logo
ಕನ್ನಡ ಸುದ್ದಿ  /  ಜೀವನಶೈಲಿ  /  Fruit Juice: ಬೇಸಿಗೆ ಅಂತ ಅತಿಯಾಗಿ ಜ್ಯೂಸ್‌ ಕುಡದ್ರೆ ತೊಂದರೆ ಖಚಿತ, ಫ್ರೂಟ್‌ ಜ್ಯೂಸ್‌ ಇಷ್ಟಪಡೋರು ತಿಳಿಯಲೇಬೇಕಾದ ವಿಚಾರವಿದು

Fruit Juice: ಬೇಸಿಗೆ ಅಂತ ಅತಿಯಾಗಿ ಜ್ಯೂಸ್‌ ಕುಡದ್ರೆ ತೊಂದರೆ ಖಚಿತ, ಫ್ರೂಟ್‌ ಜ್ಯೂಸ್‌ ಇಷ್ಟಪಡೋರು ತಿಳಿಯಲೇಬೇಕಾದ ವಿಚಾರವಿದು

Reshma HT Kannada

Apr 13, 2024 12:00 PM IST

ಫ್ರೂಟ್‌ ಜ್ಯೂಸ್‌ ಇಷ್ಟಪಡೋರು ತಿಳಿಯಲೇಬೇಕಾದ ವಿಚಾರವಿದು

    • ತಾಜಾ ಹಣ್ಣಿನ ಜ್ಯೂಸ್‌ ಕುಡಿಯುವುದು ಹಲವರಿಗೆ ಬಲು ಇಷ್ಟ. ಅದರಲ್ಲೂ ಈ ಬೇಸಿಗೆಯಲ್ಲಿ ದೇಹ ತಣಿಸಿ, ನಾಲಿಗೆಯ ರುಚಿ ಹೆಚ್ಚಿಸುವ ಹಣ್ಣುಗಳ ರಸ ಯಾರಿಗೆ ಇಷ್ಟವಾಗುವುದಿಲ್ಲ ಹೇಳಿ. ಆದರೆ ಅತಿಯಾಗಿ ಜ್ಯೂಸ್‌ ಕುಡಿಯೋದು ಅಪಾಯ ಅಂತೆ. ಜ್ಯೂಸ್‌ ಇಷ್ಟಪಡೋರು ಓದಲೇಬೇಕಾದ ವಿಚಾರವಿದು.
ಫ್ರೂಟ್‌ ಜ್ಯೂಸ್‌ ಇಷ್ಟಪಡೋರು ತಿಳಿಯಲೇಬೇಕಾದ ವಿಚಾರವಿದು
ಫ್ರೂಟ್‌ ಜ್ಯೂಸ್‌ ಇಷ್ಟಪಡೋರು ತಿಳಿಯಲೇಬೇಕಾದ ವಿಚಾರವಿದು

