logo
ಕನ್ನಡ ಸುದ್ದಿ  /  latest news  /  August 14 Kannada News Updates: ಸ್ವಾತಂತ್ರ್ಯ ದಿನ ಹಿನ್ನೆಲೆ; ದೇಶಾದ್ಯಂತ ಭಾರಿ ಭದ್ರತೆ
ಕೆಂಪುಕೋಟೆ (PTI)

August 14 Kannada News Updates: ಸ್ವಾತಂತ್ರ್ಯ ದಿನ ಹಿನ್ನೆಲೆ; ದೇಶಾದ್ಯಂತ ಭಾರಿ ಭದ್ರತೆ

Aug 14, 2022 09:18 PM IST

ರಾಜ್ಯ, ದೇಶ ಹಾಗೂ ವಿದೇಶದ ಎಲ್ಲಾ ಬ್ರೇಕಿಂಗ್‌ ಸುದ್ದಿಗಳು ಇಲ್ಲಿ ಲಭ್ಯ. ಪ್ರತಿ ಕ್ಷಣದ ನಿಖರ ಸುದ್ದಿಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Aug 14, 2022 10:33 PM IST

ಸ್ವಾತಂತ್ರ್ಯ ದಿನ ಹಿನ್ನೆಲೆ; ದೇಶಾದ್ಯಂತ ಭಾರಿ ಭದ್ರತೆ

ನಾಳೆ 76 ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆ

ಇಂದೇ ದೇಶಾದ್ಯಂತ ಬಿಗಿ ಭದ್ರತೆ

ರಾಜಧಾನಿ ದೆಹಲಿ ಸೇರಿದಂತೆ ಜಮ್ಮು ಮತ್ತು ಕಾಶ್ಮೀರದಲ್ಲೂ ಭಾರಿ ಭದ್ರತಾ ಸಿಬ್ಬಂದಿ ನಿಯೋಜನೆ

ಆಚರಣೆಗೆ ಯಾವುದೇ ಅಡ್ಡಿಯಾಗದಂತೆ ನೋಡಿಕೊಳ್ಳಲು ರಾಜ್ಯಾದ್ಯಂತ ಪೊಲೀಸರ ಕಟ್ಟೆಚ್ಚರ

ನಾಳೆ ದೆಹಲಿಯ ಐತಿಹಾಸಿಕ ಕೆಂಪು ಕೋಟೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಷಣ

ರಾಷ್ಟ್ರೀಯ ಸ್ಮಾರಕದ ರಕ್ಷಣೆಗಾಗಿ 10,000ಕ್ಕೂ ಹೆಚ್ಚು ಸಿಬ್ಬಂದಿ ನಿಯೋಜನೆ

ದೆಹಲಿ ಪೊಲೀಸರಿಂದ ಭಾರಿ ಭದ್ರತೆ

Aug 14, 2022 09:18 PM IST

ಸರ್ಕಾರಿ ಅಧಿಕಾರಿಗಳು ಇನ್ಮುಂದೆ ಹಲೋ ಎನ್ನುವಂತಿಲ್ಲ

ಮಹಾರಾಷ್ಟ್ರದ ಸರ್ಕಾರಿ ಅಧಿಕಾರಿಗಳು ಇನ್ಮುಂದೆ ಹಲೋ ಎನ್ನುವಂತಿಲ್ಲ.

ಸರ್ಕಾರಿ ಅಧಿಕಾರಿಗಳು ಮತ್ತು ಉದ್ಯೋಗಿಗಳು ಕರೆ ಸ್ವೀಕರಿಸಿದಾಗ ಹಲೋ ಬದಲಿಗೆ 'ವಂದೇ ಮಾತರಂ' ಹೇಳಬೇಕು.

ಈ ಕುರಿತು ಶೀಘ್ರದಲ್ಲೇ ಅಧಿಕೃತ ಆದೇಶ

ಮಹಾರಾಷ್ಟ್ರದ ಸಾಂಸ್ಕೃತಿಕ ವ್ಯವಹಾರಗಳ ಸಚಿವ ಸುಧೀರ್ ಮುಂಗಂತಿವಾರ್ ಘೋಷಣೆ

Aug 14, 2022 09:18 PM IST

ಸೇನಾ ಸಿಬ್ಬಂದಿಗೆ 8 ಶೌರ್ಯ ಚಕ್ರ ಪ್ರಶಸ್ತಿ

ನಾಯಕ್ ದೇವೇಂದ್ರ ಪ್ರತಾಪ್ ಸಿಂಗ್ ಅವರಿಗೆ ಸ್ವಾತಂತ್ರ್ಯ ದಿನದಂದು ದೇಶದ 2ನೇ ಅತ್ಯುನ್ನತ ಶಾಂತಿ ಪ್ರಶಸ್ತಿಯಾದ ಕೀರ್ತಿ ಚಕ್ರವನ್ನು ಪ್ರದಾನ ಮಾಡಲಾಗುತ್ತದೆ.

