ಕನ್ನಡ ಸುದ್ದಿ  /  ಜೀವನಶೈಲಿ  /  ಸಕ್ಕರೆಗೆ ಪರ್ಯಾಯವೇ ಬೆಲ್ಲ, ಜೇನುತುಪ್ಪ; ಪೌಷ್ಟಿಕ ತಜ್ಞರ ಅಭಿಪ್ರಾಯ ಹೀಗಿದೆ

ಸಕ್ಕರೆಗೆ ಪರ್ಯಾಯವೇ ಬೆಲ್ಲ, ಜೇನುತುಪ್ಪ; ಪೌಷ್ಟಿಕ ತಜ್ಞರ ಅಭಿಪ್ರಾಯ ಹೀಗಿದೆ

Jaggery Honey Better Alternatives To Sugar: ಸಕ್ಕರೆ ಆರೋಗ್ಯಕ್ಕೆ ಒಳ್ಳೆಯದಲ್ಲ ಎನ್ನುವ ಕಾರಣಕ್ಕೆ ಇದಕ್ಕೆ ಪರ್ಯಾಯವಾಗಿ ಬೆಲ್ಲ ಅಥವಾ ಜೇನುತುಪ್ಪ ಸೇವಿಸುವುದು ಸಾಮಾನ್ಯವಾಗಿದೆ. ಹಾಗಾದರೆ ಸಕ್ಕರೆಯ ಬದಲು ಬೆಲ್ಲ, ಜೇನುತುಪ್ಪ ಸೇವಿಸುವುದು ಆರೋಗ್ಯಕ್ಕೆ ಉತ್ತಮವೇ, ಈ ಬಗ್ಗೆ ತಜ್ಞರ ಅಭಿಪ್ರಾಯ ಹೀಗಿದೆ.

ಸಕ್ಕರೆಗೆ ಪರ್ಯಾಯವೇ ಬೆಲ್ಲ ಜೇನುತುಪ್ಪ?
ಸಕ್ಕರೆಗೆ ಪರ್ಯಾಯವೇ ಬೆಲ್ಲ ಜೇನುತುಪ್ಪ?

ಆಧುನಿಕ ಬದುಕು ಹಾಗೂ ಜಡ ಜೀವನಶೈಲಿಯ ಅಪಾಯದ ನಡುವೆ ನಾವಿಂದು ಬದುಕು ಸಾಗಿಸುತ್ತಿದ್ದೇವೆ. ಹೆಚ್ಚುತ್ತಿರುವ ದೇಹತೂಕ ಹಾಗೂ ಜೀವನಶೈಲಿಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳು ಜನರಲ್ಲಿ ತಿನ್ನುವ ಆಹಾರದ ಮೇಲೆ ಹೆಚ್ಚು ಜಾಗೃತರಾಗುವಂತೆ ಮಾಡುತ್ತಿದೆ. ಸಂಸ್ಕರಿಸಿದ ಸಕ್ಕರೆ, ಟ್ರಾನ್ಸ್‌ ಕೊಬ್ಬು ಹಾಗೂ ಜಂಕ್‌ಫುಡ್‌ನಂತಹ ಆಹಾರಗಳ ದುಷ್ಪರಿಣಾಮಗಳ ಬಗ್ಗೆ ಜನರಲ್ಲಿ ಅರಿವಿದೆ. ಆ ಕಾರಣಕ್ಕೆ ಕೆಲವು ಆಹಾರ ಪದಾರ್ಥಗಳ ರುಚಿ ಹೆಚ್ಚಿಸಲು ಹಾಗೂ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಲು ಹಲವರು ಪರ್ಯಾಯ ಮಾರ್ಗಗಳನ್ನು ಹುಡುಕುತ್ತಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಸಕ್ಕರೆ ಸೇವನೆಯಿಂದ ಸಮಸ್ಯೆಗಳು ಹೆಚ್ಚುತ್ತಿರುವುದನ್ನು ಅರಿತ ಜನರು ಇದೀಗ ಸಕ್ಕರೆಗೆ ಪರ್ಯಾಯವಾಗಿ ಬೆಲ್ಲ, ಜೇನುತುಪ್ಪ ಅಥವಾ ಬ್ರೌನ್‌ ಶುಗರ್‌ ಬಳಕೆಯ ಮೇಲೆ ಹೆಚ್ಚು ಗಮನ ಹರಿಸುತ್ತಿದ್ದಾರೆ. ಇದರಿಂದ ಹೆಚ್ಚುವರಿ ಪೋಷಕಾಂಶವನ್ನೂ ಪಡೆಯಬಹುದು.

ಈ ನೈಸರ್ಗಿಕ ಪರ್ಯಾಯಗಳು ರಕ್ತದಲ್ಲಿನ ಸಕ್ಕರೆ ಅಂಶ ನಿರ್ವಹಣೆಗೆ ಉತ್ತಮವೆಂದು ನಂಬಲಾಗಿದೆ. ಅಲ್ಲದೆ ಬೆಲ್ಲ ಮತ್ತು ಜೇನುತುಪ್ಪವು ಸಕ್ಕರೆಗಿಂತ ಹೆಚ್ಚು ಪೌಷ್ಟಿಕಾಂಶದ ಪ್ರಯೋಜನಗಳನ್ನು ಹೊಂದಿದೆ ಎಂಬುದು ತಜ್ಞರು ಅಭಿಪ್ರಾಯ. ಆದರೆ ಇವು ಕೂಡ ದೇಹದಲ್ಲಿ ಸಕ್ಕರೆ ಅಂಶ ಹೆಚ್ಚಲು ಕಾರಣವಾಗಬಹುದು ಎಂಬುದನ್ನು ನಾವು ತಿಳಿದಿರಬೇಕು.

ಈ ವಿಷಯವಾಗಿ ಮುಂಬೈನ ಡಾ. ಅಪರ್ಣಾಸ್‌ ಲ್ಯಾಪರೊಸ್ಕೋಪಿಕ್‌ ಮತ್ತು ಬಾರಿಯಾಟ್ರಿಕ್‌ ಸರ್ಜರಿ ಸೆಂಟರ್‌ ಪೌಷ್ಟಿಕ ತಜ್ಞೆ ಶಮಿಕಾ ಗಿರ್ಕರ್‌ ಹಿಂದೂಸ್ತಾನ್‌ ಟೈಮ್ಸ್‌ ಡಿಜಿಟಲ್‌ಗೆ ನೀಡಿದ ಸಂದರ್ಶನದಲ್ಲಿ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ.

ಕಂದು ಬಣ್ಣದ ಸಕ್ಕರೆ

ಬ್ರೌನ್‌ ಶುಗರ್‌ ಎಂದು ಕರೆಯುವ ಕಂದು ಬಣ್ಣದ ಸಕ್ಕರೆ ಬಿಳಿ ಸಕ್ಕರೆಯಾಗಿದ್ದು, ಅದಕ್ಕೆ ಪುನಃ ಕಾಕಂಬಿಯನ್ನು ಸೇರಿಸಲಾಗುತ್ತದೆ. ಕಾಕಂಬಿ ಕಂದು ಬಣ್ಣ ಹಾಗೂ ಅದ್ಭುತವಾದ ಪರಿಮಳವನ್ನು ನೀಡುತ್ತದೆ. ನಾರ್ಮಲ್‌ ಸಕ್ಕರೆಗೆ ಹೋಲಿಸಿದರೆ ಇದು ಸ್ವಲ್ಪ ಹೆಚ್ಚು ಖನಿಜಾಂಶ ಹಾಗೂ ತೇವಾಂಶವನ್ನು ಹೊಂದಿರುತ್ತದೆ. ಆದರೆ ಇವರೆಡೂ ಪ್ರಾಥಮಿಕವಾಗಿ ಸುಕ್ರೋಸ್‌ನಿಂದ ಕೂಡಿದೆ. ಸ್ಫಟಿಕದಂತೆ ಹೊಳೆಯುವ ಬಿಳಿ ಬಣ್ಣದ ಸಕ್ಕರೆಯನ್ನು ರೂಪಿಸಲು ಕಂದು ಸಕ್ಕರೆಯಿಂದ ಕಾಕಂಬಿ ಅಂಶವನ್ನು ವಿವಿಧ ಪ್ರಕ್ರಿಯೆಯ ಮೂಲಕ ತೆಗೆದು ಹಾಕಲಾಗುತ್ತದೆ.

