logo
ಕನ್ನಡ ಸುದ್ದಿ  /  Lifestyle  /  Health News Heart Attacks More Common On Mondays New Research Workload Stress Weekend Parties Alcohol Kannada News Rst

Heart Attack: ಸೋಮವಾರದಂದು ಹೆಚ್ಚುತ್ತಿದೆ ಹೃದಯಾಘಾತ; ಕೆಲಸದ ಒತ್ತಡದೊಂದಿಗೆ ವಾರಾಂತ್ಯದ ಮೋಜು ಕಾರಣ ಎನ್ನುತ್ತಿದೆ ಅಧ್ಯಯನ

Reshma HT Kannada

Jun 06, 2023 09:51 AM IST

ಸೋಮವಾರದಂದೇ ಹೆಚ್ಚುತ್ತಿದೆ ಹೃದಯಾಘಾತ

    • Heart Attacks on Monday: ಸೋಮವಾರದಂದೇ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ ಎಂಬ ಆಘಾತಕಾರಿ ಅಂಶವೊಂದನ್ನು ಹೊರ ಹಾಕಿದೆ ಇತ್ತೀಚಿನ ಅಧ್ಯಯನ. ಒತ್ತಡವು ಸೋಮವಾರದಂದು ಹೃದಯಾಘಾತ ಹೆಚ್ಚಲು ಒಂದು ಪ್ರಮುಖ ಕಾರಣವಾಗಿದೆ. ಜೂನ್‌ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್‌ ಕಾರ್ಡಿಯೋವಾಸ್ಕುಲರ್‌ ಸೊಸೈಟಿ ಸಮ್ಮೇಳನದಲ್ಲಿ ಅಧ್ಯಯನವನ್ನು ಪ್ರಸ್ತುತಪಡಿಸಲಾಗಿತ್ತು.
ಸೋಮವಾರದಂದೇ ಹೆಚ್ಚುತ್ತಿದೆ ಹೃದಯಾಘಾತ
ಸೋಮವಾರದಂದೇ ಹೆಚ್ಚುತ್ತಿದೆ ಹೃದಯಾಘಾತ

ಸೋಮವಾರ ನಿಮ್ಮ ಕೊನೆಯ ದಿನವಾಗಿರಬಹುದು, ಎಚ್ಚರ! ಇದೇನು ಹೀಗೆ ಹೇಳ್ತಾ ಇದ್ದಾರೆ ಅಂದುಕೊಳ್ಳಬೇಡಿ. ಇತ್ತೀಚಿನ ಅಧ್ಯಯನವೊಂದರ ಪ್ರಕಾರ ಸೋಮವಾರದಂದೇ ಹೃದಯಾಘಾತದ ಪ್ರಮಾಣ ಹೆಚ್ಚುತ್ತಿದೆ ಎಂದು ಅಧ್ಯಯನಗಳು ಸಾಬೀತು ಪಡಿಸಿವೆ.

ಟ್ರೆಂಡಿಂಗ್​ ಸುದ್ದಿ

Vitamin D Deficiency: ವಿಟಮಿನ್‌ ಡಿ ಕೊರತೆಯಿಂದ ಕಾಡಬಹುದು ಫ್ಯಾಟಿ ಲಿವರ್‌ ಸಮಸ್ಯೆ, ಸಮತೋಲಿತ ಆಹಾರ ಸೇವನೆಗೆ ನೀಡಿ ಒತ್ತು

Vampire Facials: ವಾಂಪೈರ್‌ ಫೇಶಿಯಲ್‌ ಮಾಡಿಸೋದ್ರಿಂದ ಎಚ್‌ಐವಿ ಸೋಂಕು ಹರಡಬಹುದು ಎಚ್ಚರ, ಸೌಂದರ್ಯಕ್ಕಿಂತ ಆರೋಗ್ಯ ಮುಖ್ಯ ಮರಿಬೇಡಿ

Nail Health: ಉಗುರಿನ ಬಣ್ಣ-ಆಕಾರ ಬದಲಾದ್ರೆ ನಿರ್ಲಕ್ಷ್ಯ ಮಾಡ್ಬೇಡಿ, ಈ ಆರೋಗ್ಯ ಸಮಸ್ಯೆಗಳನ್ನು ಸೂಚಿಸಬಹುದು ಗಮನಿಸಿ

Travel Tips: ಬೇಸಿಗೆಯಲ್ಲಿ ಪ್ರವಾಸ ಮಾಡುವವರು ತಪ್ಪದೇ ಪಾಲಿಸಬೇಕಾದ ಮಹತ್ವದ ಸಲಹೆಗಳಿವು

ಇತ್ತೀಚಿನ ಸಂಶೋಧನೆಯ ಪ್ರಕಾರ, ವಾರದ ಮೊದಲ ದಿನ ತೀವ್ರ ಹೃದಯಾಘಾತದಿಂದ ಜನರು ಸಾವನ್ನಪ್ಪುತ್ತಿದ್ದಾರೆ ಎಂಬ ಆಘಾತಕಾರಿ ಅಂಶ ತಿಳಿದುಬಂದಿದೆ.