ಒಟ್ಟು 8 ಶೌರ್ಯ ಚಕ್ರಗಳನ್ನು ಸೇನಾ ಸಿಬ್ಬಂದಿಗೆ ನೀಡಲಾಗುತ್ತದೆ.

ಇದರಲ್ಲಿ 2 ಮರಣೋತ್ತರ ಪ್ರಶಸ್ತಿ

ಸಿಪಾಯಿ ಕರ್ಣ್ ವೀರ್ ಸಿಂಗ್ ಮತ್ತು ಗನ್ನರ್ ಜಸ್ಬೀರ್ ಸಿಂಗ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಗುತ್ತದೆ.

ನಾಯಕ್ ದೇವೇಂದ್ರ ಪ್ರತಾಪ್ ಸಿಂಗ್ ಈ ವರ್ಷದ ಜನವರಿ 29ರಂದು ಪುಲ್ವಾಮಾದಲ್ಲಿ ಕಾರ್ಯಾಚರಣೆಯ ಭಾಗವಾಗಿದ್ದರು.

ಭಾರತೀಯ ಸೇನೆಯ ಶೌರ್ಯ ಚಕ್ರ ಪ್ರಶಸ್ತಿ ಪುರಸ್ಕೃತರಲ್ಲಿ ಮೇಜರ್‌ಗಳಾದ ನಿತಿನ್ ಧನಿಯಾ, ಅಮಿತ್ ದಹಿಯಾ, ಸಂದೀಪ್ ಕುಮಾರ್, ಅಭಿಷೇಕ್ ಸಿಂಗ್, ಹವಿಲ್ದಾರ್ ಘನಶ್ಯಾಮ್ ಮತ್ತು ಲ್ಯಾನ್ಸ್ ನಾಯಕ್ ರಾಘವೇಂದ್ರ ಸಿಂಗ್ ಸೇರಿದ್ದಾರೆ.

Aug 14, 2022 09:18 PM IST

ಸ್ವಾತಂತ್ರ್ಯ ದಿನದ ಹಿನ್ನೆಲೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ನಾಳೆ ನಾವು ವಸಾಹತುಶಾಹಿ ಆಡಳಿತಗಾರರ ಸಂಕೋಲೆಯಿಂದ ನಮ್ಮನ್ನು ಮುಕ್ತಗೊಳಿಸಿದ ದಿನ

ಸ್ವಾತಂತ್ರ್ಯಕ್ಕಾಗಿ ಅಪಾರ ತ್ಯಾಗ ಮಾಡಿದವರಿಗೆ ನಾವು ನಮಸ್ಕರಿಸುತ್ತೇವೆ

ಪ್ರಜಾಪ್ರಭುತ್ವದ ನಿಜವಾದ ಸಾಮರ್ಥ್ಯವನ್ನು ಕಂಡುಹಿಡಿಯಲು ಜಗತ್ತಿಗೆ ಸಹಾಯ ಮಾಡಿದ ಕೀರ್ತಿ ಭಾರತಕ್ಕೆ ಸಲ್ಲುತ್ತದೆ.

ನಮ್ಮ ಹೆಣ್ಣುಮಕ್ಕಳು ರಾಷ್ಟ್ರದ ದೊಡ್ಡ ಭರವಸೆ

ಸ್ವಾತಂತ್ರ್ಯ ದಿನವನ್ನು ಆಚರಿಸುವುದರೊಂದಿಗೆ ನಾವು ‘ಭಾರತೀಯತೆ’ಯನ್ನು ಆಚರಿಸುತ್ತೇವೆ.

