logo
ಕನ್ನಡ ಸುದ್ದಿ  /  ಜೀವನಶೈಲಿ  /  ತಲೆಕೂದಲು ಉದುರುತ್ತಿರುವ ಚಿಂತೆಯೇ; ಕೂದಲು ತೆಳ್ಳಗಾಗಲು ಕಾರಣವೇನು? ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ ನೋಡಿ

ತಲೆಕೂದಲು ಉದುರುತ್ತಿರುವ ಚಿಂತೆಯೇ; ಕೂದಲು ತೆಳ್ಳಗಾಗಲು ಕಾರಣವೇನು? ಜೀವನಶೈಲಿಯಲ್ಲಿ ಈ ಬದಲಾವಣೆ ಮಾಡಿ ನೋಡಿ

Jayaraj HT Kannada

May 06, 2024 08:40 AM IST

ತಲೆಕೂದಲು ಉದುರುತ್ತಿರುವ ಚಿಂತೆಯೇ; ಕೂದಲು ತೆಳ್ಳಗಾಗಲು ಕಾರಣವೇನು

    • ಇಂದಿನ ಜೀವನಶೈಲಿಯ ಸಾಮಾನ್ಯ ಸಮಸ್ಯೆಗಳಲ್ಲಿ ತಲೆಗೂದಲು ಉದುರುವಿಕೆಯೂ ಒಂದು. ಹೆಣ್ಮಕ್ಕಳು ಮಾತ್ರವಲ್ಲ ಗಂಡುಮಕ್ಕಳು ಕೂಡ ತಲೆಗೂದಲು ಉದುರುವಿಕೆಯ ಬಗ್ಗೆ ಚಿಂತೆಗೊಳಗಾಗುತ್ತಿದ್ದಾರೆ. ಇದಕ್ಕೆ ಕಾರಣವೇನು, ತಲೆಗೂದಲು ಉದುರದಂತೆ ಕಾಪಾಡಿಕೊಳ್ಳುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಲಹೆ.
ತಲೆಕೂದಲು ಉದುರುತ್ತಿರುವ ಚಿಂತೆಯೇ; ಕೂದಲು ತೆಳ್ಳಗಾಗಲು ಕಾರಣವೇನು
ತಲೆಕೂದಲು ಉದುರುತ್ತಿರುವ ಚಿಂತೆಯೇ; ಕೂದಲು ತೆಳ್ಳಗಾಗಲು ಕಾರಣವೇನು

ಬಹುತೇಕರು ತಲೆಕೂದಲು ಉದುರುವಿಕೆಯ ಸಮಸ್ಯೆ ಹೊಂದಿರುತ್ತಾರೆ. ಕೂದಲು ತುಂಬಾ ಉದುರಿದರೆ ಚಿಂತೆಗೂ ಕಾರಣವಾಗುತ್ತದೆ. ಹೆಣ್ಮಕ್ಕಳು ಮಾತ್ರವಲ್ಲ, ಗಂಡು ಮಕ್ಕಳು ಕೂಡ ಕೂದಲು ಉದುರುತ್ತಿವೆ, ಏನು ಮಾಡಲಿ ಅಂತಾ ಚಿಂತಿಸುತ್ತಾರೆ. ತಲೆಕೂದಲು ಉದುರುವಿಕೆಗೆ ಅನೇಕ ಕಾರಣಗಳಿವೆ. 65 ವರ್ಷಕ್ಕಿಂತ ಮೇಲ್ಪಟ್ಟ ಸುಮಾರು ಶೇ. 50 ರಷ್ಟು ಮಹಿಳೆಯರು ಮತ್ತು ಎಲ್ಲಾ ಪುರುಷರಲ್ಲಿ ಮೂರನೇ ಎರಡರಷ್ಟು ಕೂದಲು ಉದುರುತ್ತವೆ ಎಂದು ಸಂಶೋಧಕರು ನಡೆಸಿರುವ ಅಧ್ಯಯನದಿಂದ ತಿಳಿದು ಬಂದಿದೆ. ಹಿರಿಯರು ಮಾತ್ರವಲ್ಲ ವಯಸ್ಕರಲ್ಲೂ ಈ ಸಮಸ್ಯೆ ಹೆಚ್ಚಿದೆ. ಅದಕ್ಕೆ ಇಂದಿನ ಆಹಾರ ಪದ್ಧತಿ, ಜೀವನಶೈಲಿಯೇ ಬಹುಮುಖ್ಯ ಕಾರಣ. ತಲೆಕೂದಲು ಉದುರುವಿಕೆಗೆ ಏನು ಕಾರಣ ಮತ್ತು ನಿಮ್ಮ ಕೂದಲಿನ ಆರೋಗ್ಯವನ್ನು ನಿರ್ವಹಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಮಾಹಿತಿ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ತಲೆಗೂದಲು ಉದುರಲು ಅಥವಾ ತೆಳ್ಳಗಾಗಲು ಕಾರಣವೇನು?

