logo
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  Renault Festive Limited Edition Car: ಫೆಸ್ಟಿವ್‌ ಎಡಿಷನ್‌ ಕಾರ್ ಬುಕ್ಕಿಂಗ್‌ ಇಂದೇ ಶುರು

Renault Festive Limited Edition car: ಫೆಸ್ಟಿವ್‌ ಎಡಿಷನ್‌ ಕಾರ್ ಬುಕ್ಕಿಂಗ್‌ ಇಂದೇ ಶುರು

HT Kannada Desk HT Kannada

Sep 02, 2022 10:14 AM IST

ಸೀಮಿತ ಆವೃತ್ತಿಯು ಕೇವಲ ಒಂದು ಬಣ್ಣದ ಆಯ್ಕೆ ಅಂದರೆ ಮಿಸ್ಟರಿ ಕಪ್ಪು ಛಾವಣಿಯೊಂದಿಗೆ ಬಿಳಿ ವರ್ಣದಲ್ಲಿ ಲಭ್ಯವಿರಲಿದೆ.

  • Renault Festive Limited Edition car: ರೆನಾಲ್ಟ್‌ನ ಫೆಸ್ಟಿವ್‌ ಲಿಮಿಟೆಡ್‌ ಎಡಿಷನ್‌ನ ಮೂರು ಕಾರುಗಳನ್ನು ಪರಿಚಯಿಸುತ್ತಿದೆ. ಇದು ಟಾಪ್-ಎಂಡ್ ವೇರಿಯೆಂಟ್‌ ಮಾತ್ರ ಲಭ್ಯವಿದೆ - ಕ್ವಿಡ್‌ನ ಕ್ಲೈಂಬರ್ ವೇರಿಯೆಂಟ್‌ ಮತ್ತು ಟ್ರೈಬರ್ ಮತ್ತು ಕಿಗರ್‌ನ RXZ ವೇರಿಯೆಂಟ್‌ಗಳಲ್ಲಿ ಮಾತ್ರ ಲಭ್ಯ. ಇದಕ್ಕೆ ಮುಂಗಡ ಬುಕ್ಕಿಂಗ್‌ ಇಂದು ಶುರುವಾಗಿದೆ.

ಸೀಮಿತ ಆವೃತ್ತಿಯು ಕೇವಲ ಒಂದು ಬಣ್ಣದ ಆಯ್ಕೆ ಅಂದರೆ ಮಿಸ್ಟರಿ ಕಪ್ಪು ಛಾವಣಿಯೊಂದಿಗೆ ಬಿಳಿ ವರ್ಣದಲ್ಲಿ ಲಭ್ಯವಿರಲಿದೆ.
ಸೀಮಿತ ಆವೃತ್ತಿಯು ಕೇವಲ ಒಂದು ಬಣ್ಣದ ಆಯ್ಕೆ ಅಂದರೆ ಮಿಸ್ಟರಿ ಕಪ್ಪು ಛಾವಣಿಯೊಂದಿಗೆ ಬಿಳಿ ವರ್ಣದಲ್ಲಿ ಲಭ್ಯವಿರಲಿದೆ. (LM)

ಹಬ್ಬದ ಸೀಸನ್‌ಗೆ ಮುಂಚಿತವಾಗಿ ರೆನಾಲ್ಟ್ ಇಂಡಿಯಾ ತನ್ನ ಮೂರು ಕಾರುಗಳ ಅಂದರೆ ಕಿಗರ್, ಕ್ವಿಡ್ ಮತ್ತು ಟ್ರೈಬರ್ ಗಳ ಸೀಮಿತ ಆವೃತ್ತಿಯ ಮಾದರಿಯನ್ನು ಬಿಡುಗಡೆ ಮಾಡಲಿದೆ. ಸೀಮಿತ ಕಾರುಗಳ ಬುಕಿಂಗ್ ಶುಕ್ರವಾರದಿಂದ ಅಂದರೆ ಇಂದು ಶುರುವಾಗಿದೆ.