ಭಾರತವು ವೈವಿಧ್ಯತೆಯಿಂದ ಕೂಡಿದ ದೇಶ

ಆದರೂ ನಮ್ಮೆಲ್ಲರಲ್ಲಿ ಏಕತೆ ಇದೆ

'ಏಕ್ ಭಾರತ್, ಶ್ರೇಷ್ಠ ಭಾರತ್' ಎಂಬ ಮನೋಭಾವದೊಂದಿಗೆ ಒಟ್ಟಿಗೆ ನಡೆಯಲು ಇದು ಪ್ರೇರೇಪಿಸುತ್ತದೆ

ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

ಸ್ವಾತಂತ್ರ್ಯ ದಿನದ ಹಿನ್ನೆಲೆ ಭಾಷಣ

Aug 14, 2022 07:35 PM IST

ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್

ಅಟ್ಟಾರಿ-ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್

ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಕಾರ್ಯಕ್ರಮ ಆರಂಭ

ಅಮೃತಸರದ ಅಟ್ಟಾರಿ-ವಾಘಾ ಗಡಿ

Aug 14, 2022 05:10 PM IST

ಮಹಾರಾಷ್ಟ್ರದಲ್ಲಿ ಸಚಿವರಿಗೆ ಖಾತೆಗಳ ಹಂಚಿಕೆ

ಮಹಾರಾಷ್ಟ್ರ ಸರ್ಕಾರದ ಸಂಪುಟ ಖಾತೆಗಳ ಹಂಚಿಕೆ

ಗೃಹ ಮತ್ತು ಹಣಕಾಸು ಖಾತೆ ಇರಿಸಿಕೊಂಡ ಫಡ್ನವಿಸ್

ಸಂಪುಟ ವಿಸ್ತರಣೆಯ ಕೆಲ ದಿನಗಳ ಬಳಿಕ ಸಚಿವರಿಗೆ ಖಾತೆಗಳ ಹಂಚಿಕೆ

ಮುಖ್ಯಮಂತ್ರಿ ಏಕನಾಥ್ ಶಿಂಧೆಗೆ ನಗರಾಭಿವೃದ್ಧಿ ಖಾತೆ

ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ಗೆ ಗೃಹ ಮತ್ತು ಹಣಕಾಸು ಇಲಾಖೆ

Aug 14, 2022 05:10 PM IST

ಹೃದಯ ಸ್ತಂಭನವೇ ರಾಕೇಶ್ ಜುಂಜುನ್ವಾಲಾ ಅವರ ಸಾವಿಗೆ ಕಾರಣ

ಹೃದಯ ಸ್ತಂಭನವೇ ರಾಕೇಶ್ ಜುಂಜುನ್ವಾಲಾ ಅವರ ಸಾವಿಗೆ ಕಾರಣ

ಅವರು ದೀರ್ಘಕಾಲದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿದ್ದರು.

ದೀರ್ಘಕಾಲದ ಡಯಾಲಿಸಿಸ್‌ನಲ್ಲಿದ್ದರು. ಚಿಕಿತ್ಸೆಗೆ ಉತ್ತಮವಾಗಿ ಸ್ಪಂದಿಸುತ್ತಿದ್ದರು.

ಅವರಿಗೆ ಮಧುಮೇಹ ಇದ್ದು, ಇತ್ತೀಚೆಗೆ ಆಂಜಿಯೋಪ್ಲ್ಯಾಸ್ಟಿಗೆ ಒಳಗಾಗಿದ್ದರು.

ಬ್ರೀಚ್ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್ ಸಮದಾನಿ ಹೇಳಿಕೆ.

Aug 14, 2022 03:09 PM IST

ಪಂಜಾಬ್‌ನಲ್ಲಿ ಐಎಸ್‌ಐ ಬೆಂಬಲಿತ ಭಯೋತ್ಪಾದಕ ಘಟಕ ಭೇದಿಸಿದ ಪೊಲೀಸರು

ಪಾಕಿಸ್ತಾನದ ಐಎಸ್‌ಐ ಬೆಂಬಲಿತ ಭಯೋತ್ಪಾದನಾ ಘಟಕವನ್ನು ಭೇದಿಸಿದ ಪೊಲೀಸರು

75ನೇ ಸ್ವಾತಂತ್ರ್ಯ ದಿನಾಚರಣೆಗೆ ಒಂದು ದಿನ ಬಾಕಿ ಇರುವಂತೆ ಘಟನೆ.

ಪಂಜಾಬ್ ಪೊಲೀಸರಿಂದ ಬಂಧನ

ಕೆನಡಾ ಮೂಲದ ಅರ್ಶ್ ದಲ್ಲಾ ಮತ್ತು ಆಸ್ಟ್ರೇಲಿಯಾ ಮೂಲದ ಗುರ್ಜಂತ್ ಸಿಂಗ್ ಸಂಪರ್ಕ ಹೊಂದಿರುವ ನಾಲ್ವರ ಬಂಧನ

ಮೂರು ಹ್ಯಾಂಡ್ ಗ್ರೆನೇಡ್‌ಗಳು, ಒಂದು ಸುಧಾರಿತ ಸ್ಫೋಟಕ ಸಾಧನ (ಐಇಡಿ), ಎರಡು 9 ಎಂಎಂ ಪಿಸ್ತೂಲ್‌ಗಳು ಮತ್ತು 40 ಲೈವ್ ಕಾರ್ಟ್ರಿಡ್ಜ್‌ಗಳನ್ನು ವಶಪಡಿಸಿಕೊಂಡ ಪೊಲೀಸರು.

