logo
ಕನ್ನಡ ಸುದ್ದಿ  /  latest news  /  Karnataka Election 2023 Live: ಕನಕಗಿರಿಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ, ಜನರೊಂದಿಗೆ ಸಂವಾದ
ಕನಕಗಿರಿಯಲ್ಲಿ ಪ್ರಿಯಾಂಕಾ ಗಾಂಧಿ

Karnataka Election 2023 LIVE: ಕನಕಗಿರಿಯಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ, ಜನರೊಂದಿಗೆ ಸಂವಾದ

May 04, 2023 03:24 PM IST

ಕರ್ನಾಟಕ ವಿಧಾನಸಭೆ ಚುನಾವಣೆ (Karnataka Assembly Election 2023) ಮೇ 10ರಂದು ನಡೆಯಲಿದ್ದು, ಮೇ 13ಕ್ಕೆ ಫಲಿತಾಂಶ ಪ್ರಕಟವಾಗಲಿದೆ. ರಾಜ್ಯದಲ್ಲಿ ಈಗ ಚುನಾವಣಾ ಪ್ರಚಾರ ರಂಗೇರಿದ್ದು, ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್‌, ಆಮ್‌ಆದ್ಮಿ, ಪಕ್ಷೇತರ ಅಭ್ಯರ್ಥಿಗಳು ಸೇರಿದಂತೆ ಚುನಾವಣಾ ಕಣದಲ್ಲಿರುವ ಅಭ್ಯರ್ಥಿಗಳ ಪರವಾಗಿ ಪ್ರಚಾರ ಜೋರಾಗಿದೆ.

May 04, 2023 03:24 PM IST

ಡಿಕೆಶಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಪಕ್ಕದಲ್ಲೇ ಹುಲ್ಲಿಗೆ ಬೆಂಕಿ

ಕೆಲ ದಿನಗಳ ಹಿಂದೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ಗೆ ರಣಹದ್ದು ಡಿಕ್ಕಿ ಹೊಡೆದಿತ್ತು. ಇದೀಗ ಹೊನ್ನಾವರದಲ್ಲಿ ಹೆಲಿಕಾಪ್ಟರ್ ಲ್ಯಾಂಡ್ ಆಗುವ ಜಾಗದಲ್ಲಿ ಸ್ಮೋಕ್ ಕ್ಯಾಂಡಲ್ ಪ್ರಯೋಗದ ಸಂದರ್ಭ ಹುಲ್ಲಿಗೆ ಬೆಂಕಿ ಹತ್ತಿಕೊಂಡಿತು. ಬಳಿಕ ಅಗ್ನಿಶಾಮಕದಳ ಸಿಬಂದಿ ಬೆಂಕಿ ನಂದಿಸಿದರು.

May 04, 2023 02:10 PM IST

ಸುದೀಪ್​ ನೋಡಲು ಮುಗಿಬಿದ್ದವರ ಮೇಲೆ ಲಘು ಲಾಠಿ ಪ್ರಹಾರ

ರಾಜ್ಯ ವಿಧಾನಸಭೆ ಚುನಾವಣೆಗೆ ಬಿಜೆಪಿ ಪರ ಪ್ರಚಾರ ಮಾಡುತ್ತಿರುವ ನಟ ಕಿಚ್ಚ ಸುದೀಪ್​ ಇಂದು  ಕೆ.ಶಿವನಗೌಡ ನಾಯಕ್ ಪರ ಪ್ರಚಾರಕ್ಕೆ ದೇವದುರ್ಗಕ್ಕೆ ಬಂದಿದ್ದಾರೆ. ಈ ವೇಳೆ ಸುದೀಪ್​ ನೋಡಲು ಮುಗಿಬಿದ್ದ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.

May 04, 2023 11:49 AM IST

ಕಿಚ್ಚ ಸುದೀಪ್ ಇಂದಿನ​ ಪ್ರಚಾರದ ವಿವರ ಹೀಗಿದೆ

May 04, 2023 10:45 AM IST

ಕಾಂಗ್ರೆಸ್​ ಪ್ರಣಾಳಿಕೆ ಪ್ರತಿ ಸುಟ್ಟು ಹಾಕಿದ ಈಶ್ವರಪ್ಪ

ಬಜರಂಗದಳ ನಿಷೇಧದ ಉಲ್ಲೇಖವಿರುವ ಕಾಂಗ್ರೆಸ್​ ಪ್ರಣಾಳಿಕೆಯ ಪ್ರತಿಯನ್ನು ಮಾಜಿ ಸಚಿವ ಕೆ ಎಸ್​ ಈಶ್ವರಪ್ಪ  ಕಲಬುರಗಿಯಲ್ಲಿ ಸುಟ್ಟು ಹಾಕಿದ್ದಾರೆ. 