ಐರ್ಲೆಂಡ್‌ನ ವಿವಿಧ ಆಸ್ಪತ್ರೆಗಳಿಗೆ ದಾಖಲಾದ 10,528 ರೋಗಿಗಳ ಮೇಲೆ ನಡೆಸಿದ ಅಧ್ಯಯನವು ಎಸ್‌ಟಿ ಎಲಿವೇಟೆಡ್‌ ಮಯೋಕಾರ್ಡಿಯಲ್‌ ಇನ್ಫಾರ್ಕ್ಷನ್‌ (STEMI) ಹೊಂದಿರುವ ಹೆಚ್ಚಿನ ರೋಗಿಗಳು ಕೆಲಸದ ದಿನಗಳಲ್ಲಿ ವಿಶೇಷವಾಗಿ ಸೋಮವಾರದಂದು ಹೃದಯ ಸ್ತಂಭನವನ್ನು ಅನುಭವಿಸುತ್ತಿದ್ದಾರೆ ಎಂಬ ಅಂಶ ಅಘಾತಕಾರಿ ಅಂಶವನ್ನು ಹೊರ ಹಾಕಿದೆ.

ಈ ಅಧ್ಯಯನದ ಮುಖ್ಯಸ್ಥ ಹೃದ್ರೋಗ ತಜ್ಞ ಡಾ. ಜ್ಯಾಕ್‌ ಲಾಫನ್‌ ಅವರ ಪ್ರಕಾರ ದೇಹದ ಸಿರ್ಕಾಡಿಯನ್‌ ರಿದಮ್‌ ಮತ್ತು ನಿದ್ದೆ ಹಾಗೂ ಎದ್ದೆಳುವ ಸಮಯದ ನಿದ್ರಾಚಕ್ರ ಹಾಗೂ ಎಸ್‌ಟಿಇಎಂಐ ನಡುವೆ ಪರಸ್ಪರ ಸಂಬಂಧವಿದ್ದು ಇದು ಹೃದಯಾಘಾತಕ್ಕೆ ಕಾರಣವಾಗಬಹುದು ಎಂದು ಹೇಳಿದ್ದಾರೆ.

ವಾರಾಂತ್ಯದ ಮೋಜು ಮಸ್ತಿಗೂ ಮುನ್ನ ಇರಲಿ ಎಚ್ಚರ

ಅಲ್ಲದೆ ಇತ್ತೀಚಿನ ಅಧ್ಯಯನಗಳು ವಾರಾಂತ್ಯದಲ್ಲಿ ಅತಿಯಾಗಿ ಕುಡಿಯುವುದು ಅಥವಾ ತಿನ್ನುವ ಅಭ್ಯಾಸವು ಕೂಡ ವಾರದ ದಿನಗಳಲ್ಲಿ ಹೃದಯಾಘಾತದ ತೊಂದರೆ ಹೆಚ್ಚಲು ಕಾರಣವಾಗಬಹುದು ಎಂಬುದನ್ನು ಸಾಬೀತು ಪಡಿಸಿವೆ.

ಒತ್ತಡವು ಸೋಮವಾರದ ಹೃದಯಾಘಾತಕ್ಕೆ ಮತ್ತೊಂದು ಪ್ರಮುಖ ಕಾರಣವಾಗಿದೆ. ಬಾಕಿ ಉಳಿದಿರುವ ಕೆಲಸ ಅಥವಾ ಪ್ರಾಜೆಕ್ಟ್‌ಗೆ ಸಂಬಂಧಿಸಿದ ಒತ್ತಡ ಮತ್ತು ಇದರಿಂದ ಸಹೋದ್ಯೋಗಿಗಳು ಹಾಗೂ ಬಾಸ್‌ನಿಂದ ಟೇಕಿ ಒಳಗಾಗುವ ಭಯದಿಂದ ಕಾರ್ಟಿಸೋಲ್‌ ಹಾಗೂ ಅಡ್ರಿನಾಲಿನ್‌ನಂತಹ ಹಾರ್ಮೋನ್‌ಗಳ ಏರಿಕೆಯ ಜೊತೆಗೆ ರಕ್ತದೊತ್ತಡದಲ್ಲೂ ಏರಿಕೆಯಾಗುತ್ತದೆ. ಈ ಎರಡೂ ಅಂಶಗಳು ಹೃದಯಾಘಾತದೊಂದಿಗೆ ನಿಕಟ ಸಂಬಂಧ ಹೊಂದಿವೆ ಎಂಬುದನ್ನು ಅಧ್ಯಯನಗಳು ಸ್ವಷ್ಟಪಡಿಸಿವೆ.

