Realme Narzo 60: ಅತಿ ಕಡಿಮೆ ಬೆಲೆಗೆ ಸಿಗುತ್ತಿದೆ ರಿಯಲ್‌ಮಿ ನಾರ್ಜೊ 60 5ಜಿ; ಡಿಸ್ಕೌಂಟ್ ಬಳಿಕ ಎಷ್ಟಾಗುತ್ತೆ
Mar 03, 2024 04:19 PM IST
ರಿಯಲ್‌ಮಿ ನಾರ್ಜೊ 60 5ಜಿ ಅತಿ ಕಡಿಮೆ ಬೆಲೆಗೆ ಲಭ್ಯವಾಗುತ್ತಿದೆ. ಈ ಫೋನ್‌ಗೆ ಸಿಗುತ್ತಿರುವ ಡಿಸ್ಕೌಂಟ್, ಬ್ಯಾಂಕ್ ಆಫರ್‌ಗಳನ್ನು ತಿಳಿಯಿರಿ.
- Realme Narzo 60: ಅತ್ಯಂತ ಕಡಿಮೆ ಬೆಲೆಗೆ ರಿಯಲ್‌ಮಿ ನಾರ್ಜೊ 60 ಸ್ಮಾರ್ಟ್‌ಫೋನ್ ಸಿಗುತ್ತಿದೆ. ಡಿಸ್ಕೌಂಟ್ ಜೊತೆಗೆ ಒಂದಿಷ್ಟು ಬ್ಯಾಂಕ್ ಆಫರ್‌ಗಳೂ ಇವೆ.
ಜಗತ್ತಿನ ದೈತ್ಯ ಇ-ಕಾಮರ್ಸ್ ಕಂಪನಿ ಅಮೆಜಾನ್ ಹೊಸ ವೈಶಿಷ್ಟ್ಯಗಳು ಹಾಗೂ ವಿನ್ಯಾಸದಲ್ಲೇ ಹೆಚ್ಚು ಗಮನ ಸೆಳೆದಿರುವ ರಿಯಲ್‌ಮಿ ನಾರ್ಜೊ 60 5ಜಿ (Realme Narzo 60 5G) ಸ್ಮಾರ್ಟ್‌ಫೋನ್ ಮೇಲೆ ಭಾರಿ ಡಿಸ್ಕೌಂಟ್ ಘೋಷಣೆ ಮಾಡಿದೆ. ಈ ಗ್ಯಾಡ್ಜೆಟ್ ಗ್ರಾಹಕರಿಗೆ ಹೆಚ್ಚಿನ ರಿಯಾಯಿತಿ ದರದಲ್ಲಿ ಸಿಗುತ್ತಿರುವುದರಿಂದ ಬೇಡಿಕೆ ಹೆಚ್ಚಾಗುವ ನಿರೀಕ್ಷೆ ಇದೆ. ರಿಯಲ್‌ಮಿ ನಾರ್ಜೊ 60 5ಜಿ ಫೋನ್ ಮಾರ್ಸ್ ಆರೆಂಜ್ ಬಣ್ಣದಲ್ಲಿ ಲಭ್ಯವಿದ್ದು, 8GB+128GB ಸ್ಟೋರೇಂಜ್ ಸಾಮರ್ಥ್ಯದ ಫೋನ್ ಬೆಲೆ 14,999 ರೂಪಾಯಿಗೆ ಲಭ್ಯವಿದೆ. ಹೈ ಪರ್ಫಾರ್ಮೆನ್ಸ್ ಸ್ಮಾರ್ಟ್‌ಫೋನ್ ಇಷ್ಟು ಕಡಿಮೆ ಬೆಲೆಗೆ ಲಭ್ಯವಾಗುತ್ತಿರುವುದು ಇದೇ ಮೊದಲು. ಇಷ್ಟು ಕಡಿಮೆ ಬೆಲೆಗೆ ಸಿಗುತ್ತಿರುವುದರ ಹೊರತಾಗಿ ಅಮೆಜಾನ್‌ನಲ್ಲಿ ವಿವಿಧ ಆಫರ್‌ಗಳು ಹಾಗೂ ಡಿಸ್ಕೌಂಟ್‌ಗಳ ಪ್ರಯೋಜನವನ್ನು ಗ್ರಾಹಕರ ಪಡೆಯಬಹುದಾಗಿದೆ.