May 04, 2023 09:24 AM IST

ಬೀದರ್​ನಲ್ಲಿ ಪ್ರಿಯಾಂಕಾ ಗಾಂಧಿ ಪ್ರಚಾರ 

ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಅವರು ಇಂದು ಬೀದರ್​ ದಕ್ಷಿಣ ಕ್ಷೇತ್ರದಲ್ಲಿ ಪ್ರಚಾರ ಸಭೆಯಲ್ಲಿ ಪಾಲ್ಗೊಂಡಿದ್ದಾರೆ.

May 04, 2023 08:04 AM IST

ಕಲಬುರಗಿಯಲ್ಲಿ ಇಂದು ಅಮಿತ್​ ಶಾ ಪ್ರಚಾರ 

ಕೇಂದ್ರ ಗೃಹ ಸಚಿವ ಅಮಿತ್ ಶಾ ಇಂದು ಕಲಬುರಗಿಗೆ ಆಗಮಿಸುತ್ತಿದ್ದು, ಅಫಜಲಪುರದಲ್ಲಿ ಸಾರ್ವಜನಿಕ ಸಭೆಗಳಲ್ಲಿ ಪಾಲ್ಗೊಳ್ಳಲಿದ್ದಾರೆ.

May 04, 2023 07:07 AM IST

ಮೇ 6 ರಂದು ಹುಬ್ಬಳ್ಳಿಯಲ್ಲಿ ಸೋನಿಯಾ ಗಾಂಧಿ ಬೃಹತ್​ ರ‍್ಯಾಲಿ

ಎಐಸಿಸಿ ಮಾಜಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಕಾಂಗ್ರೆಸ್​ ಪರ ಪ್ರಚಾರಕ್ಕೆ ಮೇ 6 ರಂದು ಕರ್ನಾಟಕಕ್ಕೆ ಆಗಮಿಸಲಿದ್ದು, ಹುಬ್ಬಳ್ಳಿಯಿಂದ ಮತಬೇಟೆ ಆರಂಭಿಸಲಿದ್ದಾರೆ. ಅಂದು ಹುಬ್ಬಳ್ಳಿಯಲ್ಲಿ ಬೃಹತ್​ ರ‍್ಯಾಲಿ ಉದ್ದೇಶಿಸಿ ಮಾತನಾಡಲಿದ್ದಾರೆ.

May 03, 2023 03:28 PM IST

ಕರ್ನಾಟಕದ ಪದ್ಮ ಪ್ರಶಸ್ತಿ ಪುರಸ್ಕೃತ ತುಳಸಿಗೌಡ, ಸುಕ್ರಿ ಬೊಮ್ಮಗೌಡರನ್ನು ಭೇಟಿ ಮಾಡಿದ ಮೋದಿ

ಉತ್ತರ ಕನ್ನಡ ಜಿಲ್ಲೆಯ ಅಂಕೋಲಾದಲ್ಲಿ ಪದ್ಮ ಪ್ರಶಸ್ತಿ ಪುರಸ್ಕೃತರಾದ ತುಳಸಿಗೌಡ ಮತ್ತು ಸುಕ್ರಿ ಬೊಮ್ಮಗೌಡ ಅವರನ್ನು ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದರು.

May 03, 2023 02:19 PM IST

ಮೋದಿಗೆ ಕೇಸರಿ ಶಾಲು, ರುದ್ರಾಕ್ಷಿ ಹಾರ ಹಾಕಿದ ಕಟೀಲ್​

ಮೂಡುಬಿದಿರೆಗೆ ಬಂದಿರುವ ಪ್ರಧಾನಿ ಮೋದಿಗೆ ಕೇಸರಿ ಶಾಲು ಹೊದಿಸಿ, ರುದ್ರಾಕ್ಷಿ ಮಾಲೆ ಹಾಕಿ ಹಾಗೂ ಪೇಟ ತೊಡಿಸಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್​ ಕುಮಾರ್ ಕಟೀಲ್​ ಅವರು ಸ್ವಾಗತಿಸಿದರು. 