ಬಾಯಾರಿದಾಗ, ದೇಹ ದಣಿದಾಗ ಜ್ಯೂಸ್‌ ಕುಡಿಯಬೇಕು ಅನ್ನಿಸುವುದು ಸಹಜ. ಬಿರು ಬೇಸಿಗೆಯಲ್ಲಿ ರಸ್ತೆಯಲ್ಲಿ ಹೋಗುತ್ತಿರುವಾಗ ಪಕ್ಕದಲ್ಲೇ ಇರುವ ಜ್ಯೂಸ್‌ ಸೆಂಟರ್‌ ನೋಡಿದ್ರೆ ಮನಸ್ಸು ಅತ್ತ ಎಳೆಯುತ್ತದೆ. ಮನೆಯಲ್ಲಿ ಇದ್ರೂ ಹಣ್ಣುಗಳ ಕಡೆ ನೋಡಿದಾಗ ಇದನ್ಯಾಕೆ ಜ್ಯೂಸ್‌ ಮಾಡಬಾರದು ಅನ್ನಿಸೋದು ಕೂಡ ಸಹಜ. ತಂಪು ಪಾನೀಯಗಳಿಗಿಂತ ತಾಜಾ ಹಣ್ಣಿನ ಜ್ಯೂಸ್‌ ಕುಡಿಯುವುದು ಆರೋಗ್ಯಕ್ಕೂ ಉತ್ತಮ ಎನ್ನುವುದನ್ನು ನಾವು ಕೇಳಿಕೊಂಡೇ ಬಂದಿದ್ದೇವೆ. ಆದರೆ ಹೋಟೆಲ್‌ಗಳಿಗೆ ಹೋದಾಗ ಚಿಕ್ಕ ಗ್ಲಾಸ್‌ನಲ್ಲಿ ಜ್ಯೂಸ್‌ ಕೊಡುತ್ತಾರೆ. ಮನೆಯಲ್ಲಾದರೆ ನಾವು ದೊಡ್ಡ ಗ್ಲಾಸ್‌ ತುಂಬಾ ಜ್ಯೂಸ್‌ ತುಂಬಿಸಿಕೊಂಡು ಕುಡಿಯುತ್ತೇವೆ, ಆದರೆ ಹೋಟೆಲ್‌ಗಳಲ್ಲಿ ಯಾಕ್‌ ಹೀಗೆ, ಹಣ ಉಳಿಸೋಕೆ ಇರಬಹುದು ಅಂತ ನೀವು ಯೋಚಿಸಿರಬಹುದು. ಆದರೆ ಖಂಡಿತ ಅದಕ್ಕಲ್ಲ. ಹಣ್ಣಿನ ಜ್ಯೂಸ್‌ ನೀವು ಅಂದುಕೊಂಡಷ್ಟು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಮಿತವಾಗಿ ಸೇವಿಸುವುದರಿಂದ ಮಾತ್ರ ದೇಹಕ್ಕೆ ಅವಶ್ಯ ಪೋಷಕಾಂಶ ಸಿಗುತ್ತದೆ.

ಟ್ರೆಂಡಿಂಗ್​ ಸುದ್ದಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

World Hypertension Day: ಸೈಲೆಂಟ್‌ ಕಿಲ್ಲರ್‌ ಆಗಿ ಕಾಡುತ್ತಿದೆ ಅಧಿಕ ರಕ್ತದೊತ್ತಡ; ಆರಂಭಿಕ ಹಂತದ ಈ ಚಿಹ್ನೆಗಳನ್ನ ನಿರ್ಲಕ್ಷ್ಯ ಮಾಡದಿರಿ

Personality Test: ಕರಡಿನಾ ಚಾಕುನಾ, ಚಿತ್ರದಲ್ಲಿ ನಿಮಗೆ ಮೊದಲು ಕಾಣಿಸಿದ್ದೇನು? ನಿಮ್ಮ ಸ್ವಭಾವ ಹೇಗೆ ತಿಳಿಸುತ್ತೆ ಈ ಚಿತ್ರ

ಜ್ಯೂಸ್‌ ಕುಡಿಯುವುದು ತಾಜಾ ಹಣ್ಣುಗಳ ಸೇವನೆಯಂತಲ್ಲ

ಹಣ್ಣು ತಿನ್ನುವುದಕ್ಕಿಂತ ಜ್ಯೂಸ್‌ ಕುಡಿಯುವುದೇ ಹಲವರಿಗೆ ಇಷ್ಟವಾಗುತ್ತದೆ. ಆ ಕಾರಣಕ್ಕೆ ಪದೇ ಪದೇ ಜ್ಯೂಸ್‌ ಕುಡಿಯುವುದನ್ನೇ ಹೆಚ್ಚು ಇಷ್ಟಪಡುತ್ತಾರೆ.

ʼತಾಜಾ ಹಣ್ಣಿನ ರಸ ಕುಡಿಯುವುದು ಹಾಗೂ ಸಂಪೂರ್ಣ ಹಣ್ಣು ತಿನ್ನುವುದಕ್ಕೂ ಬಹಳ ವ್ಯತ್ಯಾಸವಿದೆʼ ಎನ್ನುತ್ತಾರೆ ಗುರುಗ್ರಾಮದ ಆರ್ಟೆಮಿಸ್‌ ಆಸ್ಪತ್ರೆಯ ಕ್ಲಿನಿಕಲ್‌ ಡಯಟಿಷಿನ್‌ ಡಾ. ಸಂಗೀತಾ ತಿವಾರಿ.

ಅವರ ಪ್ರಕಾರ ಹಣ್ಣು ನೇರವಾಗಿ ತಿನ್ನುವುದಕ್ಕೂ ಹಾಗೂ ಜ್ಯೂಸ್‌ ಮಾಡಿ ಕುಡಿಯುವುದಕ್ಕೂ ಇರುವ ವ್ಯತ್ಯಾಸಗಳಿವು.