ಪೊಲೀಸ್ ಮಹಾನಿರ್ದೇಶಕರಿಂದ ಮಾಹಿತಿ.

Aug 14, 2022 02:05 PM IST

ಕರ್ನಾಟಕದ 18 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ

- ಈ ಬಾರಿಯ ರಾಷ್ಟ್ರಪತಿ ಪದಕ ಘೋಷಣೆಯಾಗಿದ್ದು, ಪೊಲೀಸ್ ಇಲಾಖೆಯಲ್ಲಿ ಶ್ಲಾಘನೀಯ ಸೇವೆ ಸಲ್ಲಿಸಿದ ಕರ್ನಾಟಕದ 18 ಅಧಿಕಾರಿಗಳಿಗೆ ರಾಷ್ಟ್ರಪತಿ ಪದಕ ಘೋಷಿಸಲಾಗಿದೆ.

- ಕರ್ನಾಟಕದ ನಂಜಪ್ಪ ಶ್ರೀನಿವಾಸ್ (ಎಸ್​ಪಿ, ಪಿಟಿಎಸ್​​ ಕಡೂರು), ಪ್ರತಾಪ್ ಸಿಂಗ್ ತುಕಾರಾಮ್ (ಡಿವೈಎಸ್​​ಪಿ, ಐಎಸ್​​​ಡಿ), ನಂಬೂರ ಶ್ರೀನಿವಾಸ್ ರೆಡ್ಡಿ (ಡಿವೈಎಸ್​ಪಿ, ಸಿಐಡಿ ಅರಣ್ಯ ಘಟಕ), ನರಸಿಂಹಮೂರ್ತಿ ಪಿಳ್ಳಮುನಿಯಪ್ಪ (ಡಿವೈಎಸ್​​ಪಿ, ಸಿಐಡಿ) ಸೇರಿದಂತೆ ಒಟ್ಟು ಹದಿನೆಂಟು ಪೊಲೀಸ್‌ ಅಧಿಕಾರಿಗಳುು ರಾಷ್ಟ್ರಪತಿ ಪದಕ ಪಡೆದಿದ್ದಾರೆ.

Aug 14, 2022 02:03 PM IST

ಬಿಜೆಪಿಯಿಂದ ಕರಾಳ ವಿಭಜನೆ ಸ್ಮರಣೆ ದಿನ

- ಕೇಂದ್ರ ಸರ್ಕಾರವು ಪ್ರತಿ ವರ್ಷದ ಆಗಸ್ಟ್‌ 14(ಪಾಕಿಸ್ತಾನ ಸ್ವಾತಂತ್ರ್ಯ ದಿನ)ರಂದು ʼಕರಾಳ ವಿಭಜನೆ ಸ್ಮರಣೆ ದಿನʼ ಆಚರಣೆಗೆ ಕರೆ ನೀಡಿದೆ.

- ವಿಭಜನೆ ಸಮಯದಲ್ಲಿ ನಡೆದ ಹಿಂಸಾತ್ಮಕ ಸಂಘರ್ಷವನ್ನು ನೆನೆಯುವ ಮತ್ತು ಈ ಹಿಂಸೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸುವ ಉದ್ದೇಶದಿಂದ ಕರಾಳ ವಿಭಜನೆ ಸ್ಮರಣೆ ದಿನವನ್ನು ಆಚರಿಸಲಾಗುತ್ತದೆ.

- ಬಿಜೆಪಿ ಕೂಡ ದೇಶಾದ್ಯಂತ ಕರಾಳ ವಿಭಜನೆ ಸ್ಮರಣೆ ದಿನವನ್ನು ಆಚರಿಸಲು ನಿರ್ಧರಿಸಿದ್ದು, ಮೌನ ಮೆರವಣಿಗೆ ಮೂಲಕ ವಿಭಜನೆಯ ಸಮಯದಲ್ಲಿ ನಡೆದ ಹಿಂಸೆಯಲ್ಲಿ ಪ್ರಾಣ ಕಳೆದುಕೊಂಡವರಿಗೆ ಶ್ರದ್ಧಾಂಜಲಿ ಸಲ್ಲಿಸಿದೆ.

