logo
ಕನ್ನಡ ಸುದ್ದಿ  /  ಜೀವನಶೈಲಿ  /  ಕಠಿಣ ಶಾಖದ ಅಲೆಗಳಿಂದ ಕಣ್ಣನ್ನು ರಕ್ಷಿಸಿ; ಬೇಸಿಗೆಯಲ್ಲಿ ನಯನಗಳ ಆರೈಕೆಗೆ ವೈದ್ಯರ ಈ 6 ಸಲಹೆ ಮರೆಯದಿರಿ

ಕಠಿಣ ಶಾಖದ ಅಲೆಗಳಿಂದ ಕಣ್ಣನ್ನು ರಕ್ಷಿಸಿ; ಬೇಸಿಗೆಯಲ್ಲಿ ನಯನಗಳ ಆರೈಕೆಗೆ ವೈದ್ಯರ ಈ 6 ಸಲಹೆ ಮರೆಯದಿರಿ

Jayaraj HT Kannada

Apr 29, 2024 09:00 PM IST

google News

ಬೇಸಿಗೆಯಲ್ಲಿ ನಯನಗಳ ಆರೈಕೆಗೆ ವೈದ್ಯರ ಈ 6 ಸಲಹೆ ಮರೆಯದಿರಿ

    • ಬೇಸಿಗೆಯ ಕಣ್ಣಿನ ಸಮಸ್ಯೆಗಳಿಂದ ದೂರವಿರಲು, ಕಣ್ಣಿನ ಆರೈಕೆಗೆ ಪೂರ್ವಭಾವಿ ಕ್ರಮ ಕೈಗೊಳ್ಳಬೇಕು. ನಿಯಮಿತವಾಗಿ ನೇತ್ರತಜ್ಞರನ್ನು ಭೇಟಿಯಾಗಬೇಕು. ಸೂರ್ಯನ ಬೆಳಕು ಮತ್ತು ಅತಿಯಾದ ಶಾಖಕ್ಕೆ ನೇರವಾಗಿ ಒಡ್ಡಿಕೊಳ್ಳುವುದರಿಂದ ನಮ್ಮ ಕಣ್ಣುಗಳಿಗೆ ಹಾನಿಯಾಗುತ್ತದೆ. ಹೀಗಾಗಿ ನೇತ್ರಗಳ ರಕ್ಷಣೆಗೆ ತಜ್ಞರ ಸಲಹೆಗಳು ಇಲ್ಲಿವೆ.
ಬೇಸಿಗೆಯಲ್ಲಿ ನಯನಗಳ ಆರೈಕೆಗೆ ವೈದ್ಯರ ಈ 6 ಸಲಹೆ ಮರೆಯದಿರಿ
ಬೇಸಿಗೆಯಲ್ಲಿ ನಯನಗಳ ಆರೈಕೆಗೆ ವೈದ್ಯರ ಈ 6 ಸಲಹೆ ಮರೆಯದಿರಿ (Pixabay)

ಬೇಸಿಗೆಯ ಕಠಿಣ ಶಾಖದ ಅಲೆಗಳನ್ನು ಎದುರಿಸುವ ನಯನಗಳ ಕಾಳಜಿ ತೀರಾ ಅತ್ಯಗತ್ಯ. ಪ್ರಪಂಚದ ನೋವು-ನಲಿವುಗಳನ್ನು ತೋರಿಸುವ ಕಣ್ಣಿನ ಆರೈಕೆಗೆ ಬೇಸಿಗೆಯಲ್ಲಿ ಹೆಚ್ಚುವರಿ ಸಮಯ ವಿನಿಯೋಗಿಸುವುದು ತುಂಬಾ ಅಗತ್ಯ. ಈಗಂತೂ ದಿನೇ ದಿನೆ ಜಾಗತಿಕ ತಾಪಮಾನ ಏರಿಕೆಯಾಗುತ್ತಿದ್ದು, ಭಾರತ ಮಾತ್ರವಲ್ಲದೆ ಕರ್ನಾಟಕದ ಎಲ್ಲೆಡೆ ಬಿಸಿಯ ವಾತಾವರಣದಿಂದ ಜನರ ಆರೋಗ್ಯ ಸಮಸ್ಯ ಕೂಡಾ ಹೆಚ್ಚುತ್ತಿದೆ. ಇಂಥಾ ಸಂದರ್ಭದಲ್ಲಿ ಕಣ್ಣಿನ ಸಮಸ್ಯೆ ಹೆಚ್ಚುವ ಸಾಧ್ಯತೆ ಇದೆ.

