logo
ಕನ್ನಡ ಸುದ್ದಿ  /  ಜೀವನಶೈಲಿ  /  Hair Care: ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿ ರಸ ಹಚ್ಚಬೇಕೇ, ಬೆಳ್ಳುಳ್ಳಿ ಎಣ್ಣೆ ಸೂಕ್ತವೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

Hair Care: ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿ ರಸ ಹಚ್ಚಬೇಕೇ, ಬೆಳ್ಳುಳ್ಳಿ ಎಣ್ಣೆ ಸೂಕ್ತವೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

Reshma HT Kannada

Apr 24, 2024 05:33 PM IST

ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿ ರಸ ಹಚ್ಚಬೇಕೇ, ಬೆಳ್ಳುಳ್ಳಿ ಎಣ್ಣೆ ಸೂಕ್ತವೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

    • ದಟ್ಟ, ಸೊಂಪಾದ ಕೂದಲು ತಮ್ಮದಾಗಬೇಕು ಎಂದು ಎಲ್ಲರೂ ಬಯಸುವುದು ಸಹಜ. ಆದರೆ ಕೂದಲಿನ ಆರೈಕೆ ಹೇಗೆ? ಕೂದಲು ದಟ್ಟವಾಗಿ ಬೆಳೆಯಲು ಬೆಳ್ಳುಳ್ಳಿ ಎಣ್ಣೆ ಬಳಸಬೇಕೇ? ಇಲ್ಲವೇ ಈರುಳ್ಳಿ ಎಣ್ಣೆಯೇ? ಈ ರೀತಿಯ ಗೊಂದಲ ಹಲವರಲ್ಲಿರುತ್ತದೆ. ಈ ಗೊಂದಲಕ್ಕೆ ಇಲ್ಲಿದೆ ಪರಿಹಾರ. (ಬರಹ: ಭಾಗ್ಯ ದಿವಾಣ)
ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿ ರಸ ಹಚ್ಚಬೇಕೇ, ಬೆಳ್ಳುಳ್ಳಿ ಎಣ್ಣೆ ಸೂಕ್ತವೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ
ಕೂದಲು ಸೊಂಪಾಗಿ ಬೆಳೆಯಲು ಈರುಳ್ಳಿ ರಸ ಹಚ್ಚಬೇಕೇ, ಬೆಳ್ಳುಳ್ಳಿ ಎಣ್ಣೆ ಸೂಕ್ತವೇ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಪರಿಹಾರ

ಹಿಂದೆಲ್ಲಾ 40ರ ಗಡಿ ದಾಟುತ್ತಿದ್ದಂತೆ ಕೂದಲು ಬೆಳ್ಳಗಾಗುವುದು ಅಥವಾ ಕೂದಲು ಉದುರುವ ಸಮಸ್ಯೆ ಶುರುವಾಗಿಬಿಡುತ್ತಿತ್ತು. ಆದರೆ ಈಗ ವಯಸ್ಸಿನ ಮಿತಿಯಿಲ್ಲದೆ ಎಲ್ಲರಲ್ಲೂ ಹೇರ್‌ ಪಾಲ್‌ ಸಾಮಾನ್ಯವಾಗಿದೆ. ವಯಸ್ಸಾದ ಕಾರಣದಿಂದ ಮಾತ್ರವಲ್ಲ ನಿಮ್ಮ ಜೀನ್‌ಗಳು, ಗರ್ಭಾವಸ್ಥೆಯಲ್ಲಿ ಹಾರ್ಮೋನುಗಳ ಬದಲಾವಣೆಗಳು ಅಥವಾ ಥೈರಾಯ್ಡ್ ಸಮಸ್ಯೆಗಳಂತಹ ವೈದ್ಯಕೀಯ ಸಮಸ್ಯೆಗಳ ಕಾರಣದಿಂದಲೂ ಕೂದಲು ಉದುರುವುದುಂಟು.

