Parenting Tips: ನಿಮ್ಮ ಮಗು ಸಾಮಾಜಿಕ ಜಾಲತಾಣ ಬಳಸ್ತಿದ್ಯಾ, ಇಂಟರ್‌ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾ; ಹಾಗಿದ್ರೆ ಈ ವಿಚಾರ ತಿಳಿದಿರಲಿ
ಕನ್ನಡ ಸುದ್ದಿ  /  ಜೀವನಶೈಲಿ  /  Parenting Tips: ನಿಮ್ಮ ಮಗು ಸಾಮಾಜಿಕ ಜಾಲತಾಣ ಬಳಸ್ತಿದ್ಯಾ, ಇಂಟರ್‌ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾ; ಹಾಗಿದ್ರೆ ಈ ವಿಚಾರ ತಿಳಿದಿರಲಿ

Parenting Tips: ನಿಮ್ಮ ಮಗು ಸಾಮಾಜಿಕ ಜಾಲತಾಣ ಬಳಸ್ತಿದ್ಯಾ, ಇಂಟರ್‌ನೆಟ್‌ನಲ್ಲಿ ಹೆಚ್ಚು ಸಮಯ ಕಳೆಯುತ್ತಾ; ಹಾಗಿದ್ರೆ ಈ ವಿಚಾರ ತಿಳಿದಿರಲಿ

ಇತ್ತೀಚಿನ ದಿನಗಳಲ್ಲಿ ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಯ ಪ್ರಮಾಣ ಹೆಚ್ಚಿದೆ. ಇದರಿಂದ ಪೋಷಕರಲ್ಲಿ ಕಳವಳ ಹೆಚ್ಚಾಗಿದೆ. ಮಕ್ಕಳು ಎಷ್ಟನೇ ವಯಸ್ಸಿನಿಂದ ಸಾಮಾಜಿಕ ಜಾಲತಾಣಗಳನ್ನು ಬಳಸಬಹುದು ಎಂಬ ಬಗ್ಗೆ ಅವರಲ್ಲಿ ಪ್ರಶ್ನೆಗಳು ಮೂಡುತ್ತಿವೆ. ಈ ಎಲ್ಲದ್ದಕ್ಕೂ ಇಲ್ಲಿದೆ ಉತ್ತರ.

ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ

ಇತ್ತೀಚಿನ ದಿನಗಳಲ್ಲಿ ಮೊಬೈಲ್‌ ಫೋನ್‌ ಹಾಗೂ ಸಾಮಾಜಿಕ ಜಾಲತಾಣಗಳು ನಮ್ಮೆಲ್ಲರ ಬದುಕಿನ ಭಾಗವಾಗಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಸ್ನ್ಯಾಪ್‌ಚಾಟ್‌ ಇಂತಹ ಸಾಮಾಜಿಕ ಜಾಲತಾಣಗಳನ್ನು ಮಕ್ಕಳು ಹೆಚ್ಚೆಚ್ಚು ಬಳಸುತ್ತಿದ್ದಾರೆ.

ಈ ಸಾಮಾಜಿಕ ಜಾಲತಾಣಗಳು ಮನರಂಜನೆಯ ಜೊತೆಗೆ ಸ್ನೇಹಿತರೊಂದಿಗೆ ಸಂಪರ್ಕ ಬೆಳೆಸಲು ನೆರವಾಗುತ್ತದೆ ನಿಜ. ಆದರೆ ಇತ್ತೀಚಿನ ದಿನಗಳಲ್ಲಿ ಬದಲಾಗುತ್ತಿರುವ ಅಲ್ಗಾರಿದಮ್‌ಗಳು ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಪರಿಣಾಮ ಬೀರುವಂತೆ ಮಾಡಿದೆ. ಇದು ಪೋಷಕರಲ್ಲಿ ಕಳವಳ ಹೆಚ್ಚುವಂತೆ ಮಾಡಿದೆ.

ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ವಯಸ್ಸಿನ ಮಿತಿ ಇಲ್ಲವೇ?

ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ಇರುವುದು ಸರಿಯೇ, ಯಾವ ವಯಸ್ಸಿನಲ್ಲಿ ಮಕ್ಕಳು ಜಾಲತಾಣಗಳನ್ನು ಬಳಸಬಹುದು ಎಂಬ ಬಗ್ಗೆ ಪೋಷಕರಲ್ಲಿ ಒಂದಿಷ್ಟು ಪ್ರಶ್ನೆಗಳು ಮೂಡುವುದು ಸಹಜ.

ಕೆಲವು ದೇಶಗಳಲ್ಲಿ 13 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳು ಸಾಮಾಜಿಕ ಜಾಲತಾಣಗಳನ್ನು ಬಳಸುವುದಕ್ಕೆ ನಿಷೇಧ ಹೇರಲಾಗಿದೆ. ಅಲ್ಲದೆ 18 ವರ್ಷದೊಳಗಿನ ಮಕ್ಕಳು ಸಾಮಾಜಿಕ ಜಾಲತಾಣಗಳಲ್ಲಿ ನಮ್ಮ ವೈಯಕ್ತಿಕ ಖಾತೆ ತೆರೆಯುವ ಬಗ್ಗೆ ಪೋಷಕರಿಂದ ಅನುಮತಿ ಪಡೆದಿರಬೇಕಾಗುತ್ತದೆ. ಮಕ್ಕಳು ಹಾಗೂ ಹದಿವಯಸ್ಸಿನವರ ಇಂಟರ್ನೆಟ್‌ ಬಳಕೆ ಸುರಕ್ಷಿತವಾಗಿರಿಸುವ ಬಗ್ಗೆ ಹಲವು ದೇಶಗಳಲ್ಲಿ ಕಾನೂನುಗಳಿವೆ.

ಇತ್ತೀಚಿನ ದಿನಗಳಲ್ಲಿ ಮಕ್ಕಳ ವೈಯಕ್ತಿಕ ಸಾಮಾಜಿಕ ಜಾಲತಾಣ ಖಾತೆಗಳು ದುರ್ಬಳಕೆಯಾಗುತ್ತಿದೆ. ಕೆಲವೊಂದು ಆಪ್‌ಗಳು ಮಕ್ಕಳಿಗೆ ಸುರಕ್ಷತೆ ಒದಗಿಸುವಲ್ಲಿ ವಿಫಲವಾಗಿವೆ. ಆ ಕಾರಣಕ್ಕೆ ಈ ಬಗ್ಗೆ ಹೆಚ್ಚು ಗಮನ ಹರಿಸುವುದು ಅವಶ್ಯವಾಗಿದೆ.

ಹಾಗಾದರೆ ಮಕ್ಕಳ ಸಾಮಾಜಿಕ ಜಾಲತಾಣ ಬಳಕೆಗೆ ಸಂಬಂಧಿಸಿ ಪೋಷಕರು ಏನು ಮಾಡಬೇಕು, ಇಲ್ಲಿದೆ ಕೆಲವು ಉಪಯುಕ್ತ ಸಲಹೆ.

ಕಾಯ್ದೆ ಏನು ಹೇಳುತ್ತದೆ?

ಈಗಾಗಲೇ 13 ವರ್ಷಕ್ಕಿಂತ ಕಡಿಮೆ ವಯಸ್ಸಿನಲ್ಲಿ ಮಕ್ಕಳು ಪೋಷಕರ ಅನುಮತಿಯಿಲ್ಲದೇ ಸಾಮಾಜಿಕ ಜಾಲತಾಣ ಬಳಸುವಂತಿಲ್ಲ ಎಂಬ ನಿಯಮವಿದೆ. ಅದರಲ್ಲೂ ಪೋಷಕರ ಅನುಮತಿಯಿಲ್ಲದೇ ಖಂಡಿತ ಬಳಸುವಂತಿಲ್ಲ. 2000ದಲ್ಲಿ ಮಕ್ಕಳ ಆನ್‌ಲೈನ್‌ ಗೌಪ್ಯತೆ ಸಂರಕ್ಷಣಾ ಕಾಯ್ದೆ ಜಾರಿಗೆ ಬಂದಿತ್ತು.