ಕೆಲವು ಅಧ್ಯಯನಗಳ ಪ್ರಕಾರ, ಧೂಮಪಾನ, ಬೊಜ್ಜು ಅಥವಾ ಅಧಿಕ ರಕ್ತದೊತ್ತಡದಂಥ ಸಮಸ್ಯೆಗಳಿಗೂ ಕಣ್ಣಿನ ಕಾಯಿಲೆಗಳಿಗೂ ಸಂಬಂಧವಿದೆಯಂತೆ. ಹೀಗಾಗಿ ನಮ್ಮ ಜೀವನಶೈಲಿಗೂ ಕಣ್ಣಿನ ಆರೋಗ್ಯಕ್ಕೂ ಸಂಬಂಧವಿದೆ. ರೋಗಗಳನ್ನು ತಡೆಗಟ್ಟುವ ಸಲುವಾಗಿ ಆರೋಗ್ಯಕರ ಜೀವನಶೈಲಿಯ ಅನುಸರಣೆ ತುಂಬಾ ಮುಖ್ಯ.

ಮಿತ್ತಲ್ ಐ ಕೇರ್ ಸೆಂಟರ್‌ನ ಎಂಎಸ್ ನೇತ್ರಶಾಸ್ತ್ರದ ವೈದ್ಯರಾದ ಡಾ.ಜಿಮ್ಮಿ ಮಿತ್ತಲ್ ಅವರು, ಕಣ್ಣಿನ ಆರೋಗ್ಯದ ಕುರಿತಾಗಿ ಮಾತನಾಡಿದ್ದಾರೆ. ಕಾರ್ನಿಯಾ ಬರ್ನ್, ಒಣ ಕಣ್ಣು, ಕಣ್ಣುಗಳ ದಣಿವು, ನೋವು ಮತ್ತು ಅಲರ್ಜಿಗಳು ಬೇಸಿಗೆ ಕಾಲದ ಕೆಲವು ಸಾಮಾನ್ಯ ಸಮಸ್ಯೆಗಳು. ಸೂರ್ಯನ ಪ್ರಖರ ಬಿಸಿಲು ಹಾಗೂ ಹಾನಿಕಾರಕ ಯುವಿ ಕಿರಣಗಳು ಚರ್ಮದ ಮೇಲೆ ಹೇಗೆ ಪ್ರಭಾವ ಬೀರುತ್ತದೆಯೋ, ಕಣ್ಣಿನ ಕಾರ್ನಿಯಲ್ ಬರ್ನ್‌ ಅಥವಾ ಸುಡುವಿಕೆಗೂ ಕಾರಣವಾಗಬಹುದು ಎಂಬುದನ್ನು ಮಿತ್ತಲ್‌ ತಿಳಿಸಿದ್ದಾರೆ. ಇದರಿಂದ ದೃಷ್ಟಿ ಮಸುಕಾಗುವುದು ಹಾಗೂ ಶುಷ್ಕತೆ ಹೆಚ್ಚಾಗಬಹುದು.

ಇದನ್ನೂ ಓದಿ | Personality Test: ಕಪ್ಪು, ನೀಲಿ, ಕಂದು ಯಾವುದು ನಿಮ್ಮ ಕಣ್ಣಿನ ಬಣ್ಣ; ನೀವು ಎಂತಹ ವ್ಯಕ್ತಿತ್ವದವರು ಎಂದು ತಿಳಿಸುತ್ತೆ ಕಂಗಳ ಬಣ್ಣ

ಬೇಸಿಗೆಯಲ್ಲಿ ನಯನಗಳ ಆರೋಗ್ಯ ಕಾಪಾಡಲು ಅನುಸರಿಸಬೇಕಾದ 6 ಸಲಹೆಗಳನ್ನು ಮಿತ್ತಲ್‌ ತಿಳಿಸಿದ್ದಾರೆ.

