logo
ಕನ್ನಡ ಸುದ್ದಿ  /  ಜೀವನಶೈಲಿ  /  International Day Of Happiness 2023: ಅಂತರರಾಷ್ಟ್ರೀಯ ಸಂತಸದ ದಿನ 2023; ಏನಿದು ಸಂತಸದ ದಿನ? ಇದರ ಹಿನ್ನೆಲೆ ಏನು? ಆಚರಣೆಯ ಉದ್ದೇಶವೇನು?

International day of happiness 2023: ಅಂತರರಾಷ್ಟ್ರೀಯ ಸಂತಸದ ದಿನ 2023; ಏನಿದು ಸಂತಸದ ದಿನ? ಇದರ ಹಿನ್ನೆಲೆ ಏನು? ಆಚರಣೆಯ ಉದ್ದೇಶವೇನು?

HT Kannada Desk HT Kannada

Mar 19, 2023 04:52 PM IST

ಅಂತರರಾಷ್ಟ್ರೀಯ ಸಂತಸದ ದಿನ

    • International day of happiness 2023: ಪ್ರತಿವರ್ಷ ಮಾರ್ಚ್‌ 20ರಂದು ಅಂತರರಾಷ್ಟ್ರೀಯ ಸಂತಸದ ದಿನವನ್ನು ಆಚರಿಸಲಾಗುತ್ತದೆ. 2013ರಿಂದ ವಿಶ್ವಸಂಸ್ಥೆಯು ಈ ಆಚರಣೆಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿತ್ತು. ಪ್ರಪಂಚದಾದ್ಯಂತ ಜನರು ತಮ್ಮ ಜೀವನದಲ್ಲಿ ಸಂತೋಷದ ಪ್ರಾಮುಖ್ಯತೆಯನ್ನು ಅರಿತುಕೊಳ್ಳುವ ಸಲುವಾಗಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ.
ಅಂತರರಾಷ್ಟ್ರೀಯ ಸಂತಸದ ದಿನ
ಅಂತರರಾಷ್ಟ್ರೀಯ ಸಂತಸದ ದಿನ

ಖುಷಿ ಎಂದರೇನು? ಈ ಪ್ರಶ್ನೆಗೆ ಉತ್ತರವನ್ನು ನಾವೇ ಕಂಡುಕೊಳ್ಳಬೇಕು, ಯಾಕೆಂದರೆ ಖುಷಿ ಎನ್ನುವುದು ನಮ್ಮೊಳಗೇ ಇದೆ. ನಮ್ಮ ಅಂತರಂಗ ಖುಷಿಯಾಗಿದ್ದರೆ ಜಗತ್ತಿನ ಸರ್ವಸ್ವದಲ್ಲೂ ನಾವು ಖುಷಿಯನ್ನು ಕಾಣುತ್ತೇವೆ. ಇದ್ಯಾಕೆ ಖುಷಿಯ ಬಗ್ಗೆ ಇಷ್ಟೊಂದು ಮಾತು ಎಂದುಕೊಳ್ಳುತ್ತಿದ್ದೀರಾ? ನಾಳೆ ಅಂದರೆ ಮಾರ್ಚ್‌ 20 ಅಂತರರಾಷ್ಟ್ರೀಯ ಸಂತಸದ ದಿನ.

ಟ್ರೆಂಡಿಂಗ್​ ಸುದ್ದಿ

Chicken Recipe: ಢಾಬಾ ಸ್ಟೈಲ್‌ ಚಿಕನ್‌ ಗ್ರೇವಿ ನಿಮಗೂ ಇಷ್ಟನಾ? ಹಾಗಿದ್ರೆ ಇದನ್ನು ಮನೆಯಲ್ಲೇ ಮಾಡಿ ತಿನ್ನಿ, ರೆಸಿಪಿ ಇಲ್ಲಿದೆ

ಮುಖದ ಮೊಡವೆ ಕಲೆಗಳನ್ನು ಮಾಯವಾಗಿಸುತ್ತೆ ಪುದೀನಾ ಎಲೆಗಳು; ಈ ರೀತಿ ಬಳಸಿ ನೋಡಿ

Summer Tips: ಬಿಸಿಲಿಗೆ ಅತಿಯಾಗಿ ಕಾಡಬಹುದು ಮೈಗ್ರೇನ್‌; ತಲೆನೋವು ಪ್ರಚೋದಿಸುವ ಅಂಶಗಳು, ಪಾರಾಗುವ ವಿಧಾನದ ಬಗ್ಗೆ ತಿಳ್ಕೊಳ್ಳಿ

ಪ್ರವಾಸ ಬೋರಿಂಗ್‌ ಆಗಿ ಬೇಗನೆ ನಿದ್ರೆಗೆ ಜಾರುತ್ತೀರಾ? ಈ ರೀತಿ ಆಟವಾಡುತ್ತಾ ಟ್ರಿಪ್ ಎಂಜಾಯ್ ಮಾಡಿ

ಸಂತಸದ ದಿನದ ಆಚರಣೆ ಏಕೆ?

ವಿಶ್ವಸಂಸ್ಥೆ 2013ರಿಂದ ಪ್ರತಿವರ್ಷ ಮಾರ್ಚ್‌ 20ರಂದು ಅಂತರರಾಷ್ಟ್ರೀಯ ಸಂತಸದ ದಿನವನ್ನು ಆಚರಿಸುತ್ತಿದೆ. ಪ್ರಪಂಚದಾದ್ಯಂತ ಜನರು ತಮ್ಮ ಜೀವನದಲ್ಲಿ ಸಂತೋಷದ ಪ್ರಾಮುಖ್ಯತೆಯನ್ನು ಅರಿಯುವ ಸಲುವಾಗಿ ಅಂತರರಾಷ್ಟ್ರೀಯ ಸಂತೋಷದ ದಿನವನ್ನು ಆಚರಿಸಲಾಗುತ್ತದೆ.

ಸಂತೋಷವು ಮಾನವನ ಮೂಲಭೂತ ಗುರಿ. ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಈ ಗುರಿಯನ್ನು ಗುರುತಿಸುತ್ತದೆ ಮತ್ತು ʼಪ್ರಪಂಚದ ಪ್ರತಿಯೊಬ್ಬರ ಸಂತೋಷ ಮತ್ತು ಯೋಗಕ್ಷೇಮವನ್ನು ಉತ್ತೇಜಿಸಬೇಕು. ಆ ಮೂಲಕ ಆರ್ಥಿಕ ಬೆಳವಣಿಗೆಗೆ ಹೆಚ್ಚು ಗಮನ ನೀಡಬೇಕು, ಸಮಾನ ಮತ್ತು ಸಮತೋಲಿತ ವಿಧಾನ ಪಾಲಿಸಬೇಕುʼ ಎಂದು ಕರೆ ನೀಡುತ್ತದೆ.

ವಿಶ್ವಸಂಸ್ಥೆ 2015ರಲ್ಲಿ 17 ಅಂಶಗಳ ಸುಸ್ಥಿರ ಅಭಿವೃದ್ಧಿ ಗುರಿಗಳಿಗೆ ಅಡಿಪಾಯ ಹಾಕಿತು. ಬಡತನ ನಿರ್ಮೂಲನೆ, ಅಸಮಾನತೆಯ ಪ್ರಮಾಣವನ್ನು ತಗ್ಗಿಸುವುದು ಹಾಗೂ ನಮ್ಮ ಭೂಮಿಯನ್ನು ರಕ್ಷಿಸುವುದು ಈ ಮೂರು ಪ್ರಮುಖ ಅಂಶಗಳ ಮೂಲಕ ಮನುಷ್ಯನ ಸಂತಸ ಹಾಗೂ ಯೋಗಕ್ಷೇಮವನ್ನು ಹೆಚ್ಚಿಸುವ ಗುರಿ ಇರಿಸಿಕೊಂಡಿತ್ತು.

ಮಾರ್ಚ್‌ 18, 2022ರಂದು ಬಿಡುಗಡೆಯಾದ ವಿಶ್ವ ಸಂತಸದ ವರದಿಯ 10ನೇ ವಾರ್ಷಿಕ ಆವೃತ್ತಿಯು ಕತ್ತಲೆಯ ಸಮಯದಲ್ಲಿ ಪ್ರಕಾಶಮಾನವಾದ ಬೆಳಕನ್ನು ಬಹಿರಂಗಪಡಿಸುತ್ತದೆ. ಅಂದರೆ ಕೋವಿಡ್‌ ಸಾಂಕ್ರಾಮಿಕ ನೋವು ಮತ್ತು ಸಂಕಟದ ಜತೆಗೆ ಸಾಮಾಜಿಕ ಬೆಂಬಲ ಮತ್ತು ಉಪಕಾರದ ಮನೋಭಾವವನ್ನೂ ಬೆಳೆಸಿತ್ತು ಎಂಬುದಾಗಿದೆ.

ಹಿನ್ನೆಲೆ

ಅಂತರರಾಷ್ಟ್ರೀಯ ಸಂತೋಷದ ದಿನ ಆರಂಭಕ್ಕೂ ಮೊದಲು, ವರ್ಲ್ಡ್ ಹ್ಯಾಪಿನೆಸ್ ಫೌಂಡೇಶನ್‌ನ ಅಧ್ಯಕ್ಷ ಲೂಯಿಸ್ ಗಲ್ಲಾರ್ಡೊ ಹಾಗೂ ಜೇಮ್ ಇಲಿಯನ್ ʼಹ್ಯಾಪಿಟಲಿಸಂʼ ಅನ್ನು ಸ್ಥಾಪಿಸಿದರು. ಸಂತೋಷ, ಯೋಗಕ್ಷೇಮ ಮತ್ತು ಪ್ರಜಾಪ್ರಭುತ್ವದ ಪ್ರಾಮುಖ್ಯತೆಯನ್ನು ಪ್ರೋತ್ಸಾಹಿಸಲು ಮತ್ತು ಮುನ್ನಡೆಸಲು ಇಲಿಯನ್ 2006 ರಿಂದ 2012ರವರೆಗೆ ವಿಶ್ವಸಂಸ್ಥೆಯಲ್ಲಿ ಅಭಿಯಾನವನ್ನು ನಡೆಸಿದ್ದರು.

ಜುಲೈ 12, 2012 ರಂದು ನಡೆದ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಣಯ 66/281ರಲ್ಲಿ ಮಾರ್ಚ್ 20 ಅನ್ನು ಅಂತರರಾಷ್ಟ್ರೀಯ ಸಂತೋಷದ ದಿನವೆಂದು ಘೋಷಿಸಿತು.

ಜೇಮ್ ಇಲಿಯನ್ ಅವರ ಪರಿಕಲ್ಪನೆಯನ್ನು ಆಧರಿಸಿ, ವಿಶ್ವಸಂಸ್ಥೆಯು ಜನರ ಜೀವನದಲ್ಲಿ ಸಂತೋಷದ ಪ್ರಾಮುಖ್ಯತೆ ಮತ್ತು ಸಾರ್ವಜನಿಕ ನೀತಿಗಳಲ್ಲಿ ಸಂತೋಷವನ್ನು ಸೇರಿಸುವ ಅಗತ್ಯತೆಯ ಬಗ್ಗೆ ಜನರಿಗೆ ತಿಳಿಸಲು ವಿಶ್ವ ಸಂತೋಷ ದಿನದಂದು ಒಂದು ಹೆಜ್ಜೆ ಮುಂದಿಟ್ಟಿದೆ.

ಈ ವರ್ಷದ ಥೀಮ್‌ ಏನು?

ಈ ಬಾರಿಯ ಅಂತರರಾಷ್ಟ್ರೀಯ ಸಂತಸದ ದಿನದ ಥೀಮ್‌ ಯಾವಾಗಲೂ ಖುಷಿಯಿಂದಿರಿ, ಕೃತಜ್ಞತೆಯ ಭಾವ ಇರಲಿ ಹಾಗೂ ದಯಾಮಯಿಗಳಾಗಿರಿ ಎಂಬುದಾಗಿದೆ.

ಸಂತಸದ ದಿನವನ್ನು ಆಚರಿಸುವುದು ಹೇಗೆ?

ನಿಮಗೆ ಸಂತೋಷವನ್ನುಂಟು ಮಾಡುವ ಯಾವುದೇ ಕೆಲಸಗಳನ್ನು ಮಾಡಿ. ನಿಮ್ಮ ಸಂತೋಷ ಮತ್ತು ತೃಪ್ತಿಯ ಯಾವುದೇ ಭಾವನೆಗಳನ್ನು ಪ್ರತಿಬಿಂಬಿಸಲು ಸಮಯ ತೆಗೆದುಕೊಳ್ಳಿ. ಇದು ಇತರರಿಗೆ ಸಂತೋಷವನ್ನು ಹರಡುವ ದಿನವಾಗಿದೆ. ಜನರು ಸಾಮಾಜಿಕ ಪ್ರಾಣಿಗಳು, ಆದ್ದರಿಂದ ಸಾಮಾಜಿಕವಾಗಿರಲು ಮತ್ತು ಇತರರೊಂದಿಗೆ ಸಮಯ ಕಳೆಯಲು ವೇದಿಕೆ ಕಲ್ಪಿಸಿ.

ಹೆಚ್ಚು ಸಂತಸದಿಂದಿರುವ ದೇಶಗಳು

ವರ್ಲ್ಡ್ ಹ್ಯಾಪಿನೆಸ್ ವರದಿ 2022ರ ಪ್ರಕಾರ, ಫಿನ್‌ಲ್ಯಾಂಡ್‌ ಮೊದಲ ಸ್ಥಾನದಲ್ಲಿದೆ. ಡೆನ್ಮಾರ್ಕ್ ಮತ್ತು ಐಸ್‌ಲ್ಯಾಂಡ್‌ ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನದಲ್ಲಿವೆ. ನೆದರ್ಲ್ಯಾಂಡ್ಸ್, ಸ್ವಿಟ್ಜರ್ಲ್ಯಾಂಡ್, ಲಕ್ಸೆಂಬರ್ಗ್, ನಾರ್ವೆ, ಸ್ವೀಡನ್, ಇಸ್ರೇಲ್ ಮತ್ತು ನ್ಯೂಜಿಲೆಂಡ್ ವಿಶ್ವದ ಹತ್ತು ಸಂತೋಷದ ರಾಷ್ಟ್ರಗಳಲ್ಲಿ ಸೇರಿವೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು