logo
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌, ವಿಡಿಯೊ ಗೇಮ್‌ಗೆ ಅಡಿಕ್ಟ್‌ ಆಗಿದ್ದಾರಾ, ಮನೋರೋಗ ಕಾಡಬಹುದು ಎಚ್ಚರ

Parenting Tips: ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌, ವಿಡಿಯೊ ಗೇಮ್‌ಗೆ ಅಡಿಕ್ಟ್‌ ಆಗಿದ್ದಾರಾ, ಮನೋರೋಗ ಕಾಡಬಹುದು ಎಚ್ಚರ

Reshma HT Kannada

Apr 12, 2024 03:51 PM IST

ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌, ವಿಡಿಯೊ ಗೇಮ್‌ಗೆ ಅಡಿಕ್ಟ್‌ ಆಗಿದ್ದಾರಾ, ಮನೋರೋಗ ಕಾಡಬಹುದು ಎಚ್ಚರ

    • ಮಕ್ಕಳು ಹದಿವಯಸ್ಸಿನಲ್ಲಿ ಸ್ಮಾರ್ಟ್‌ಪೋನ್‌, ವಿಡಿಯೊಗೇಮ್‌, ಕಂಪ್ಯೂಟರ್‌, ಸಾಮಾಜಿಕ ಜಾಲತಾಣಗಳಿಗೆ ಅಡಿಕ್ಟ್‌ ಆದ್ರೆ 20 ವರ್ಷ ದಾಟಿದ ನಂತರ ಹ್ಯಾಲೊಸಿನೇಷನ್‌, ಇಲ್ಯೂಷನ್‌, ಡೈಲ್ಯೂಷನ್ಸ್‌ ನಂತರ ಮಾನಸಿಕ ವ್ಯಾಧಿಗಳಿಗೆ ಗುರಿಯಾಗುತ್ತಾರೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ. ಮಕ್ಕಳಿಗೆ ಫೋನ್‌ ಕೊಡುವ ಮುನ್ನ ಪೋಷಕರು ಯೋಚಿಸಲೇ ಬೇಕಿದೆ. 
ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌, ವಿಡಿಯೊ ಗೇಮ್‌ಗೆ ಅಡಿಕ್ಟ್‌ ಆಗಿದ್ದಾರಾ, ಮನೋರೋಗ ಕಾಡಬಹುದು ಎಚ್ಚರ
ನಿಮ್ಮ ಮಕ್ಕಳು ಸ್ಮಾರ್ಟ್‌ಫೋನ್‌, ವಿಡಿಯೊ ಗೇಮ್‌ಗೆ ಅಡಿಕ್ಟ್‌ ಆಗಿದ್ದಾರಾ, ಮನೋರೋಗ ಕಾಡಬಹುದು ಎಚ್ಚರ

ʼನನ್ನ ಮಗು ಮೊಬೈಲ್‌ ಕೊಡ್ಲಿಲ್ಲ ಅಂದ್ರೆ ಊಟಾನೇ ಮಾಡೋದಿಲ್ಲʼ ಅಂತ ಹಲವು ತಾಯಂದಿರು ಹೇಳೋದನ್ನ ಕೇಳಿದ್ದೇವೆ. ಮಕ್ಕಳಿಗೆ 2 ವರ್ಷವಾಗುತ್ತಿದ್ದಂತೆ ಅವುಗಳ ಅಳು, ಹಟ ನಿಲ್ಲಿಸಲು ಮೊಬೈಲ್‌ ನೀಡುವ ಅಭ್ಯಾಸ ರೂಢಿಸಿಕೊಂಡಿದ್ದಾರೆ ಯುವ ಪೋಷಕರು. ಬಾಲ್ಯದಿಂದಲೇ ಮೊಬೈಲ್‌ಗೆ ಅಡಿಕ್ಟ್‌ ಆಗುವ ಮಕ್ಕಳು ಬೆಳೆದ ನಂತರವೂ ಮೊಬೈಲ್‌ ನೋಡುವ ಚಟವನ್ನು ಬಿಡುವುದಿಲ್ಲ. ಆದರೆ ಇತ್ತೀಚಿನ ಅಧ್ಯಯನವೊಂದು ಪೋಷಕರಿಗೆ ದಿಗಿಲು ಹುಟ್ಟಿಸಿವಂತಿದೆ. ಅದೇನೆಂದರೆ ಸ್ಮಾರ್ಟ್‌ಫೋನ್‌ ಹಾಗೂ ವಿಡಿಯೊ ಗೇಮ್‌ಗಳಿಗೆ ಅಡಿಕ್ಟ್‌ ಆಗಿರುವ ಮಕ್ಕಳು ಮಾನಸಿಕ ಆರೋಗ್ಯವನ್ನು ಸಮಸ್ಯೆಗೆ ಗುರಿಯಾಗುತ್ತಾರಂತೆ.

ಟ್ರೆಂಡಿಂಗ್​ ಸುದ್ದಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ಪಾಯಸದಿಂದ ಕೇಸರಿಬಾತ್‌ವರೆಗೆ, ಬಾಯಲ್ಲಿ ನೀರೂರಿಸುವ ಮಾವಿನಹಣ್ಣಿನ ಸಾಂಪ್ರದಾಯಿಕ ತಿನಿಸುಗಳಿವು; ಈ ರೆಸಿಪಿಗಳನ್ನು ನೀವೂ ಟ್ರೈ ಮಾಡಿ

ನುಡಿಯ ನೇತಾರ ನಾಲಿಗೆ: ಉಪ್ಪು, ಹುಳಿ, ಸಿಹಿ ತಿಳಿಯುವ ಜಿಹ್ವೆಗೆ ಖಾರವೇಕೆ ಗೊತ್ತಾಗಲ್ಲ? ನಾಲಿಗೆ ಬಗ್ಗೆ ನಿಮಗೆಷ್ಟು ಗೊತ್ತು? -ಜ್ಞಾನ ವಿಜ್ಞಾನ

ಮೊಬೈಲ್‌ ಫೋನ್‌, ಐಪ್ಯಾಡ್‌ಗಳಂತಹ ಗ್ಯಾಜೆಟ್‌ಗಳಲ್ಲಿ ವಿಡಿಯೊ ಗೇಮ್‌ ಆಡುವ ಮಕ್ಕಳು ಭವಿಷ್ಯದಲ್ಲಿ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಬಹುದು ಎಂದು ಹೊಸ ಅಧ್ಯಯನವೊಂದು ಸಾಬೀತು ಪಡಿಸಿದೆ. ಕೆನಡಾದ ಮೆಕ್‌ಗಿಲ್‌ ವಿಶ್ವವಿದ್ಯಾಲಯದ ಸಂಶೋಧಕರು ಸ್ಮಾರ್ಟ್‌ಫೋನ್‌ ಹಾಗೂ ಸಾಮಾಜಿಕ ಜಾಲತಾಣಗಳನ್ನು ಬಳಸುವ ಹದಿ ವಯಸ್ಸಿನ ಮಕ್ಕಳು ಭವಿಷ್ಯದಲ್ಲಿ ಮತಿವಿಕಲ್ಪ, ಡೈಲ್ಯೂಷನ್ಸ್‌, ಹ್ಯಾಲೊಸಿನೇಷನ್ಸ್‌ ಸೇರದಂತೆ ಇನ್ನಿತರ ಸಮಸ್ಯೆಗಳು ಎದುರಿಸುತ್ತಿದ್ದಾರೆ ಎಂಬುದನ್ನು ಈ ಅಧ್ಯಯನ ಸಾಬೀತು ಮಾಡಿದೆ. 1997 ಹಾಗೂ 98ರ ನಡುವೆ ಜನಿಸಿದ 1,226 ಜನರ ಮೇಲೆ ನಡೆಸಿದ ಅಧ್ಯಯನ ಇದಾಗಿದೆ. ಈ ರಿಸರ್ಚ್‌ ಸಾರಾಂಶವು ಜಾಮಾ ಸೈಕ್ಯಾಟ್ರಿ ನಿಯತಕಾಲಿಕೆಯಲ್ಲಿ ಪ್ರಕಟವಾಗಿದೆ.

ಹದಿ ವಯಸ್ಸಿನ ಮೊಬೈಲ್‌ ಚಟದಿಂದ ಅಪಾಯ ತಪ್ಪಿದ್ದಲ್ಲ 

ʼಹದಿವಯಸ್ಸಿನಲ್ಲಿ ಅತಿಯಾದ ವಿಡಿಯೊ ಗೇಮ್‌ಗಳ ಬಳಕೆ ಹಾಗೂ ಕಂಪ್ಯೂಟರ್‌ ಬಳಕೆಯಿಂದ 23 ವರ್ಷದ ಅಸುಪಾಸಿಗೆ ಬಂದಾಗ ಅಂತಹ ಮಕ್ಕಳಲ್ಲಿ ಮಾನಸಿಕ ವ್ಯಾಧಿಗಳು ಕಾಣಿಸುತ್ತಿದೆʼ ಎಂದು ಮೆಕ್‌ಗಿಲ್‌ ವಿಶ್ವವಿದ್ಯಾಲಯದ ಸಂಶೋಧಕರು ಅಧ್ಯಯನದಲ್ಲಿ ಬರೆದಿದ್ದಾರೆ.

