logo
ಕನ್ನಡ ಸುದ್ದಿ  /  ಜೀವನಶೈಲಿ  /  ಮಾರ್ಚ್ 28ಕ್ಕೆ ಶಿಯೋಮಿ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ; ಫೆರಾರಿಯಂತೆ ಕಾಣುವ ಎಸ್‌ಯು7 ವಿವರ ಇಲ್ಲಿದೆ -Xiaomi Su7

ಮಾರ್ಚ್ 28ಕ್ಕೆ ಶಿಯೋಮಿ ಮೊದಲ ಎಲೆಕ್ಟ್ರಿಕ್ ಕಾರು ಬಿಡುಗಡೆ; ಫೆರಾರಿಯಂತೆ ಕಾಣುವ ಎಸ್‌ಯು7 ವಿವರ ಇಲ್ಲಿದೆ -Xiaomi SU7

Raghavendra M Y HT Kannada

Mar 14, 2024 09:00 AM IST

ಶಿಯೋಮಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಎಸ್‌ಯು 7 ಮಾರ್ಚ್ 28 ಕ್ಕೆ ಬಿಡುಗಡೆಯಾಗಲಿದೆ

    • Xiaomi SU7: ವಿಶ್ವದ ಮೂರನೇ ಅತಿದೊಡ್ಡ ಸ್ಮಾರ್ಟ್‌ಫೋನ್ ತಯಾರಿಕಾ ಕಂಪನಿ ಶಿಯೋಮಿ ಇವಿ ಸ್ಕೋಟರ್  ಬಳಿಕ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಮುಹೂರ್ತ ಫಿಕ್ಸ್ ಮಾಡಿದೆ.
ಶಿಯೋಮಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಎಸ್‌ಯು 7 ಮಾರ್ಚ್ 28 ಕ್ಕೆ ಬಿಡುಗಡೆಯಾಗಲಿದೆ
ಶಿಯೋಮಿ ಕಂಪನಿಯ ಮೊದಲ ಎಲೆಕ್ಟ್ರಿಕ್ ಕಾರು ಎಸ್‌ಯು 7 ಮಾರ್ಚ್ 28 ಕ್ಕೆ ಬಿಡುಗಡೆಯಾಗಲಿದೆ

ಚೀನಾದ ಎಲೆಕ್ಟ್ರಾನಿಕ್ಸ್ ದೈತ್ಯ ಕಂಪನಿ ಶಿಯೋಮಿ ಸ್ಮಾರ್ಟ್‌ಫೋನ್, ಹೆಡ್‌ಫೋನ್, ಟ್ಯಾಬ್ಲೆಟ್ಸ್, ಸ್ಮಾರ್ಟ್‌ವಾಚ್ ಹಾಗೂ ಎಲೆಕ್ಟ್ರಿಕ್ಟ್ ಸ್ಕೂಟರ್‌ ಅನ್ನು ಮಾರುಕಟ್ಟೆಗೆ ತಂದಿದೆ. ಇದೀಗ ಎಲೆಕ್ಟ್ರಿಕ್ ಕಾರು ಬಿಡುಗಡೆಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಇದಕ್ಕಾಗಿ ಮುಹೂರ್ತವನ್ನು ಫಿಕ್ಸ್ ಮಾಡಿದೆ. ಜಗತ್ತಿನಾದ್ಯಂತ ಇವಿಗಳಿಗೆ ಬೇಡಿಕೆ ಹೆಚ್ಚಾಗುತ್ತಿರುವ ನಡುವೆಯೇ ಶಿಯೋಮಿ ಮಾರ್ಚ್ 28ಕ್ಕೆ ಅಧಿಕೃತವಾಗಿ ಬಿಡುಗಡೆ ಮಾಡಲಿರುವ ಮೊದಲ ಎಲೆಕ್ಟ್ರಿಕ್ ಕಾರಿನ ಹೆಸರು ಶಿಯೋಮಿ ಎಸ್‌ಯು7 (Xiaomi SU7). ಈ ಕಾರಿನ ವೈಶಿಷ್ಟ್ಯಗಳ ಕುರಿತು ಇಲ್ಲಿ ತಿಳಿಯೋಣ. ಅಂದಹಾಗೆ 2021 ರಲ್ಲಿ ಬೀಜಿಂಗ್ ಮೂಲದ ಶಿಯೋಮಿ ಎಲೆಕ್ಟ್ರಿಕ್ ವಾಹನ ಕ್ಷೇತ್ರಕ್ಕೆ ಪ್ರವೇಶ ನೀಡಿದೆ. ಇತ್ತೀಚಿನ ತಿಂಗಳುಗಳಲ್ಲಿ ಚೀನಾದ ಉನ್ನತ ಬ್ರಾಂಡ್‌ಗಳ ವಾಹನಗಳು ಆಕ್ರಮಣಕಾರಿ ಬೆಲೆ ಯುದ್ಧದಲ್ಲಿ ತೊಡಗಿರುವುದರಿಂದ ಎಸ್‌ಯು 7 ಹೆಚ್ಚು ಪೈಪೋಟಿ ನೀಡುವ ನಿರೀಕ್ಷೆ ಇದೆ.