ಟ್ರೆಂಡಿಂಗ್​ ಸುದ್ದಿ

Gold Rate Today: ಭಾನುವಾರ ಚಿನ್ನ, ಬೆಳ್ಳಿ ಎರಡರ ದರವೂ ಹೆಚ್ಚಳ; ಆಭರಣ ಖರೀದಿಸುವ ಯೋಚನೆ ಇದ್ದರೆ ಇಂದಿನ ಬೆಲೆ ಗಮನಿಸಿ

ಭಾರತದ ಅತಿದೊಡ್ಡ ಬಜಾಜ್ ಪಲ್ಸರ್‌ ಮಾರುಕಟ್ಟೆಗೆ; ಪಲ್ಸರ್ NS400Z ಬೈಕ್‌ ದರ 1.85 ಲಕ್ಷ ರೂ, ವಿನ್ಯಾಸ ವಿಶೇಷ ವಿವರ ಹೀಗಿದೆ

ತಿರುಮಲ ತಿರುಪತಿಯಲ್ಲಿ ನವದಂಪತಿಗೆ ವಿಶೇಷ ಶ್ರೀವಾರಿ ದರ್ಶನ ಟಿಕೆಟ್ ಪ್ರಕಟಿಸಿದ ಟಿಟಿಡಿ; ಎಷ್ಟಿವೆ ಕೋಟಾ, ದರ ಇತ್ಯಾದಿ ವಿವರ

Gold Rate Today: ಮತ್ತೆ ಆರಂಭವಾಯ್ತು ಚಿನ್ನ, ಬೆಳ್ಳಿ ದರದಲ್ಲಿನ ಏರಿಳಿತ; ಶನಿವಾರ ಚಿನ್ನದ ದರ ಇಳಿಕೆ, ಬೆಳ್ಳಿ ಏರಿಕೆ

ಕಾರು ತಯಾರಕರು ಈ ಆವೃತ್ತಿಯನ್ನು "ಫೆಸ್ಟಿವ್ ಲಿಮಿಟೆಡ್ ಎಡಿಷನ್" ಎಂದೂ ಗುರುತಿಸಿದ್ದಾರೆ. ಕಾರುಗಳು ಅವುಗಳ ರೆಗ್ಯುಲರ್‌ ಮಾಡೆಲ್‌ಗಳಿಗಿಂಥ ಕಾಸ್ಮೆಟಿಕ್ ಅಪ್‌ಗ್ರೇಡ್‌ಗಳನ್ನು ಹೊಂದಿರುತ್ತವೆ ಎಂದು ಲೈವ್‌ಮಿಂಟ್‌ನ ವರದಿ ಗುರುವಾರ ತಿಳಿಸಿದೆ.

ಸೀಮಿತ ಆವೃತ್ತಿಯು ಟಾಪ್-ಎಂಡ್ ವೇರಿಯೆಂಟ್‌ಗೆ ಮಾತ್ರ ಲಭ್ಯವಾಗಲಿದೆ. ವಿಶೇಷವಾಗಿ ಕ್ವಿಡ್‌ನ ಕ್ಲೈಂಬರ್ ವೇರಿಯೆಂಟ್‌ ಮತ್ತು ಟ್ರೈಬರ್ ಮತ್ತು ಕಿಗರ್‌ನ RXZ ವೇರಿಯೆಂಟ್‌ಗಳಲ್ಲಿ ಲಭ್ಯವಿರಲಿದೆ.

ಸೀಮಿತ ಆವೃತ್ತಿಯು ಕೇವಲ ಒಂದು ಬಣ್ಣದ ಆಯ್ಕೆ ಅಂದರೆ ಮಿಸ್ಟರಿ ಕಪ್ಪು ಛಾವಣಿಯೊಂದಿಗೆ ಬಿಳಿ ವರ್ಣದಲ್ಲಿ ಲಭ್ಯವಿರಲಿದೆ.

ಲಿಮಿಟೆಡ್‌ ಎಡಿಷನ್‌ ಕಾರುಗಳು ಡ್ಯುಯಲ್-ಟೋನ್ ಪೇಂಟ್ ಸ್ಕೀಮ್, ಮುಂಭಾಗದ ಗ್ರಿಲ್‌ನ ಸುತ್ತಲೂ ಇರಿಸಲಾದ ಬಾಹ್ಯದಲ್ಲಿ ಸ್ಪೋರ್ಟಿ ರೆಡ್‌ ಆಕ್ಸೆಂಟ್ಸ್ , ಸೈಡ್ ಡೋರ್ ಡೆಕಲ್‌ಗಳು ಮತ್ತು ಎಲ್ಇಡಿ ಡೇಟೈಮ್ ರನ್ನಿಂಗ್ ಲ್ಯಾಂಪ್‌ಗಳೊಂದಿಗೆ ಬರುತ್ತದೆ ಎಂದು ಲೈವ್‌ಮಿಂಟ್ ವರದಿ ವಿವರಿಸಿದೆ.