- ರಾಷ್ಟ್ರ ರಾಜಧಾನಿ ನವದೆಹಲಿಯ ಜಂತರ್‌ ಮಂತರ್‌ನಲ್ಲಿ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ನೇತೃತ್ವದಲ್ಲಿ ಮೌನ ಮೆರವಣಿಗೆಗೆ ಚಾಲನೆ ನೀಡಲಾಗಿದೆ.

Aug 14, 2022 11:38 AM IST

ಇಂದು ಪಾಕಿಸ್ತಾನ ಸ್ವಾತಂತ್ರ್ಯ ದಿನ, ಗಡಿಯಲ್ಲಿ ಸಿಹಿ ಹಂಚಿಕೊಂಡ ಯೋಧರು, ಪಾಕಿಸ್ತಾನದಲ್ಲಿ ಇಂದು ಸ್ವಾತಂತ್ರ್ಯ ದಿನ ಏಕೆ?

- ಅಮೃತಸರದ ಅಟ್ಟಾರಿ ವಾಘಾ ಗಡಿಯಲ್ಲಿ ಪಾಕಿಸ್ತಾನ ಸ್ವಾತಂತ್ರ್ಯ ದಿನದ ಪ್ರಯುಕ್ತ ಯೋಧರು ಸಿಹಿ ಹಂಚಿಕೊಂಡರು.

- ಬ್ರಿಟಿಷ್‌ ಸರ್ವಾಧಿಕಾರದಿಂದ ಮುಕ್ತಿಗೊಂಡ ದಿನ ಒಂದೇ ಆಗಿದ್ದರೂ ಪಾಕಿಸ್ತಾನ ಆಗಸ್ಟ್‌ 14ರಂದು ಸ್ವಾತಂತ್ರ್ಯ ದಿನ ಆಚರಿಸುತ್ತದೆ.

- ಭಾರತ ಮತ್ತು ಪಾಕಿಸ್ತಾನ ಸ್ವಾತಂತ್ರ್ಯ ದಿನ ಬೇರೆ ದಿನದಂದು ಆಚರಿಸಲು ಕೆಲವೊಂದು ಕಾರಣಗಳಿವೆ.

- ಬ್ರಿಟಿಷ್‌ ವೈಸ್‌ರಾಯ್‌ ಲಾರ್ಡ್‌ ಬಾಟನ್‌ ಅವರು ತಮ್ಮ ಅನುಕೂಲಕ್ಕಾಗಿ ದಿನಾಂಕವನ್ನು ಹಿಂದು ಮುಂದು ಮಾಡಿದ್ದರು. ಇವರು ಆಗಸದ್ಟ್‌ 14ರಂದು ಪಾಕ್‌ಗೆ ಸ್ವಾತಂತ್ರ್ಯ ಘೋಷಿಸಿ ಆಗಸ್ಟ್‌ ಹದಿನೈದರಂದು ಭಾರತಕ್ಕೆ ಸ್ವಾತಂತ್ರ್ಯ ನೀಡಿದ್ದರು.

-1948ರಲ್ಲಿ ಪಾಕ್‌ ಸ್ವಾತಂತ್ರ್ಯ ದಿನದಂದು ರಂಜಾನ್‌ ಆಚರಣೆಯೂ ಇತ್ತು. ಅದಕ್ಕಾಗಿ ಒಂದು ದಿನ ಮುಂಚಿತವಾಗಿಯೇ ಸ್ವಾತಂತ್ರ್ಯ ದಿನ ನಿಗದಿಪಡಿಸಲಾಯಿತು.

ಇಂದು ಪಾಕಿಸ್ತಾನ ಸ್ವಾತಂತ್ರ್ಯ ದಿನ, ಗಡಿಯಲ್ಲಿ ಸಿಹಿ ಹಂಚಿಕೊಂಡ ಯೋಧರು, ಪಾಕಿಸ್ತಾನದಲ್ಲಿ ಇಂದು ಸ್ವಾತಂತ್ರ್ಯ ದಿನ ಏಕೆ?

ಇಂದು ಪಾಕಿಸ್ತಾನ ಸ್ವಾತಂತ್ರ್ಯ ದಿನ, ಗಡಿಯಲ್ಲಿ ಸಿಹಿ ಹಂಚಿಕೊಂಡ ಯೋಧರು, ಪಾಕಿಸ್ತಾನದಲ್ಲಿ ಇಂದು ಸ್ವಾತಂತ್ರ್ಯ ದಿನ ಏಕೆ?

Aug 14, 2022 09:04 AM IST

ರಾಷ್ಟ್ರವನ್ನುದ್ದೇಶಿಸಿ ಇಂದು ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಭಾಷಣ

- 76ನೇ ಸ್ವಾತಂತ್ರ್ಯ ದಿನಾಚರಣೆಯ ಮುನ್ನಾ ದಿನವಾದ ಇಂದು (ಆಗಸ್ಟ್ 14) ಸಂಜೆ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಶಿಷ್ಟಾಚಾರದಂತೆ ದೇಶವನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.