ಹಲವು ಇಎಂಐ ಆಯ್ಕೆಗಳು ಸಹ ಲಭ್ಯವಿದ್ದು, ಈ ಫೋನ್ ಖರೀದಿಸುವ ಆಸಕ್ತರು ಯಾವುದೇ ರೀತಿಯ ಹೆಚ್ಚುವರಿ ಬಡ್ಡಿ ಶುಲ್ಕವಿಲ್ಲ ಈ ಸ್ಮಾಟ್‌ಫೋನ್ ಅನ್ನು ಖರೀದಿಸಬಹದು. ಹೆಚ್‌ಎಸ್‌ಬಿಸಿ ಬ್ಯಾಂಕ್ ಕ್ರೆಡಿಟ್ ಕಾರ್ಡ್‌ಗಳನ್ನು ಬಳಸುವ ಗ್ರಾಹಕರಿಗೆ ಹೆಚ್ಚುವರಿ ರಿಯಾಯಿತಿಗಳನ್ನು ಘೋಷಿಸಲಾಗಿದೆ.
ರಿಯಲ್‌ಮಿ ನಾರ್ಜೊ 60 5ಜಿ ಸ್ಮಾರ್ಟ್‌ಫೋನ್‌ಗೆ ಡಿಸ್ಕೌಂಟ್ ಕಂ ಆಫರ್ಸ್
ರಿಯಲ್‌ಮಿ ನಾರ್ಜೊ 60 5ಜಿ ಸ್ಮಾರ್ಟ್‌ಪೋನ್ ಖರೀದಿಗೆ ಆಸಕ್ತಿ ತೋರಿಸುವ ಗ್ರಾಹಕರು ತಮ್ಮ ಹಳೆಯ ಸ್ಮಾರ್ಟ್‌ಫೋನ್ ವಿನಿಮಯ ಮಾಡಿಕೊಂಡರೆ 11,250 ರೂಪಾಯಿ ವರೆಗೆ ರಿಯಾಯಿತಿಯನ್ನು ಪಡೆಯುತ್ತಾರೆ. ಹೆಚ್ಚುವರಿಯಾಗಿ ಶೇಕಡಾ 28 ರವರೆಗೆ ಉಳಿತಾಯವನ್ನ ನೀಡಲಾಗುತ್ತಿದೆ.
ಕಡಿಮೆ ಬೆಲೆಗೆ ಸಿಗುತ್ತಿರುವ ರಿಯಲ್‌ಮಿ ನಾರ್ಜೊ 60 5ಜಿ ಸ್ಮಾರ್ಟ್‌ಫೋನ್ ವೈಶಿಷ್ಯಗಳು
ರಿಯಲ್‌ಮಿ ನಾರ್ಜೊ 60 5ಜಿ ಸ್ಮಾರ್ಟ್‌ಫೋನ್ 90 Hz ರಿಫ್ರೆಶ್ ರೇಟ್‌ನೊಂದಿಗೆ ಸೂಪರ್ ಅಮೊಲೆಡ್ ಡಿಸ್‌ಪ್ಲೇ ಹೊಂದಿದೆ. ಇದು ಅಲ್ಟ್ರಾ-ಸ್ಲಿಮ್ ಪ್ರೀಮಿಯಂ ವಿನ್ಯಾಸದೊಂದಿಗೆ ಐಷಾರಾಮಿ ಲುಕ್ ನೀಡುತ್ತದೆ. ಪವರ್‌ಫುಲ್ ಮೆಗಾಫಿಕ್ಸೆಲ್ ಮೇನ್ ಕ್ಯಾಮೆರಾ ಈ ಸ್ಮಾರ್ಟ್‌ಪೋನ್‌ನಲ್ಲಿದೆ.
