logo
ಕನ್ನಡ ಸುದ್ದಿ  /  ಜೀವನಶೈಲಿ  /  ಸಕ್ಕರೆ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದರೆಗಳಿವೆ, ಒಬ್ಬ ಮನುಷ್ಯ ದಿನಕ್ಕೆ ಎಷ್ಟು ಸಕ್ಕರೆ ತಿನ್ನಬಹುದು; ಇಲ್ಲಿದೆ ಉತ್ತರ

ಸಕ್ಕರೆ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದರೆಗಳಿವೆ, ಒಬ್ಬ ಮನುಷ್ಯ ದಿನಕ್ಕೆ ಎಷ್ಟು ಸಕ್ಕರೆ ತಿನ್ನಬಹುದು; ಇಲ್ಲಿದೆ ಉತ್ತರ

Reshma HT Kannada

Apr 22, 2024 07:01 PM IST

ಸಕ್ಕರೆ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದರೆಗಳಿವೆ

    • ಸಕ್ಕರೆ ತಿನ್ನೋದು ಅಪಾಯ, ಪ್ರತಿದಿನ ಸಕ್ಕರೆ ಸೇವಿಸುವುದರಿಂದ ಇಲ್ಲದ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ ಎಂದು ವೈದ್ಯರು ಹಾಗೂ ಪೌಷ್ಟಿಕತಜ್ಞರು ಹೇಳುತ್ತಲೇ ಇರುತ್ತಾರೆ. ಆದರೂ ನಾವು ಚಹಾ, ಕಾಫಿ, ಸಿಹಿತಿಂಡಿ ಎಂದು ಸಕ್ಕರೆಯಂಶ ಇರುವ ಪದಾರ್ಥಗಳನ್ನೇ ಹೆಚ್ಚು ಸೇವಿಸುತ್ತೇವೆ. ಹಾಗಾದ್ರೆ ಯಾವ ಕಾರಣಕ್ಕೆ ಸಕ್ಕರೆ ತಿನ್ನಬಾರದು, ಇದರಿಂದ ಏನೆಲ್ಲಾ ಸಮಸ್ಯೆಯಾಗುತ್ತೆ?
ಸಕ್ಕರೆ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದರೆಗಳಿವೆ
ಸಕ್ಕರೆ ಸೇವನೆಯಿಂದ ಆರೋಗ್ಯಕ್ಕೆ ಏನೆಲ್ಲಾ ತೊಂದರೆಗಳಿವೆ

ಭಾರತದಲ್ಲಿ ಹಲವರ ಬೆಳಿಗ್ಗೆ ಆರಂಭವಾಗುವುದು ಚಹಾ ಅಥವಾ ಕಾಫಿಯಿಂದ, ಅಂದರೆ ಪರೋಕ್ಷವಾಗಿ ಸಕ್ಕರೆಯಿಂದ ಎಂದು ಹೇಳಬಹುದು. ಇದರೊಂದಿಗೆ ಬೆಳಗಿನ ಉಪಾಹಾರದಲ್ಲೂ ಕೆಲವರು ಸಕ್ಕರೆ ಬಳಸುತ್ತಾರೆ. ಇನ್ನು ನಾವು ತಿನ್ನುವ ಅನ್ನ, ತರಕಾರಿ, ಹಣ್ಣುಗಳಲ್ಲೂ ನೈಸರ್ಗಿಕ ಸಕ್ಕರೆಯ ಅಂಶವಿರುತ್ತದೆ. ಇವೆಲ್ಲದರ ಜೊತೆಗೆ ಹೆಚ್ಚುವರಿಯಾಗಿ, ಸಂಸ್ಕರಿಸಿದ ಸಕ್ಕರೆಯ ಬಳಕೆಯು ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗಲು ಕಾರಣವಾಗಬಹುದು ಎಂದು ಪೌಷ್ಟಿಕತಜ್ಞರು ಹೇಳುತ್ತಾರೆ. ಸಕ್ಕರೆ ತಿನ್ನುವುದರಿಂದ ನೀವು ಬೇಗನೆ ತೂಕ ಹೆಚ್ಚಬಹುದು. ಸಕ್ಕರೆ ಎಂದರೆ ಸಕ್ಕರೆಯನ್ನು ಬಾಯಿಗೆ ಹೇಳಿಕೊಂಡು ತಿನ್ನುವುದು ಎಂದರ್ಥವಲ್ಲ, ಸಕ್ಕರೆಯಿಂದ ಮಾಡಿದ ಯಾವುದೇ ಆಹಾರವನ್ನು ಸೇವಿಸಿದರೆ ಇದರಿಂದ ದೇಹದಲ್ಲಿ ಸಕ್ಕರೆಯ ಅಂಶ ಹೆಚ್ಚಬಹುದು. ಇದರಿಂದ ದೇಹದಲ್ಲಿ ಇನ್ನಿಲ್ಲದ ಸಮಸ್ಯೆಗಳು ಎದುರಾಗುವುದು ಖಂಡಿತ.

ಟ್ರೆಂಡಿಂಗ್​ ಸುದ್ದಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

ಸಕ್ಕರೆ ಸೇವನೆಯಿಂದಾಗುವ ಅಪಾಯಗಳು

ಸಕ್ಕರೆ ತಿಂದರೆ ಬೇಗ ತೂಕ ಹೆಚ್ಚುತ್ತದೆ. ಸಕ್ಕರೆಯಂಶ ಅತಿಯಾದರೆ ದೇಹದಲ್ಲಿ ಕ್ಯಾಲೊರಿ ಹೆಚ್ಚಲು ಕಾರಣವಾಗುತ್ತದೆ. ಇದು ಸಂಸ್ಕರಿಸಿದ ಆಹಾರವಾಗಿದ್ದು, ಅತಿಯಾದ ಸಂಸ್ಕರಿಸಿದ ಆಹಾರ ಸೇವನೆಯಿಂದ ತೂಕ ಹೆಚ್ಚಲು ಕಾರಣವಾಗಬಹುದು. ಸಕ್ಕರೆ ಆರೋಗ್ಯಕ್ಕೆ ಸ್ವಲ್ಪವೂ ಒಳ್ಳೆಯದಲ್ಲ. ಇದರಲ್ಲಿ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಸಕ್ಕರೆ ತಿನ್ನುವುದು ಸಂಪೂರ್ಣವಾಗಿ ಹಾನಿಕಾರಕ. ಸಕ್ಕರೆಯ ಬದಲು ಬೆಲ್ಲ ಮತ್ತು ಜೇನುತುಪ್ಪವನ್ನು ಬಳಸುವುದು ಉತ್ತಮ.

ದಿನಕ್ಕೆ ಎಷ್ಟು ಸಕ್ಕರೆ ತಿನ್ನಬಹುದು, ಸಕ್ಕರೆ ಹೆಚ್ಚು ತಿಂದ್ರೆ ಏನಾಗುತ್ತೆ?

ದಿನಕ್ಕೆ 30 ಗ್ರಾಂಗಿಂತ ಹೆಚ್ಚು ಸಕ್ಕರೆ ತಿನ್ನಬಾರದು ಎಂದು ತಜ್ಞರು ಸಲಹೆ ನೀಡುತ್ತಾರೆ. ಇತರ ಆಹಾರ ಪದಾರ್ಥಗಳಲ್ಲಿಯೂ ನೈಸರ್ಗಿಕವಾದ ಸಕ್ಕರೆಯಂಶ ಇರುತ್ತದೆ. ಸಕ್ಕರೆ ಅಂಶವಿರುವ ಆಹಾರವನ್ನು ಸೇವಿಸುವುದರಿಂದ ಬಾಯಿಯ ಆರೋಗ್ಯ ಕೆಡುತ್ತದೆ. ಹಲ್ಲುಗಳಿಗೆ ಹುಳುಕು ಬರುತ್ತದೆ. ಅಲ್ಲದೆ ಅಧಿಕ ರಕ್ತದೊತ್ತಡ, ಟ್ರೈಗ್ಲಿಸರೈಡ್ಸ್ ಮತ್ತು ದೇಹದಲ್ಲಿ ಉರಿಯೂತದಂತಹ ಸಮಸ್ಯೆಗಳು ಬರುತ್ತವೆ. ಇವು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತವೆ. ಸಕ್ಕರೆ ಪಾನೀಯಗಳು ಮತ್ತು ಪದಾರ್ಥಗಳು ಉತ್ತಮ ರುಚಿಯನ್ನು ಹೊಂದಿದ್ದರೂ, ಅವು ದೇಹಕ್ಕೆ ಸಾಕಷ್ಟು ಹಾನಿಯನ್ನುಂಟುಮಾಡುತ್ತವೆ. ಇವುಗಳಲ್ಲಿ ಯಾವುದೇ ಪೋಷಕಾಂಶಗಳು ಇರುವುದಿಲ್ಲ. ಸಕ್ಕರೆಯ ಬದಲಿಗೆ ಹಣ್ಣುಗಳು, ತರಕಾರಿಗಳು ಮತ್ತು ಧಾನ್ಯಗಳನ್ನು ತಿನ್ನುವುದು ಉತ್ತಮ. ಸಕ್ಕರೆಯನ್ನು ಕಡಿತಗೊಳಿಸುವುದರಿಂದ ಆರೋಗ್ಯವನ್ನು ಎಲ್ಲಾ ರೀತಿಯಲ್ಲಿ ಸುಧಾರಿಸಬಹುದು.