ಜೇನುತುಪ್ಪ

ಜೇನುತುಪ್ಪವು ಶುದ್ಧರೂಪದಲ್ಲಿ ದೊರೆಯುವುದು ಇತ್ತೀಚೆಗೆ ಕಡಿಮೆಯಾಗಿದೆ. ಜೇನುತುಪ್ಪವನ್ನು ಕಲಬೆರಕೆ ಮಾಡಿ ಮಾರಾಟ ಮಾಡುವವರ ಸಂಖ್ಯೆ ಹೆಚ್ಚಿದೆ. ಶುದ್ಧ ಜೇನುತುಪ್ಪದಲ್ಲಿ ಜೀವಸತ್ವ ಹಾಗೂ ಖನಿಜಾಂಶ ಸಮೃದ್ಧವಾಗಿರುತ್ತದೆ. ಇದರಲ್ಲಿ ಯಾವುದೇ ಹೆಚ್ಚುವರಿ ಸಕ್ಕರೆಯಂಶ ಇರುವುದಿಲ್ಲ, ಇದಕ್ಕೆ ಯಾವುದೇ ಸಂರಕ್ಷಕಗಳನ್ನು ಸೇರಿಸುವುದಿಲ್ಲ. ಆದರೆ ಜೇನುತುಪ್ಪಕ್ಕೆ ಸುವಾಸನೆ, ಸಕ್ಕರೆ ಮತ್ತು ಬಣ್ಣಗಳಂತಹ ಅಂಶಗಳನ್ನು ಸೇರಿಸುವುದರಿಂದ ಹಾಗೂ ಮಳಿಗೆಗಳಲ್ಲಿ ಬಹಳ ದಿನಗಳ ಕಾಲ ಇದನ್ನು ಸಂಗ್ರಹಿಸಿ ಇಡುವುದರಿಂದ ಇದು ಹೆಚ್ಚು ರುಚಿ ಎನ್ನಿಸುತ್ತದೆ.

ಬೆಲ್ಲ

ಬೆಲ್ಲವನ್ನು ತಾಳೆ ಮರದ ರಸ ಹಾಗೂ ಕಬ್ಬಿನ ರಸದಿಂದ ತಯಾರಿಸಲಾಗುತ್ತದೆ. ಸಕ್ಕರೆಯ ಬದಲಿಗೆ ಇತ್ತೀಚೆಗೆ ಬೆಲ್ಲವನ್ನು ಹೆಚ್ಚಾಗಿ ಬಳಸುತ್ತಿದ್ದಾರೆ. ಇದರಲ್ಲಿ ಜೀವಸತ್ವ, ಖನಿಜಗಳು ಮತ್ತು ಉತ್ಕರ್ಷಣ ನಿರೋಧಕ ಅಂಶಗಳು ಹೆಚ್ಚಿರುತ್ತದೆ. ಇದರಲ್ಲಿ ಕ್ಯಾಲೊರಿ ಅಂಶ ಹೆಚ್ಚಿರುತ್ತದೆ.

ಸಕ್ಕರೆ ಬದಲಿಗೆ ಜೇನುತುಪ್ಪ ಹಾಗೂ ಬೆಲ್ಲದ ಬಳಕೆ ಉತ್ತಮವೇ?

ಸಕ್ಕರೆಯ ಬದಲಿಗೆ ಬೆಲ್ಲ ಅಥವಾ ಜೇನುತುಪ್ಪವನ್ನು ಬಳಸುವುದರಿಂದ ಆಹಾರದಲ್ಲಿ ಪೋಷಕಾಂಶದ ಮಟ್ಟವನ್ನು ಹೆಚ್ಚಿಸಬಹುದು. ಆದರೆ ಪೋಷಕಾಂಶ ಹೆಚ್ಚಿಸುವ ಉದ್ದೇಶದಿಂದಲೇ ಆಹಾರಕ್ಕೆ ಹೆಚ್ಚುವರಿಯಾಗಿ ಬೆಲ್ಲ ಹಾಗೂ ಜೇನುತುಪ್ಪವನ್ನು ಸೇರಿಸುವುದು ಸರಿಯಲ್ಲ. ಕಡಿಮೆ ಕ್ಯಾಲೊರಿ ಮೂಲಗಳಿಂದ ಜೀವಸತ್ವಗಳು ಮತ್ತು ಖನಿಜಗಳನ್ನು ಪಡೆಯುವುದು ಉತ್ತಮ.