ಈ ಕಾಯ್ಡೆಯ ಪ್ರಕಾರ ಯಾವುದೇ ವೆಬ್‌ಸೈಟ್‌ಗಳು ಹಾಗೂ ಆನ್‌ಲೈನ್‌ ಸೇವೆಗಳು ಮಕ್ಕಳ ವೈಯಕ್ತಿಕ ಮಾಹಿತಿ ಹಾಗೂ ಆನ್‌ಲೈನ್‌ ಗೌಪ್ಯತೆಯನ್ನು ರಕ್ಷಿಸುವ ಗುರಿಯನ್ನು ಹೊಂದಿದೆ. ಈ ಕಾರಣದಿಂದಾಗಿ ಕಂಪನಿಗಳು 13 ವರ್ಷದ ಒಳಗಿನ ಮಕ್ಕಳ ಸೈನ್‌ ಆಪ್‌ ಮಾಡುವುದನ್ನು ನಿಷೇಧಿಸಿದೆ.

ಇತ್ತೀಚೆಗೆ ಮಕ್ಕಳ ಆನ್‌ಲೈನ್‌ ಬಳಕೆಯು ಇವರು ಹೆಚ್ಚು ಹೊತ್ತು ಆನ್‌ಲೈನ್‌ನಲ್ಲೇ ಇರುತ್ತಾರೆ ಎಂಬುದು ಮಾತ್ರವಲ್ಲ ಇದರಿಂದ ಅವರಲ್ಲಿ ಆಕ್ರಮಣಕಾರಿ ವರ್ತನೆ, ಕಿರುಕುಳ, ಅತಿಯಾಗಿ ತಿನ್ನುವುದು, ಆತ್ಮಹತ್ಯೆಯಂತಹ ಯೋಚನೆಗಳು ಹೆಚ್ಚುವುದು ಮುಂತಾದ ಹಲವು ಕಾರಣಗಳು ಇದರಲ್ಲಿ ಸೇರಿವೆ.

ಮಕ್ಕಳು 8ನೇ ತರಗತಿಗೆ ಬರುವವರೆಗೂ ಕಾಯಿರಿ. ಅಲ್ಲಿಯವರೆಗೆ ಇಂಟರ್‌ನೆಟ್‌ ಬಳಕೆಗೆ ಕಡಿವಾಣ ಹಾಕಿ ಎಂದು ತಜ್ಞರು ಹೇಳುತ್ತಾರೆ. ಅಂದರೆ ನಿಮ್ಮ ಮಗುವಿಗೆ 13 ರಿಂದ 14 ವರ್ಷ ವಯಸ್ಸಾಗುವವರೆಗೂ ಸ್ಮಾರ್ಟ್‌ಫೋನ್‌ ನೀಡದೇ ಇರುವುದು ಉತ್ತಮ.

ಕೆಲವು ತಜ್ಞರು ಹೇಳುವ ಪ್ರಕಾರ ಮಕ್ಕಳಿಗೆ 18 ವರ್ಷ ವಯಸ್ಸಾಗುವ ತನಕ ಸ್ಮಾರ್ಟ್‌ ಬಳಕೆ ಮಿತಿ ಹಾಕುವುದು ಹಾಗೂ ಸಾಮಾಜಿಕ ಜಾಲತಾಣಗಳ ಖಾತೆ ತೆರೆಯಲು ಅನುಮತಿ ನೀಡದೇ ಇರುವುದು ಉತ್ತಮ ಎಂದು ಹೇಳಲಾಗುತ್ತಿದೆ.