- ರಾಷ್ಟ್ರಪತಿಗಳ ಭಾಷಣವನ್ನು ಆಕಾಶವಾಣಿಯ ಎಲ್ಲ ಕೇಂದ್ರಗಳೂ ಹಾಗೂ ದೂರದರ್ಶನದ ಎಲ್ಲ ಪ್ರಸಾರ ಕೇಂದ್ರಗಳು ಸಂಜೆ 7 ಗಂಟೆಗೆ ಪ್ರಸಾರ ಮಾಡಲಿವೆ. ಮೊದಲು ಹಿಂದಿಯಲ್ಲಿ ಭಾಷಣ ಪ್ರಸಾರವಾಗಲಿದೆ. ನಂತರ ಭಾಷಣದ ಇಂಗ್ಲಿಷ್ ಆವೃತ್ತಿ ಪ್ರಸಾರವಾಗಲಿದೆ.

-ಹಿಂದಿ ಮತ್ತು ಇಂಗ್ಲಿಷ್ ಭಾಷಣದ ನಂತರ ದೂರದರ್ಶನದ ಪ್ರಾದೇಶಿಕ ಚಾನೆಲ್​ಗಳು ಸ್ಥಳೀಯ ಭಾಷೆಗಳಲ್ಲಿ ಭಾಷಣದ ಪ್ರಸಾರ ಮಾಡಲಿವೆ. ಆಕಾಶವಾಣಿಯು ಪ್ರಾದೇಶಿಕ ಭಾಷೆಗಳಲ್ಲಿ ರಾತ್ರಿ 9.30ಕ್ಕೆ ಸ್ಥಳೀಯ ಭಾಷೆಗಳಲ್ಲಿ ಭಾಷಣ ಪ್ರಸಾರ ಮಾಡಲಿದೆ’ ಎಂದು ರಾಷ್ಟ್ರಪತಿ ಭವನದ ಹೇಳಿಕೆ ತಿಳಿಸಿದೆ.

ದ್ರೌಪದಿ ಮುರ್ಮು

ದ್ರೌಪದಿ ಮುರ್ಮು (ANI )

Aug 14, 2022 07:19 AM IST

ಸ್ವಾತಂತ್ರ್ಯದ ಅಮೃತೋತ್ಸವ- ಉಗ್ರರ ಉಪಟಳ ಆರಂಭ

- ದೇಶವು ಸ್ವಾತಂತ್ರ್ಯದ ಅಮೃತೋತ್ಸವದ ಸಂಭ್ರಮದಲ್ಲಿರುವಂತೆಯೇ ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ಉಪಟಳವೂ ಹೆಚ್ಚಾಗಿದೆ.

- ಶ್ರೀನಗರದ ಈದ್ಗಾ ಪ್ರದೇಶದಲ್ಲಿ ಸಿಆರ್‌ಪಿಎಫ್‌ ಯೋಧರ ಮೇಲೆ ಉಗ್ರರು ಗ್ರೇನೆಡ್‌ ದಾಳಿ ನಡೆಸಿದ್ದಾರೆ. ಘಟನೆಯಲ್ಲಿ ಒಬ್ಬ ಸಿಆರ್‌ಪಿಎಫ್‌ ಯೋಧ ಗಾಯಗೊಂಡಿದ್ದಾರೆ.

-ಈದ್ಗಾ ಪ್ರದೇಶದ ಅಲಿಜನ್‌ ರಸ್ತೆಯಲ್ಲಿ ಈ ಘಟನೆ ನಡೆದಿದೆ. ಗ್ರೇನೆಡ್‌ ಎಸೆದ ಉಗ್ರರಿಗಾಗಿ ಶೋಧ ಕಾರ್ಯ ನಡೆಯುತ್ತಿದ್ದು, ಶೀಘ್ರ ಬಂಧಿಸಲಾಗುವುದು ಎಂದು ಪೊಲೀಸರು ಹೇಳಿದ್ದಾರೆ.

- ಕೆಲವು ದಿನಗಳ ಹಿಂದೆ ಕಾಶ್ಮೀರದ ರಜೌರಿ ಜಿಲ್ಲೆಯ ಸೇನಾ ಕ್ಯಾಂಪ್‌ ಮೇಲೆ ಉಗ್ರರು ದಾಳಿ ನಡೆಸಿದ್ದು, ನಾಲ್ವರು ಯೋಧರು ಹುತಾತ್ಮರಾಗಿದ್ದರು. ಬಳಿಕ ಸೇನೆಯು ಮರುಕಾರ್ಯಚರಣೆ ನಡೆಸಿ ಇಬ್ಬರು ಉಗ್ರರನ್ನು ಸಾಯಿಸಿತ್ತು.

