logo
ಕನ್ನಡ ಸುದ್ದಿ  /  ಜೀವನಶೈಲಿ  /  ಬದುಕಿಗೆ ಬೇಕು ಸಂಬಂಧಗಳ ಅನುಬಂಧ, ಪೋಷಕರೇ ಮಕ್ಕಳನ್ನು ಒಂಟಿಯಾಗಿಸುವ ಮುನ್ನ ಯೋಚಿಸಿ; ವೈಎನ್‌ ಮಧು ಬರಹ

ಬದುಕಿಗೆ ಬೇಕು ಸಂಬಂಧಗಳ ಅನುಬಂಧ, ಪೋಷಕರೇ ಮಕ್ಕಳನ್ನು ಒಂಟಿಯಾಗಿಸುವ ಮುನ್ನ ಯೋಚಿಸಿ; ವೈಎನ್‌ ಮಧು ಬರಹ

Reshma HT Kannada

Jan 11, 2024 12:59 PM IST

ವೈಎನ್‌ ಮಧು (ಬಲಚಿತ್ರ)

    • ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳನ್ನು ಅಜ್ಜ-ಅಜ್ಜಿ, ಅಕ್ಕ-ತಮ್ಮ, ನೆರೆಹೊರೆಯವರ ನಡುವೆ ಸಂಬಂಧವೇ ಇಲ್ಲದಂತೆ ನಾಲ್ಕು ಗೋಡೆಗಳ ಮಧ್ಯೆ ಕೂಡಿ ಹಾಕಿದಂತೆ ಸಾಕುತ್ತಿರುವುದು ಸುಳ್ಳಲ್ಲ. ಆದರೆ ಮಕ್ಕಳು ಎಲ್ಲರೊಂದಿಗೆ ಬೆರೆಯುವುದು ಯಾವಾಗ, ಸಂಬಂಧದ ಮೌಲ್ಯ ತಿಳಿಯುವುದು ಯಾವಾಗ? ಪೋಷಕರಿಗೆ ವೈಎನ್‌ ಮಧು ನೀಡಿದ ಕಿವಿಮಾತು ಇಲ್ಲಿದೆ. 
ವೈಎನ್‌ ಮಧು (ಬಲಚಿತ್ರ)
ವೈಎನ್‌ ಮಧು (ಬಲಚಿತ್ರ)

ಹಿಂದೆಲ್ಲಾ ಮಕ್ಕಳಿಗೆ ಶಾಲೆಗೆ ರಜೆ ಸಿಕ್ಕಿತೆಂದರೆ ಅಜ್ಜಿ ಅಜ್ಜನ ಮನೆಗೆ ಓಡಿ ಹೋಗಿ ರಜೆ ಮುಗಿಯುವವರೆಗೂ ಅಲ್ಲಿಯೇ ಇದ್ದು, ಮಜಾ ಮಾಡಿದ ಬರುವ ಕಾಲವಿತ್ತು. ಅದು ನಿಜಕ್ಕೂ ಸುಂದರ ಕಾಲ. ಆದರೆ ಈ ಎಲ್ಲವೂ ಬದಲಾಗಿದೆ. ಮಕ್ಕಳನ್ನು ನಾಲ್ಕು ಗೋಡೆಯ ಮಧ್ಯೆ ಇರಿಸಿ ಎಲ್ಲಾ ಸಂಬಂಧಗಳಿಂದ ದೂರಾಗುವಂತೆ ಮಾಡುತ್ತಿದ್ದಾರೆ ಪೋಷಕರು. ಮಕ್ಕಳಿಗೆ ಸಂಬಂಧಗಳ ಮೌಲ್ಯವೂ ತಿಳಿದಿಲ್ಲ, ಮಕ್ಕಳು ಕಲಿಯಬೇಕಾದದ್ದುನ್ನು ಕಲಿಯುತ್ತಿಲ್ಲ. ಈ ಬಗ್ಗೆ ವೈಎನ್‌ ಮಧು ತಮ್ಮ ಫೇಸ್‌ಬುಕ್‌ ಪುಟದಲ್ಲಿ ಬರೆದುಕೊಂಡ ಬರಹ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಮಾವಿನಹಣ್ಣಿನಿಂದ ತಯಾರಿಸಬಹುದು ಒಂದಲ್ಲ, ಎರಡಲ್ಲ ಮೂರು ಬಗೆಯ ಪಾಯಸ; ಈ ಭಾನುವಾರ ನೀವೂ ಮನೆಯಲ್ಲಿ ಟ್ರೈ ಮಾಡಿ, ರೆಸಿಪಿ ಇಲ್ಲಿದೆ

Relationship tips: ವರ್ಷಗಳು ಸರಿದರೂ ದಾಂಪತ್ಯದಲ್ಲಿ ಪ್ರೀತಿಯ ತಾಜಾತನ ಉಳಿಬೇಕು ಅಂದ್ರೆ ಈ 4 ನಿಯಮಗಳನ್ನು ತಪ್ಪದೇ ಪಾಲಿಸಿ

Personality Test: ಚಿತ್ರವನ್ನು ಕಂಡಾಕ್ಷಣ ನಿಮಗೆ ಮೊದಲು ಕಂಡಿದ್ದೇನು? ನಿಮ್ಮ ವ್ಯಕ್ತಿತ್ವದ ಕುರಿತ ರಹಸ್ಯ ವಿಚಾರ ತಿಳಿಸುತ್ತೆ ಈ ಚಿತ್ರ

Brain Teaser: 212=25, 214=47 ಆದ್ರೆ, 215 = ಎಷ್ಟು? ಗಣಿತದಲ್ಲಿ ನೀವು ಜಾಣರಾದ್ರೆ 10 ಸೆಕೆಂಡ್‌ನಲ್ಲಿ ಉತ್ತರ ಹೇಳಿ

ವೈಎನ್‌ ಮಧು ಬರಹ

ಯಾವುದೇ ವ್ಯವಸ್ಥೆಯಲ್ಲಿ ಒಂದಷ್ಟು ಒಳ್ಳೆಯದು ಒಂದಷ್ಟು ಕೆಟ್ಟದ್ದು ಇರುತ್ತದೆ. ಭಾರತೀಯ ಕೌಟುಂಬಿಕ ವ್ಯವಸ್ಥೆ (ಏಶಿಯಾ ಅಂದರೂ ಸರಿಯೇ) ಮಕ್ಕಳು ಕೌಮಾರ್ಯ ದಾಟುವ ತನಕ ನದಿ ದಾಟಿಸುವಲ್ಲಿ ಅತ್ಯಂತ ಸಮರ್ಪಕ ವ್ಯವಸ್ಥೆಯಾಗಿದೆ.

ಗಂಡ-ಹೆಂಡತಿಯರು ಮಕ್ಕಳನ್ನು ತಾವೇ ಸಾಕುತ್ತೇವೆ ಎಂಬುದು ದುಸ್ಸಾಹಸವೇ ಸರಿ. ಬಂಡೆಗೆ ತಲೆ ಜಜ್ಜಿಕೊಂಡ ಹಾಗೆ. ಸಂಪ್ರದಾಯಸ್ಥರೇ ಆಗಿದ್ದರೂ ಅಜ್ಜ ಅಜ್ಜಿಯರ ಪ್ರೀತಿ ಬೇಕಾಗುತ್ತದೆ, ನಮಗಿಷ್ಟವಾಗದ ಗುಣ ಹೊಂದಿರಬಹುದಾದ ಅಕ್ಕ-ತಮ್ಮಂದಿರ ಸ್ನೇಹ ಅಗತ್ಯವಿರುತ್ತದೆ. ತುಸು ಅಸೂಯೆ, ಸಲ್ಲದ ಸಲಹೆಗಳನ್ನು ಹೇರುವ ನೆಂಟರು ನೆರೆಮನೆಯವರ ನೆರಳೂ ಅಗತ್ಯವಿರುತ್ತದೆ. ಈ ಪ್ರಕ್ರಿಯೆಯಲ್ಲಿ ಮಕ್ಕಳು ತೀರ ತಾವು ಬಯಸಿದ ಹಾಗೆ ಬೆಳೆಯಲು ಸಾಧ್ಯವಾಗದಿರಬಹುದು, ಆದರೆ ಅವರಾಗೇ ಏನೊ ಒಂದು ಚಂದದ ಮೂರ್ತಿಯಾಗಿರುತ್ತಾರೆ.

ಇದನ್ನೂ ಓದಿ: Parenting Tips: ನಿಮ್ಮ ಮಗು ಸಾಮಾಜಿಕ ಜಾಲತಾಣ ಬಳಸ್ತಿದ್ಯಾ, ಇಂಟರ್‌ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾ; ಹಾಗಿದ್ರೆ ಈ ವಿಚಾರ ತಿಳಿದಿರಲಿ

ಯಾರೊಂದಿಗೂ ಬೆರೆಯದೆ ಯಾರೊಂದಿಗೆ ಬೆರೆಯಲೂ ಬಿಡದೇ ತಾವೇ ಸಾಕಲೂ ಆಗದೆ ಪರಸ್ಪರ ಕಚ್ಚಾಡಿಕೊಂಡು ಶಿಕ್ಷಿಸಿಕೊಂಡು ತಮ್ಮ ಭವಿಷ್ಯವನ್ನೂ ಹಾಳು ಮಾಡಿಕೊಂಡು ಮಕ್ಕಳನ್ನೂ ಬಡ ಮಾಡುವ ಮನೋಭಾವ ಯಾರಿಗೂ ಒಳ್ಳೆಯದು ಮಾಡದು.

ಮದುವೆ ಆಗಲಿರುವವರು, ಮಕ್ಕಳು ಮಾಡಿಕೊಳ್ಳಲು ಬಯಸುವವರು ಇದರ ಬಗ್ಗೆ ಬಹಳ ಯೋಚಿಸಬೇಕಾಗಿದೆ. ಒಂದು ಕೋಣೆಯಲ್ಲಿ ಇಬ್ಬರನ್ನು ಕೂಡಿಹಾಕಿದರೆ ಎರಡು ದಿವಸ ಬಾಳಲಾರರು. ಸಮುದಾಯಕ ಭಾವನೆ ಅತ್ಯವಶ್ಯಕ. ಹಳೆಯ ವ್ಯವಸ್ಥೆಯಲ್ಲಿ ಕೆಟ್ಟದನ್ನು ತ್ಯಜಿಸಿ ಒಳ್ಳೆಯದನ್ನು ಉಳಿಸಿಕೊಂಡು ಹೊಸತರಲ್ಲಿಯೂ ಒಳ್ಳೆಯದನ್ನಷ್ಟೇ ಅಳವಡಿಸಿಕೊಂಡು ಸಮತೋಲನ ಜೀವನ ಸಾಧಿಸಬೇಕು.

ಬದುಕು ದೊಡ್ಡದು!

ಇಂದು (ಜ.11) ಬೆಳಿಗ್ಗೆ ಮಧು ಈ ಬರಹವನ್ನು ಬರೆದುಕೊಂಡಿದ್ದಾರೆ. ಈಗಾಗಲೇ ಹಲವರು ಈ ಪೋಸ್ಟ್‌ ವೀಕ್ಷಿಸಿದ್ದು ಲೈಕ್‌ ಕಾಮೆಂಟ್‌ ಮಾಡಿದ್ದಾರೆ.

    ಹಂಚಿಕೊಳ್ಳಲು ಲೇಖನಗಳು