ಹಲವಾರು ಬಾರಿ ಸಾಮಾಜಿಕ ಜಾಲತಾಣವನ್ನು ಬಳಸುವ ಮಕ್ಕಳು ತಮ್ಮ ಸ್ನೇಹಿತರು ಮಾಡುವುದನ್ನು ನೋಡಿ ಅನುಸರಿಸುತ್ತಾರೆ. ಅಲ್ಲದೆ ತಾನು ಹಾಗೆ ಇರಲು ಪೋಷಕರು ಅನುಮತಿ ನೀಡಬೇಕು ಎಂದುಕೊಳ್ಳುತ್ತದೆ. ಅಂತಹ ಸಂದರ್ಭದಲ್ಲಿ ಮಕ್ಕಳಲ್ಲಿ ಹಠದ ಸ್ವಭಾವ ತಾನಾಗಿಯೇ ಹೆಚ್ಚುತ್ತದೆ. ಇದಕ್ಕಾಗಿ ಪೋಷಕರು ಮಕ್ಕಳೊಂದಿಗೆ ಸಾಮಾಧಾನದಿಂದ ಕೂರಿಸಿಕೊಂಡು ಮಾತಾನಾಡುವುದು ಮುಖ್ಯವಾಗುತ್ತದೆ. ಅಲ್ಲದೆ ಇದರಿಂದ ಉಂಟಾಗುವ ಸಮಸ್ಯೆಗಳ ಬಗ್ಗೆ ಅವರಲ್ಲಿ ಅರಿವು ಮೂಡಿಸಬೇಕಾಗುತ್ತದೆ.

ಅಲ್ಲದೆ ಮಕ್ಕಳಿಗೆ ರಾತ್ರಿ ವೇಳೆ ಫೋನ್‌ ಕೊಡುವುದು ಕಡ್ಡಾಯವಾಗಿ ನಿಲ್ಲಿಸಿ. ಇದರಿಂದ ಹಗಲಿನ ವೇಳೆಯಲ್ಲಿ ಮಕ್ಕಳು ಶಾಲೆ, ಹೋಮ್‌ವರ್ಕ್‌ ಎಂದು ಬ್ಯುಸಿ ಇರುತ್ತಾರೆ. ಇದರಿಂದ ಅವರಲ್ಲಿ ಇಂಟರ್‌ನೆಟ್‌ ಬಳಕೆಯ ಪ್ರಮಾಣವನ್ನು ತಗ್ಗಿಸಬಹುದು.

ಪೋಷಕರು ಬಳಕೆ ಮಾಡುವುದನ್ನು ತಪ್ಪಿಸಬೇಕು

ಮಕ್ಕಳ ಜೊತೆಗೆ ಕೂತು ಪೋಷಕರು ಇನ್‌ಸ್ಟಾಗ್ರಾಂನಂತಹ ಸಾಮಾಜಿಕ ಜಾಲತಾಣಗಳನ್ನು ನೋಡುವುದರಿಂದ ಮಕ್ಕಳಲ್ಲಿ ಇದರ ಬಗ್ಗೆ ಆಸಕ್ತಿ ಹೆಚ್ಚುತ್ತದೆ. ಹಾಗಾಗಿ ಮಕ್ಕಳು ಜೊತೆಗೆ ಇರುವಾಗ ಇದರ ಬಳಕೆ ಸಾಧ್ಯವಾದಷ್ಟು ಕಡಿಮೆ ಮಾಡಿ. ಇಂದು ವೇಳೆ ಬಳಸುತ್ತಿದ್ದರು ಬೇರೆ ಕಾರಣಕ್ಕೆ ಬಳಸುತ್ತಿದ್ದೇನೆ ಎಂದು ತಿಳಿಸಿ.

ಹೀಗೆ ಪೋಷಕರು, ಶಿಕ್ಷಕರು, ಕಂಪನಿಗಳು, ಸರ್ಕಾರ ಎಲ್ಲವೂ ಜೊತೆಯಾದರೆ ಮಾತ್ರ ಮಕ್ಕಳಲ್ಲಿ ಸಾಮಾಜಿಕ ಜಾಲತಾಣಗಳ ಬಳಕೆಗೆ ಕಡಿವಾಣ ಹಾಕಬಹುದು.

Whats_app_banner