ಸಿಆರ್‌ಪಿಎಫ್‌. (ANI)

ಸಿಆರ್‌ಪಿಎಫ್‌. (ANI) (HT_PRINT)

Aug 14, 2022 07:19 AM IST

ವಿದ್ಯುತ್‌ ಶಾಕ್‌- ದಂಪತಿ ಸಾವು

- ಕರೆಂಟ್‌ ಶಾಕ್‌ ಹೊಡೆದು ದಾವಣಗೆರೆಯ ಬಾವಿಯಾಳುವಿನಲ್ಲಿ ವೀಣಾ ಮತ್ತು ರವಿಶಂಕರ್‌ ದಂಪತಿ ಮೃತಪಟ್ಟ ಘಟನೆ ನಡೆದಿದೆ.

- ಬಟ್ಟೆಗಳು ಒಣಗಿಸಲು ಹಾಕಿರುವ ತಂತಿಗೆ ಕರೆಂಟ್‌ ವೈರ್‌ ತಗುಲಿದ ಪರಿಣಾಮ ಈ ದುರಂತ ಸಂಭವಿಸಿದೆ.

- ಪತಿ ರವಿಶಂಕರ್‌ ಬಟ್ಟೆ ತೆಗೆಯಲು ಕರೆಂಟ್‌ ಶಾಕ್‌ಗೆ ಒಳಗಾಗಿದ್ದಾರೆ. ಅವರ ಚೀರಾಟ ಕೇಳಿ ಓಡಿ ಬಂದ ಪತ್ನಿಯೂ ಮುಂಜಾಗ್ರತ ಕ್ರಮವಿಲ್ಲದೆ ಪತಿಯನ್ನು ಮುಟ್ಟಿ ಮೃತಪಟ್ಟಿದ್ದಾರೆ.

- ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ವಿದ್ಯುತ್‌ ಆಕಸ್ಮಿಕಗಳಾದಗ ವಿದ್ಯುತ್‌ ಪ್ರವಾಹಿಸುವಂತಹ ವಸ್ತುಗಳನ್ನು ಶಾಕ್‌ ತಗುಲಿದ ವ್ಯಕ್ತಿಗಳನ್ನು ಮುಟ್ಟಬಾರದು.

Aug 14, 2022 07:19 AM IST

ದೇಶದಲ್ಲಿ ಶೀಘ್ರ 5ಜಿ ಸೇವೆ

- ದೇಶದಲ್ಲಿ ಶೀಘ್ರದಲ್ಲಿ 5ಜಿ ಇಂಟರ್‌ನೆಟ್‌ ಸೇವೆ ಕಾರ್ಯಾರಂಭ ಮಾಡಲಿದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ತಿಳಿಸಿದ್ದಾರೆ.

- ಬೆಂಗಳೂರಿನ ವಿಶ್ವ ಗುರು ಭಾರತ ಸಂಚಿಕೆ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಈ ಮಾಹಿತಿ ನೀಡಿದ್ದಾರೆ.

- ಹಿಂದಿನ ಸರಕಾರಗಳು ಕೇವಲ ಇಪ್ಪತ್ತು ಅಂಶಗಳ ಕಾರ್ಯಕ್ರಮ, ಗರೀಬಿ ಹಠಾವೋ ಬಗ್ಗೆಯಷ್ಟೇ ಯೋಚಿಸುತ್ತಿದ್ದವು, ಆದರೆ, ಮೋದಿ ನೇತೃತ್ವದ ಸರಕಾರವು ಕುಡಿಯುವ ನೀರು, ಬಡವರಿಗೆ ಮನೆ ಸೇರಿದಂತೆ ಹಲವು ಯೋಜನೆಗಳನ್ನು ನಡೆಸಿದೆ. ವಿಶೇಷವಾಗಿ ನಮ್ಮ ಸರಕಾರ ಅರ್ಹ ಫಲಾನುಭವಿಗಳಿಗೆ ಯೋಜನೆಗಳನ್ನು ತಲುಪಿಸಿದೆ ಎಂದು ಅವರು ಹೇಳಿದ್ದಾರೆ.