ಟ್ರೆಂಡಿಂಗ್​ ಸುದ್ದಿ

ಮಳೆಗಾಲದಲ್ಲಿ ಕೇರಳಕ್ಕೆ ಟ್ರಿಪ್‌ ಹೋಗುವ ಪ್ಲಾನ್‌ ಇದ್ರೆ, ಈ 10 ಸಾಂಪ್ರದಾಯಿಕ ತಿನಿಸುಗಳನ್ನು ಟೇಸ್ಟ್‌ ಮಾಡದೇ ಬರಬೇಡಿ

Yoga Asanas: ತೂಕ ಇಳಿಯುವ ಜೊತೆಗೆ ದೇಹ ಫಿಟ್‌ ಆಗಿರಬೇಕಾ? ಈ ಸರಳ ಯೋಗಾಸನಗಳನ್ನ ಮನೆಯಲ್ಲೇ ಅಭ್ಯಾಸ ಮಾಡಿ

ಡಯಾಬಿಟಿಸ್‌ ಬಗ್ಗೆ ಚಿಂತೆ ಬೇಡ; ಸಕ್ಕರೆ ಮಟ್ಟವನ್ನು ನಿಯಂತ್ರಿಸಿ, ಆರೋಗ್ಯ ಕಾಪಾಡಿಕೊಳ್ಳಲು ಮಧುಮೇಹಿಗಳು ತಪ್ಪದೇ ಪಾಲಿಸಬೇಕಾದ ನಿಯಮಗಳಿವು

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

ಆರೋಗ್ಯವಂತ, ದಟ್ಟ ಕೂದಲನ್ನು ಹೊಂದುವ ಹೆಬ್ಬಯಕೆಯಿದ್ದರೆ ನೀವು ತಪ್ಪದೇ ಉತ್ತಮ ಆಹಾರ ಕ್ರಮವನ್ನು ರೂಢಿಸಿಕೊಳ್ಳಬೇಕು. ನಿತ್ಯವೂ ಸರಿಯಾದ ರೀತಿಯಲ್ಲಿ ಕೂದಲಿನ ಆರೈಕೆಯನ್ನು ಮಾಡುವುದೂ ಕೂಡ ಅತ್ಯಗತ್ಯ. ನೈಸರ್ಗಿಕ ವಿಧಾನಗಳನ್ನು ಅನುಸರಿಸುವ ಮೂಲಕ ನೀವು ಕೂದಲಿನ ಬೆಳವಣಿಗೆಯನ್ನು ಸುಧಾರಿಸಬಹುದು. ಅದರಲ್ಲೂ ಈರುಳ್ಳಿ ಮತ್ತು ಬೆಳ್ಳುಳ್ಳಿ ನೈಸರ್ಗಿಕ ಮನೆಮದ್ದುಗಳಿಗೆ ಹೆಸರು ಮಾಡಿದವುಗಳು. ಆದರೆ ಕೂದಲಿನ ಆರೈಕೆಗೆ ಇವೆರಡರಲ್ಲಿ ಯಾವುದು ಉತ್ತಮ? ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಉತ್ತರ.

ಕೂದಲಿನ ಬೆಳವಣಿಗೆಗೆ ಈರುಳ್ಳಿ ರಸ ಸಹಕಾರಿ

2014ರಲ್ಲಿ ಜರ್ನಲ್ ಆಫ್ ಡರ್ಮಟಾಲಜಿಯಲ್ಲಿ ಪ್ರಕಟವಾದ ಅಧ್ಯಯನವೊಂದರ ಪ್ರಕಾರ, ನಿತ್ಯವೂ ಸಾಮಾನ್ಯ ನೀರಿನಿಂದ ತಲೆಗೆ ಸ್ನಾನ ಮಾಡುವವರಿಗಿಂತಲೂ, ಈರುಳ್ಳಿ ರಸದಿಂದ ಕೂದಲನ್ನು ತೊಳೆಯುವವರ ಹೇರ್‌ ಗ್ರೋತ್‌ ಬಹಳ ವೇಗವಾಗಿರುತ್ತದೆಯಂತೆ. ಈರುಳ್ಳಿಯಲ್ಲಿರುವ ಸಲ್ಫರ್‌ ಅಂಶವು ಕಾಲಜನ್ ಉತ್ಪಾದನೆಗೆ ನೆರವಾಗುತ್ತಿದ್ದು, ಇದು ಆರೋಗ್ಯಕರ ಕೂದಲಿನ ಕೋಶಗಳ ಉತ್ಪಾದನೆಗೆ ಸಹಾಯ ಮಾಡುತ್ತದೆ. ಇದು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವುದಷ್ಟೇ ಅಲ್ಲದೇ ಕೂದಲು ಉದುರುವಿಕೆಯನ್ನು ತಡೆಯುತ್ತದೆ.