ವಯಸ್ಸಾದಂತೆ ಕೂದಲು ಉದುರುತ್ತವೆ: ದೇಹವು ವಯಸ್ಸಾದಂತೆ ಕೂದಲಿನ ಬೆಳವಣಿಗೆಯು ನಿಧಾನಗೊಳ್ಳುತ್ತದೆ. ಬಿಳಿ ಕೂದಲುಗಳು ಕೂಡ ಬೆಳೆಯಲು ಶುರುವಾಗುತ್ತದೆ. ಹೀಗಾಗಿ ಕೂದಲು ತೆಳ್ಳಗಾಗುತ್ತವೆ.

ಗರ್ಭಾವಸ್ಥೆ: ಗರ್ಭಾವಸ್ಥೆಯ ಎರಡನೇ ಮತ್ತು ಮೂರನೇ ತ್ರೈಮಾಸಿಕವು ಕೂದಲಿನ ಸಂಖ್ಯೆ ಹೆಚ್ಚುವುದನ್ನು ಪ್ರಚೋದಿಸುತ್ತದೆ. ಇದನ್ನು ಅನಾಜೆನ್ ಎಂದು ಕರೆಯಲಾಗುತ್ತದೆ. ಹೆರಿಗೆಯ ನಂತರ, ಹಾರ್ಮೋನ್ ಬದಲಾವಣೆಗಳಿಗೆ ಕಾರಣವಾಗಬಹುದು. ಇದು ಗರ್ಭಾವಸ್ಥೆಯ ನಂತರ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಇದನ್ನೂ ಓದಿ | Summer Drinks: ಬೇಸಿಗೆಗೆ ಪುನರ್‌ಪುಳಿ ಜ್ಯೂಸ್‌, ಕೂಲ್‌ ಜತೆಗೆ ಆರೋಗ್ಯಕರ, ಹೇಗೆ ತಯಾರಿಸೋದು?

ಭಾವನಾತ್ಮಕ ಒತ್ತಡ: ನಿರಂತರ ಭಾವನಾತ್ಮಕ ಒತ್ತಡವು ಕೂದಲು ಕಿರುಚೀಲಗಳನ್ನು ಬೆಳೆಯುವ ಹಂತದಿಂದ ವಿಶ್ರಾಂತಿ ಹಂತಕ್ಕೆ ಬದಲಾಯಿಸಲು ಪ್ರೇರೇಪಿಸುತ್ತದೆ. ಮನೆಯಲ್ಲೇನಾದ್ರೂ ಜಗಳಗಳು ನಡೆಯುತ್ತಿದ್ದರೆ, ಮಾನಸಿಕವಾಗಿ ಕುಗ್ಗಿ ಹೋಗುವ ಸಾಧ್ಯತೆ ಇರುತ್ತದೆ. ಬೇಸರ, ಟೆನ್ಷನ್‌ನಿಂದಲೂ ಕೂದಲುಗಳು ಉದುರುತ್ತವೆ.

ಅನಾರೋಗ್ಯ: ಏನಾದರೂ ಕಾಯಿಲೆ ಅಥವಾ ಅನಾರೋಗ್ಯವಿದ್ದರೂ ಕೂದಲು ಉದುರಲು ಕಾರಣವಾಗಬಹುದು. ದೇಹದ ಪ್ರತಿರಕ್ಷಣಾ ವ್ಯವಸ್ಥೆಯು ಕೂದಲಿನ ಕಿರುಚೀಲಗಳ ಮೇಲೆ ದಾಳಿ ಮಾಡುತ್ತದೆ. ಇದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

ಹಾರ್ಮೋನುಗಳ ಪರಿಣಾಮಗಳು: ಹಾರ್ಮೋನುಗಳು ಕೂದಲಿನ ಚಕ್ರ ಮತ್ತು ಕೋಶ ರಚನೆಯ ಮೇಲೆ ಗಾಢವಾಗಿ ಪ್ರಭಾವ ಬೀರುತ್ತವೆ. ಇವುಗಳಲ್ಲಿ ಟೆಸ್ಟೋಸ್ಟೆರಾನ್‌ನಂತಹ ಆಂಡ್ರೋಜೆನ್‌ಗಳು, ಎಸ್ಟ್ರಾಡಿಯೋಲ್‌ನಂಥ ಲೈಂಗಿಕ ಹಾರ್ಮೋನುಗಳು, ಥೈರಾಕ್ಸಿನ್‌ನಂತಹ ಥೈರಾಯ್ಡ್ ಹಾರ್ಮೋನುಗಳು ಮತ್ತು ಒತ್ತಡದಿಂದಾಗಿ ಮೂತ್ರಜನಕಾಂಗದ ಗ್ರಂಥಿಗಳಿಂದ ಬಿಡುಗಡೆಯಾಗುವ ಕಾರ್ಟಿಸೋಲ್ ಸೇರಿವೆ.