ಯಥೇಚ್ಛವಾಗಿ ನೀರು ಕುಡಿದು ಹೈಡ್ರೇಟ್ ಆಗಿರಿ

ಕಣ್ಣಿನ ಆರೋಗ್ಯಕ್ಕೂ, ಹೆಚ್ಚು ನೀರು ಕುಡಿಯುವುದಕ್ಕೂ ಸಂಬಂಧವಿದೆ. ಹೀಗಾಗಿ ದ್ರವರೂಪದ ಆಹಾರವನ್ನು ಸೇವನೆ ಹೆಚ್ಚಿಸಿ. ಹೆಚ್ಚು ನೀರು ಕುಡಿಯಿರಿ. ಬೇಸಿಗೆಯಲ್ಲಿ ಕಣ್ಣುಗಳ ಡ್ರೈ ಆಗುವ ಕಾರಣದಿಂದ ಹೆಚ್ಚು ನೀರು ಕುಡಿಯುದರೆ ದೇಹವು ಆರೋಗ್ಯಕರ ಪ್ರಮಾಣದ ಕಣ್ಣೀರಿನ ಉತ್ಪಾದನೆಗೆ ನೆರವಾಗುತ್ತದೆ. ಇದರೊಂದಿಗೆ ಆಲ್ಕೋಹಾಲ್ ಮತ್ತು ಕೆಫೀನ್ ಸೇವನೆಯಿಂದ ದೂರವಿರುವುದು ಒಳ್ಳೆಯದು.

ಮನೆಯಿಂದ ಹೊರಗೆ ಹೋಗುವಾಗ ಸನ್‌ಗ್ಲಾಸ್ ಧರಿಸಿ

ಮುಖದ ರಕ್ಷಣೆಗೆ ಸನ್‌ಸ್ಕ್ರೀನ್‌ ಎಷ್ಟು ಅವಶ್ಯಕವೋ, ಕಣ್ಣುಗಳ ರಕ್ಷಣೆಗೆ ಸನ್‌ಗ್ಲಾಸ್‌ ಕೂಡಾ ತುಂಬಾ ಅತ್ಯಗತ್ಯ. ಬೇಸಿಗೆಯಲ್ಲಿ ನೀವು ಮನೆಯ ಹೊರಗೆ ಕಾಲಿಡುವಾಗ, ನಿಮ್ಮ ಕಣ್ಣುಗಳಿಗೆ ಮೊದಲು ರಕ್ಷಣೆ ನೀಡಿ. ದೊಡ್ಡ ಗಾತ್ರದ ಸನ್‌ಗ್ಲಾಸ್‌ ಧರಿಸಿ. ಇದರಿಂದ ಸೂರ್ಯನ ಹಾನಿಕಾರಕ ಯುವಿ ಕಿರಣಗಳಿಂದ ಕಣ್ಣಾಲಿಗಳಿಗೆ ರಕ್ಷಣೆ ಸಿಗುತ್ತದೆ.

ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚುವಾಗ ಜಾಗರೂಕರಾಗಿರಿ

ಬೇಸಿಗೆಯಲ್ಲಿ ಸೂರ್ಯನಿಂದ ರಕ್ಷಿಸಿಕೊಳ್ಳಲು ಮುಖಕ್ಕೆ ಸನ್‌ಸ್ಕ್ರೀನ್ ಹಚ್ಚುವುದು ಸಾಮಾನ್ಯ. ಇದನ್ನು ಕಣ್ಣುಗಳು ಮತ್ತು ಕಣ್ಣುರೆಪ್ಪೆಯ ಸುತ್ತಲೂ ಹಚ್ಚುವಾಗ ಹೆಚ್ಚು ಜಾಗರೂಕರಾಗಿರಬೇಕು. ಎಸ್‌ಪಿಎಫ್ ಅಧಿಕವಿರುವ ಸನ್‌ಸ್ಕ್ರೀನ್‌ಗಳು ಕಣ್ಣಿನ ಒಳ ಹೋದರೆ ಸಾಮಾನ್ಯವಾಗಿ ಕಣ್ಣುಗಳ ಅಸ್ವಸ್ಥತೆಗೆ ಕಾರಣವಾಗುತ್ತವೆ. ಇದರಿಂದ ಕಣ್ಣಿಗೆ ಶಾಶ್ವತವಾಗಿ ಯಾವುದೇ ಹಾನಿಯಾಗಲ್ಲ. ಆದರೆ ಕೆಲವು ದಿನಗಳವರೆಗೆ ನೋವು ಇರಬಹುದು.