ಸಂಶೋಧನೆಯ ಸಮಯದಲ್ಲಿ ಭಾಗವಹಿಸಿದ ಅಭ್ಯರ್ಥಿಗಳಿಗೆ ಕಿರುಕುಳದ ಕಲ್ಪನೆ, ವಿಲಕ್ಷಣ ಅನುಭವ ಹಾಗೂ ಗ್ರಹಿಕೆಯಲ್ಲಿ ಅಸಹಜ ಇಂತಹ ಅನುಭವಗಳನ್ನು ಎದುರಿಸಿದ್ದಾರೆಯೇ ಎಂಬುದನ್ನು ಕೇಳಲಾಗಿತ್ತು. ಜೊತೆಗೆ ಜನ ನಿಮ್ಮ ಬಗ್ಗೆ ಡಬಲ್‌ ಮೀನಿಂಗ್‌ ವಿಷಯಗಳನ್ನು ಹೇಳುತ್ತಾರೆ, ನಿಮ್ಮ ತಲೆಯಲ್ಲಿರುವ ಯೋಚನೆಗಳು ನಿಮ್ಮದಲ್ಲ ಎಂದು ನಿಮಗೆ ಯಾವತ್ತಾದರೂ ಅನ್ನಿಸಿತ್ತಾ, ನೀವು ಒಂಟಿಯಾಗಿರುವಾಗ ಎಂದಾದರೂ ಧ್ವನಿಗಳನ್ನು ಕೇಳಿದ್ದೀರಾ? ಎಂದೆಲ್ಲಾ ಅವರು ಪ್ರಶ್ನೆಗಳನ್ನು ಅವರಿಗೆ ಕೇಳಲಾಗಿತ್ತು.

ಸಂಶೋಧನೆಯಲ್ಲಿ ಭಾಗವಹಿಸಿದ್ದ ಅಭ್ಯರ್ಥಿಗಳ ಪ್ರತಿಕ್ರಿಯೆಗಳನ್ನು ವಿಶ್ಲೇಷಿಸಿ ಸಂಶೋಧಕರು ಹದಿಹರೆಯದಲ್ಲಿ ಹೆಚ್ಚು ವಿಡಿಯೊ ಗೇಮ್‌ ಆಡುವುದು ಶೇ3 ರಿಂದ 7 ರಷ್ಟು ಮನೋವಿಕೃತ ಅನುಭವಗಳೊಂದಿಗೆ ಸಂಬಂಧಿಸಿದೆ ಎಂಬ ನಿರ್ಧಾರ ಬರಲಾಗಿದೆ.

ಅಡಿಕ್ಟ್‌ ಆಗುವುದನ್ನು ನಿಯಂತ್ರಿಸಿ 

ಅದ್ಯಾಗೂ ಈ ವಿಚಾರದಲ್ಲಿ ತಂತ್ರಜ್ಞಾನವನ್ನು ದೂಷಿಸಲು ಆಗುವುದಿಲ್ಲ ಎಂದು ಸಂಶೋಧಕರು ಹೇಳಿದ್ದಾರೆ. ಮಗುವು ಸ್ಮಾರ್ಟ್‌ಫೋನ್‌ ಅಥವಾ ವಿಡಿಯೊ ಗೇಮ್‌ಗೆ ಅಡಿಕ್ಟ್‌ ಆಗಿದ್ದರೆ ಆ ಮಗುವಿನಲ್ಲಿ ಮಾನಸಿಕ ಸಮಸ್ಯೆಗಳು ಕಾಡಬಹುದು ಎಂಬ ಎಚ್ಚರಿಕೆಯನ್ನು ಸಂಶೋಧಕರು ನೀಡುತ್ತಾರೆ.

ʼಮಕ್ಕಳು ಅತಿಯಾಗಿ ಸಾಮಾಜಿಕ ಮಾಧ್ಯಮಗಳನ್ನು ಬಳಸಲು ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳನ್ನು ಎದುರಿಸಲು ಒಂಟಿತನ, ಬುಲ್ಲಿಯಿಂಗ್‌, ಮಕ್ಕಳು-ಪೋಷಕರ ನಡುವಿನ ಸಂಬಂಧದಲ್ಲಿನ ಸಮಸ್ಯೆ ಇಂತಹ ಅಪಾಯಕಾರಿ ಅಂಶಗಳು ಸೇರಿಕೊಂಡಿವೆʼ ಎಂದು ಸಂಶೋಧಕರ ತಂಡವು ತಿಳಿಸಿದೆ.

ಹಾಗಂತ ಹದಿ ವಯಸ್ಸಿನ ಮಕ್ಕಳನ್ನು ಇದ್ದಕ್ಕಿದ್ದಂತೆ ಸ್ಮಾರ್ಟ್‌ಫೋನ್‌ ಹಾಗೂ ವಿಡಿಯೊಗಳಿಂದ ದೂರ ಮಾಡುವುದು ಕೂಡ ಅಪಾಯ. ನಿಧಾನಕ್ಕೆ ಅವರಿಂದ ಆ ಚಟವನ್ನು ಬಿಡಿಸಬೇಕು ಎಂದು ಸಂಶೋಧಕರು ಪೋಷಕರಿಗೆ ಸಲಹೆ ನೀಡಿದ್ದಾರೆ.

ವಿಭಾಗ

    ಹಂಚಿಕೊಳ್ಳಲು ಲೇಖನಗಳು