ಜೇನುತುಪ್ಪ, ಮೇಪಲ್‌ ಸಿರಪ್‌, ಬ್ರೌನ್‌ ಶುಗರ್‌ ಹಾಗೂ ಸಕ್ಕರೆ ಈ ಎಲ್ಲದರಲ್ಲೂ ಒಂದೇ ರೀತಿಯ ಪೌಷ್ಟಿಕಾಂಶ ಮೌಲ್ಯಗಳಿರುತ್ತವೆ. ಈ ಎಲ್ಲದರಲ್ಲೂ ಗ್ಲೂಕೋಸ್‌, ಫ್ರಕೋಸ್ಟ್‌ ಮತ್ತು ಸುಕ್ರೋಸ್‌ ಅಂಶಗಳಿದ್ದು, ಅದನ್ನು ವಿವಿಧ ಪ್ರಮಾಣದಲ್ಲಿ ಸಂಯೋಜಿಸಲಾಗಿದೆ. ಇದರಲ್ಲಿ ಅತ್ಯಲ್ಪ ಪ್ರಮಾಣದ ಜೀವಸತ್ವಗಳು ಹಾಗೂ ಖನಿಜಾಂಶಗಳು ಇರುತ್ತವೆ.

ಸಕ್ಕರೆ, ಜೇನುತುಪ್ಪ ಹಾಗೂ ಬೆಲ್ಲ; ಇವುಗಳಲ್ಲಿ ಯಾವುದು ಉತ್ತಮ

ʼಕೇವಲ ಕ್ಯಾಲೊರಿ ಅಂಶವನ್ನು ಪರಿಗಣಿಸಿದಾಗ ಯಾವುದೇ ಸಿಹಿಕಾರಕಗಳು ಸಕ್ಕರೆ, ಜೇನುತುಪ್ಪ ಹಾಗೂ ಬೆಲ್ಲ ಈ ಯಾವುದೂ ಉತ್ತಮವಲ್ಲ. ಈ ಎಲ್ಲವೂ ಆಹಾರಕ್ಕೆ ಹೆಚ್ಚಿನ ಕ್ಯಾಲೋರಿಯನ್ನು ಒದಗಿಸುತ್ತವೆ. ಕ್ಯಾಲೊರಿ ನಿರ್ವಹಣೆಗೆ ಈ ಸಿಹಿಕಾರಕಗಳನ್ನು ಮಿತವಾಗಿ ಬಳಸುವುದು ಉತ್ತಮ. ನಿಮ್ಮ ಆಹಾರ ಹಾಗೂ ಪಾನಿಯಗಳಿಗೆ ಸಿಹಿ ಅಂಶ ನೀಡಲು ಪರ್ಯಾಯ ಮಾರ್ಗಗಳನ್ನು ಪರಿಗಣಿಸುವುದು ಉತ್ತಮವಾಗಿದೆ. ಹಣ್ಣಿನಲ್ಲಿನ ನೈಸರ್ಗಿಕ ಸಿಹಿ ಅಂಶ ಹಾಗೂ ಕಡಿಮೆ ಕ್ಯಾಲೊರಿ ಇರುವ ಕೃತಕ ಸಿಹಿಕಾರಕಗಳನ್ನು ಬಳಸಬಹುದುʼ ಎನ್ನುತ್ತಾರೆ ಶಮಿಕಾ ಗಿರ್ಕರ್‌.

ಸಕ್ಕರೆಗೆ ಹೋಲಿಸಿದರೆ ಬೆಲ್ಲ ಮತ್ತು ಜೇನುತುಪ್ಪವು ಸ್ವಲ್ಪ ಹೆಚ್ಚು ಜೀವಸತ್ವಗಳು ಮತ್ತು ಖನಿಜಾಂಶಗಳನ್ನು ಹೊಂದಿರಬಹುದು. ದೈನಂದಿನ ಬಳಕೆಯಲ್ಲಿ ನೀವು ಸೇವಿಸುವ ಪ್ರಮಾಣವು ಒಟ್ಟಾರೆ ಪೌಷ್ಟಿಕಾಂಶದ ಸೇವನೆಯ ಮೇಲೆ ಪರಿಣಾಮ ಬೀರುವುದಿಲ್ಲ. ಅಲ್ಲದೆ ಈ ಉತ್ಪನ್ನಗಳ ಕಲಬೆರಕೆಯು ಇವುಗಳ ಗುಣಮಟ್ಟವನ್ನು ನಿರ್ಧರಿಸಲು ಸಾಧ್ಯವಿಲ್ಲ.