ರೆಡ್‌ಮಿ ನೋಟ್ 12 4ಜಿ ಸ್ಮಾರ್ಟ್‌ಫೋನ್‌ಗೆ ಭಾರಿ ಡಿಸ್ಕೌಂಟ್
ಶಿಯೋಮಿ ತನ್ನ ರೆಡ್‌ಮಿ ನೋಟ್ 12 4ಜಿ ಸರಣಿ ಸ್ಮಾರ್ಟ್‌ಫೋನ್‌ಗಳ ಬೆಲೆಯಲನ್ನು ಗಣನೀಯವಾಗಿ ಕಡಿಮೆ ಮಾಡಿದೆ. ಈ ಸರಣಿಯ ಫೋನ್‌ಗಳು ಭಾರತದಲ್ಲಿ 10,400 ರೂಪಾಯಿಯಿಂದ ಪ್ರಾರಂಭವಾಗುತ್ತದೆ. 2024ರ ಮಾರ್ಚ್‌ನಲ್ಲಿ ಈ ಸ್ಮಾರ್ಟ್‌ಫೋನ್ ಅನ್ನು ಬಿಡುಗಡೆ ಮಾಡಲಾಗಿತ್ತು. ಫೋನ್ ಮೇಲೆ 3 ತಿಂಗಳ ಅವಧಿಯಲ್ಲಿ ಎರಡು ಬಾರಿ ಬೆಲೆ ಕಡಿಮೆ ಮಾಡಲಾಗಿದೆ. ಪರಿಣಾಮವಾಗಿ ಈ ಬಜೆಟ್ ಸ್ನೇಹಿ ರೆಡ್‌ಮಿ ನೋಟ್ 12 4ಜಿ ಫೋನ್ 10 ಸಾವಿರ ರೂಪಾಯಿಗೆ ಲಭ್ಯವಿರುವ ಇತರೆ ಕಂಪನಿಗಳ ಫೋನ್‌ಗಳಿಗೆ ಭಾರಿ ಪೈಪೋಟಿ ನೀಡುತ್ತಿದೆ.
ಬಿಡುಗಡೆಯ ಸಮಯದಲ್ಲಿ ರೆಡ್‌ಮಿ ನೋಟ್ 12 4ಜಿ 6GB RAM/64GB ಸ್ಟೋರೇಜ್ ವೇರಿಯಂಟ್ ಬೆಲೆ 14,999 ರೂಪಾಯಿ ಮತ್ತು 6GB RAM/128GB ಸ್ಟೋರೇಜ್ ರೂಪಾಂತರದ ಬೆಲೆ 16,999 ರೂಪಾಯಿ ಆಗಿತ್ತು. ನಂತರ ಕಂಪನಿ ಈ ಎರಡು ಫೋನ್‌ಗಳ ಬೆಲೆಯಲ್ಲಿ ಕಳೆದ ಜನವರಿಯಲ್ಲಿ 2 ಸಾವಿರ ರೂಪಾಯಿ ಕಡಿತ ಮಾಡಲಾಗಿತ್ತು.
ಇ-ಕಾಮರ್ಸ್ ಕಂಪನಿಗಳಾದ ಅಮೆಜಾನ್ ಹಾಗೂ ಫ್ಲಿಪ್‌ಕಾರ್ಟ್ ಸಂಸ್ಥೆಗಳು ತಿಂಗಳ ಮೊದಲ ವಾರದಲ್ಲಿ ಹಲವು ಗ್ಯಾಡ್ಜೆಟ್‌ಗಳು ಹಾಗೂ ಇತರೆ ಉಪಕರಣಗಳ ಮೇಲೆ ಭಾರಿ ರಿಯಾಯಿಗಳನ್ನು ಘೋಷಣೆ ಮಾಡುತ್ತವೆ.