* ಹಣ್ಣಿನಲ್ಲಿ ನಾರಿನಾಂಶ ಸಮೃದ್ಧವಾಗಿರುತ್ತದೆ. ಆದರೆ ಇದನ್ನು ಜ್ಯೂಸ್‌ ಮಾಡಿದಾಗ ನಾರಿನಾಂಶ ಹೊರ ಹೋಗುತ್ತದೆ. ಆ ಕಾರಣಕ್ಕೆ ಹಣ್ಣನ್ನು ನೇರವಾಗಿ ತಿನ್ನುವುದು ಉತ್ತಮ.

* ನಾರಿನಾಂಶ ಇಲ್ಲದ ಹಣ್ಣಿನ ರಸವು ದೇಹದಲ್ಲಿ ಸಕ್ಕರೆಯ ಮಟ್ಟ ವೇಗವಾಗಿ ಏರಿಕೆಯಾಗಲು ಕಾರಣವಾಗುತ್ತದೆ.

* ಹಣ್ಣಿನ ರಸದಲ್ಲಿ ಹಣ್ಣಿಗಿಂತ ಹೆಚ್ಚು ಕ್ಯಾಲೊರಿ ಅಂಶವಿರುತ್ತದೆ. ಏಕೆಂದರೆ ಹಣ್ಣಿನ ರಸವನ್ನು ತಯಾರಿಸಲು ಒಂದಕ್ಕಿಂತ ಹೆಚ್ಚು ಹಣ್ಣು ಸೇರಿಸುತ್ತೇವೆ. ಇದರಿಂದ ಕ್ಯಾಲೊರಿ ಅಂಶ ಹೆಚ್ಚಬಹುದು.

* ಹಣ್ಣಿನ ರಸವು ಹಣ್ಣಿಗಿಂತ ಹೆಚ್ಚು ಸಕ್ಕರೆಯಂಶ ಹೊಂದಿರುತ್ತದೆ. ಅದಕ್ಕೆ ಕಾರಣ ಜ್ಯೂಸ್‌ ತಯಾರಿಸುವಾಗ ಸಾಮಾನ್ಯವಾಗಿ ಎಲ್ಲರೂ ಸಕ್ಕರೆ ಸೇರಿಸುತ್ತಾರೆ. ಇದರಿಂದ ಸಕ್ಕರೆಯಂಶ ದುಪ್ಪಾಟ್ಟಾಗುತ್ತದೆ.

* ಹಣ್ಣುಗಳಲ್ಲಿ ನೈಸರ್ಗಿಕ ಜೀವಸತ್ವಗಳು, ಖನಿಜಗಳು ಹಾಗೂ ಉತ್ಕರ್ಷಣ ನಿರೋಧಕ ಅಂಶಗಳು ಹೇರಳವಾಗಿರುತ್ತದೆ. ಆದರೆ ಇದನ್ನ ಜ್ಯೂಸ್‌ ಮಾಡುವುದರಿಂದ ಪೋಷಕಾಂಶ ನಷ್ಟಕ್ಕೆ ಕಾರಣವಾಗಬಹುದು. ಅದರಲ್ಲೂ ವಿಟಮಿನ್‌ ಸಿಯಂತಹ ನೀರಿನಲ್ಲಿ ಕರಗುವ ಜೀವಸತ್ವಗಳು ಜ್ಯೂಸ್‌ ಮಾಡಿದಾಗ ಇಲ್ಲದಂತಾಗಬಹುದು.

* ಹಣ್ಣಿನ ಜ್ಯೂಸ್‌ ಕುಡಿಯುವುದಕ್ಕಿಂತ ಹಣ್ಣಿನ ರಸ ತಿನ್ನುವುದರಿಂದ ಹೊಟ್ಟೆ ತುಂಬಿದಂತಾಗುತ್ತದೆ. ಯಾಕೆಂದರೆ ಹಣ್ಣಿನಲ್ಲಿ ನಾರಿನಾಂಶ ಹೆಚ್ಚಿರುತ್ತದೆ.