ಅನುವಂಶಿಕ ಕೂದಲು ಉದುರುವಿಕೆ: ಕೂದಲು ಉದುರುವಿಕೆಯಲ್ಲಿ ಜೆನೆಟಿಕ್ಸ್ ಮಹತ್ವದ ಪಾತ್ರವನ್ನು ವಹಿಸುತ್ತದೆ. ಇದು ರೋಗದ ಫಲಿತಾಂಶವಲ್ಲ. ಆದರೆ ಅನುವಂಶಿಕ ಜೀನ್‌ಗಳು, ಹಾರ್ಮೋನ್ ಮಟ್ಟದಿಂದಲೂ ಕೂದಲುಗಳು ಉದುರುತ್ತವೆ.

ತಲೆಕೂದಲಿನ ಬೆಳವಣಿಗೆ ಉತ್ತೇಜಿಸಲು, ನಿತ್ಯ ಈ ಕೆಳಗಿನ ಅಭ್ಯಾಸಗಳನ್ನು ಸೇರಿಸಿಕೊಳ್ಳಿ

1. ಆರೋಗ್ಯಕರ ಮತ್ತು ಸಮತೋಲಿತ ಆಹಾರ ಸೇವಿಸಿ.

2. ಒತ್ತಡ ನಿವಾರಿಸಲು ಮತ್ತು ಎಂಡಾರ್ಫಿನ್ ಬಿಡುಗಡೆಯನ್ನು ಪ್ರಚೋದಿಸಲು ನಿಯಮಿತವಾಗಿ ದೈಹಿಕ ಚಟುವಟಿಕೆಯಲ್ಲಿ ಭಾಗಿಯಾಗಿ.

3. ಯೋಗಕ್ಷೇಮವನ್ನು ಉತ್ತೇಜಿಸಲು ಧ್ಯಾನ ಮತ್ತು ಮಸಾಜ್‌ನಂತಹ ವಿಶ್ರಾಂತಿ ತಂತ್ರಗಳನ್ನು ಅಳವಡಿಸಿಕೊಳ್ಳಿ.

4. ನಿಮ್ಮ ಕೆಲಸ ಮತ್ತು ವೈಯಕ್ತಿಕ ಜೀವನದ ನಡುವೆ ಸಾಮರಸ್ಯದ ಸಮತೋಲನಕ್ಕಾಗಿ ಶ್ರಮಿಸಿ.

5. ನೀವು ಆಹಾರದ ಬಗ್ಗೆ ವಿಶೇಷ ಗಮನಕೊಡಿ. ವಿಟಮಿನ್ ಇ ಇರುವ ಆಹಾರವನ್ನು ಅತಿಯಾಗಿ ಸೇವಿಸುವುದರಿಂದಲೂ ಕೂದಲು ಉದುರುವಿಕೆಗೆ ಕಾರಣವಾಗಬಹುದು.

ಇಂದು ಮಾರುಕಟ್ಟೆಯಲ್ಲಿ ಹಲವಾರು ಶ್ಯಾಂಪೂಗಳು ಲಭ್ಯವಿದೆ. ಇವು ಕೂದಲು ಉದುರುವುದನ್ನು ಕಡಿಮೆ ಮಾಡುತ್ತದೆ, ದಪ್ಪವನ್ನು ಹೆಚ್ಚಿಸುತ್ತದೆ. ಅಲ್ಲದೆ, ಕೂದಲಿನ ನೋಟವನ್ನು ಸುಧಾರಿಸುತ್ತದೆ. ಹಾಗಂತ ಇದ್ದಬಿದ್ದ ಶ್ಯಾಂಪೂಗಳನ್ನು ಪ್ರಯೋಗಿಸಬಾರದು. ಯಾವುದಾದರೂ (ಸಲ್ಫೇಟ್ ಅಂಶವಿಲ್ಲದ) ಒಂದೇ ಶ್ಯಾಂಪೂವನ್ನು ಉಪಯೋಗಿಸಬೇಕು.

(ಪ್ರಿಯಾಂಕಾ ಗೌಡ)

ಇದನ್ನೂ ಓದಿ | Weight Loss: 30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು

ಕೂದಲಿನ ಆರೈಕೆ ಕುರಿತ ಮತ್ತಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

    ಹಂಚಿಕೊಳ್ಳಲು ಲೇಖನಗಳು