May 03, 2023 12:12 PM IST

ಮಂಗಳೂರಲ್ಲಿ ಮೋದಿ, ತುಳುವಿನಲ್ಲೇ ಭಾಷಣ ಆರಂಭಿಸಿದ ಪ್ರಧಾನಿ

ಮಂಗಳೂರಿನ ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಮುಲ್ಕಿಯಲ್ಲಿ ನಡೆಯುತ್ತಿರುವ ಬಿಜೆಪಿ ಸಾರ್ವಜನಿಕ ಸಮಾವೇಶದಲ್ಲಿ ಪ್ರಧಾನಿ ಮೋದಿ ಪಾಲ್ಗೊಂಡಿದ್ದು, ತುಳುವಿನಲ್ಲಿಯೇ ಭಾಷಣ ಆರಂಭಿಸಿದ್ದಾರೆ. ಪರಶುರಾಮ ಕ್ಷೇತ್ರದ ಎನ್ನ ಮೋಕೆದ ತುಳುವಪ್ಪೆ ಜೋಕುಲೇಗ್ ಸೊಲ್ಮೆಲು!  (ಪರಶುರಾಮ ಕ್ಷೇತ್ರದ ನನ್ನ ಪ್ರೀತಿಯ, ತುಳು ತಾಯಿಯ ಮಕ್ಕಳಿಗೆಲ್ಲ ನಮಸ್ಕಾರಗಳು!) ಎಂದು ಹೇಳಿದ್ದಾರೆ.

May 03, 2023 11:29 AM IST

ಮಂಗಳೂರಿಗೆ ಆಗಮಿಸಿದ ಮೋದಿ

ಮುಲ್ಕಿಯಲ್ಲಿ ಆಯೋಜಿಸಲಾಗಿರುವ ಸಮಾವೇಶದಲ್ಲಿ ಪಾಲ್ಗೊಳ್ಳಲು ಪ್ರಧಾನಿ ನರೇಂದ್ರ ಮೋದಿ ಅವರು ಕಲಬುರಗಿಯಿಂದ ಮಂಗಳೂರಿಗೆ ಆಗಮಿಸಿದ್ದಾರೆ. 

May 03, 2023 10:27 AM IST

ಡಿಕೆಶಿ ವರುಣಾ ಪ್ರಚಾರ ರದ್ದು

 ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರು ಇಂದು​​​ ವರುಣಾ ಕ್ಷೇತ್ರದಲ್ಲಿ ನಡೆಸಬೇಕಿದ್ದ ಪ್ರಚಾರ ರದ್ದಾಗಿದೆ.  ಆದರೆ, ನಂಜನಗೂಡು ಹಾಗೂ ಮೈಸೂರು ನಗರದಲ್ಲಿ ಪ್ರಚಾರ ನಡೆಸಲಿದ್ದಾರೆ.

May 03, 2023 09:06 AM IST

 ರಾಮನಗರದಲ್ಲಿಂದು ಜೆಪಿ ನಡ್ಡಾ ಪ್ರಚಾರ

ರಾಮನಗರ ಜಿಲ್ಲೆಯಲ್ಲಿ ಇಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪ್ರಚಾರ ನಡೆಸಲಿದ್ದಾರೆ. ರಾಮನಗರ ಕ್ಷೇತ್ರದ ಹಾರೋಹಳ್ಳಿಯಲ್ಲಿ, ಮತ್ತು ಮಾಗಡಿಯಲ್ಲಿ ರೋಡ್​ಶೋ ನಡೆಸಲಿದ್ದಾರೆ. 

May 03, 2023 07:20 AM IST

ದ್ವೇಷ ಭಾಷಣ; ಶಾ, ಯೋಗಿ, ನಡ್ಡಾ ವಿರುದ್ಧ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್​ ದೂರು

ಕರ್ನಾಟಕ ವಿಧಾನಸಭಾ ಚುನಾವಣೆಗೆ ಎಲ್ಲಾ ಪಕ್ಷಗಳಿಂದಲೂ ಅಬ್ಬರದ ಪ್ರಚಾರ ನಡೆಯುತ್ತಿದ್ದು, ಟೀಕೆಗಳ ಭರದಲ್ಲಿ ದ್ವೇಷ ಭಾಷಣ ಮಾಡಲಾಗುತ್ತಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಬಿಜೆಪಿ ಸ್ಟಾರ್​ ಪ್ರಚಾರಕರಾದ ಕೇಂದ್ರ ಗೃಹ ಸಚಿವ ಅಮಿತ್ ಶಾ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ದ್ವೇಷಪೂರಿತ ಭಾಷಣ ಮಾಡುತ್ತಿದ್ದಾರೆ ಎಂದು ಆರೋಪಿ ಕಾಂಗ್ರೆಸ್​ ಚುನಾವಣಾ ಆಯೋಗಕ್ಕೆ ದೂರು ನೀಡಿದೆ.

May 03, 2023 07:20 AM IST

ಎಎಪಿಯಿಂದ ಶಿವಾಜಿನಗರ ಕ್ಷೇತ್ರದ ಪ್ರಣಾಳಿಕೆ ಬಿಡುಗಡೆ

ಶಿವಾಜಿನಗರ ವಿಧಾನಸಭಾ ಕ್ಷೇತ್ರದ ಪ್ರಣಾಳಿಕೆಯನ್ನು ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷ ಪೃಥ್ವಿ ರೆಡ್ಡಿ ಬಿಡುಗಡೆ ಮಾಡಿದ್ದಾರೆ. ಪಕ್ಷದಿಂದ ಸ್ಪರ್ಧಿಸಿರುವ 209 ಕ್ಷೇತ್ರಗಳಲ್ಲಿಯೂ ಸಹ ಇದೇ ರೀತಿ ಕ್ಷೇತ್ರವಾರು ಪ್ರತ್ಯೇಕ ಪ್ರಣಾಳಿಕೆಯನ್ನು ನೀಡುವ ಮೂಲಕ ಮತದಾರರುಗಳಿಗೆ ಉತ್ತಮ ಪರ್ಯಾಯ ಆಯ್ಕೆಯನ್ನು ಈ ಮೂಲಕ ನೀಡಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ. ಶಿವಾಜಿನಗರವನ್ನು ವಿಶ್ವದರ್ಜೆಯ ಸೌಲಭ್ಯಗಳುಳ್ಳ, ನಾಗರಿಕಸ್ನೇಹಿಯಾದ ನಗರ ಕೇಂದ್ರವನ್ನಾಗಿ ಮಾಡುವುದು ಈ ಪ್ರಣಾಳಿಕೆಯಲ್ಲೊಂದಾಗಿದೆ.

May 03, 2023 07:20 AM IST

ಮತದಾರರನ್ನು ಬೆದರಿಸಿ ರೌಡಿಸಂ ನಡೆಸಿದರೆ ಕಠಿಣ ಕ್ರಮ - ತುಷಾರ್ ಗಿರಿನಾಥ್

ಸಿಲಿಕಾನ್ ಸಿಟಿಯಲ್ಲಿ ಮತದಾರರನ್ನು ಬೆದರಿಸಿ ರೌಡಿಸಂ, ಅಕ್ರಮ ಚಟುಚಟಿಕೆ ನಡೆಸಿದ್ದು ಕಂಡು ಬಂದರೆ ಅಂತವರ ಹೆಡೆಮುರಿ ಕಟ್ಟಲಾಗುವುದು ಎಂದು ಬೆಂಗಳೂರು ಜಿಲ್ಲಾ ಚುನಾವಣಾಧಿಕಾರಿಯಾಗಿರುವ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಎಚ್ಚರಿಕೆ ನೀಡಿದ್ದಾರೆ‌.

May 03, 2023 07:20 AM IST

ರೈತ ಪ್ರಣಾಳಿಕೆ ಕುರಿತು ಮೇ 6 ರಂದು ಕಾಂಗ್ರೆಸ್ ಜೊತೆ ಚರ್ಚೆ

ರೈತ ಪ್ರಣಾಳಿಕೆಯ ಕುರಿತು ಮೇ 6 ರಂದು ಕಾಂಗ್ರೆಸ್ ಪಕ್ಷದೊಂದಿಗೆ ಚರ್ಚೆ ನಡೆಸಲಾಗುವುದು. ಅಂದು ರೈತರ ಬೆಂಬಲ ಯಾರಿಗೆ ಎಂದು ತಿಳಿಸಲಾಗುವುದು ಎಂದು ರೈತ ಮುಖಂಡ ಕುರುಬೂರು ಶಾಂತಕುಮಾರ್ ಹೇಳಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು