logo
ಕನ್ನಡ ಸುದ್ದಿ  /  ಜೀವನಶೈಲಿ  /  Mumps Virus: ಕೇರಳದಲ್ಲಿ ಹೆಚ್ಚುತ್ತಿದೆ ಮಂಗನ ಬಾವು ಸಮಸ್ಯೆ, ಒಂದೇ ದಿನ 190 ಪ್ರಕರಣಗಳು ಬೆಳಕಿಗೆ; ಸೋಂಕಿಗೆ ಚಿಕಿತ್ಸೆ ಏನು?

Mumps Virus: ಕೇರಳದಲ್ಲಿ ಹೆಚ್ಚುತ್ತಿದೆ ಮಂಗನ ಬಾವು ಸಮಸ್ಯೆ, ಒಂದೇ ದಿನ 190 ಪ್ರಕರಣಗಳು ಬೆಳಕಿಗೆ; ಸೋಂಕಿಗೆ ಚಿಕಿತ್ಸೆ ಏನು?

Rakshitha Sowmya HT Kannada

Mar 12, 2024 12:58 PM IST

ಕೇರಳದಲ್ಲಿ ಹೆಚ್ಚುತ್ತಿರುವ ಮಂಗನಬಾವು ಪ್ರಕರಣ

  • Mumps Virus: ಕೇರಳದಲ್ಲಿ ಭಾನುವಾರ ಒಂದೇ ದಿನ 190 ಮಂಗನಬಾವು ಪ್ರಕರಣಗಳು ವರದಿ ಆಗಿದೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳು ಈ ವಿಚಾರವನ್ನು ದೃಢಪಡಿಸಿದ್ದು ರಾಜ್ಯದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ. ಮಲಪ್ಪುರಂ ಜಿಲ್ಲೆಯಲ್ಲಿ ಈ ಸಮಸ್ಯೆ ಹೆಚ್ಚಾಗಿ ವರದಿಯಾಗಿದೆ. 

ಕೇರಳದಲ್ಲಿ ಹೆಚ್ಚುತ್ತಿರುವ ಮಂಗನಬಾವು ಪ್ರಕರಣ
ಕೇರಳದಲ್ಲಿ ಹೆಚ್ಚುತ್ತಿರುವ ಮಂಗನಬಾವು ಪ್ರಕರಣ

ಕೇರಳ: ದೇಶದಲ್ಲಿ ವೈರಸ್‌ನಿಂದ ಉಂಟಾಗುವ ಆರೋಗ್ಯ ಸಮಸ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಇದೀಗ ಕೇರಳದಲ್ಲಿ ಮಂಗನ ಬಾವು ಪ್ರಕರಣಗಳು ಹೆಚ್ಚು ವರದಿಯಾಗುತ್ತಿದೆ. ಮಾರ್ಚ್‌ 10 ಭಾನುವಾರ ಒಂದೇ ದಿನ ದೇವರ ನಾಡು ಎಂದೇ ಹೆಸರಾದ ಕೇರಳದಲ್ಲಿ 190 ಪ್ರಕರಣಗಳು ವರದಿಯಾಗಿವೆ.

ಟ್ರೆಂಡಿಂಗ್​ ಸುದ್ದಿ

Kitchen Tips: ನಿಮ್ಮ ಅಡುಗೆಮನೆ ಜಿರಳೆಗಳ ಸಾಮ್ರಾಜ್ಯವಾಗಿದ್ಯಾ? ಜಿರಳೆ ಕಾಟದಿಂದ ಮುಕ್ತಿ ಪಡೆಯಲು ಇಲ್ಲಿದೆ ಸಿಂಪಲ್‌ ಟಿಪ್ಸ್‌

Relationship guide: ಮದುವೆಯಾದ ಆರಂಭದ ದಿನಗಳಲ್ಲಿ ದಾಂಪತ್ಯ ಜೀವನ ಹೇಗಿರಬೇಕು? ಸುಖ ಸಂಸಾರಕ್ಕೆ ದಂಪತಿಗಳು ಪಾಲಿಸಬೇಕಾದ ನಿಯಮಗಳಿವು

ಎಸ್ಎಸ್‌ಎಲ್‌ಸಿ, ಪಿಯುಸಿ ಅನುತೀರ್ಣರಾಗಿ ಮುಂದೆ ಓದಲು ಇಷ್ಟಾ ಇಲ್ವಾ? ಆಸಕ್ತರಿಗಾಗಿ ಕೇಶ ವಿನ್ಯಾಸ ತರಬೇತಿ ಆರಂಭ

Parkinson Disease: ಪಾರ್ಕಿನ್ಸನ್‌ ಕಾಯಿಲೆಗೂ ನಿದ್ದೆಗೂ ಇದೆ ಸಂಬಂಧ; ನಿದ್ದೆ ಕಡಿಮೆಯಾದ್ರೆ ಸಮಸ್ಯೆ ಉಲ್ಬಣವಾಗಬಹುದು ಎಚ್ಚರ

2 ತಿಂಗಳಲ್ಲಿ 11,467 ಪ್ರಕರಣಗಳು

ಕೇರಳ ರಾಜ್ಯ ಆರೋಗ್ಯ ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಕಳೆದ 2 ತಿಂಗಳಲ್ಲಿ 11,467 ಪ್ರಕರಣಗಳು ವರದಿ ಆಗಿದ್ದು ಅದರಲ್ಲಿ 2,505 ಮಕ್ಕಳು ಈ ಕಾಯಿಲೆಯಿಂದ ಬಳಲುತ್ತಿರುವುದು ತಿಳಿದುಬಂದಿದೆ. ಆರೋಗ್ಯ ಸಚಿವಾಲಯದ ಅಧಿಕಾರಿಗಳು ಈ ವಿಚಾರವನ್ನು ದೃಢಪಡಿಸಿದ್ದು ರಾಜ್ಯದ ರಾಷ್ಟ್ರೀಯ ರೋಗ ನಿಯಂತ್ರಣ ಕೇಂದ್ರಕ್ಕೆ ಸೂಚನೆ ನೀಡಿದ್ದಾರೆ. ಕೇರಳದಲ್ಲಿ ಮಳಪುರಂ ಜಿಲ್ಲೆ ಹಾಗೂ ರಾಜ್ಯದ ಉತ್ತರ ಭಾಗಗಳಲ್ಲೇ ಈ ಸಮಸ್ಯೆ ಹೆಚ್ಚು ಉಲ್ಬಣಿಸಿದೆ. ಮಂಗನ ಬಾವು ಕಾಯಿಲೆಗೆ ಚುಚ್ಚುಮದ್ದು ಇದ್ದರೂ ಇದನ್ನು ಸರ್ಕಾರದ ಪ್ರತಿರಕ್ಷಣಾ ಕಾರ್ಯಕ್ರಮಗಳಲ್ಲಿ ಸೇರಿಸಲಾಗಿಲ್ಲ. ಆದರೂ ಖಾಸಗಿ ಕೇಂದ್ರಗಳಲ್ಲಿ ಎಲ್ಲಾ ಮಂಗನಬಾವು-ದಡಾರ-ರುಬೆಲ್ಲಾ ಕಾಯಿಲೆಗಳಿಗೆ ಮಕ್ಕಳಿಗೆ ವ್ಯಾಕ್ಸಿನ್‌ ದೊರೆಯುತ್ತದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಕೇರಳ ಆರೋಗ್ಯ ಇಲಾಖೆ ಅಧಿಕಾರಿಯೊಬ್ಬರು, MMR (ಮಂಗನಬಾವು-ದಡಾರ-ರುಬೆಲ್ಲಾ) ಲಸಿಕೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಸೇರಿಸುವುದು ಪ್ರಾಯೋಗಿಕವಾಗಿರುವುದಿಲ್ಲ, ಏಕೆಂದರೆ ಇದು ದಡಾರ ಮತ್ತು ರುಬೆಲ್ಲಾಗೆ ಮಾಡುವಂತೆ ಮಂಪ್ಸ್ ವಿರುದ್ಧ ದೃಢವಾದ ರಕ್ಷಣೆಯನ್ನು ನೀಡುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.

ಮಂಗನ ಬಾವು ಲಕ್ಷಣಗಳೇನು?

ಮಂಗನ ಕಾಯಿಲೆಯು ಮಂಪ್ಸ್ ವೈರಸ್ (ಒಂದು ರೀತಿಯ ಪ್ಯಾರಾಮಿಕ್ಸೊವೈರಸ್) ನಿಂದ ಉಂಟಾಗುವ ಸಾಂಕ್ರಾಮಿಕ ಕಾಯಿಲೆಯಾಗಿದೆ. ಈ ವೈರಸ್‌ ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತದೆ. ತಲೆನೋವು, ಜ್ವರ ಮತ್ತು ಆಯಾಸದಂತಹ ಸೌಮ್ಯ ಲಕ್ಷಣಗಳೊಂದಿಗೆ ಪ್ರಾರಂಭವಾಗುತ್ತದೆ. ಆದರೆ ನಂತರ ಇದು ಲಾಲಾರಸ ಗ್ರಂಥಿಗಳಲ್ಲಿ ತೀವ್ರವಾದ ಊತಕ್ಕೆ ಕಾರಣವಾಗುತ್ತದೆ, ಇದರಿಂದ ದವಡೆಗಳು, ಕೆನ್ನೆಗಳು ಊದಿಕೊಂಡಂತೆ ಕಾಣುತ್ತದೆ. ಆಯಾಸ ಮತ್ತು ಅಹಾರವನ್ನು ನುಂಗಲು ತೊಂದರೆಯಾಗುತ್ತದೆ.

ಕಾಯಿಲೆಗೆ ಚಿಕಿತ್ಸೆ ಏನು?

ಮಂಗನಬಾವು ಸಾಮಾನ್ಯವಾಗಿ 2-12 ವರ್ಷ ವಯಸ್ಸಿನ ಮಕ್ಕಳ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ. ವಯಸ್ಕರಿಗೂ ಈ ಸಮಸ್ಯೆ ಕಾಡುತ್ತದೆ. ಈ ಸಮಸ್ಯೆಗೆ ಯಾವುದೇ ನಿರ್ದಿಷ್ಟ ಆಂಟಿವೈರಲ್ ಚಿಕಿತ್ಸೆ ಇಲ್ಲ. ಅದರೆ ಆರಂಭದಲ್ಲೇ ಇದನ್ನು ಪತ್ತೆ ಹಚ್ಚಿದರೆ ಸಮಸ್ಯೆಯನ್ನು ತಡೆಗಟ್ಟಬಹುದು. ಈ ಲಕ್ಷಣಗಳು ನಿಮ್ಮಲ್ಲಿ ಕಾಣಿಸಿಕೊಂಡರೆ ಹೆಚ್ಚು ನೀರು ಕುಡಿಯಿರಿ, ತಕ್ಷಣ ವೈದ್ಯರನ್ನು ಸಂಪರ್ಕಿಸಿ. ಊದಿಕೊಂಡ ಸ್ಥಳಕ್ಕೆ ಬೆಚ್ಚಗಿನ ಅಥವಾ ತಣ್ಣನೆಯ ಶಾಖವನ್ನು ನೀಡುವುದು ಸಹ ಪರಿಹಾರ ನೀಡುತ್ತದೆ. ಬೆಚ್ಚಿಗಿನ ನೀರಿಗೆ ಸ್ವಲ್ಪ ಉಪ್ಪು ಬೆರೆಸಿ ಬಾಯಿ ಮುಕ್ಕಳಿಸಿ. ದಿನಕ್ಕೆ 2-3 ಬಾರಿ ಇದನ್ನು ಪುನರಾವರ್ತಿಸಿ. ವೈರಸ್ ಹರಡುವುದನ್ನು ತಡೆಯಲು ಸೋಂಕಿತ ವ್ಯಕ್ತಿಯಿಂದ ದೂರವಿರುವುದು ಉತ್ತಮ.

    ಹಂಚಿಕೊಳ್ಳಲು ಲೇಖನಗಳು