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮಹಿಳೆಯರು ಸಾಥ್‌

ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರಿಗೆ ಮಹಿಳೆಯರು ಸಾಥ್‌ (Twitter)

Aug 14, 2022 07:19 AM IST

ವಿಶ್ವ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದ ಪಿ.ವಿ. ಸಿಂಧು

- ಕಾಮನ್ವೆಲ್ತ್‌ ಕ್ರೀಡಾ ಕೂಟದಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟು ಪಿವಿ ಸಿಂಧು ಅವರು ಈ ತಿಂಗಳು ಅಂದರೆ ಆಗಸ್ಟ್‌ 22ರಿಂದ ಆರಂಭಗೊಳ್ಳುವ ಬ್ಯಾಂಡ್ಮಿಟನ್‌ ವರ್ಲ್ಡ್‌ ಚಾಂಪಿಯನ್‌ಶಿಪ್‌ನಿಂದ ಹಿಂದೆ ಸರಿದಿದ್ದಾರೆ.

ಜಪಾನ್‌ ರಾಜಧಾನಿ ಟೋಕಿಯೊದಲ್ಲಿ ಆಗಸ್ಟ್‌ 22ರಿಂದ ಆಗಸ್ಟ್‌ 28ರವರೆಗೆ ಬಿಎಂಡಬ್ಲ್ಯು ವಿಶ್ವ ಚಾಂಪಿಯನ್‌ಶಿಪ್‌ ನಡೆಯಲಿದೆ.

- ಕಾಮನ್‌ವೆಲ್ತ್‌ನಲ್ಲಿ ಗಾಯಗಳೊಂದಿಗೆ ಆಡಿದ್ದ ಇವರು, ಇದೀಗ ಆ ಗಾಯದ ಸಮಸ್ಯೆಗಳಿಂದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಆಡುವುದಿಲ್ಲ.

- ಭಾರತದ ಸ್ಟಾರ್‌ ಬ್ಯಾಂಡ್ಮಿಟನ್‌ ಆಟಗಾರ್ತಿ ಪಿ.ವಿ. ಸಿಂದೂ ಅವರು ದೇಶಕ್ಕಾಗಿ ಹಲವು ಪದಕಗಳನ್ನು ತಂದುಕೊಟ್ಟಿದ್ದಾರೆ. ಕಾಮನ್‌ವೆಲ್ತ್‌-೨೦೨೨ರಲ್ಲಿ ಮಹಿಳೆಯರ ಸಿಂಗಲ್ಸ್‌ನಲ್ಲಿ ಇದೇ ಮೊದಲ ಬಾರಿಗೆ ಚಿನ್ನದ ಪದಕ ಗೆದ್ದಿದ್ದರು.

- ಪಿ.ವಿ. ಸಿಂಧು ಅವರು ಅಕ್ಟೋಬರ್‌ ವೇಳೆಗೆ ಮತ್ತೆ ಮೈದಾನಕ್ಕಿಳಿಯುವ ನಿರೀಕ್ಷೆಯಿದೆ ಎಂದು ಅವರ ತಂದೆ ಮಾಹಿತಿ ನೀಡಿದ್ದಾರೆ.

ಪಿವಿ ಸಿಂಧು

ಪಿವಿ ಸಿಂಧು

Aug 14, 2022 07:19 AM IST

ಆಗಸ್ಟ್‌ 28ರಂದು ಬಿಜೆಪಿ ಜನೋತ್ಸವ

- ಆಗಸ್ಟ್ 28ಕ್ಕೆ ದೊಡ್ಡಬಳ್ಳಾಪುರದಲ್ಲಿ ಸರ್ಕಾರದ ಸಾಧನೆಯ ಜನೋತ್ಸವವನ್ನು ಆಚರಿಸಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

- ಪ್ರವೀಣ್​ ನೆಟ್ಟಾರು ಹತ್ಯೆಯಿಂದಾಗಿ ಜನೋತ್ಸವ ರದ್ದುಗೊಳಿಸಲಾಗಿತ್ತು.

- ಸರ್ಕಾರದ ಸಾಧನೆಯನ್ನು ಜನರಿಗೆ ತಲುಪಿಸಲು ರಾಜ್ಯದ ಐದು ಕಡೆಗಳಲ್ಲಿ ಜನೋತ್ಸವ ನಡೆಸಲಾಗುವುದೆಂದು ಸಿಎಂ ತಿಳಿಸಿದ್ದಾರೆ. ಇದಕ್ಕೂ ಮುನ್ನ ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಆಚರಿಸಲು ಯೋಜನೆ ರೂಪಿಸಲಾಗಿತ್ತು.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಹಂಚಿಕೊಳ್ಳಲು ಲೇಖನಗಳು