್ ಗಾಂಧಿಯವರ ಪ್ರಕರಣದಲ್ಲಿ, "ಪ್ರಜಾಪ್ರಭುತ್ವದ ಮೂಲಭೂತ ತತ್ವಗಳು" ಅನ್ವಯಿಸಬೇಕು ಎಂದು ಜರ್ಮನಿ ಅಭಿಪ್ರಾಯಪಟ್ಟಿದೆ.

Mar 30, 2023 06:29 AM IST

ದೇಶಾದ್ಯಂತ ರಾಮ ನವಮಿ ಸಂಭ್ರಮ: ದೇವಸ್ಥಾನಗಳಿಗೆ ಲಗ್ಗೆ ಇಟ್ಟ ಭಕ್ತ ಸಮೂಹ

ದೇಶಾದ್ಯಂತ ರಾಮ ನವಮಿ ಸಂಭ್ರಮ ಕಳೆಗಟ್ಟಿದ್ದು, ಪ್ರಭು ಶ್ರೀರಾಮನ ಭಕ್ತರು ಬೆಳಗ್ಗೆಯಿಂದಲೇ ದೇವಸ್ಥಾನಗಳಿಗೆ ಭೇಟಿ ನೀಡುತ್ತಿದ್ದಾರೆ. ಅದರಂತೆ ರಾಷ್ಟ್ರ ರಾಜಧಾನಿ ನವದೆಹಲಿಯಝಂಡೆವಾಲನ್ ದೇವಸ್ಥಾನಕ್ಕೆ ಭೇಟಿ ನೀಡಿದ ಭಕ್ತರು, ವಿಶೇಷ ಪ್ರಾರ್ಥನೆ ಸಲ್ಲಿಸಿದರು.

Mar 30, 2023 06:29 AM IST

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ನಿರ್ಧಾರ ಸ್ವಾಗತಿಸಿದ ಬಿಜೆಪಿ

ಚುನಾವಣಾ ಆಯೋಗದ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ನಿರ್ಧಾರವನ್ನು ಸ್ವಾಗತಿಸಿರುವ ಆಡಲಿತಾರೂಢ ಬಿಜೆಪಿ, ಮೇ 13ರಂದು ರಾಜ್ಯದಲ್ಲಿ ಮತ್ತೆ ಕಮಲ ಅರಳಲಿದೆ ಎಂದು ಭರವಸೆ ವ್ಯಕ್ತಪಡಿಸಿದೆ.

Mar 30, 2023 06:27 AM IST

ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್‌ ಖಾತೆಗೆ ತಡೆ

ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್‌ ಖಾತೆಯನ್ನು ತಡೆಹಿಡಿಯಲಾಗಿದೆ. ಭಾರತದಲ್ಲಿ ಪಾಕಿಸ್ತಾನ ಸರ್ಕಾರದ ಅಧಿಕೃತ ಟ್ವಿಟ್ಟರ್‌ ಖಾತೆಯನ್ನು ನಿಷೇಧಿಸಿರುವುದು ಇದು ಮೂರನೇ ಬಾರಿ.

Mar 30, 2023 06:27 AM IST

ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ನಿರ್ಧಾರ ಸ್ವಾಗತಿಸಿದ ಕಾಂಗ್ರೆಸ್‌

ಚುನಾವಣಾ ಆಯೋಗದ ಕರ್ನಾಟಕ ವಿಧಾನಸಭೆ ಚುನಾವಣೆ ದಿನಾಂಕ ಘೋಷಣೆ ನಿರ್ಧಾರವನ್ನು ಸ್ವಾಗತಿಸಿರುವ ಕಾಂಗ್ರೆಸ್‌, ಮೇ 10 ಕೇವಲ ಮತದಾನದ ದಿನವಲ್ಲ, ಕಾಂಗ್ರೆಸ್ ಅಧಿಕಾರಕ್ಕೆ ಬರುವ ಹಾಗೂ ಜನರ ಭವಿಷ್ಯ ನಿರ್ಮಾಣ ಮಾಡುವ ದಿನ ಎಂದು ಅಭಿಪ್ರಾಯಪಟ್ಟಿದೆ.

Mar 30, 2023 06:22 AM IST

ಪುರಿ ಬೀಚ್‌ನ ಮರಳಿನಲ್ಲಿ ಅರಳಿದ ಅಯೋಧ್ಯೆಯ ರಾಮ ಮಂದಿರ

ರಾಮನವಮಿಯ ಮುನ್ನಾ ದಿನದಂದು, ಒಡಿಶಾದ ಪುರಿ ಬೀಚ್‌ನಲ್ಲಿ ಖ್ಯಾತ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್ ಅವರು, ಅಯೋಧ್ಯೆಯ ರಾಮ ಮಂದಿರದ ಕಿರುಚಿತ್ರದೊಂದಿಗೆ ಭಗವಾನ್ ಶ್ರೀ ರಾಮನ ಮೂರ್ತಿಯನ್ನು ರಚಿಸಿದ್ದಾರೆ.

ರಾಮ ಮಂದಿರ ಕಲಾಕೃತಿ
ರಾಮ ಮಂದಿರ ಕಲಾಕೃತಿ (ANI)

    ಹಂಚಿಕೊಳ್ಳಲು ಲೇಖನಗಳು