ಈರುಳ್ಳಿಯು ನೈಸರ್ಗಿಕವಾದ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದ್ದು ಅದು ನೆತ್ತಿಯ ಸೋಂಕಿನ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ. ಈರುಳ್ಳಿಯ ರಸವು ನೈಸರ್ಗಿಕ ಕಂಡೀಷನರ್ ಆಗಿ ಕಾರ್ಯನಿರ್ವಹಿಸಿ, ಕೂದಲನ್ನು ಮೃದುವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಅಲ್ಲದೆ ಕೂದಲು ಸೀಳುವುದು ಅಥವಾ ಸ್ಪ್ಲಿಟ್‌ ಹೇರ್‌ ಸಮಸ್ಯೆಯನ್ನೂ ನಿವಾರಿಸುತ್ತದೆ. ಸಾಮಾನ್ಯವಾಗಿ ಇಂದು ಎಲ್ಲರನ್ನೂ ಕಾಡುವ ತಲೆಹೊಟ್ಟಿನ ಸಮಸ್ಯೆಗೂ ಈರುಳ್ಳಿ ರಸ ಪರಿಹಾರ ನೀಡಬಲ್ಲದು.

ಕೂದಲು ಉದುರುವ ಸಮಸ್ಯೆಯಿದ್ದರೆ ಬೆಳ್ಳುಳ್ಳಿ ಬಳಸಿ

2023ರಲ್ಲಿ ಅಮೇರಿಕನ್ ಅಕಾಡೆಮಿ ಆಫ್ ಡರ್ಮಟಾಲಜಿ ಪತ್ರಿಕೆಯಲ್ಲಿ ಪ್ರಕಟವಾದ ಸಂಶೋಧನೆಯ ಪ್ರಕಾರ, ಕೂದಲು ಉದುರುವುದಕ್ಕೆ ಬೆಳ್ಳುಳ್ಳಿ ನೈಸರ್ಗಿಕವಾಗಿಯೇ ಪರಿಹಾರ ನೀಡುತ್ತದೆ. ಬೆಳ್ಳುಳ್ಳಿಯಲ್ಲಿಯೂ ಸಲ್ಫರ್‌ನ ಅಂಶವಿದ್ದು, ಇದು ಕೂದಲಿನ ಬೆಳವಣಿಗೆಗೆ ಅಗತ್ಯವಾದ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ. ಬೆಳ್ಳುಳ್ಳಿಯು ಸತು ಮತ್ತು ಸೆಲೆನಿಯಂನಂತಹ ಖನಿಜಗಳನ್ನು ಹೊಂದಿದ್ದು, ಇದು ಸದೃಢ ಮತ್ತು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ನೆರವಾಗುತ್ತದೆ. ಈ ಖನಿಜಗಳು ಕೂದಲು ಒಡೆಯುವುದು ಅಥವಾ ಸೀಳಾಗುವುದನ್ನು ತಡೆಯಲು ಮತ್ತು ಕೂದಲು ಬುಡದಿಂದಲೇ ಬಲವಾಗಲು ಸಹಾಯ ಮಾಡುತ್ತದೆ.

ಬೆಳ್ಳುಳ್ಳಿಯಲ್ಲಿರುವ ಅಲಿಸಿನ್ ಅಂಶವು ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ನೆತ್ತಿಯಲ್ಲಿ ರಕ್ತ ಪರಿಚಲನೆ ಸುಧಾರಿಸಿದರೆ ಕೂದಲು ಉದುರುವುದು ಕಡಿಮೆಯಾಗುತ್ತದೆ. ಬೆಳ್ಳುಳ್ಳಿಯು ನೈಸರ್ಗಿಕ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳನ್ನು ಹೊಂದಿದೆ. ಇದು ತಲೆಹೊಟ್ಟು ಮತ್ತು ತುರಿಕೆ ಮುಂತಾದ ನೆತ್ತಿಯ ಸೋಂಕನ್ನು ನಿರ್ಮೂಲನೆ ಮಾಡುತ್ತದೆ. ಕೂದಲಿನ ಬೆಳವಣಿಗೆಗೆ ನೆತ್ತಿಯ ಆರೋಗ್ಯವಾಗಿರುವುದು ಬಹಳ ಮುಖ್ಯ. ಬೆಳ್ಳುಳ್ಳಿ ರಸ ಅಥವಾ ಎಣ್ಣೆಯನ್ನು ನಿಯಮಿತವಾಗಿ ಹಚ್ಚುವುದರಿಂದ ಕೂದಲು ಹೊಳಪನ್ನು ಪಡೆದುಕೊಳ್ಳುವುದರ ಜೊತೆಗೆ ಕೂದಲು ಸೀಳುವುದು ಕಡಿಮೆಯಾಗುತ್ತದೆ. ಆರೋಗ್ಯಕರ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ.