ʼಹಣ್ಣಿನ ಜ್ಯೂಸ್‌ಗಳಲ್ಲಿ ಹಲವು ವಿಧಗಳಿವೆ. ಕೆಲವರು ಹಣ್ಣಿನ ಜ್ಯೂಸ್‌ ಸೇವನೆ ಉತ್ತಮ ಎನ್ನುತ್ತಾರೆ. ಆದರೆ ವಾಸ್ತವವಾಗಿ ಹಣ್ಣಿನ ಜ್ಯೂಸ್‌ ತಯಾರಿಸುವ ಹಾಗೂ ಅದನ್ನು ಸೇವಿಸುವ ಪ್ರಮಾಣದ ಮೇಲೆ ಜ್ಯೂಸ್‌ ಸೇವಿಸುವುದು ಆರೋಗ್ಯಕ್ಕೆ ಎಷ್ಟು ಒಳಿತು ಎಂಬುದು ನಿರ್ಧಾರವಾಗುತ್ತದೆʼ ಎಂದು ಇಂಡಿಯಾ ಟುಡೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ ಮುಂಬೈನ ಪಿಡಿ ಹಿಂದೂಜಾ ಆಸ್ಪತ್ರೆಯ ಕ್ಲಿನಿಕಲ್‌ ಡಯಟೀಷಿಯನ್‌ ಚೈತಾಲಿ ರಾಣಿ.

ಬೆಂಗಳೂರಿನ ಗ್ಲೆನೆಗಲ್ಸ್ ಬಿಜಿಎಸ್ ಆಸ್ಪತ್ರೆಯ ಕ್ಲಿನಿಕಲ್‌ ನ್ಯೂಟ್ರಿಷನ್‌ ಕಾರ್ತಿಗೈ ಸೆಲ್ವಿ ಎ ಅವರ ಪ್ರಕಾರ ʼಸಂಪೂರ್ಣ ಹಣ್ಣಿನಲ್ಲಿರುವ ನಾರಿನಾಂಶವು ನಮಗೆ ಹಸಿವಾಗುವುದನ್ನು ತಡೆಯುತ್ತದೆ. ಹೊಟ್ಟೆ ತುಂಬಿದ ಅನುಭವ ಸಿಗುವಂತೆ ಮಾಡುತ್ತದೆ. ನಿಯಮಿತ ಕರುಳಿನ ಚಲನೆಯನ್ನು ಉತ್ತೇಜಿಸುವ ಮೂಲಕ ಮಲಬದ್ಧತೆಯನ್ನು ನಿವಾರಿಸುತ್ತದೆʼ ಎನ್ನುತ್ತಾರೆ.

ನೀವು ಹಣ್ಣನ್ನು ತಿಂದಾಗ, ದೇಹವು ಹಣ್ಣಿನಲ್ಲಿರುವ ಸಕ್ಕರೆಯನ್ನು ಹೀರಿಕೊಳ್ಳಲು ಸಮಯ ತೆಗೆದುಕೊಳ್ಳುತ್ತದೆ. ಆದರೆ ಹಣ್ಣಿನ ರಸವನ್ನು ಸೇವಿಸಿದಾಗ, ರಕ್ತದಲ್ಲಿನ ಸಕ್ಕರೆಯಲ್ಲಿ ಸ್ಪೈಕ್ ಇರುತ್ತದೆ. ಪರಿಣಾಮವಾಗಿ, ದೇಹವು ಇನ್ಸುಲಿನ್ ಅನ್ನು ತಕ್ಷಣವೇ ಬಿಡುಗಡೆ ಮಾಡುತ್ತದೆ ಮತ್ತು ರಕ್ತದಲ್ಲಿನ ಹೆಚ್ಚಿನ ಪ್ರಮಾಣದ ಸಕ್ಕರೆಯು ಕೊಬ್ಬು ಮತ್ತು ಗ್ಲೈಕೋಜೆನ್ ಆಗಿ ಪರಿವರ್ತನೆಗೊಳ್ಳುತ್ತದೆ. ಇದು ಹಸಿವು ಹೆಚ್ಚುವಂತೆ ಮಾಡಿ ಹೆಚ್ಚು ತಿನ್ನುವಂತೆ ಮಾಡುತ್ತದೆ ಎಂದು ಸೆಲ್ವಿ ಹೇಳುತ್ತಾರೆ.

ಹಣ್ಣಿನ ರಸದಿಂದ ಪ್ರಯೋಜನವೂ ಇದೆ

ಹಣ್ಣಿನ ರಸ ಸೇವನೆಯಿಂದ ಮೇಲೆ ಹೇಳಿದಂತೆ ಸಾಕಷ್ಟು ಅನಾನುಕೂಲವಿದ್ದರೂ ಇದರಿಂ ಪ್ರಯೋಜನವೂ ಇದೆ.

* ತಾಜಾ ಹಣ್ಣಿನ ರಸವು ಹಣ್ಣುಗಳಲ್ಲಿ ಕಂಡುಬರುವ ಅಗತ್ಯವಾದ ಜೀವಸತ್ವಗಳು, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕಗಳ ನಿಮ್ಮ ಸೇವನೆಯನ್ನು ಹೆಚ್ಚಿಸಲು ಅನುಕೂಲಕರ ಮಾರ್ಗವಾಗಿದೆ.

* ವಿಟಮಿನ್ ಸಿ ಮತ್ತು ಫ್ಲೇವನಾಯ್ಡ್‌ಗಳಂತಹ ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ, ಇದು ದೇಹದಲ್ಲಿನ ಹಾನಿಕಾರಕ ಫ್ರಿ ರಾಡಿಕಲ್‌ಗಳನ್ನು ತಟಸ್ಥಗೊಳಿಸಲು ಮತ್ತು ಆಕ್ಸಿಡೇಟಿವ್ ಒತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ.

* ಹಣ್ಣಿನ ರಸವು ನೈಸರ್ಗಿಕ ಸಕ್ಕರೆಗಳು ಮತ್ತು ಎಲೆಕ್ಟ್ರೋಲೈಟ್‌ಗಳ ಮೂಲವನ್ನು ಒದಗಿಸುತ್ತದೆ, ಇದು ವ್ಯಾಯಾಮದ ನಂತರದ ಚೇತರಿಕೆಗೆ ಸಮರ್ಥವಾಗಿ ಪ್ರಯೋಜನಕಾರಿಯಾಗಿದೆ.

* ಸೋಡಾ ಅಥವಾ ಇತರ ತಂಪು ಪಾನೀಯಗಳನ್ನು ಕುಡಿಯುವುದಕ್ಕಿಂತ ಹಣ್ಣಿನ ಜ್ಯೂಸ್‌ ಉತ್ತಮ. ಆದರೆ ಆಯಾಸ, ಸುಸ್ತು ಆದಾಗ ಒಂದು ಲೋಟ ನೀರು ಹಾಗೂ ಒಂದು ಹಣ್ಣು ಸೇವನೆಗಿಂತ ಉತ್ತಮ ಬೇರೊಂದಿಲ್ಲʼ ಎಂದು ಕಾರ್ತಿಗೈ ಸೆಲ್ವಿ ಹೇಳುತ್ತಾರೆ.

ಅಡ್ಡ ಪರಿಣಾಮಗಳು

ತಾಜಾ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಅಡ್ಡ ಪರಿಣಾಮಗಳೂ ಉಂಟಾಗಬಹುದು ಎನ್ನುವ ತಜ್ಞರು ಅದರಲ್ಲೂ ಸಕ್ಕರೆ ಸೇರಿದ ಹಣ್ಣಿನ ಜ್ಯೂಸ್‌ನಿಂದ ಅಪಾಯ ಹೆಚ್ಚು ಎನ್ನುತ್ತಾರೆ.

ಸಕ್ಕರೆಯ ಮಟ್ಟ ಏರಿಕೆ: ಹಣ್ಣಿನ ರಸಕ್ಕೆ ಸಕ್ಕರೆ ಸೇರಿಸಿ ತಯಾರಿಸಿದ ಜ್ಯೂಸ್‌ ಕುಡಿಯುವುದರಿಂದ ದೇಹದಲ್ಲಿನ ಸಕ್ಕರೆಯ ಮಟ್ಟವನ್ನು ತ್ವರಿತವಾಗಿ ಏರಿಕೆಯಾಗುತ್ತದೆ. ಮಧುಮೇಹಿಗಳಿಗೆ ಇದು ಸಮಸ್ಯೆ ಉಂಟು ಮಾಡಬಹುದು. ಇದು ಕಾಲಾನಂತರದಲ್ಲಿ ಅಸ್ಥಿರ ರಕ್ತದಲ್ಲಿನ ಸಕ್ಕರೆ ನಿಯಂತ್ರಣಕ್ಕೆ ಸಂಭಾವ್ಯ ಕೊಡುಗೆ ನೀಡುತ್ತದೆ.

ತೂಕ ಹೆಚ್ಚಳ: ಹಣ್ಣಿನ ರಸದಲ್ಲಿ ಕ್ಯಾಲೊರಿ ಅಂಶ ದಟ್ಟವಾಗಿರುತ್ತದೆ. ಕ್ಯಾಲೊರಿ ಅಂಶ ಪರಿಗಣಿಸದೇ ಹೆಚ್ಚಿನ ಪ್ರಮಾಣದಲ್ಲಿ ಹಣ್ಣಿನ ರಸವನ್ನು ಕುಡಿಯುವುದು ತೂಕ ಹೆಚ್ಚಾಗಲು ಕಾರಣವಾಗುವುದು ಮಾತ್ರವಲ್ಲ ತೂಕ ನಿರ್ವಹಣೆಗೂ ಕಷ್ಟವಾಗಬಹುದು. ಇದು ಒಟ್ಟಾರೆ ಕ್ಯಾಲೊರಿ ಸಂಖ್ಯೆ ಹೆಚ್ಚಲು ಕಾರಣವಾಗುತ್ತದೆ.

ಹಲ್ಲಿನ ಸಮಸ್ಯೆಗಳು: ಸಕ್ಕರೆ ಸೇರಿಸಿದ ಹಣ್ಣಿನ ರಸವನ್ನು ಆಗಾಗ್ಗೆ ಕುಡಿಯುವುದರಿಂದ ಹಲ್ಲು ಹುಳುಕುಗಾವುದು, ದಂತಕ್ಷಯ ಮತ್ತು ದಂತಕವಚದ ಸವೆತದ ಅಪಾಯನ್ನು ಹೆಚ್ಚಿಸುತ್ತದೆ. ಹಣ್ಣಿನ ಜ್ಯೂಸ್‌ನಲ್ಲಿರುವ ನೈಸರ್ಗಿಕ ಸಕ್ಕರೆ ಹಾಗೂ ಆಮ್ಲಗಳು ಬಾಯಲ್ಲಿ ಹಾನಿಕಾರಣ ಬ್ಯಾಕ್ಟೀರಿಯಾಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಕಾಲಾನಂತರದಲ್ಲಿ ಇದು ಬಾಯಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೆಚ್ಚಿಸಬಹುದು.

ಪೌಷ್ಟಿಕಾಂಶ ಅಸಮತೋಲನ: ಪೌಷ್ಟಿಕಾಂಶದ ಅಸಮತೋಲನ: ಪೌಷ್ಟಿಕಾಂಶಗಳ ಮೂಲವಾಗಿ ಹಣ್ಣಿನ ರಸವನ್ನು ಹೆಚ್ಚು ಸೇವಿಸುವುದರಿಂದ ಪೌಷ್ಟಿಕಾಂಶ ಸೇವನೆಯ ಅಸಮತೋಲನಕ್ಕೆ ಕಾರಣವಾಗಬಹುದು. ಇದು ಪ್ರೋಟೀನ್, ಫೈಬರ್, ಜೀವಸತ್ವಗಳು ಮತ್ತು ಖನಿಜಗಳಂತಹ ಅಗತ್ಯ ಪೋಷಕಾಂಶಗಳ ಕೊರತೆಗೆ ಕಾರಣವಾಗಬಹುದು.

ಈ ಅಡ್ಡಪರಿಣಾಮಗಳನ್ನು ಕಡಿಮೆ ಮಾಡಲು ಹಣ್ಣಿನ ರಸವನ್ನು ಮಿತವಾಗಿ ಸೇವಿಸುವುದು, ಸಕ್ಕರೆ ಸೇರಿಸದೇ ತಯಾರಿಸಬಹುದಾದ ಹಣ್ಣುಗಳಿಂದ ಜ್ಯೂಸ್‌ ಮಾಡುವುದು, ಹಣ್ಣನ್ನು ನೇರವಾಗಿ ಸೇವಿಸುವುದಕ್ಕೆ ಆಧ್ಯತೆ ನೀಡುವುದು ಮಾಡಬಹುದು.

    ಹಂಚಿಕೊಳ್ಳಲು ಲೇಖನಗಳು