ಕಿಗರ್

ರೆನಾಲ್ಟ್ ಕಿಗರ್ ವಿಷಯಕ್ಕೆ ಬಂದರೆ, ವೀಲ್ ಕವರ್‌ಗಳನ್ನು ಸಿಲ್ವರ್‌ಸ್ಟೋನ್ ಬಣ್ಣದಲ್ಲಿ ಪೂರ್ಣಗೊಳಿಸಲಾಗಿದೆ. ಬ್ರೇಕ್ ಕ್ಯಾಲಿಪರ್‌ಗಳು ಕೆಂಪು ಬಣ್ಣವನ್ನು ಹೊಂದಿರುತ್ತವೆ.

ಟ್ರೈಬರ್

ಸೀಮಿತ ಆವೃತ್ತಿಯಲ್ಲಿ, ಟ್ರೈಬರ್ ವೀಲ್ ಕವರ್‌ಗಳು ಮತ್ತು ಡೋರ್ ಹ್ಯಾಂಡಲ್‌ಗಳಿಗೆ ಪಿಯಾನೋ-ಕಪ್ಪು ಫಿನಿಶಿಂಗ್‌ ಅನ್ನು ಹೊಂದಿದೆ.

ಕ್ವಿಡ್

ಕ್ವಿಡ್ ಮುಂಭಾಗ ಮತ್ತು ಹಿಂಭಾಗದ ಸ್ಕಿಡ್ ಪ್ಲೇಟ್‌ನಲ್ಲಿ ರೆಡ್‌ ಹೈಲೈಟ್ಸ್‌ ಹೊಂದಿದೆ. ರೂಫ್‌ ರೇಲ್ಸ್‌ ಮತ್ತು ಸಿ-ಪಿಲ್ಲರ್‌ನಲ್ಲಿ "ಕ್ಲೈಂಬರ್" ಡೆಕಾಲ್ ಸಹ ಕೆಂಪು ಬಣ್ಣದಲ್ಲಿದೆ. ಹೊರಗಿನ ಹಿಂಬದಿಯ ಕನ್ನಡಿಗಳು ಮತ್ತು ವೀಲ್ ಕವರ್‌ಗಳಿಗೆ ಪಿಯಾನೋ-ಕಪ್ಪು ಫಿನಿಷಿಂಗ್‌ ಇದೆ ಎಂದು ಲೈವ್‌ ಮಿಂಟ್‌ ವರದಿ ತಿಳಿಸಿದೆ.

Renault India ಸೀಮಿತ ಆವೃತ್ತಿಗೆ ಯಾವುದೇ ಹೆಚ್ಚುವರಿ ಹಣವನ್ನು ವಿಧಿಸುತ್ತಿಲ್ಲ. Kiger RXZ, Triber RXZ ಮತ್ತು Kwid ಕ್ಲೈಂಬರ್ ಬೆಲೆಗಳು ಒಂದೇ ಆಗಿರುತ್ತವೆ. ಅಲ್ಲದೆ, ಈ ಮೂರು ಕಾರುಗಳಲ್ಲಿ ಯಾಂತ್ರಿಕವಾಗಿ ಯಾವುದೇ ಬದಲಾವಣೆಗಳಿರುವುದಿಲ್ಲ ಎಂದು ವರದಿ ಸ್ಪಷ್ಟಪಡಿಸಿದೆ.

ಹೆಚ್ಚಿನ ಸುದ್ದಿಗಳಿಗೆ ನಮ್ಮನ್ನು ಫೇಸ್‌ಬುಕ್‌ ಮತ್ತು ಟ್ವಿಟರ್‌ ನಲ್ಲಿ ಫಾಲೋಮಾಡಿ.

    ಹಂಚಿಕೊಳ್ಳಲು ಲೇಖನಗಳು