ಜೂನ್ 4 ರಂದು ಮ್ಯಾಂಚೆಸ್ಟರ್‌ನಲ್ಲಿ ನಡೆದ ಬ್ರಿಟಿಷ್ ಕಾರ್ಡಿಯೋವಾಸ್ಕುಲರ್ ಸೊಸೈಟಿ ಸಮ್ಮೇಳನದಲ್ಲಿ ಅಧ್ಯಯನವನ್ನು ಪ್ರಸ್ತುತಪಡಿಸಲಾಯಿತು.

ಹೃದ್ರೋಗ ಸಮಸ್ಯೆಗಳು ಹೆಚ್ಚಲು ಪ್ರಮುಖ ಕಾರಣ

* ಬೊಜ್ಜು

* ಮದ್ಯಪಾನ ಹಾಗೂ ಧೂಮಪಾನಕ್ಕೆ ದಾಸರಾಗುವುದು

* ಜಡ ಜೀವನಶೈಲಿ

* ಒತ್ತಡದ ಜೀವನಶೈಲಿ

* ಅತಿ ಹೆಚ್ಚು ಸಕ್ಕರೆ ಮತ್ತು ಉಪ್ಪಿನಾಂಶ ಇರುವ ಆಹಾರ ಸೇವನೆ.

ಹೃದಯಾಘಾತದ ಎಚ್ಚರಿಕೆಯ ಚಿಹ್ನೆಗಳು

ಎದೆ ಭಾಗದಲ್ಲಿ ಅಸಹಜ ಭಾವ ಉಂಟಾಗುವುದು. ಎದೆಯ ಮಧ್ಯಭಾಗದಲ್ಲಿ ಮಂದ ಅಥವಾ ತೀಕ್ಷ್ಣವಾದ ನೋವು ಕಾಣಿಸುವುದು.

* ಎದೆ ಬಡಿತದಲ್ಲಿ ಹೆಚ್ಚಿದ ಏರಿಳಿತ

* ಕೆಲವೊಮ್ಮೆ ದೇಹದ ಇತರ ಭಾಗಗಳಾದ ಭುಜ, ತೋಳು, ದವಡೆಗಳಲ್ಲಿ ನೋವು ಕಾಣಿಸಬಹುದು.

* ಉಸಿರಾಟ ತೊಂದರೆ

* ವಾಕರಿಕೆ ಮತ್ತು ಅಜೀರ್ಣದಂತಹ ಸಮಸ್ಯೆ ಕಾಣಿಸುವುದು

* ತಣ್ಣನೆಗೆ ಮೈ ಇಡೀ ಬೆವರುವುದು.

ಹೃದಯಕ್ಕೆ ರಕ್ತಪೂರೈಕೆಯಲ್ಲಿ ವ್ಯತ್ಯಯ ಉಂಟಾದಾಗ ಅಥವಾ ರಕ್ತ ಪೂರೈಕೆಯಾದಾಗೇ ಇದ್ದಾಗ ಹೃದಯಾಘಾತ ಸಂಭವಿಸುತ್ತದೆ. ಹೃದಯದ ಅಪಧಮನಿಗಳಲ್ಲಿ ಪ್ಲೇಕ್‌ಗಳ ರಚನೆಯಾಗುವುದು ಹೃದಯಾಘಾತಕ್ಕೆ ಸಾಮಾನ್ಯ ಕಾರಣವಾಗಿದೆ. ಈ ಪ್ಲೇಕ್‌ಗಳು ಕೆಟ್ಟ ಕೊಲೆಸ್ಟ್ರಾಲ್‌ ಹಾಗೂ ಜೀರ್ಣವಾಗದ ಕೊಬ್ಬಿನಾಂಶದಿಂದ ನಿರ್ಮಾಣವಾಗುತ್ತವೆ.

ಇದನ್ನೂಓದಿ

Heart Problem in Youth: ಯುವಜನರಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆ; ಕಾರಣಗಳು ಹಾಗೂ ಮುನ್ನೆಚ್ಚರಿಕಾ ಕ್ರಮಗಳ ಬಗ್ಗೆ ತಜ್ಞರ ಸಲಹೆ ಹೀಗಿದೆ

Raising Heart Problems in Youth: ಕಳೆದ ಮೂರ್ನಾಲ್ಕು ವರ್ಷಗಳಿಂದೀಚೆಗೆ ಹೃದಯಾಘಾತದಿಂದ ಯುವಜನರು ಮರಣ ಹೊಂದುತ್ತಿರುವ ಪ್ರಮಾಣದಲ್ಲಿ ಗಣನೀಯವಾಗಿ ಏರಿಕೆಯಾಗಿದೆ. ಇದು ಅಪಾಯದ ಮುನ್ಸೂಚನೆಯೂ ಹೌದು. ಹಾಗಾದರೆ ಯುವಜನರಲ್ಲಿ ಹೆಚ್ಚುತ್ತಿರುವ ಹೃದಯದ ಸಮಸ್ಯೆಗೆ ಕಾರಣಗಳೇನು ಹಾಗೂ ಈ ಕುರಿತು ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು ಎಂಬ ಬಗ್ಗೆ ತಜ್ಞರ ಸಲಹೆ ಇಲ್ಲಿದೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು