logo
ಕನ್ನಡ ಸುದ್ದಿ  /  ಜೀವನಶೈಲಿ  /  Sweet Corn Vada Recipe: ಈ ಸ್ನಾಕ್ಸ್‌ ರುಚಿಗೆ ಮಾರುಹೋಗದವರಿಲ್ಲ...ಸ್ವೀಟ್‌ ಕಾರ್ನ್‌ ವಡೆ ರೆಸಿಪಿ

Sweet corn Vada Recipe: ಈ ಸ್ನಾಕ್ಸ್‌ ರುಚಿಗೆ ಮಾರುಹೋಗದವರಿಲ್ಲ...ಸ್ವೀಟ್‌ ಕಾರ್ನ್‌ ವಡೆ ರೆಸಿಪಿ

HT Kannada Desk HT Kannada

Oct 04, 2022 10:40 PM IST

ಸ್ವೀಟ್‌ ಕಾರ್ನ್‌ ವಡೆ ರೆಸಿಪಿ

    • ಸ್ವೀಟ್‌ ಕಾರ್ನ್‌ ವಡೆ ತಯಾರಿಸಲು ಯಾವುದೇ ಸಾಮಗ್ರಿಗಳನ್ನು ನೆನೆಸಬೇಕು ಎಂದೇನಿಲ್ಲ. ಕಡ್ಲೆಬೇಳೆ ಬದಲಿಗೆ ಕಡ್ಲೆಹಿಟ್ಟಿನಿಂದ ಈ ರುಚಿಯಾದ ವಡೆ ತಯಾರಿಸಬಹುದು.
ಸ್ವೀಟ್‌ ಕಾರ್ನ್‌ ವಡೆ ರೆಸಿಪಿ
ಸ್ವೀಟ್‌ ಕಾರ್ನ್‌ ವಡೆ ರೆಸಿಪಿ (PC: pixabay.com)

ಸಾಮಾನ್ಯವಾಗಿ ಕಡ್ಲೆಬೇಳೆ, ಅಲಸಂದೆ ಕಾಳು, ಸಾಬೂದಾನ ಬಳಸಿ ವಡೆ ಮಾಡಲಾಗುತ್ತದೆ. ಆದರೆ ನೀವು ಎಂದಾದರೂ ಸ್ವೀಟ್‌ ಕಾರ್ನ್‌ ವಡೆ ಮಾಡಿದ್ದೀರಾ..? ಈ ವಡೆ ಕೂಡಾ ತಿನ್ನಲು ಬಹಳ ರುಚಿ. ಈ ಸಮಯದಲ್ಲಿ ಎಲ್ಲರಿಗೂ ಗರಿ ಗರಿಯಾದ, ರುಚಿಯಾದ ಸ್ನಾಕ್ಸ್‌ ತಿನ್ನಬೇಕೆನಿಸುತ್ತದೆ.

ಟ್ರೆಂಡಿಂಗ್​ ಸುದ್ದಿ

ದಿನ ಕಳೆದಂತೆ ನಡಿಗೆ ನಿಧಾನವಾಗುತ್ತಿದೆಯೇ? ವಾಕಿಂಗ್ ವೇಗವಾಗಲು ಈ ಸಲಹೆ ಪಾಲಿಸಿ ನೋಡಿ

Flax Seeds: ಆರೋಗ್ಯಕಷ್ಟೇ ಅಲ್ಲ, ಅಂದಕ್ಕೂ ಬೇಕು ಅಗಸೆ ಬೀಜ; ಚರ್ಮ, ಕೂದಲಿನ ಕಾಂತಿ ಹೆಚ್ಚಲು ಇದನ್ನು ಹೀಗೆ ಬಳಸಿ

Egg Chat Recipe: ಮೊಟ್ಟೆ ತಿನ್ನೊಲ್ಲ ಅಂತ ಮಕ್ಕಳು ಹಟ ಮಾಡ್ತಾರಾ, ಈ ರೀತಿ ಎಗ್‌ ಚಾಟ್‌ ಮಾಡಿಕೊಡಿ, ಮತ್ತೂ ಬೇಕು ಅಂತ ತಿಂತಾರೆ

ಅತಿಕಾಮದ ದೌರ್ಬಲ್ಯ: ಲೈಂಗಿಕ ಶೋಷಣೆಯನ್ನೇ ವ್ಯಸನವಾಗಿಸಿಕೊಳ್ಳುವ ಕಾಮಪಿಪಾಸೆಯೂ ರೋಗ, ಚಿಕಿತ್ಸೆಯ ಜೊತೆಗೆ ಶಿಕ್ಷೆಯೂ ಕೊಡಬೇಕು

ಸ್ವೀಟ್‌ ಕಾರ್ನ್‌ ವಡೆ ತಯಾರಿಸಲು ಯಾವುದೇ ಸಾಮಗ್ರಿಗಳನ್ನು ನೆನೆಸಬೇಕು ಎಂದೇನಿಲ್ಲ. ಕಡ್ಲೆಬೇಳೆ ಬದಲಿಗೆ ಕಡ್ಲೆಹಿಟ್ಟಿನಿಂದ ಈ ರುಚಿಯಾದ ವಡೆ ತಯಾರಿಸಬಹುದು. ಬನ್ನಿ ಸ್ವೀಟ್‌ ಕಾರ್ನ್‌ ತಯಾರಿಸಲು ಬೇಕಾಗುವ ಸಾಮಗ್ರಿಗಳು ಹಾಗೂ ತಯಾರಿಸುವ ವಿಧಾನ ನೋಡೋಣ.

ಸ್ವೀಟ್‌ ಕಾರ್ನ್‌ ವಡೆ ತಯಾರಿಸಲು ಬೇಕಾಗುವ ಸಾಮಗ್ರಿಗಳು

ಫ್ರೋಜನ್‌ ಸ್ವೀಟ್‌ ಕಾರ್ನ್‌ - 1 ಕಪ್‌

ಕಡ್ಲೆಹಿಟ್ಟು - 1/2 ಕಪ್‌

ಅಕ್ಕಿ ಹಿಟ್ಟು - 1 ಟೇಬಲ್‌ ಸ್ಪೂನ್

ಕೊತ್ತಂಬರಿ ಸೊಪ್ಪು - 1 ಕಟ್ಟು

ಶುಂಠಿ - 1 ಇಂಚು

ಧನಿಯಾ ಪುಡಿ - 1 ಟೀ ಸ್ಪೂನ್‌

ಅಚ್ಚ ಖಾರದ ಪುಡಿ - 1 ಟೀ ಸ್ಪೂನ್‌

ಜೀರ್ಗೆ - 1 ಟೀ ಸ್ಪೂನ್‌

ಕರಿಬೇವು - 1 ಎಸಳು

ಕರಿಮೆಣಸು - 1/2 ಟೀ ಸ್ಪೂನ್

ಉಪ್ಪು - ರುಚಿಗೆ ತಕ್ಕಷ್ಟು

ಎಣ್ಣೆ - ಕರಿಯಲು

ಸ್ವೀಟ್‌ ಕಾರ್ನ್‌ ವಡೆ ತಯಾರಿಸುವ ವಿಧಾನ

ಮಿಕ್ಸಿ ಜಾರ್‌ಗೆ ಸ್ವೀಟ್‌ ಕಾರ್ನ್‌ ಸೇರಿಸಿ ತರಿಯಾಗಿ ಗ್ರೈಂಡ್‌ ಮಾಡಿಕೊಳ್ಳಿ

ಇದನ್ನು ಒಂದು ಬೌಲ್‌ಗೆ ವರ್ಗಾಯಿಸಿ ಶುಂಠಿ ತುರಿ, ಉಪ್ಪು, ಧನಿಯಾ ಪುಡಿ, ಅಚ್ಚ ಖಾರದ ಪುಡಿ, ಜೀರ್ಗೆ ಪುಡಿ ಸೇರಿಸಿ

ನಂತರ ಸಣ್ಣಗೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು, ಕ್ರಷ್‌ ಮಾಡಿದ ಕರಿಮೆಣಸು, ಕರಿಬೇವು ಸೇರಿಸಿ ಮಿಕ್ಸ್‌ ಮಾಡಿ

ನಂತರ ಕಡ್ಲೆಹಿಟ್ಟು, ಅಕ್ಕಿಹಿಟ್ಟು ಸೇರಿಸಿ ಮಿಕ್ಸ್‌ ಮಾಡಿ, ಇದಕ್ಕೆ ನೀರು ಸೇರಿಸುವ ಅಗತ್ಯವಿಲ್ಲ

ಈ ಮಿಶ್ರಣದಿಂದ ವಡೆ ತಟ್ಟಿಕೊಂಡು ಬಿಸಿ ಎಣ್ಣೆಯಲ್ಲಿ ಕಂದು ಬಣ್ಣ ಬರುವರೆಗೂ ಎರಡೂ ಕಡೆ ಫ್ರೈ ಮಾಡಿ

ಗಮನಿಸಿ: ನಿಮಗೆ ಬೇಕಿದ್ದರೆ ಈರುಳ್ಳಿ , ಕ್ಯಾರೆಟ್‌ ತುರಿಯನ್ನು ಕೂಡಾ ಸೇರಿಸಬಹುದು

ವಿಭಾಗ

    ಹಂಚಿಕೊಳ್ಳಲು ಲೇಖನಗಳು