ಕೂದಲಿನ ಬೆಳವಣಿಗೆಗೆ ಈರುಳ್ಳಿ ಬಳಸಬೇಕೇ ಅಥವಾ ಬೆಳ್ಳುಳ್ಳಿ ಉತ್ತಮವೇ?

ಹೆಚ್ಚಿನ ಸಲ್ಫರ್ ಅಂಶ ಮತ್ತು ಇತರ ಪೋಷಕಾಂಶಗಳಿಂದಾಗಿ ಈರುಳ್ಳಿ ಮತ್ತು ಬೆಳ್ಳುಳ್ಳಿ ಎರಡೂ ಕೂದಲಿನ ಬೆಳವಣಿಗೆಗೆ ಒಂದೇ ರೀತಿಯ ಪ್ರಯೋಜನಗಳನ್ನು ನೀಡುತ್ತವೆ. ಆದರೂ, ಇವೆರಡರ ನಡುವೆ ಕೆಲವು ವ್ಯತ್ಯಾಸಗಳಿವೆ:

1. ಹೆಚ್ಚುವರಿ ಪೋಷಕಾಂಶಗಳು

ಬೆಳ್ಳುಳ್ಳಿಯು ಸತು ಮತ್ತು ಸೆಲೆನಿಯಮ್ ಹೊಂದಿದ್ದು, ಇದು ಆರೋಗ್ಯಕರ ಕೂದಲನ್ನು ಕಾಪಾಡಿಕೊಳ್ಳಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಮುಖ್ಯವಾದ ಖನಿಜಗಳಾಗಿವೆ. ಈ ಖನಿಜಗಳು ಈರುಳ್ಳಿಗಿಂತಲೂ ಬೆಳ್ಳುಳ್ಳಿಯಲ್ಲಿ ಹೆಚ್ಚಿನ ಪ್ರಮಾಣದಲ್ಲಿದ್ದು, ಕೂದಲಿನ ಬೆಳವಣಿಗೆಗೆ ಹೆಚ್ಚುವರಿ ನೆರವು ನೀಡುತ್ತದೆ.

2. ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳು

ಈರುಳ್ಳಿಗೆ ಹೋಲಿಸಿದರೆ ಬೆಳ್ಳುಳ್ಳಿ ಬಲವಾದ ಆಂಟಿಮೈಕ್ರೊಬಿಯಲ್ ಗುಣಲಕ್ಷಣಗಳನ್ನು ಹೊಂದಿದ್ದು, ಇದು ತಲೆಹೊಟ್ಟು ಮುಂತಾದ ನೆತ್ತಿಯ ಸೋಂಕನ್ನು ಎದುರಿಸುವವರಿಗೆ ಪ್ರಯೋಜನಕಾರಿಯಾಗಿದೆ.

ಕೂದಲಿನ ಆರೈಕೆಯಲ್ಲಿ ಈರುಳ್ಳಿ ಮತ್ತು ಬೆಳ್ಳುಳ್ಳಿಯನ್ನು ಬಳಸುವುದು ಹೇಗೆ?

