Weight Loss: 30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು-weight loss 5 everyday easy exercises for women to melt full body fat after 30 fitness tips for women rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  Weight Loss: 30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು

Weight Loss: 30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು

30ರ ನಂತರ ಮಹಿಳೆಯರ ದೇಹದಲ್ಲಿ ಬೊಜ್ಜು ಕಾಣಿಸಬಹುದು ಸಹಜ. ಇದರಿಂದ ಅವರ ಸೌಂದರ್ಯವೂ ಕೆಡುತ್ತದೆ. ಅದಕ್ಕಾಗಿ ಚಿಂತಿಸುವ ಅಗತ್ಯವಿಲ್ಲ. ನಿಮ್ಮ ದೇಹದ ಸಂಪೂರ್ಣ ಬೊಜ್ಜನ್ನು ಕರಗಿಸಿ, ಬಳಕೋ ಬಳ್ಳಿಯಂತೆ ಮಾಡುವ 5 ಸರಳ ವ್ಯಾಯಾಮಗಳು ಇಲ್ಲಿವೆ. ಇವನ್ನು ಪ್ರತಿನಿತ್ಯ ಅಭ್ಯಾಸ ಮಾಡಿ.

30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು
30ರ ನಂತರವೂ ಮಹಿಳೆಯರು ಫಿಟ್‌ ಆಗಿ, ಬಳುಕೋ ಬಳ್ಳಿಯಂತಿರಲು ಸಹಾಯ ಮಾಡುವ 5 ವ್ಯಾಯಾಮಗಳಿವು

ತೂಕ ಇಳಿಸೋದು ಹೇಗಪ್ಪಾ ಅನ್ನೋದೇ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಸಮಸ್ಯೆ. ಅದರಲ್ಲೂ 30 ವರ್ಷ ದಾಟಿದ ಹೆಣ್ಣುಮಕ್ಕಳ ದೇಹದಲ್ಲಿ ಬೇಡವೆಂದರೂ ಬೊಜ್ಜು ಬರಲು ಆರಂಭವಾಗುತ್ತದೆ. ಸೌಂದರ್ಯದ ಮೇಲೆ ಅಪಾರ ಕಾಳಜಿ ಇರುವ ಹೆಣ್ಣುಮಕ್ಕಳಿಗೆ ಹೇಗಪ್ಪಾ ತೂಕ ಇಳಿಸೋದು, ಹೇಗಪ್ಪಾ ಬೊಜ್ಜು ಕರಗಿಸೋದು ಅನ್ನೋ ಚಿಂತೆ ಕಾಡೋದು ಸಹಜ. ಜೊತೆಗೆ ಬೊಜ್ಜು ಹಾಗೂ ಅತಿ ತೂಕದಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಕೂಡ ಎದುರಾಗುತ್ತವೆ. ಅದಕ್ಕಾಗಿ ನೀವು ಚಿಂತಿಸುವ ಅಗತ್ಯವಿಲ್ಲ. ಈ 5 ಸರಳ ವ್ಯಾಯಾಮಗಳನ್ನು ಅಭ್ಯಾಸ ಮಾಡಿ, ಪ್ರತಿದಿನ ಪಾಲಿಸಿ. ನಂತರ ನೀವೂ ಬಳಕೋ ಬಳ್ಳಿಯಂತಾಗಿಲ್ಲ ಎಂದರೆ ಕೇಳಿ.

30ರ ನಂತರ ದೇಹದ ಬೊಜ್ಜು ಇಳಿಸಲು ಸಹಾಯ ಮಾಡುವ 5 ವ್ಯಾಯಾಮಗಳಿವು.

ಕಾರ್ಡಿಯೊ ವರ್ಕೌಟ್‌

 ಸುಲಭದ ಹಾಗೂ ಪರಿಣಾಮಕಾರಿ ವ್ಯಾಯಾಮಗಳೆಂದರೆ ಕಾರ್ಡಿಯೋ ವ್ಯಾಯಾಮಗಳು. ರನ್ನಿಂಗ್‌, ವಾಕಿಂಗ್‌, ರೋಪ್‌ ಸ್ಕಿಪ್ಲಿಂಗ್‌ ಇಂತಹ ವ್ಯಾಯಾಮಗಳಿಂದ ಆರಂಭಿಸಬಹುದು. ಇವು ಕ್ಯಾಲೊರಿ ಕರಗಿಸಲು ಬೆಸ್ಟ್‌ ಅಂತಲೇ ಹೇಳಬಹುದು. ಇವು ಹೃದಯರಕ್ತನಾಳದ ಆರೋಗ್ಯವನ್ನು ಉತ್ತೇಜಿಸುತ್ತವೆ. ದೇಹದ ಕೊಬ್ಬು ನಿವಾರಿಸಲು ಕೂಡ ಈ ವ್ಯಾಯಾಮ ಉತ್ತಮ. ಜಂಪಿಂಗ್‌ ರೋಪ್‌ ಸಂಪೂರ್ಣ ದೇಹದ ಕ್ಯಾಲೊರಿಗಳನ್ನು ಸುಡಲು ಸಹಾಯ ಮಾಡುತ್ತದೆ.

ಹೈ ಇಂಟೆನ್ಸಿಟಿ ಇಂಟರ್ವಲ್‌ ಟ್ರೈನಿಂಗ್‌

 ಬರ್ಪಿಸ್‌ ಒಂದು ಸಂಯುಕ್ತ ವ್ಯಾಯಾಮವಾಗಿದೆ. ಇದು ಸ್ಟ್ರೆಂಥ್‌ ಟ್ರೈನಿಂಗ್‌ ಮತ್ತು ಹೃದಯರಕ್ತನಾಳದ ಕಂಡೀಷನ್‌ ಅನ್ನು ಸಂಯೋಜಿಸುತ್ತದೆ. ಇದು ಸಂಪೂರ್ಣ ಸ್ನಾಯುಗಳಿಗೆ ಉತ್ತಮ ವ್ಯಾಯಾಮ ಒದಗಿಸುತ್ತದೆ. ಕ್ಯಾಲೊರಿ ಬರ್ನ್‌ ಮಾಡಲು ಉತ್ತಮ ವ್ಯಾಯಾಮ ಅಂತಲೇ ಹೇಳಬಹುದು. ಮೌಂಟೈನ್‌ ಕ್ಲೈಬಿಂಗ್‌ ಅಥವಾ ಪರ್ವತಾರೋಹಣ ಮಾಡುವುದು ಒಂದಿ ಕ್ರಿಯಾತ್ಮಕ ವ್ಯಾಯಾಮವಾಗಿದ್ದು, ಇದು ಕೋರ್‌ ಬಾಡಿ ಹಾಗೂ ಕೆಳ ದೇಹಕ್ಕೆ ಸಂಪೂರ್ಣ ಶಕ್ತಿ ಒದಗಿಸುತ್ತದೆ. ಇದು ಚಯಾಪಚಯವನ್ನು ಹೆಚ್ಚಿಸುವ ಜೊತೆಗೆ ಒಟ್ಟಾರೆ ದೇಹದ ಕೊಬ್ಬು ಕರಗಲು ಕಾರಣವಾಗುತ್ತದೆ.

ಸ್ಟ್ರೆಂಥ್‌ ಟ್ರೈನಿಂಗ್‌

ಸ್ಕ್ವಾಟ್‌ಗಳು, ಡೆಡ್‌ಲಿಫ್ಟ್‌ಗಳು, ಪುಪ್‌ಅಪ್‌ಗಳಂತ ವ್ಯಾಯಾಮಗಳು ಸಂಪೂರ್ಣ ಸ್ನಾಯುಗಳಿಗೆ ಶಕ್ತಿ ಒದಗಿಸುತ್ತದೆ. ಇದು ಸ್ನಾಯುವಿನ ದ್ರವ್ಯರಾಶಿಯನ್ನು ಸದೃಢಗೊಳಿಸುತ್ತದೆ. ಇದರಿಂದ ಚಯಾಪಚಯ ಕ್ರಿಯೆ ವೃದ್ಧಿಯಾಗುತ್ತದೆ. ಈ ವ್ಯಾಯಾಮಗಳು ವಿಶ್ರಾಂತಿಯ ಸಮಯದಲ್ಲೂ ದೇಹದ ಕೊಬ್ಬು ಸುಡಲು ಉತ್ತೇಜಿಸುತ್ತವೆ. ನಿಮ್ಮ ದಿನಚರಿಯಲ್ಲಿ ವೇಟ್‌ಲಿಫ್ಟಿಂಗ್‌ ಅನ್ನು ಸೇರಿಸುವುದು ದೇಹದ ಕೊಬ್ಬು ಕಡಿಮೆ ಮಾಡಲು ಪ್ರಯೋಜನಕಾರಿಯಗಿದೆ.

ಝಂಬಾ

ಝಂಬಾ ಮೋಜಿನ ಹಾಗೂ ಅತ್ಯಂತ ಪರಿಣಾಮಕಾರಿ ವ್ಯಾಯಾಮ. ಇದು ಸಂಪೂರ್ಣ ದೇಹದ ಕೊಬ್ಬನ್ನು ಕಡಿಮೆ ಮಾಡುತ್ತದೆ. ಕ್ಯಾಲೊರಿ ಬರ್ನ್‌ ಮಾಡಿ ಹೃದಯರಕ್ತನಾಳದ ಆರೋಗ್ಯ ಸುಧಾರಿಸಲು ಇದು ಉತ್ತಮ. ಇಡೀ ದೇಹವನ್ನು ತೊಡಗಿಸಿಕೊಳ್ಳುವ ಮೂಲಕ ಸಂಪೂರ್ಣ ದೇಹದ ಬೊಜ್ಜು, ಕೊಬ್ಬು ಕರಗಲು ಸಹಕಾರಿಯಾಗುತ್ತದೆ.

ಯೋಗ

ಪುರಾತನ ಕಾಲದಿಂದಲೂ ಯೋಗಾಭ್ಯಾಸದಿಂದ ಜನರು ಆರೋಗ್ಯ ಕಾಪಾಡಿಕೊಳ್ಳುತ್ತಿದ್ದರು. ಇದು ಜೀವನಶೈಲಿಯ ಗುಣಮಟ್ಟವನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದು ಮಾನಸಿಕ ಆರೋಗ್ಯಕ್ಕೂ ಉತ್ತಮ. ದೇಹದ ವಿವಿಧ ಭಾಗಗಳಲ್ಲಿನ ಕೊಬ್ಬು ಕರಗಿಸಲು ಸಹಾಯ ಮಾಡುವ ನಿರ್ದಿಷ್ಟ ಯೋಗಾಸನಗಳಿವೆ. 5-20 ನಿಮಿಷಗಳ ಅನಿಯಮಿತ ಯೋಗವು 30 ವರ್ಷಕ್ಕಿಂತ ಮೇಲ್ಪಟ್ಟ ಮಹಿಳೆಯರಿಗೆ ಶಾಂತತೆಯನ್ನು ತರಲು ಮತ್ತು ಅವರ ಮೂಳೆಗಳು, ನಮ್ಯತೆ ಮತ್ತು ಹೆಚ್ಚಿನದನ್ನು ಬಲಪಡಿಸಲು ಸಹಾಯ ಮಾಡುತ್ತದೆ.

ಈ ಮೇಲಿನ ವ್ಯಾಯಾಮಗಳಲ್ಲಿ ನಿಮಗೆ ಹೊಂದುವ ಯಾವುದಾದರೂ ಒಂದು ವ್ಯಾಯಾಮವನ್ನು ಪ್ರತಿನಿತ್ಯ ಮಾಡುವ ಮೂಲಕ 30 ನಂತರವೂ ನೀವು ಫಿಟ್‌ ಆಗಿ ಇರಬಹುದು. ಅಲ್ಲದೇ ತೂಕ ಇಳಿಕೆಗೂ ಇದು ಉತ್ತಮ. ಆದರೆ ಪ್ರತಿನಿತ್ಯ ತಪ್ಪದೇ ಅನುಸರಿಸುವುದು ಬಹಳ ಮುಖ್ಯವಾಗುತ್ತದೆ.

mysore-dasara_Entry_Point