ಟ್ರೆಂಡಿಂಗ್​ ಸುದ್ದಿ

ಅಂದ ಹೆಚ್ಚುವುದರಿಂದ ತೂಕ ಇಳಿಯುವ ತನಕ; ಬೇಸಿಗೆಯಲ್ಲಿ ಸೌತೆಕಾಯಿ ತಿನ್ನುವುದರಿಂದಾಗುವ ಪ್ರಯೋಜನಗಳಿವು

IDIOT Syndrome: ಏನಿದು ಈಡಿಯಟ್‌ ಸಿಂಡ್ರೋಮ್‌? ಆರೋಗ್ಯ ಸಮಸ್ಯೆಗಳ ಬಗ್ಗೆ ಇಂಟರ್ನೆಟ್‌ನಲ್ಲಿ ಸರ್ಚ್‌ ಮಾಡುವ ಮುನ್ನ ಓದಿ

Personality Test: ಪೆಂಗ್ವಿನ್‌, ಮನುಷ್ಯನ ಮುಖ ಚಿತ್ರದಲ್ಲಿ ನಿಮಗೆ ಮೊದಲು ಕಂಡಿದ್ದೇನು; ವ್ಯಕ್ತಿತ್ವ ಪರಿಚಯಿಸುತ್ತೆ ಈ ಚಿತ್ರ

Optical Illusion: ಈ ಚಿತ್ರದಲ್ಲಿ ಬಾಲಿವುಡ್‌ ನಟರೊಬ್ಬರ ಮುಖ ಕಾಣಿಸುತ್ತದೆ, ಆ ನಟ ಯಾರು? 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

"ಶಿಯೋಮಿ ಎಸ್ ಯು 7 ಮಾರ್ಚ್ 28 ರಂದು ಅಧಿಕೃತವಾಗಿ ಬಿಡುಗಡೆಯಾಗಲಿದೆ" ಎಂದು ಕಂಪನಿಯ ಸಂಸ್ಥಾಪಕ ಮತ್ತು ಸಿಇಒ ಲೀ ಜುನ್ ಚೀನಾದ ಸಾಮಾಜಿಕ ಮಾಧ್ಯಮ ಸೈಟ್ ವೀಬೊದಲ್ಲಿ ಬರೆದಿದ್ದಾರೆ. ಈ ಪ್ರಕಟಣೆಯೊಂದಿಗೆ ಹೊಸ ವಾಹನದ ಫೋಟೊವನ್ನು ನೀಡಿದ್ದಾರೆ, ಇದನ್ನು 2023ರ ಡಿಸೆಂಬರ್‌ನಲ್ಲಿ ಮಾಧ್ಯಮಗಳಿಗೆ ಅನಾವರಣಗೊಳಿಸಲಾಗಿತ್ತು.

ಶಿಯೋಮಿ ಎಲೆಕ್ಟ್ರಿಕ್ ಕಾರು ಬಿಡುಗಡೆ ಬಗ್ಗೆ ಮಾಹಿತಿ ಹೊರಹಾಕುತ್ತಿದ್ದಂತೆ ಕಂಪನಿಯು ಪಟ್ಟಿ ಮಾಡಲಾದ ಹಾಂಗ್ ಕಾಂಗ್ ನಲ್ಲಿ ಮಧ್ಯಾಹ್ನದ ವೇಳೆಗೆ ಕಂಪನಿಯ ಷೇರುಗಳು ಸುಮಾರು 10 ರಷ್ಟು ಏರಿಕೆ ಕಂಡಿವೆ. ಶಿಯೋಮಿ ಸಾಫ್ಟ್ ವೇರ್ ಮತ್ತು ಎಲೆಕ್ಟ್ರಾನಿಕ್ ವೈಶಿಷ್ಟ್ಯಗಳನ್ನು ಹೊಂದಿರುವ ಎಸ್ ಯು 7 ಅನ್ನು ಚೀನಾದ ಆಟೋ ದೈತ್ಯ ಬಿಎಐಸಿ ಉತ್ಪಾದಿಸುತ್ತದೆ.

ಶಿಯೋಮಿ ಎಸ್‌ಯು 7 ಎಲೆಕ್ಟ್ರಿಕ್ ಕಾರಿನ ವೈಶಿಷ್ಟ್ಯಗಳು

800 ಕಿಲೋಮೀಟರ್ (500 ಮೈಲಿ) ಡ್ರೈವಿಂಗ್ ರೇಂಜ್ ಹೊಂದಿರುವ ಈ ಕಾರಿಗೆ ಚೀನಾದ ಅತಿದೊಡ್ಡ ಎಲೆಕ್ಟ್ರಿಕ್ ವಾಹನ ತಯಾರಕ ಸಂಸ್ಥೆ ಬಿವೈಡಿ ಮತ್ತು ದೇಶೀಯ ಬ್ಯಾಟರಿ ದೈತ್ಯ ಸಿಎಟಿಎಲ್ ಬ್ಯಾಟರಿಗಳನ್ನು ಪೂರೈಸುತ್ತವೆ. ಫೆಬ್ರವರಿ 26 ರಂದು ಸ್ಪೇನ್‌ನ ಬಾರ್ಸಿಲೋನಾದಲ್ಲಿ ನಡೆದಿದ್ದ ಮೊಬೈಲ್ ವರ್ಲ್ಡ್ ಕಾಂಗ್ರೆಸ್ (ಎಂಡಬ್ಲ್ಯೂಸಿ) 2024 ರನಲ್ಲಿ ಶಿಯೋಮಿ ತನ್ನ ಮೊದಲ ಎಲೆಕ್ಟ್ರಿಕ್ ಕಾರನ್ನು ಬಹಿರಂಗ ಪಡಿಸಿತ್ತು. ಶಿಯೋಮಿ ಬಿಡುಗಡೆ ಮಾಡಿರುವ ಎಸ್‌ಯು 7 ಇವಿ ಕಾರು ಆಕ್ವಾ ಬ್ಲೂ ಬಣ್ಣದಲ್ಲಿದ್ದು, ಮುಂಭಾಗದ ವಿನ್ಯಾಸ ಫೆರಾರಿಯನ್ನು ಹೋಲುವಂತಿದೆ.

ಈ ನೂತನ ಕಾರು 673 ಹೆಚ್‌ಪಿ ಪವರ್ ಮತ್ತು 838 ಎನ್‌ಎಂ ಪೀಕ್ ಟಾರ್ಕ್ ಅನ್ನು ಉತ್ಪಾದಿಸುವ ಸಾಮರ್ಥ್ಯ ಹೊಂದಿದೆ. 299 ಹೆಚ್‌ಪಿ ಮತ್ತು 374 ಹೆಚ್‌ಪಿ ನಡುವೆ ವಿದ್ಯುತ್ ಉತ್ಪಾದನೆಯನ್ನು ಉತ್ಪಾದಿಸುತ್ತದೆ. ಕಾರುಗಳ ಸ್ಟ್ಯಾಂಡರ್ಡ್ ಎಡಿಷನ್‌ಗಳಿಗೆ ಬಳಸುವ ವಿ6 ಮತ್ತು ವಿಎಸ್‌6 ಬದಲಿಗೆ ಶಿಯೋಮಿ ಎಲೆಕ್ಟ್ರಿಕ್ ಎಸ್‌ಯು7 ಮ್ಯಾಕ್ಸ್ ಮಾಡಲ್‌ಗೆ ವಿ8ಎಸ್ ಇಂಜಿನ್ ಬಳಲಾಗಿದೆ. ಕಾರು ಬಿಡುಗಡೆ ನಂತರ ವೈಶಿಷ್ಟ್ಯ ಮತ್ತಷ್ಟು ಮಾಹಿತಿ ಸ್ಪಷ್ಟವಾಗಲಿದೆ.

"15 ರಿಂದ 20 ವರ್ಷಗಳ ಕಠಿಣ ಪರಿಶ್ರಮದ ಮೂಲಕ ವಿಶ್ವದ ಅಗ್ರ ಐದು ವಾಹನ ತಯಾರಕರಲ್ಲಿ ಒಬ್ಬರಾಗುವುದು ನಮ್ಮ ಗುರಿಯಾಗಿದೆ ಎಂದು ಲೀ ಡಿಸೆಂಬರ್‌ನಲ್ಲಿ ಹೇಳಿದ್ದರು. ವಿಶ್ವದ ಅತಿದೊಡ್ಡ ವಾಹನ ಮಾರುಕಟ್ಟೆಯಾದ ಚೀನಾದ ಅನೇಕ ಉನ್ನತ ಟೆಕ್ ಸಂಸ್ಥೆಗಳು ಇತ್ತೀಚೆಗೆ ದೇಶದ ಇವಿ ವಲಯದಲ್ಲಿ ಹೂಡಿಕೆ ಮಾಡಿವೆ. ಅಲ್ಲಿ ವಿದೇಶಿ ಸಂಸ್ಥೆಗಳು ಹೆಜ್ಜೆ ಇಡಲು ಹೆಣಗಾಡುತ್ತಿವೆ. 2010 ರಲ್ಲಿ ಸ್ಥಾಪನೆಯಾದ ಶಿಯೋಮಿ, ಆರಂಭದಲ್ಲಿ ನೇರವಾಗಿ ಅಮೆಜಾನ್‌ನಂತಹ ಆನ್‌ಲೈನ್ ವೇದಿಕೆಗಳ ಮೂಲಕ ಕೈಗೆಟುಕುವ ಬೆಲೆಯಲ್ಲಿ ಉನ್ನತ-ಮಟ್ಟದ ಸಾಧನಗಳನ್ನು ಮಾರಾಟ ಮಾಡುವ ತಂತ್ರದ ಮೂಲಕ ತ್ವರಿತ ಬೆಳವಣಿಗೆಯನ್ನು ಸಾಧಿಸಿದೆ.

(This copy first appeared in Hindustan Times Kannada website. To read more like this please logon to kannada.hindustantimes.com )

    ಹಂಚಿಕೊಳ್ಳಲು ಲೇಖನಗಳು