1. ಈರುಳ್ಳಿ ಅಥವಾ ಬೆಳ್ಳುಳ್ಳಿ ರಸವನ್ನು ಬಳಸಿ: ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ರುಬ್ಬಿಕೊಂಡು ಇಲ್ಲವೇ ಜಜ್ಜಿಕೊಂಡು ಅದರ ರಸವನ್ನು ಸಂಗ್ರಹಿಸಬೇಕು. ಕಾಟನ್‌ ಬಟ್ಟೆಯಲ್ಲಿ ಇದರ ರಸವನ್ನು ಸೋಸಿಕೊಳ್ಳಿ. ಈ ರಸವನ್ನು ಹತ್ತಿಯ ಸಹಾಯದಿಂದ ಇಲ್ಲವೇ ನಿಮ್ಮ ಬೆರಳುಗಳ ಸಹಾಯದಿಂದ ನೆತ್ತಿಯ ಭಾಗಕ್ಕೆ ಚೆನ್ನಾಗಿ ಹಾಕಿಕೊಳ್ಳಬೇಕು. ನಂತರ ಮೆತ್ತಗೆ ನಿಮ್ಮ ನೆತ್ತಿಯ ಭಾಗವನ್ನು ಮಸಾಜ್‌ ಮಾಡಿಕೊಳ್ಳಬೇಕು. ಕನಿಷ್ಠ 30 ನಿಮಿಷದಿಂದ ಒಂದು ಗಂಟೆಯವರೆಗೆ ನೆತ್ತಿಯು ಈ ರಸವನ್ನು ಹೀರಿಕೊಳ್ಳಲು ಬಿಡಿ. ಅದಾದ ಮೇಲೆ ಶಾಂಪೂ ಬಳಸಿ ನಿಮ್ಮ ಕೂದಲನ್ನು ಚೆನ್ನಾಗಿ ತೊಳೆದುಕೊಂಡರೆ ಸಾಕು ಈರುಳ್ಳಿ ಅಥವಾ ಬೆಳ್ಳುಳ್ಳಿಯ ಘಾಟು ವಾಸನೆ ನಿಮ್ಮ ಕೂದಲಿನಿಂದ ಇಲ್ಲವಾಗತ್ತದೆ. ವಾರಕ್ಕೆ 1 ಅಥವಾ 2 ಬಾರಿಯಾದರೂ ಈ ರೀತಿ ಕೂದಲ ಆರೈಕೆ ಮಾಡುವ ಮೂಲಕ ಉತ್ತಮ ಫಲಿತಾಂಶವನ್ನು ಕಂಡುಕೊಳ್ಳಬಹುದು.

2. ಎಣ್ಣೆಯ ರೂಪದಲ್ಲೂ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಉಪಯೋಗಿಸಿ: ತೆಂಗಿನೆಣ್ಣೆ ಅಥವಾ ಆಲಿವ್ ಎಣ್ಣೆಯಲ್ಲಿ ಸಣ್ಣಗೆ ಹೆಚ್ಚಿಕೊಂಡ ಈರುಳ್ಳಿ ಅಥವಾ ಬೆಳ್ಳುಳ್ಳಿಯನ್ನು ಹಾಕಿ, ಕೆಲವು ದಿನಗಳವರೆಗೆ ನೆನೆಸಿಟ್ಟುಕೊಳ್ಳುವ ಮೂಲಕ ನೀವು ಈರುಳ್ಳಿ ಅಥವಾ ಬೆಳ್ಳುಳ್ಳಿ-ಇನ್ಫ್ಯೂಸ್ಡ್ ಎಣ್ಣೆಯನ್ನು ತಯಾರಿಸಬಹುದು. ಈ ಎಣ್ಣೆಯನ್ನು ರಾತ್ರಿ ಮಲಗುವ ಮುನ್ನ ನಿಮ್ಮ ನೆತ್ತಿ ಮತ್ತು ಕೂದಲಿಗೆ ಹಚ್ಚಿಕೊಂಡು ಹದವಾಗಿ ಮಸಾಜ್ ಮಾಡಿ, ರಾತ್ರಿಯಿಡೀ ಬಿಡಿ. ಮರುದಿನ ಬೆಳಿಗ್ಗೆ ಶಾಂಪೂ ಬಳಸಿ ನಿಮ್ಮ ಕೂದಲನ್ನು ತೊಳೆಯಿರಿ. ವಾರಕ್ಕೆ 2 ರಿಂದ 3 ಬಾರಿ ಈ ರೀತಿ ಮಾಡುವುದರಿಂದ ಕೂದಲು ಆರೋಗ್ಯಕರವಾಗಿರುತ್ತದೆ.

ಮಕ್ಕಳು, ಸೂಕ್ಷ್ಮ ಚರ್ಮ ಹೊಂದಿರುವವರು, ಎಕ್ಸಿಮಾ, ಸೋರಿಯಾಸಿಸ್ ಅಥವಾ ಡರ್ಮಟೈಟಿಸ್‌ನಂತಹ ತಲೆಹೊಟ್ಟು ಹೊಂದಿರುವವರು, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರು ಕೂದಲಿನ ಬೆಳವಣಿಗೆಗೆ ಈ ಮನೆಮದ್ದುಗಳನ್ನು ಅನುಸರಿಸದಿರುವುದೇ ಉತ್ತಮ.

    ಹಂಚಿಕೊಳ್ಳಲು ಲೇಖನಗಳು