ʼಕೆಲವರು ಜೇನುತುಪ್ಪ ಹಾಗೂ ಬೆಲ್ಲವನ್ನು ಸೂಪರ್‌ಫುಡ್‌ ಎಂದು ಪರಿಗಣಿಸುತ್ತಾರೆ, ಏಕೆಂದರೆ ಇದರಲ್ಲಿ ಹೆಚ್ಚು ವಿಟಮಿನ್‌ ಹಾಗೂ ಖನಿಜಾಂಶವಿದ್ದು, ಸುಕ್ರೋಸ್‌ ಅಂಶ ಸಕ್ಕರೆಗಿಂತಲೂ ಕಡಿಮೆ ಇರುತ್ತದೆ. ಆದರೆ ಈ ಮೂರರಲ್ಲೂ ಒಂದೇ ಪ್ರಮಾಣದ ಕಾರ್ಬೋಹೈಡ್ರೇಟ್‌ ಅಂಶ ಇರುತ್ತದೆ. ಇದರ ಸೇವನೆಯಿಂದ ರಕ್ತದಲ್ಲಿನ ಸಕ್ಕರೆಯ ಮಟ್ಟ ಒಂದೇ ಸಮನಾಗಿರುತ್ತದೆ. ಬೆಲ್ಲ ಮತ್ತು ಜೇನುತುಪ್ಪವನ್ನು ಬಿಸಿ ಮಾಡಿದಾಗ ವಿಟಮಿನ್‌ ಹಾಗೂ ಖನಿಜಾಂಶ ಆವಿಯಾಗುತ್ತದೆʼ ಎಂದು ಶರ್ಮಿಕಾ ಹೇಳುತ್ತಾರೆ.

ʼಸಕ್ಕರೆಯನ್ನು ಸೇರಿಸುವುದರಿಂದ ಕ್ಯಾಲೋರಿ ಸೇವನೆ, ಊಟದ ಸಂವೇದಾನ ಪರಿಣಾಮ ಮತ್ತು ತೃಪ್ತಿಯನ್ನು ಹೆಚ್ಚಿಸುತ್ತದೆ. ಆದರೆ ಇವು ಉತ್ತಮ ಆರೋಗ್ಯ ಹಾಗೂ ಪೋಷಣೆಗೆ ಅಗತ್ಯವಲ್ಲ. ಇವು ಪೌಷ್ಟಿಕಾಂಶ ಸಮೃದ್ಧ ಆಹಾರಗಳ ಸೇವನೆಯನ್ನು ತಡೆಯಬಹುದು ಮತ್ತು ಅಲ್ಲದೆ ದೇಹದಲ್ಲಿ ಕ್ಯಾಲೊರಿ ಹೆಚ್ಚಿಸುವ ಮೂಲಕ ಕಳಪೆ ಆರೋಗ್ಯಕ್ಕೆ ಕಾರಣವಾಗಬಹುದುʼ ಎಂದು ತಜ್ಞರು ಹೇಳುತ್ತಾರೆ.

ಈ ಯಾವುದೂ ಸಿಹಿಗೆ ಪರ್ಯಾಯವಾಗಿ ಬಳಸಲು ಅಧಿಕೃತವಾಗಿ ಪರಿವಾನಗಿ ಪಡೆದಿಲ್ಲ. ಆಹಾರದಲ್ಲಿ ಸಕ್ಕರೆಯನ್ನು ಮಿತಿಗೊಳಿಸುವುದು ಮತ್ತು ಸಂಸ್ಕರಿತ ಆಹಾರ ಪದಾರ್ಥಗಳನ್ನು ಕಡಿಮೆ ಸೇವಿಸುವುದು ಉತ್ತಮ ವಿಧಾನವಾಗಿದೆ.

ವಿಭಾಗ