ಸಕ್ಕರೆಯನ್ನು ತಿನ್ನುವುದು ಟೈಪ್ 2 ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ. ವಿಶೇಷವಾಗಿ 35 ವರ್ಷಕ್ಕಿಂತ ಮೇಲ್ಪಟ್ಟವರು ಸಕ್ಕರೆ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ಅಲ್ಲದೆ, ಸಿಹಿತಿಂಡಿಗಳನ್ನು ಹೆಚ್ಚು ತಿನ್ನುವವರಲ್ಲಿ ಕೋಪ ಹಾಗೂ ಕಿರಿಕಿರಿಯ ಮನೋಭಾವವಿರುತ್ತದೆ ಎಂದು ಹೇಳಲಾಗುತ್ತದೆ. ಮೂಡ್ ಸ್ವಿಂಗ್ ಸಾಧ್ಯತೆಯೂ ಹೆಚ್ಚು. ಯಾವುದರ ಮೇಲೂ ಏಕಾಗ್ರತೆ ಇರಲಾರದು. ತ್ವಚೆ ಕೂಡ ಮಂದ ಮತ್ತು ಶುಷ್ಕವಾಗುತ್ತದೆ. ವಯಸ್ಸಾದ ಲಕ್ಷಣಗಳು ಬೇಗನೆ ಬರುತ್ತವೆ. ಚರ್ಮದ ಮೇಲೆ ಸುಕ್ಕುಗಳು ಮತ್ತು ಗೆರೆಗಳು ಕಾಣಿಸಿಕೊಳ್ಳಬಹುದು.

ದಿನನಿತ್ಯ ಹೆಚ್ಚು ಸಿಹಿ ಮತ್ತು ಸಕ್ಕರೆ ತಿನ್ನುವವರಿಗೂ ಗ್ಯಾಸ್ಟ್ರಿಕ್ ಸಮಸ್ಯೆ ಬರಬಹುದು. ಜೀರ್ಣಕ್ರಿಯೆ ಸಮಸ್ಯೆಗಳು ಎದುರಾಗುತ್ತದೆ. ಮಲಬದ್ಧತೆಯಂತಹ ಸಮಸ್ಯೆ ಉಂಟಾಗುತ್ತದೆ. ಹಾಗಾಗಿ ಸಕ್ಕರೆಯ ಬಳಕೆಯನ್ನು ಸಂಪೂರ್ಣವಾಗಿ ನಿಲ್ಲಿಸುವುದು ಉತ್ತಮ. ನಿಮಗೆ ಸಿಹಿ ತಿನ್ನುವ ಮನಸ್ಸಿದ್ದರೆ ಬೆಲ್ಲದಿಂದ ಮಾಡಿದ ಪದಾರ್ಥಗಳನ್ನು ತಿನ್ನುವುದು ಉತ್ತಮ. ಹಾಗೆಯೇ ಪ್ರತಿದಿನ ಒಂದು ಚಮಚ ಜೇನುತುಪ್ಪ ಕುಡಿದರೆ ಸಕ್ಕರೆ ತಿನ್ನುವ ಆಸೆ ಕಡಿಮೆಯಾಗುತ್ತದೆ.

ಸಕ್ಕರೆ ಸೇವನೆಯಿಂದ ಇಷ್ಟೆಲ್ಲಾ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಹಾಗಾಗಿ ಆರೋಗ್ಯದ ಬಗ್ಗೆ ಕಾಳಜಿ ಮಾಡಲು ಸಕ್ಕರೆ ಸೇವನೆಗೆ ಕಡಿವಾಣ ಹಾಕುವುದು ಉತ್ತಮ. ಇಲ್ಲದೇ ಹೋದರೆ ಒಂದಿಲ್ಲೊಂದು ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ.

    ಹಂಚಿಕೊಳ್ಳಲು ಲೇಖನಗಳು