ಮಧ್ಯಾಹ್ನದ ಖಾರ ಬಿಸಿಲಿಗೆ ಹೊರಹೋಗುವುದನ್ನು ತಪ್ಪಿಸಿ

ಅನಗತ್ಯವಾಗಿ ಮಧ್ಯಾಹ್ನದ ನಂತರ ಪ್ರಖರ ಬಿಸಿಲಿನ ವೇಳೆ ಹೊರಗೆ ಹೋಗುವುದನ್ನು ನಿರ್ಬಂಧಿಸಿ. ಸೂರ್ಯನ ಪ್ರಕಾಶಮಾನವಾದ ಯುವಿ ಕಿರಣಗಳು ಹೆಚ್ಚು ತೀಕ್ಷ್ಣವಾಗಿ ನಾಟುವ ಸಮಯವಿದು. ಅದರಿಂದ ನಿಮ್ಮ ಕಣ್ಣುಗಳನ್ನು ರಕ್ಷಿಸುವುದು ಅತ್ಯಗತ್ಯ.

ಹೊರಾಂಗಣ ಕೆಲಸ ಮಾಡುವಾಗ ಎಚ್ಚರದಿಂದಿರಿ

ಹೊರಗಡೆ ಕಠಿಣ ಕೆಲಸ ಮಾಡುವಾಗ ಎಚ್ಚರದಿಂದಿರಿ. ಮರಗೆಲಸ ಸೇರಿದಂತೆ ಬಿಸಿಲಿನಲ್ಲಿ ಕೆಲಸದಲ್ಲಿ ತೊಡಗಿದ್ದಾಗ ಕಣ್ಣಿನ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು. ಕನ್ನಡಕ, ಹೆಲ್ಮೆಟ್ ಅಥವಾ ಫೇಸ್‌ ಶೀಲ್ಡ್ ಧರಿಸಿ ಕಣ್ಣಿನ ರಕ್ಷಣೆಯನ್ನು ಖಚಿತಪಡಿಸಿಕೊಳ್ಳಿ.

ಐ ಡ್ರಾಪ್ಸ್‌ ಬಳಸಿ

ಕೆಲವೊಮ್ಮೆ ದೇಹವು ಹೈಡ್ರೇಟ್ ಆಗಿರುವುದು ಸಾಕಾಗುವುದಿಲ್ಲ. ಆಗ ಕಣ್ಣಿನ ಶುಷ್ಕತೆಯಿಂದ ನಿಮಗೆ ಕಿರಿಕಿರಿ ಆಗಬಹುದು. ಇದರಿಂದ ಕಣ್ಣು ನೋವು ಆಗುವ ಸಾಧ್ಯತೆ ಇದೆ. ಇಂಥಾ ಸಂದರ್ಭದಲ್ಲಿ ವೈದ್ಯರ ಸಲಹೆ ಮೇಲೆ ಐ ಡ್ರಾಪ್ಸ್‌ ಬಳಸಿ. ಇದು ಕಣ್ಣುಗಳನ್ನು ನಯಗೊಳಿಸುವ ಮೂಲಕ ನೋವು ಮತ್ತು ಶುಷ್ಕತೆಯನ್ನು ನಿವಾರಿಸುತ್ತದೆ.

    ಹಂಚಿಕೊಳ್ಳಲು ಲೇಖನಗಳು

ಮುಂದಿನ ಲೇಖನ